Haggai · chapter 2 · verse 8
Haggai 2:8 in Kannada
ಬೆಳ್ಳಿಯು ನನ್ನದು, ಚಿನ್ನವು ನನ್ನದು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
Belliyu nannadu, chinnavu nannadu endu sainyagala kartanu annuttaane.
Haggai 2:8 in English
- King James Version (KJV)
- The silver [is] mine, and the gold [is] mine, saith the LORD of hosts.
- World English Bible (WEB)
- The silver is mine, and the gold is mine,’ says the LORD of Armies.
- American Standard Version (ASV)
- The silver is mine, and the gold is mine, saith Jehovah of hosts.
- Bible in Basic English (BBE)
- The silver is mine and the gold is mine, says the Lord of armies.
- Darby Translation (DBY)
- The silver is mine, and the gold is mine, saith Jehovah of hosts.
- Webster's Bible (WBS)
- The silver [is] mine, and the gold [is] mine, saith the LORD of hosts.
- Young's Literal Translation (YLT)
- Mine [is] the silver, and Mine the gold, An affirmation of Jehovah of Hosts.
Read in context
- 6ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ, ಇನ್ನು ಒಂದು ಸಾರಿ ಕೊಂಚ ಕಾಲವಾದ ಮೇಲೆ ನಾನು ಆಕಾಶಗಳನ್ನೂ ಭೂಮಿಯನ್ನೂ ಸಮುದ್ರ ವನ್ನೂ ಒಣಗಿದ ನೆಲವನ್ನೂ ಕದಲಿಸುತ್ತೇನೆ.
- 7ಎಲ್ಲಾ ಜನಾಂಗಗಳನ್ನು ಅದುರಿಸುತ್ತೇನೆ; ಎಲ್ಲಾ ಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ಮಹಿಮೆಯಿಂದ ತುಂಬಿಸುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 8ಬೆಳ್ಳಿಯು ನನ್ನದು, ಚಿನ್ನವು ನನ್ನದು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
- 9ಈ ಆಲಯದ ಮುಂದಿನ ಮಹಿಮೆಯು ಹಿಂದಿನ ಮಹಿಮೆಗಿಂತ ವಿಶೇಷವಾಗಿರುವದು ಎಂದು ಸೈನ್ಯಗಳ ಕರ್ತನು ಹೇಳು ತ್ತಾನೆ; ಈ ಸ್ಥಳದಲ್ಲಿ ಸಮಾಧಾನ ಕೊಡುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 10ದಾರ್ಯಾವೆಷನ ಎರಡನೇ ವರುಷದಲ್ಲಿ ಒಂಭ ತ್ತನೇ ತಿಂಗಳಿನ, ಇಪ್ಪತ್ತನಾಲ್ಕನೆ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನಿಂದ ಉಂಟಾಗಿ ಹೇಳಿದ್ದೇನಂದರೆ,
Cross references
- Psalm 50:10–12 ಕೀರ್ತನೆಗಳು 50:10–12ಅಡವಿಯ ಮೃಗಗಳೆಲ್ಲವೂ ಬೆಟ್ಟಗಳಲ್ಲಿರುವ ಸಾವಿರ ಪಶುಗಳೂ ನನ್ನವೇ. ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆನು; ಕಾಡುಮೃಗಗಳು ನನ್ನವುಗಳಾಗಿವೆ. ನಾನು ಹಸಿದಿದ್ದರೆ ನಿನಗೆ ಹೇಳೆನು; ಭೂಲೋಕವೂ ಅದರ ಪರಿಪೂರ್ಣತೆಯೂ ನನ್ನವೇ.
- Psalm 24:1 ಕೀರ್ತನೆಗಳು 24:1ಭೂಮಿಯೂ ಅದರ ಸಮಸ್ತವೂ ಭೂಲೋಕವೂ ಅದರಲ್ಲಿ ವಾಸಿಸುವವುಗಳೂ ಕರ್ತನವುಗಳು.
- Isaiah 60:17 ಯೆಶಾಯ 60:17ಹಿತ್ತಾಳೆಗೆ ಬದಲಾಗಿ ಬಂಗಾರವನ್ನು ತರುವೆನು; ಕಬ್ಬಿಣಕ್ಕೆ ಬದಲಾಗಿ ಬೆಳ್ಳಿಯನ್ನೂ ಮರಕ್ಕೆ ಬದಲಾಗಿ ಹಿತ್ತಾಳೆಯನ್ನೂ ಕಲ್ಲುಗಳಿಗೆ ಬದಲಾಗಿ ಕಬ್ಬಿಣವನ್ನೂ ತರುವೆನು, ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿಯೂ ನೀತಿಯನ್ನು ನಿನಗೆ ಅಧಿಕಾರಿ ಯನ್ನಾಗಿಯೂ ಮಾಡುವೆನು.
- 1 Chronicles 29:14–16 1 ಪೂರ್ವಕಾಲವೃತ್ತಾಂತ 29:14–16ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಯಾಕಂದರೆ ಸಮಸ್ತವೂ ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಅರ್ಪಿಸಿದೆವು. ನಾವು ನಿನ್ನ ಸಮ್ಮುಖದಲ್ಲಿ ನಮ್ಮ ಸಮಸ್ತ ಪಿತೃಗಳ ಹಾಗೆ ಪರದೇಶಸ್ಥರೂ ಪ್ರವಾಸಿಗಳೂ ಆಗಿದ್ದೇವೆ. ಭೂಮಿಯ ಮೇಲೆ ನಮ್ಮ ದಿವಸಗಳು ನೆರಳಿನ ಹಾಗೆ ಅವೆ; ನೆಲೆಯು ಇಲ್ಲ. ನಮ್ಮ ದೇವರಾದ ಕರ್ತನೇ, ನಿನ್ನ ಪರಿಶುದ್ಧ ನಾಮಕ್ಕೋಸ್ಕರ ನಿನಗೆ ಮನೆಯನ್ನು ಕಟ್ಟಿಸಲು ನಾವು ಸಿದ್ಧಮಾಡಿದ ಈ ರಾಶಿಯೆಲ್ಲಾ ನಿನ್ನಿಂದ ಬಂದದ್ದು; ಸಮಸ್ತವೂ ನಿನ್ನದು.
- Isaiah 60:13 ಯೆಶಾಯ 60:13ಲೆಬನೋ ನಿನ ವೈಭವವು ಸುರಗಿ, ದಿಂಡುಗ, ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನು ಶೃಂಗರಿಸುವದಕ್ಕೆ ನಿನ್ನ ಬಳಿಗೆ ಬರುವವು; ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು.
- 1 Kings 6:20–35 1 ಅರಸುಗಳು 6:20–35ದೈವೋಕ್ತಿಯ ಸ್ಥಾನದ ಮುಂಭಾಗವು ಇಪ್ಪತ್ತು ಮೊಳ ಉದ್ದವೂ ಇಪ್ಪತ್ತು ಮೊಳ ಅಗಲವೂ ಇಪ್ಪತ್ತು ಮೊಳ ಎತ್ತರವೂ ಆಗಿತ್ತು. ಅದನ್ನು ಶುದ್ಧ ಚಿನ್ನದಿಂದ ಹೊದಿಸಿದನು. ದೇವ ದಾರು ಮರದ ಪೀಠವನ್ನು ಹಾಗೆಯೇ ಹೊದಿಸಿದನು. ಸೊಲೊಮೋನನು ಮನೆಯ ಒಳಭಾಗವನ್ನು ಶುದ್ಧ ಚಿನ್ನದಿಂದ ಹೊದಿಸಿ ದೈವೋಕ್ತಿಯ ಸ್ಥಾನದ ಮುಂದೆ ಚಿನ್ನದ ಸರಪಣಿಗಳಿಂದ ವಿಭಾಗವನ್ನು ಮಾಡಿ ಅದನ್ನು ಚಿನ್ನದಿಂದ ಹೊದಿಸಿದನು. ಮನೆ ಎಲ್ಲಾ ಮುಗಿ ಯುವ ವರೆಗೂ ಅವನು ಮನೆಯನ್ನೆಲ್ಲಾ ಚಿನ್ನದಿಂದ ಹೊದಿಸಿ ಪರಿಶುದ್ಧಸ್ಥಾನದ ಮುಂಭಾಗದಲ್ಲಿರುವ ಬಲಿ ಪೀಠವನ್ನೆಲ್ಲಾ ಚಿನ್ನದಿಂದ ಹೊದಿಸಿದನು. ಅವನು ದೈವೋಕ್ತಿಯ ಸ್ಥಾನದಲ್ಲಿ ಇಪ್ಪೇ ಮರಗಳಿಂದ ಎರಡು ಕೆರೂಬಿಗಳನ್ನು ಮಾಡಿದನು. ಒಂದೊಂದು ಹತ್ತು ಮೊಳ ಎತ್ತರವಾಗಿತ್ತು. ಕೆರೂಬಿಯ ಒಂದೊಂದು ರೆಕ್ಕೆ ಐದು ಮೊಳವೂ ಮತ್ತೊಂದು ರೆಕ್ಕೆ ಐದು ಮೊಳವೂ ಆಗಿತ್ತು; ಒಂದು ರೆಕ್ಕೆಯ ಕೊನೆ ಮೊದಲುಗೊಂಡು ಮತ್ತೊಂದು ರೆಕ್ಕೆಯ ಕೊನೆಯ ವರೆಗೂ ಹತ್ತು ಮೊಳವಾಗಿತ್ತು. ಇನ್ನೊಂದು ಕೆರೂಬಿಯ ರೆಕ್ಕೆಗಳ ಅಂತರವೂ ಹತ್ತು ಮೊಳವಾಗಿತ್ತು. ಎರಡು ಕೆರೂಬಿಗಳಿಗೆ ಒಂದೇ ಅಳ ತೆಯೂ ಒಂದೇ ಆಕಾರವಿತ್ತು. ಒಂದು ಕೆರೂಬಿಯು ಹತ್ತು ಮೊಳ ಎತ್ತರವಾಗಿತ್ತು: ಇನ್ನೊಂದು ಕೆರೂಬಿಯು ಅದರ ಹಾಗೆಯೇ ಇತ್ತು. ಆ ಕೆರೂಬಿಗಳನ್ನು ಒಳ ಮನೆಯೊಳಗೆ ಇಟ್ಟನು. ಆ ಕೆರೂಬಿಗಳು ರೆಕ್ಕೆಗಳನ್ನು ಚಾಚಿರುವದರಿಂದ ಒಂದು ಕೆರೊಬಿಯ ರೆಕ್ಕೆಯು ಈ ಭಾಗದ ಗೋಡೆಯನ್ನೂ ಮತ್ತೊಂದು ಕೆರೂಬಿಯ ರೆಕ್ಕೆಯು ಆ ಭಾಗದ ಗೋಡೆಯನ್ನೂ ಮುಟ್ಟಿತು; ಮನೆಯ ಮಧ್ಯದಲ್ಲಿ ಒಂದರ ರೆಕ್ಕೆ ಮತ್ತೊಂದರ ರೆಕ್ಕೆಯನ್ನು ಮುಟ್ಟಿತು. ಆ ಕೆರೂಬಿಗಳನ್ನು ಚಿನ್ನದಿಂದ ಹೊದಿಸಿದನು. ಮನೆಯ ಗೋಡೆಗಳನ್ನೆಲ್ಲಾ ಅವನು ಸುತ್ತಲೂ ಒಳ ಹೊರ ಭಾಗಗಳಲ್ಲಿ ಕೆರೂಬಿಗಳನ್ನೂ ಖರ್ಜೂರದ ಗಿಡಗಳನ್ನೂ ವಿಕಸಿಸಿದ ಪುಷ್ಪಗಳನ್ನೂ ಕೆತ್ತಿದ ಕೆಲಸದಿಂದ ಮಾಡಿಸಿದನು. ಮನೆಯ ಒಳ ಹೊರ ಭಾಗವಾಗಿರುವ ನೆಲವನ್ನು ಚಿನ್ನದಿಂದ ಹೊದಿಸಿ ದನು. ಅವನು ದೈವೋಕ್ತಿಯ ಸ್ಥಾನದಬಾಗಲಿಗೆ ಇಪ್ಪೇ ಮರಗಳಿಂದ ಜೋಡು ಕದಗಳನ್ನು ಮಾಡಿಸಿ ದನು. ದ್ವಾರಬಂಧವೂ ನಿಲುವುಗಳೂ ಐದರಲ್ಲಿ ಒಂದು ಭಾಗವಾಗಿದ್ದವು. ಇಪ್ಪೇ ಮರದ ಆ ಎರಡು ಕದಗಳ ಮೇಲೆ ಅವನು ಕೆರೂಬಿಗಳೂ ಖರ್ಜೂರ ಗಿಡಗಳೂ ಅರಳಿದ ಪುಷ್ಪಗಳೂ ಆದ ಚಿತ್ರಗಳನ್ನು ಮಾಡಿಸಿ ಚಿನ್ನದಿಂದ ಹೊದಿಸಿದನು. ಆ ಕೆರೂಬಿಗಳನ್ನೂ ಖರ್ಜೂರ ಗಿಡಗಳನ್ನೂ ಚಿನ್ನದಿಂದ ಹೊದಿಸಿದನು. ಇದಲ್ಲದೆ ಮಂದಿರದ ಬಾಗಲಿಗೆ ಇಪ್ಪೇ ಮರದ ನಿಲುವುಗಳನ್ನು ಮಾಡಿಸಿದನು. ಅದು ನಾಲ್ಕರಲ್ಲಿ ಒಂದು ಭಾಗವಾಗಿತ್ತು. ಅದರ ಎರಡು ಕದಗಳು ತುರಾಯಿ ಮರದ ಹಲಿಗೆಗಳಾಗಿದ್ದವು. ಒಂದು ಕದಕ್ಕೆ ಎರಡು ಮಡಿಸುವ ಹಲಿಗೆಗಳಾಗಿಯೂ ಮತ್ತೊಂದು ಕದಕ್ಕೆ ಎರಡು ಮಡಿಸುವ ಹಲಿಗೆಗಳಾಗಿಯೂ ಇತ್ತು. ಅದರ ಮೇಲೆ ಕೆರೂಬಿಗಳೂ ಖರ್ಜೂರ ಗಿಡಗಳೂ ಅರಳಿದ ಪುಷ್ಪಗಳೂ ಆದ ಕೆತ್ತಿದ ಕೆಲಸವನ್ನು ಮಾಡಿಸಿ ಕೆತ್ತಿದ ಕೆಲಸಕ್ಕೆ ಸರಿಯಾಗಿ ಚಿನ್ನದಿಂದ ಅವುಗಳನ್ನು ಹೊದಿಸಿದನು.