Genesis · chapter 50 · verse 12
Genesis 50:12 in Kannada
ಆಗ ಯಾಕೋಬನು ತನ್ನ ಕುಮಾರರಿಗೆ ಆಜ್ಞಾಪಿಸಿದ ಪ್ರಕಾರ ಅವನಿಗೆ ಮಾಡಿದರು.
Aaga yaakobanu tanna kumaararige aajnyaapisida prakaara avanige maadidaru.
Genesis 50:12 in English
- King James Version (KJV)
- And his sons did unto him according as he commanded them:
- World English Bible (WEB)
- His sons did to him just as he commanded them,
- American Standard Version (ASV)
- And his sons did unto him according as he commanded them:
- Bible in Basic English (BBE)
- So his sons did as he had given them orders to do:
- Darby Translation (DBY)
- And his sons did to him according as he had commanded them;
- Webster's Bible (WBS)
- And his sons did to him according as he commanded them:
- Young's Literal Translation (YLT)
- And his sons do to him so as he commanded them,
Read in context
- 10ಅವರು ಯೊರ್ದನಿನ ಆಚೆ ಇರುವ ಆಟಾದ್ ಕಣಕ್ಕೆ ಬಂದು ಅಲ್ಲಿ ಅಧಿಕವಾದ ಮಹಾಗೋಳಾಟದಿಂದ ದುಃಖ ಪಟ್ಟರು. ಅವನು ತನ್ನ ತಂದೆಗಾಗಿ ಏಳು ದಿವಸಗಳ ವರೆಗೆ ದುಃಖಪಟ್ಟನು.
- 11ದೇಶದ ನಿವಾಸಿಗಳಾದ ಕಾನಾನ್ಯರು ಆಟಾದ್ ಕಣದಲ್ಲಿ ಆಗುತ್ತಿದ್ದ ದುಃಖವನ್ನು ನೋಡಿ--ಇದು ಐಗುಪ್ತ್ಯರಿಗೆ ಘೋರವಾದ ದುಃಖ ಎಂದು ಹೇಳಿದರು. ಆದದರಿಂದ ಅದಕ್ಕೆ ಆಬೇಲ್ ಮಿಚ್ರಯಾಮ್ ಎಂದು ಹೆಸರಾಯಿತು. ಅದು ಯೊರ್ದನಿನ ಆಚೆಯಲ್ಲಿದೆ.
- 12ಆಗ ಯಾಕೋಬನು ತನ್ನ ಕುಮಾರರಿಗೆ ಆಜ್ಞಾಪಿಸಿದ ಪ್ರಕಾರ ಅವನಿಗೆ ಮಾಡಿದರು.
- 13ಅವನ ಕುಮಾರರು ಅವನನ್ನು ಕಾನಾನ್ ದೇಶಕ್ಕೆ ತಕ್ಕೊಂಡು ಹೋಗಿ ಅಬ್ರಹಾಮನು ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನಿ ನಿಂದ ಕೊಂಡುಕೊಂಡಿದ್ದ ಮಮ್ರೆಗೆ ಎದುರಾಗಿರುವ ಮಕ್ಪೇಲ ಹೊಲದ ಗವಿಯಲ್ಲಿ ಹೂಣಿಟ್ಟರು.
- 14ಯೋಸೇಫನು ತನ್ನ ತಂದೆಯನ್ನು ಹೂಣಿಟ್ಟ ಮೇಲೆ ತನ್ನ ಸಹೋದರರ ಸಂಗಡಲೂ ತನ್ನ ತಂದೆಯನ್ನು ಹೂಣಿಡುವದಕ್ಕಾಗಿ ಅವನ ಸಂಗಡ ಹೋದವರೆಲ್ಲರ ಸಂಗಡಲೂ ಐಗುಪ್ತಕ್ಕೆ ತಿರಿಗಿ ಬಂದನು.
Cross references
- Genesis 49:29–32 ಆದಿಕಾಂಡ 49:29–32ಅವನು ಅವರಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ--ನಾನು ನನ್ನ ಜನರೊಂದಿಗೆ ಕೂಡಿಸಲ್ಪ ಡುತ್ತೇನೆ. ನನ್ನ ತಂದೆಗಳ ಸಂಗಡ ಹಿತ್ತಿಯನಾದ ಎಫ್ರೋನಿನ ಹೊಲದಲ್ಲಿರುವ ಗವಿಯಲ್ಲಿ ಕಾನಾನ್ ದೇಶದಲ್ಲಿ ಮಮ್ರೆಗೆ ಎದುರಾಗಿ ಮಕ್ಪೇಲ ಹೊಲ ದಲ್ಲಿರುವಂಥ, ಅಬ್ರಹಾಮನು ಹೊಲದ ಸಂಗಡ ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನನಿಂದ ಕೊಂಡುಕೊಂಡಂಥ ಗವಿಯಲ್ಲಿ ನನ್ನನ್ನು ಹೂಣಿಡಿರಿ. ಅಲ್ಲಿ ಅಬ್ರಹಾಮನನ್ನೂ ಅವನ ಹೆಂಡತಿಯಾದ ಸಾರಳನ್ನೂ ಹೂಣಿಟ್ಟರು. ಅಲ್ಲಿ ಇಸಾಕನನ್ನೂ ಅವನ ಹೆಂಡತಿಯಾದ ರೆಬೆಕ್ಕಳನ್ನೂ ಹೂಣಿಟ್ಟರು. ಅಲ್ಲಿ ನಾನು ಲೇಯಳನ್ನೂ ಹೂಣಿಟ್ಟೆನು. ಆ ಹೊಲವೂ ಅದರಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಕೊಂಡುಕೊಂಡದ್ದು ಅಂದನು.ಯಾಕೋ ಬನು ತನ್ನ ಕುಮಾರರಿಗೆ ಆಜ್ಞಾಪಿಸಿ ಮುಗಿಸಿದ ಮೇಲೆ ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು.
- Acts 7:16 ಅಪೊಸ್ತಲರ ಕೃತ್ಯಗಳು 7:16ಅವರನ್ನು ಶೇಕೆಮಿಗೆ ತೆಗೆದುಕೊಂಡು ಹೋಗಿ ಶೆಕೆಮನ ತಂದೆಯಾದ ಹಮೋರನ ಮಕ್ಕಳಿಂದ ಅಬ್ರಹಾಮನು ಹಣಕೊಟ್ಟು ಕೊಂಡುಕೊಂಡಿದ್ದ ಸಮಾಧಿಯೊಳಗೆ ಇಟ್ಟರು.
- Ephesians 6:1 ಎಫೆಸದವರಿಗೆ 6:1ಮಕ್ಕಳೇ, ನೀವು ಕರ್ತನಲ್ಲಿ ನಿಮ್ಮ ತಂದೆ ತಾಯಿಗಳಿಗೆ ವಿಧೇಯರಾಗಿರ್ರಿ; ಇದು ನ್ಯಾಯವಾದದ್ದು.
- Genesis 47:29–31 ಆದಿಕಾಂಡ 47:29–31ಇಸ್ರಾಯೇಲನು ಸಾಯುವ ಸಮಯವು ಸವಿಾಪಿಸಿ ದಾಗ ಅವನು ತನ್ನ ಮಗನಾದ ಯೋಸೇಫನನ್ನು ಕರೆಯಿಸಿ ಅವನಿಗೆ--ಈಗ ನಿನ್ನ ಸಮ್ಮುಖದಲ್ಲಿ ನಾನು ಕೃಪೆ ಹೊಂದಿದ್ದೇಯಾದರೆ ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು ನನ್ನ ಕಡೆಗೆ ದಯೆಯನ್ನೂ ಸತ್ಯವನ್ನೂ ತೋರಿಸು. ಹೇಗಂದರೆ ಐಗುಪ್ತದಲ್ಲಿ ನನ್ನನ್ನು ಹೂಣಿಡಬೇಡ. ನನ್ನ ತಂದೆಗಳ ಸಂಗಡ ನಾನು ಮಲಗಬೇಕು. ಐಗುಪ್ತದಿಂದ ನನ್ನನ್ನು ತಕ್ಕೊಂಡುಹೋಗಿ ಅವರ ಸಮಾಧಿಯ ಸ್ಥಳದಲ್ಲಿ ನನ್ನನ್ನು ಹೂಣಿಡು ಅಂದನು. ಅದಕ್ಕವನು ನಿನ್ನ ಮಾತಿನ ಪ್ರಕಾರ ನಾನು ಮಾಡುತ್ತೇನೆ ಅಂದನು.ಯಾಕೋಬನು--ನನಗೆ ಪ್ರಮಾಣ ಮಾಡು ಅಂದಾಗ ಅವನು ಅವನಿಗೆ ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ಮಂಚದ ತಲೆದೆಸೆಯಲ್ಲಿ ಬಾಗಿಕೊಂಡನು. ಯಾಕೋಬನು--ನನಗೆ ಪ್ರಮಾಣ ಮಾಡು ಅಂದಾಗ ಅವನು ಅವನಿಗೆ ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ಮಂಚದ ತಲೆದೆಸೆಯಲ್ಲಿ ಬಾಗಿಕೊಂಡನು.
- Exodus 20:12 ವಿಮೋಚನಕಾಂಡ 20:12ನಿನ್ನ ಕರ್ತನಾದ ದೇವರು ನಿನಗೆ ಕೊಡುವ ದೇಶದಲ್ಲಿ ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸು.