Genesis · chapter 49 · verse 28
Genesis 49:28 in Kannada
ಇವರೆಲ್ಲಾ ಇಸ್ರಾಯೇಲನ ಹನ್ನೆರಡು ಗೋತ್ರ ಗಳು; ಅವರ ತಂದೆ ಅವರಿಗೆ ಹೇಳಿದ್ದು ಇದೇ. ಅವನು ಒಬ್ಬೊಬ್ಬನನ್ನು ಅವನವನ ಆಶೀರ್ವಾದದ ಪ್ರಕಾರ ಆಶೀರ್ವದಿಸಿದನು.
Ivarellaa israayelana hanneradu gotra galu; avara tande avarige heliddu ide. Avanu obbobbanannu avanavana aasheervaadada prakaara aasheervadisidanu.
Genesis 49:28 in English
- King James Version (KJV)
- All these [are] the twelve tribes of Israel: and this [is it] that their father spake unto them, and blessed them; every one according to his blessing he blessed them.
- World English Bible (WEB)
- All these are the twelve tribes of Israel, and this is what their father spoke to them, and blessed them. He blessed everyone according to his own blessing.
- American Standard Version (ASV)
- All these are the twelve tribes of Israel: and this is it that their father spake unto them and blessed them; every one according to his blessing he blessed them.
- Bible in Basic English (BBE)
- These are the twelve tribes of Israel: and these are the words their father said to them, blessing them; to every one he gave his blessing.
- Darby Translation (DBY)
- All these are the twelve tribes of Israel, and this is what their father spoke to them; and he blessed them: every one according to his blessing he blessed them.
- Webster's Bible (WBS)
- All these [are] the twelve tribes of Israel: and this [is it] which their father spoke to them, and blessed them; every one according to his blessing he blessed them.
- Young's Literal Translation (YLT)
- All these [are] the twelve tribes of Israel, and this [is] that which their father hath spoken unto them, and he blesseth them; each according to his blessing he hath blessed them.
Read in context
- 26ನಿನ್ನ ತಂದೆಯ ಆಶೀರ್ವಾದಗಳು ನನ್ನ ಹೆತ್ತವರ ಆಶೀರ್ವಾದಗಳನ್ನು ನಿತ್ಯ ಗುಡ್ಡಗಳ ಮೇರೆಗಿಂತ ವಿಾರಿವೆ. ಯೋಸೇಫನ ತಲೆಯ ಮೇಲೆಯೂ ತನ್ನ ಸಹೋದರರಿಂದ ಪ್ರತ್ಯೇಕ ಮಾಡಲ್ಪಟ್ಟವನ ತಲೆಯ ಮೇಲೆಯೂ ಅವು ಬರಲಿ.
- 27ಬೆನ್ಯಾವಿಾನನು ತೋಳದಂತೆ ಸೀಳುವನು. ಬೆಳಿಗ್ಗೆ ಸುಲಿಗೆಯನ್ನು ತಿಂದುಬಿಡುವನು. ಸಾಯಂಕಾಲದಲ್ಲಿ ಕೊಳ್ಳೆಯನ್ನು ಪಾಲುಮಾಡುವನು.
- 28ಇವರೆಲ್ಲಾ ಇಸ್ರಾಯೇಲನ ಹನ್ನೆರಡು ಗೋತ್ರ ಗಳು; ಅವರ ತಂದೆ ಅವರಿಗೆ ಹೇಳಿದ್ದು ಇದೇ. ಅವನು ಒಬ್ಬೊಬ್ಬನನ್ನು ಅವನವನ ಆಶೀರ್ವಾದದ ಪ್ರಕಾರ ಆಶೀರ್ವದಿಸಿದನು.
- 29ಅವನು ಅವರಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ--ನಾನು ನನ್ನ ಜನರೊಂದಿಗೆ ಕೂಡಿಸಲ್ಪ ಡುತ್ತೇನೆ. ನನ್ನ ತಂದೆಗಳ ಸಂಗಡ ಹಿತ್ತಿಯನಾದ ಎಫ್ರೋನಿನ ಹೊಲದಲ್ಲಿರುವ ಗವಿಯಲ್ಲಿ
- 30ಕಾನಾನ್ ದೇಶದಲ್ಲಿ ಮಮ್ರೆಗೆ ಎದುರಾಗಿ ಮಕ್ಪೇಲ ಹೊಲ ದಲ್ಲಿರುವಂಥ, ಅಬ್ರಹಾಮನು ಹೊಲದ ಸಂಗಡ ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನನಿಂದ ಕೊಂಡುಕೊಂಡಂಥ ಗವಿಯಲ್ಲಿ ನನ್ನನ್ನು ಹೂಣಿಡಿರಿ.
Cross references
- Ezekiel 39:8–10 ಯೆಹೆಜ್ಕೇಲನು 39:8–10ಇಗೋ, ಇದು ಬಂತು, ಮತ್ತು ಇದು ನೆರವೇರಿತು; ನಾನು ಮುಂತಿಳಿಸಿದ ದಿನವು ಇದೇ ಎಂದು ದೇವರಾದ ಕರ್ತನು ಹೇಳುತ್ತಾನೆ; ಆ ಇಸ್ರಾಯೇಲಿನ ಪಟ್ಟಣಗಳ ನಿವಾಸಿಗಳು ಹೋಗಿ, ಆಯುಧಗಳಾದ ಗುರಾಣಿ ಗಳನ್ನು ಖೇಡ್ಯಗಳನ್ನೂ ಬಿಲ್ಲುಗಳನ್ನೂ ಬಾಣಗಳನ್ನೂ ಕೈದೊಣ್ಣೆಗಳನ್ನೂ ಭಲ್ಲೆಗಳನ್ನೂ ಬೆಂಕಿಹಚ್ಚಿ ಸುಡುವರು; ಅವರು ಅವುಗಳನ್ನು ಏಳು ವರ್ಷಗಳು ಬೆಂಕಿಯಿಂದ ಸುಡುವರು. ಅದಕ್ಕಾಗಿ ಅವರು ಬಯಲಿನಿಂದ ಮರ ಗಳನ್ನಾಗಲಿ ತೆಗೆದುಕೊಳ್ಳುವುದಿಲ್ಲ, ಅಥವಾ ಅರಣ್ಯ ದಲ್ಲಿ ಯಾವುದನ್ನೂ ಕತ್ತರಿಸಿಕೊಳ್ಳುವದೂ ಇಲ್ಲ; ಅವರು ಆಯುಧಗಳನ್ನು ಬೆಂಕಿಯಿಂದಲೇ ಸುಡುವರು; ಅವರು ಸೂರೆಯಾದವುಗಳನ್ನು ಸೂರೆಮಾಡುವರು ಮತ್ತು ಕೊಳ್ಳೆಹೊಡೆದವರನ್ನು ತಾವು ಕೊಳ್ಳೆಹೊಡೆ ಯುವರು ಎಂದು ದೇವರಾದ ಕರ್ತನು ಹೇಳುತ್ತಾನೆ.
- Revelation 7:4 ಪ್ರಕಟನೆ 7:4ಮುದ್ರೆ ಹೊಂದಿದವರ ಸಂಖ್ಯೆಯನ್ನು ನಾನು ಕೇಳಿದೆನು; ಇಸ್ರಾಯೇಲ್ಯನ ಮಕ್ಕಳ ಗೋತ್ರದವರಲ್ಲಿ ಮುದ್ರೆಯನ್ನು ಹೊಂದಿದವರು ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ.
- Esther 8:11 ಎಸ್ತೇರಳು 8:11ಅವುಗಳಲ್ಲಿ ಅರಸನು ಯೆಹೂದ್ಯರಿಗೆ ಕೊಟ್ಟದ್ದೇನಂದರೆ--ಅರಸ ನಾದ ಅಹಷ್ವೇರೋಷನ ಸಮಸ್ತ ಪ್ರಾಂತ್ಯಗಳಲ್ಲಿ, ಒಂದು ದಿನದಲ್ಲಿ ಅಡಾರ್ ತಿಂಗಳೆಂಬ ಹನ್ನೆರಡನೇ ತಿಂಗಳ ಹದಿಮೂರನೇ ದಿನದಲ್ಲಿ
- Esther 8:7 ಎಸ್ತೇರಳು 8:7ಆಗ ಅರಸನಾದ ಅಹಷ್ವೇ ರೋಷನು ರಾಣಿಯಾದ ಎಸ್ತೇರಳಿಗೂ ಯೆಹೂದ್ಯ ನಾದ ಮೊರ್ದೆಕೈಗೂ ಹೇಳಿದ್ದೇನಂದರೆ--ಇಗೋ, ಹಾಮಾನನು ಯೆಹೂದ್ಯರ ಮೇಲೆ ತನ್ನ ಕೈ ಹಾಕಿದ್ದ ರಿಂದ ಅವನ ಮನೆಯನ್ನು ಎಸ್ತೇರಳಿಗೆ ಕೊಟ್ಟೆನು. ಅವನನ್ನು ಗಲ್ಲಿಗೆ ಹಾಕಿದ್ದಾರೆ.
- Numbers 23:24 ಅರಣ್ಯಕಾಂಡ 23:24ಇಗೋ, ಜನವು ದೊಡ್ಡ ಸಿಂಹದ ಹಾಗೆ ಏಳುವದು; ಸಿಂಹದ ಮರಿಯ ಹಾಗೆ ಎದ್ದೇಳುವದು; ಅದು ಬೇಟೆಯನ್ನು ತಿಂದು ಹತವಾದವರ ರಕ್ತವನ್ನು ಕುಡಿಯುವ ವರೆಗೆ ಮಲಗದು ಅಂದನು.
- Genesis 35:22 ಆದಿಕಾಂಡ 35:22ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು.
- Esther 8:9 ಎಸ್ತೇರಳು 8:9ಆಗ ಅದೇ ಕಾಲದಲ್ಲಿ ಶೀವಾನ್ ಎಂಬುವ ಮೂರನೇ ತಿಂಗಳ ಇಪ್ಪತ್ತು ಮೂರನೇ ದಿವಸದಲ್ಲಿ ಅರಸನ ಲೇಖಕರು ಕರೆಯಲ್ಪಟ್ಟರು. ಮೊರ್ದೆಕೈ ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಸಕಲ ಯೆಹೂದ್ಯರಿಗೂ ಭಾರತ ಮೊದಲು ಗೊಂಡು ಕೂಷಿನ ವರೆಗೂ ಇರುವ ನೂರಇಪ್ಪತ್ತೇಳು ಪ್ರಾಂತ್ಯಗಳ ಯಜಮಾನರಿಗೂ ಅಧಿಪತಿಗಳಿಗೂ ಪ್ರಧಾನರಿಗೂ ಪ್ರತಿ ಪ್ರಾಂತ್ಯಕ್ಕೆ ಅದರ ಬರಹದ ಪ್ರಕಾರವೂ ಪ್ರತಿ ಜನರಿಗೆ ಅವರ ಭಾಷೆಯ ಪ್ರಕಾ ರವೂ ಯೆಹೂದ್ಯರಿಗೆ ಅವರ ಬರಹದ ಪ್ರಕಾರವೂ ಅವರ ಭಾಷೆಯ ಪ್ರಕಾರವೂ ಬರೆಯಲ್ಪಟ್ಟಿತು.
- Esther 9:1–10 ಎಸ್ತೇರಳು 9:1–10ಅಡಾರ್ ತಿಂಗಳೆಂಬ ಹನ್ನೆರಡನೇ ತಿಂಗಳ ಹದಿಮೂರನೇ ದಿನದಲ್ಲಿ ಅರಸನ ಮಾತೂ ಅವನ ಆಜ್ಞೆಯೂ ಮಾಡಲ್ಪಡುವದಕ್ಕೆ ಸವಿಾ ಪಿಸಿದಾಗ ಯೆಹೂದ್ಯರ ಶತ್ರುಗಳು ಅದೇ ದಿನದಲ್ಲಿ ಅವರ ಮೇಲೆ ದೊರೆತನ ಮಾಡುವೆವೆಂದು ಭರವಸೆ ಕೊಟ್ಟಿದ್ದರು. ಅದಕ್ಕೆ ಬದಲಾಗಿ ಯೆಹೂದ್ಯರು ತಮ್ಮನ್ನು ಹಗೆಮಾಡುವವರ ಮೇಲೆ ದೊರೆತನ ಮಾಡಿದರು. ಅದೇ ದಿವಸದಲ್ಲಿ ಯೆಹೂದ್ಯರು ಅರಸನಾದ ಅಹ ಷ್ವೇರೋಷನ ಸಮಸ್ತ ಪ್ರಾಂತ್ಯಗಳಲ್ಲಿರುವ ತಮ್ಮ ತಮ್ಮ ಪಟ್ಟಣಗಳಲ್ಲಿ ತಮ್ಮನ್ನು ಕೊಲ್ಲಲು ಹುಡುಕುವವರ ಮೇಲೆ ಕೈ ಹಾಕಲು ಕೂಡಿಕೊಂಡರು. ಆಗ ಅವರ ಭಯವು ಸಮಸ್ತ ಜನರ ಮೇಲೆ ಬಿದ್ದದ್ದರಿಂದ ಅವರ ಮುಂದೆ ನಿಲ್ಲುವವನು ಒಬ್ಬನೂ ಇರಲಿಲ್ಲ. ಇದಲ್ಲದೆ ಪ್ರಾಂತ್ಯಗಳ ಅಧಿಕಾರಿಗಳೂ ಪ್ರತಿನಿಧಿಗಳೂ ಅಧಿಪತಿ ಗಳೂ ಅರಸನ ಕೆಲಸದವರೂ ಯೆಹೂದ್ಯರಿಗೆ ಸಹಾಯ ಮಾಡಿದರು. ಯಾಕಂದರೆ ಮೊರ್ದೆ ಕೈಯ ಭಯ ಅವರಿಗೆ ಇದ್ದಿತು. ಮೊರ್ದೆಕೈ ಅರಮನೆಯಲ್ಲಿ ದೊಡ್ಡವನಾಗಿದ್ದನು. ಅವನ ಕೀರ್ತಿಯು ಸಮಸ್ತ ಪ್ರಾಂತ್ಯಗಳ ಮೇಲೆ ವ್ಯಾಪಿಸಿತು. ಈ ಮೊರ್ದೆಕೈ ಅಧಿಕಾಧಿಕವಾಗಿ ದೊಡ್ಡವನಾದನು. ಹೀಗೆಯೇ ಯೆಹೂದ್ಯರು ಕತ್ತೀ ಹೊಡೆತದಿಂದಲೂ ಕೊಲೆಯಿಂದಲೂ ನಾಶದಿಂದಲೂ ತಮ್ಮ ಶತ್ರುಗಳೆಲ್ಲರನ್ನು ಹೊಡೆದು ತಮ್ಮನ್ನು ಹಗೆಮಾಡುವವರಿಗೆ ತಮ್ಮ ಇಷ್ಟ ಬಂದ ಹಾಗೆ ಮಾಡಿದರು. ಶೂಷನಿನ ಅರಮನೆಯಲ್ಲಿ ಯೆಹೂದ್ಯರು ಐನೂರು ಮಂದಿಯನ್ನು ಕೊಂದರು. ಇದಲ್ಲದೆ ಯೆಹೂದ್ಯರ ವೈರಿಯಾದ ಹಮ್ಮೆದಾತನ ಮಗನಾದ ಹಾಮಾನನ ಹತ್ತು ಮಂದಿ ಕುಮಾರರಾದ ಪರ್ಷಂದತ್ತನು ದಲ್ಫೋನನು ಅಸ್ಪಾತನು ಪೋರಾತನು ಅದಲ್ಯನು ಅರೀದಾತನು ಪರ್ಮಷ್ಟನು ಅರೀಸೈಯನು ಅರಿದೈನು ವೈಜಾತನು ಎಂಬವರನ್ನು ಕೊಂದರು. ಆದರೆ ಅವರು ಕೊಳ್ಳೆಯ ಮೇಲೆ ಕೈ ಹಾಕಲಿಲ್ಲ.
- Zechariah 14:1–7 ಜೆಕರ್ಯ 14:1–7ಇಗೋ, ಕರ್ತನ ದಿನವು ಬರುತ್ತದೆ. ಆಗ ನಿನ್ನ ಕೊಳ್ಳೆಯು ನಿನ್ನ ಮಧ್ಯದಲ್ಲಿ ವಿಭಾಗಿಸ ಲ್ಪಡುವದು; ನಾನು ಜನಾಂಗಗಳನ್ನೆಲ್ಲಾ ಯೆರೂಸ ಲೇಮಿಗೆ ವಿರೋಧವಾಗಿ ಯುದ್ಧಕ್ಕೆ ಕೂಡಿಸುವೆನು; ಪಟ್ಟಣವು ಹಿಡಿಯಲ್ಪಡುವದು; ಮನೆಗಳು ಸುಲು ಕೊಳ್ಳಲ್ಪಡುವವು, ಹೆಂಗಸರು ಕೆಡಿಸಲ್ಪಡುವರು, ಪಟ್ಟಣದ ಅರವಾಸಿ ಜನರು ಸೆರೆಗೆ ಹೋಗುವರು; ಆದರೆ ಉಳಿದ ಜನರೆಲ್ಲರು ಪಟ್ಟಣದೊಳಗಿಂದ ತೆಗೆದುಬಿಡಲ್ಪಡುವದಿಲ್ಲ. ಆಗ ಕರ್ತನು ಹೊರಟು ಯುದ್ಧದ ದಿನದಲ್ಲಿ ಕಾದಾಟಮಾಡಿದ ಪ್ರಕಾರವೇ ಆ ಜನಾಂಗಗಳ ಸಂಗಡ ಆತನು ಕಾದಾಟ ಮಾಡುವನು. ಆ ದಿನದಲ್ಲಿ ಆತನ ಪಾದಗಳು ಯೆರೂಸಲೇಮಿನ ಮುಂದೆ ಪೂರ್ವ ದಿಕ್ಕಿನಲ್ಲಿರುವ ಎಣ್ಣೇ ಮರದ ಗುಡ್ಡದ ಮೇಲೆ ನಿಲ್ಲುವವು; ಎಣ್ಣೇ ಮರದ ಗುಡ್ಡವು ಅದರ ನಡುವೆಯಿಂದ ಪೂರ್ವಕ್ಕೂ ಪಶ್ಚಿಮಕ್ಕೂ ಸೀಳಿ ಬಹುದೊಡ್ಡ ತಗ್ಗಾಗುವದು; ಅರ್ಧ ಗುಡ್ಡವು ಉತ್ತರಕ್ಕೂ ಅರ್ಧ ದಕ್ಷಿಣಕ್ಕೂ ಸರಿದು ಕೊಳ್ಳುವದು. ನೀವು ಬೆಟ್ಟಗಳ ತಗ್ಗಿಗೆ ಓಡಿಹೋಗು ವಿರಿ; ಬೆಟ್ಟಗಳ ತಗ್ಗು ಆಚೆಲಿಗೆ ಮುಟ್ಟುವದು. ಹೌದು, ಯೆಹೂದದ ಅರಸನಾದ ಉಜ್ಜೀಯನ ದಿವಸಗಳಲ್ಲಿ ನೀವು ಭೂಕಂಪಕ್ಕೆ ಓಡಿಹೋದ ಹಾಗೆ ಓಡಿಹೋಗು ವಿರಿ; ನನ್ನ ದೇವರಾದ ಕರ್ತನು ತನ್ನ ಪರಿಶುದ್ಧರೆ ಲ್ಲರ ಸಂಗಡ ಬರುವನು. ಆ ದಿನದಲ್ಲಿ ಆಗುವದೇ ನಂದರೆ--ಬೆಳಕು ಇಲ್ಲವೆ ಕತ್ತಲೆಯು ಸ್ಪಷ್ಟವಾಗಿರದು. ಆದರೆ ಕರ್ತನಿಗೆ ತಿಳಿದಿರುವ ಒಂದು ದಿನ ಇರುವದು, ಅದು ಹಗಲೂ ಅಲ್ಲ, ರಾತ್ರಿಯೂ ಅಲ್ಲ; ಆದರೆ ಸಾಯಂಕಾಲದ ಸಮಯದಲ್ಲಿ ಬೆಳಕು ಇರುವದು.
- Acts 26:7 ಅಪೊಸ್ತಲರ ಕೃತ್ಯಗಳು 26:7ನಮ್ಮ ಹನ್ನೆರಡು ಗೋತ್ರದವರು ಆಸಕ್ತಿಯಿಂದ ಹಗಲಿರುಳು ದೇವರನ್ನು ಸೇವಿಸುತ್ತಾ ಈ ವಾಗ್ದಾನದ ನೆರವೇರಿಕೆಗಾಗಿ ನಿರೀಕ್ಷಿಸುತ್ತಿದ್ದಾರೆ; ಅಗ್ರಿಪ್ಪ ರಾಜನೇ, ಈ ನಿರೀಕ್ಷೆಯ ವಿಷಯಕ್ಕಾಗಿಯೇ ಯೆಹೂದ್ಯರು ನನ್ನ ಮೇಲೆ ತಪ್ಪುಹೊರಿಸುತ್ತಾರೆ.
- 1 Kings 18:31 1 ಅರಸುಗಳು 18:31ನಿನಗೆ ಇಸ್ರಾಯೇಲನೆಂಬ ಹೆಸರುಂಟಾಗಿರುವದೆಂದು ಕರ್ತನ ವಾಕ್ಯವು ಬಂದ ಯಾಕೋಬನ ಮಕ್ಕಳ ಗೋತ್ರಗಳ ಲೆಕ್ಕದ ಪ್ರಕಾರ
- Exodus 28:21 ವಿಮೋಚನಕಾಂಡ 28:21ಈ ಕಲ್ಲುಗಳು ಇಸ್ರಾಯೇಲ್ ಮಕ್ಕಳ ಹೆಸರುಗಳು ಳ್ಳವುಗಳಾಗಿ ಅವರ ಹೆಸರುಗಳ ಪ್ರಕಾರ ಅವು ಹನ್ನೆರಡಾ ಗಿರಬೇಕು. ಅವು ಒಂದೊಂದರ ಮೇಲೆ ಒಂದೊಂದು ಹೆಸರಿದ್ದು ಹನ್ನೆರಡು ಕುಲಗಳ ಪ್ರಕಾರ ಮುದ್ರೆಗಳ ಹಾಗೆ ಕೆತ್ತಿರಬೇಕು.