Genesis · chapter 9 · verse 4
Genesis 9:4 in Kannada
ಆದರೆ ಮಾಂಸವನ್ನು ಜೀವವಿರುವ ರಕ್ತದೊಂದಿಗೆ ನೀವು ತಿನ್ನಬಾರದು.
Aadare maansavannu jeevaviruva raktadondige neevu tinnabaaradu.
Genesis 9:4 in English
- King James Version (KJV)
- But flesh with the life thereof, [which is] the blood thereof, shall ye not eat.
- World English Bible (WEB)
- But flesh with its life, that is, its blood, you shall not eat.
- American Standard Version (ASV)
- But flesh with the life thereof, [which is] the blood thereof, shall ye not eat.
- Bible in Basic English (BBE)
- But flesh with the life-blood in it you may not take for food.
- Darby Translation (DBY)
- Only, the flesh with its life, its blood, ye shall not eat.
- Webster's Bible (WBS)
- But flesh with the life of it, [which is] its blood, shall ye not eat.
- Young's Literal Translation (YLT)
- only flesh in its life — its blood — ye do not eat.
Read in context
- 2ಭೂಮಿಯ ಮೇಲಿರುವ ಎಲ್ಲಾ ಮೃಗಗಳ ಮೇಲೆಯೂ ಆಕಾಶದ ಎಲ್ಲಾ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಹರಿದಾಡುವವು ಗಳೆಲ್ಲವುಗಳ ಮೇಲೆಯೂ ಸಮುದ್ರದ ಎಲ್ಲಾ ವಿಾನುಗಳ ಮೇಲೆಯೂ ನಿಮ್ಮ ಭಯವು ಮತ್ತು ನಿಮ್ಮ ಹೆದರಿಕೆಯು ಇರುವದು; ನಿಮ್ಮ ಕೈಗಳಲ್ಲಿ ಅವು ಕೊಡಲ್ಪಟ್ಟಿವೆ.
- 3ಚಲಿಸುವ ಜೀವಜಂತುಗಳೆಲ್ಲಾ ನಿಮಗೆ ಆಹಾರವಾಗಿ ಇರಲಿ, ಹಸುರು ಪಲ್ಯಗಳ ಹಾಗೆಯೇ ಅವುಗಳನ್ನೆಲ್ಲಾ ನಾನು ನಿಮಗೆ ಕೊಟ್ಟಿದ್ದೇನೆ.
- 4ಆದರೆ ಮಾಂಸವನ್ನು ಜೀವವಿರುವ ರಕ್ತದೊಂದಿಗೆ ನೀವು ತಿನ್ನಬಾರದು.
- 5ಇದಲ್ಲದೆ ನಿಮ್ಮ ಪ್ರಾಣಗಳಿಗೋಸ್ಕರ ನಿಮ್ಮ ರಕ್ತವನ್ನು ನಾನು ಖಂಡಿತವಾಗಿಯೂ ವಿಚಾರಿಸುವೆನು.
- 6ಎಲ್ಲಾ ಮೃಗಗಳಿಂದ ಅದನ್ನು ವಿಚಾರಿಸುವೆನು. ಮನುಷ್ಯನ ಪ್ರಾಣವನ್ನು ಮನುಷ್ಯನಿಂದಲೂ ಅವ ನವನ ಸಹೋದರನಿಂದಲೂ ವಿಚಾರಿಸುವೆನು. ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವು ಮನುಷ್ಯನಿಂದಲೇ ಸುರಿಸಲ್ಪಡುವದು. ಯಾಕಂದರೆ ದೇವರು ತನ್ನ ಸ್ವರೂಪದಲ್ಲಿ ಮನುಷ್ಯ ನನ್ನು ಉಂಟುಮಾಡಿದನು.
Cross references
- Deuteronomy 12:23 ಧರ್ಮೋಪದೇಶಕಾಂಡ 12:23ರಕ್ತವನ್ನು ಮಾತ್ರ ತಿನ್ನದ ಹಾಗೆ ಜಾಗ್ರತೆ ಯಾಗಿರು; ಯಾಕಂದರೆ ರಕ್ತವು ಪ್ರಾಣವೇ, ಮತ್ತು ಪ್ರಾಣವನ್ನು ಮಾಂಸದ ಸಂಗಡ ತಿನ್ನಬೇಡ.
- Deuteronomy 12:16 ಧರ್ಮೋಪದೇಶಕಾಂಡ 12:16ರಕ್ತವನ್ನು ಮಾತ್ರ ತಿನ್ನಬೇಡಿರಿ, ಅದನ್ನು ನೀರಿನಂತೆ ನೆಲಕ್ಕೆ ಚೆಲ್ಲಬೇಕು.
- Deuteronomy 15:23 ಧರ್ಮೋಪದೇಶಕಾಂಡ 15:23ಅದರ ರಕ್ತವನ್ನು ಮಾತ್ರ ತಿನ್ನದೆ ನೀರಿನಂತೆ ಭೂಮಿಯಲ್ಲಿ ಹೊಯ್ಯಬೇಕು.
- Acts 15:20 ಅಪೊಸ್ತಲರ ಕೃತ್ಯಗಳು 15:20ಆದರೆ ಅವರು ವಿಗ್ರಹಗಳ ಮಲಿನತೆಯನ್ನೂ ಜಾರತ್ವವನ್ನೂ ಕುತ್ತಿಗೆ ಹಿಸುಕಿ ಕೊಂದವುಗಳನ್ನೂ ರಕ್ತವನ್ನೂ ವಿಸ ರ್ಜಿಸಬೇಕೆಂದು ನಾವು ಅವರಿಗೆ ಬರೆಯುವೆವು.
- Leviticus 7:26 ಯಾಜಕಕಾಂಡ 7:26ಇದಲ್ಲದೆ ನೀವು ಯಾವತರದ ರಕ್ತವನ್ನೂ ಅಂದರೆ ಅದು ಪಕ್ಷಿಯದಾ ಗಲಿ, ಪ್ರಾಣಿಯದಾಗಲಿ, ನಿಮ್ಮ ಯಾವ ನಿವಾಸಗಳ ಲ್ಲಿಯೂ ತಿನ್ನಬಾರದು.
- Acts 15:29 ಅಪೊಸ್ತಲರ ಕೃತ್ಯಗಳು 15:29ಏನಂದರೆ ವಿಗ್ರಹಗಳಿಗೆ ಅರ್ಪಿಸಿದ ಭೋಜನ ಪದಾರ್ಥಗಳನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದವುಗಳನ್ನೂ ಜಾರತ್ವವನ್ನೂ ನೀವು ವಿಸರ್ಜಿಸಬೇಕೆಂಬದೇ. ಇವುಗಳಿಂದ ನಿಮ್ಮನ್ನು ನೀವು ಕಾಪಾಡಿಕೊಂಡರೆ ನಿಮಗೆ ಒಳ್ಳೇದಾಗುವದು. ನಿಮಗೆ ಶುಭವಾಗಲಿ.
- Leviticus 17:10–14 ಯಾಜಕಕಾಂಡ 17:10–14ಇದಲ್ಲದೆ ಇಸ್ರಾಯೇಲ್ ಮನೆತನದಲ್ಲಿ ಯಾವನಾದರೂ ನಿಮ್ಮ ಮಧ್ಯದೊಳಗೆ ಪ್ರವಾಸಿಯಾಗಿರುವ ಪರಕೀಯನಾ ದರೂ ಯಾವದೇ ತರದ ರಕ್ತವನ್ನು ತಿಂದರೆ ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು. ಯಾಕಂದರೆ ಪ್ರತಿ ದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮ ಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರ ವಾಗಿರುವ ಕಾರಣ ಅದರಿಂದ ದೋಷಪರಿಹಾರ ವಾಗುತ್ತದಷ್ಟೆ. ಆದಕಾರಣ ನಿಮ್ಮಲ್ಲಿ ಯಾವನಾ ದರೂ ರಕ್ತವನ್ನು ತಿನ್ನಬಾರದೆಂದು ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿರುವ ಪರಕೀಯನು ರಕ್ತವನ್ನು ತಿನ್ನಬಾರ ದೆಂದು ನಾನು ಇಸ್ರಾಯೇಲ್ ಮಕ್ಕಳಿಗೆ ಹೇಳಿದೆನು. ಇದಲ್ಲದೆ ಇಸ್ರಾಯೇಲ್ ಮಕ್ಕಳಲ್ಲಿ ಯಾವ ಮನುಷ್ಯನಾದರೂ ನಿಮ್ಮೊಳಗೆ ಪ್ರವಾಸಿಯಾಗಿರುವ ಪರಕೀಯನಾದರೂ ತಿನ್ನುವದಕ್ಕಾಗಿ ಬೇಟೆಯಾಡಿ ಯಾವದೇ ಪಶುವನ್ನಾಗಲಿ ಇಲ್ಲವೆ ಪಕ್ಷಿಯನ್ನಾಗಲಿ ಹಿಡಿದರೆ ಅದರ ರಕ್ತವನ್ನೆಲ್ಲಾ ಸುರಿದು ಅದನ್ನು ಮಣ್ಣಿ ನಿಂದ ಮುಚ್ಚಬೇಕು. ಯಾಕಂದರೆ ರಕ್ತವೇ ಎಲ್ಲಾ ಶರೀರಗಳ ಜೀವವಾಗಿದೆ; ಅದಕ್ಕಿರುವ ರಕ್ತವು ಅದರ ಜೀವಕ್ಕಾಗಿಯೇ ಇದೆ; ಆದದರಿಂದ ನಾನು ಇಸ್ರಾ ಯೇಲ್ ಮಕ್ಕಳಿಗೆ--ನೀವು ಯಾವ ಬಗೆಯ ಶರೀರದ ರಕ್ತವನ್ನೂ ತಿನ್ನಬಾರದೆಂದು ಹೇಳಿದ್ದೇನೆ. ಎಲ್ಲಾ ಶರೀರಗಳ ಜೀವವು ರಕ್ತದಲ್ಲಿಯೇ ಇದೆ; ಇದನ್ನು ತಿನ್ನುವ ಯಾವನಾದರೂ ತೆಗೆದುಹಾಕಲ್ಪಡಬೇಕು.
- Leviticus 3:17 ಯಾಜಕಕಾಂಡ 3:17ನೀವು ಕೊಬ್ಬನ್ನಾಗಲಿ ರಕ್ತವನ್ನಾಗಲಿ ತಿನ್ನದಂತೆ ಇದು ನಿಮ್ಮ ಸಂತತಿಯ ವರಿಗೆಲ್ಲಾ ಎಲ್ಲಾ ನಿವಾಸಗಳಲ್ಲಿ ನಿರಂತರವಾದ ಕಟ್ಟಳೆಯಾಗಿರುವದು.
- Leviticus 19:26 ಯಾಜಕಕಾಂಡ 19:26ನೀವು ರಕ್ತ ದೊಂದಿಗೆ ಯಾವದನ್ನೂ ತಿನ್ನಬಾರದು; ಇದಲ್ಲದೆ ಮಂತ್ರವನ್ನು ಉಪಯೋಗಿಸಬಾರದು, ಶಕುನಗಳನ್ನು ನೋಡಬಾರದು.
- 1 Samuel 14:33–34 1 ಸಮುವೇಲನು 14:33–34ಆಗ ಅವರು ಸೌಲನಿಗೆ--ಇಗೋ, ಜನರು ಮಾಂಸದ ಕೂಡ ರಕ್ತವನ್ನು ತಿನ್ನುವದರಿಂದ ಕರ್ತನಿಗೆ ವಿರೋಧವಾಗಿ ಪಾಪ ಮಾಡುತ್ತಾರೆಂದು ತಿಳಿಸಿದರು. ಅದಕ್ಕವನು--ನೀವು ದ್ರೋಹ ಮಾಡಿ ದಿರಿ; ಈಗ ಒಂದು ದೊಡ್ಡಕಲ್ಲನ್ನು ನನ್ನ ಬಳಿಗೆ ಹೊರ ಳಿಸಿ ಬಿಡಿರಿ ಅಂದನು. ಸೌಲನು ಅವರಿಗೆ--ನೀವು ಜನರಲ್ಲಿ ಚದರಿಹೋಗಿ ರಕ್ತ ಸಹಿತವಾಗಿ ತಿಂದು ಕರ್ತನಿಗೆ ವಿರೋಧವಾಗಿ ಪಾಪಮಾಡದೆ ಪ್ರತಿಯೊ ಬ್ಬನು ತನ್ನ ಎತ್ತನ್ನೂ ಕುರಿಯನ್ನೂ ನನ್ನ ಬಳಿಗೆ ತಂದು ಇಲ್ಲಿ ಕೊಯ್ದು ತಿನ್ನಿರಿ ಎಂಬದಾಗಿ ಹೇಳಿರಿ ಅಂದನು. ಆದದರಿಂದ ಜನರಲ್ಲಿ ಪ್ರತಿಯೊಬ್ಬನು ತನ್ನ ಎತ್ತನ್ನು ಆ ರಾತ್ರಿಯಲ್ಲಿ ತನ್ನ ಸಂಗಡ ತಕ್ಕೊಂಡು ಬಂದು ಅಲ್ಲಿ ಕೊಯ್ದರು.
- 1 Timothy 4:4 1 ತಿಮೊಥೆಯನಿಗೆ 4:4ದೇವರ ಪ್ರತಿಯೊಂದು ಸೃಷ್ಟಿಯೂ ಒಳ್ಳೇದಾಗಿದೆ; ಸ್ತೋತ್ರ ಮಾಡಿ ತೆಗೆದು ಕೊಳ್ಳುವ ಪಕ್ಷಕ್ಕೆ ಯಾವದನ್ನೂ ನಿರಾಕರಿಸಬಾರದು.