Hosea · chapter 12 · verse 14
Hosea 12:14 in Kannada
ಆದ ರೂ ಎಫ್ರಾಯಾಮು ಬಹು ಕಠೋರವಾಗಿ ಆತನನ್ನು ರೇಗಿಸಿತು. ಆದದರಿಂದ ಆತನು ಅದರ ರಕ್ತವನ್ನು ಅದರ ಮೇಲೆ ಬರಮಾಡುವನು; ಅವನ ನಿಂದೆಯನ್ನು ಅವನ ಕರ್ತನು ಅವನ ಮೇಲೆ ಬರಮಾಡುವನು.
Aada roo ephraayaamu bahu kathoravaagi aatanannu regisitu. Aadadarinda aatanu adara raktavannu adara mele baramaaduvanu; avana nindeyannu avana kartanu avana mele baramaaduvanu.
Hosea 12:14 in English
- King James Version (KJV)
- Ephraim provoked [him] to anger most bitterly: therefore shall he leave his blood upon him, and his reproach shall his Lord return unto him.
- World English Bible (WEB)
- Ephraim has bitterly provoked anger. Therefore his blood will be left on him, and his Lord will repay his contempt.
- American Standard Version (ASV)
- Ephraim hath provoked to anger most bitterly: therefore shall his blood be left upon him, and his reproach shall his Lord return unto him.
- Bible in Basic English (BBE)
- I have been bitterly moved to wrath by Ephraim; so that his blood will be on him, and the Lord will make his shame come back on him.
- Darby Translation (DBY)
- Ephraim provoked [him] to anger most bitterly; and his Lord shall leave his blood upon him, and recompense unto him his reproach.
- Webster's Bible (WBS)
- Ephraim provoked [him] to anger most bitterly: therefore will he leave his blood upon him, and his reproach will his Lord return to him.
- Young's Literal Translation (YLT)
- Ephraim hath provoked most bitterly, And his blood on himself he leaveth, And his reproach turn back to him doth his Lord!
Read in context
- 12ಯಾಕೋಬನು ಸಿರಿಯಾ ದೇಶಕ್ಕೆ ಓಡಿಹೋದನು; ಇಸ್ರಾಯೇಲನು ಹೆಂಡತಿಯ ನಿಮಿತ್ತ ಸೇವೆಮಾಡಿ ಹೆಂಡತಿಯ ನಿಮಿತ್ತ ಕುರಿಗಳನ್ನು ಕಾದನು.
- 13ಪ್ರವಾದಿಯಿಂದ ಕರ್ತನು ಇಸ್ರಾಯೇಲನ್ನು ಐಗುಪ್ತದೊಳಗಿಂದ ಬರಮಾಡಿ ಆ ಪ್ರವಾದಿ ಯಿಂದಲೇ ಆತನು ಅವನನ್ನು ಕಾಪಾಡಿದನು.ಆದ ರೂ ಎಫ್ರಾಯಾಮು ಬಹು ಕಠೋರವಾಗಿ ಆತನನ್ನು ರೇಗಿಸಿತು. ಆದದರಿಂದ ಆತನು ಅದರ ರಕ್ತವನ್ನು ಅದರ ಮೇಲೆ ಬರಮಾಡುವನು; ಅವನ ನಿಂದೆಯನ್ನು ಅವನ ಕರ್ತನು ಅವನ ಮೇಲೆ ಬರಮಾಡುವನು.
- 14ಆದ ರೂ ಎಫ್ರಾಯಾಮು ಬಹು ಕಠೋರವಾಗಿ ಆತನನ್ನು ರೇಗಿಸಿತು. ಆದದರಿಂದ ಆತನು ಅದರ ರಕ್ತವನ್ನು ಅದರ ಮೇಲೆ ಬರಮಾಡುವನು; ಅವನ ನಿಂದೆಯನ್ನು ಅವನ ಕರ್ತನು ಅವನ ಮೇಲೆ ಬರಮಾಡುವನು.
Cross references
- Ezekiel 18:13 ಯೆಹೆಜ್ಕೇಲನು 18:13ಬಡ್ಡಿಗೆ ಕೊಟ್ಟು ಲಾಭ ತೆಗೆದುಕೊಂಡು ಅವನು ಬದುಕುವನೋ? ಅವನು ಬದುಕುವದಿಲ್ಲ, ಅವನು ಈ ಅಸಹ್ಯಗಳನ್ನೆಲ್ಲಾ ಮಾಡಿ ದ್ದಾನೆ; ಅವನು ನಿಶ್ಚಯವಾಗಿ ಸಾಯುವನು ಅವನ ರಕ್ತವು ಅವನ ಮೇಲೆಯೇ ಇರುವದು.
- Daniel 11:18 ದಾನಿಯೇಲನು 11:18ಇದಾದ ಮೇಲೆ ಅವನು ತನ್ನ ಮುಖವನ್ನು ದ್ವೀಪಗಳ ಕಡೆಗೆ ತಿರುಗಿಸಿ ಆನೇಕರನ್ನು ವಶಪಡಿಸಿಕೊಳ್ಳುವನು; ಆದರೆ ಒಬ್ಬ ಅಧಿಪತಿಯು ತನಗಾಗಿ ಅವನ ನಿಂದೆಯನ್ನು ಅಡಗಿಸಿ ಬಿಡುವನು; ಆ ನಿಂದೆಯನ್ನು ತನ್ನ ಮೇಲೆ ಹಾಕಿಕೊಳ್ಳದೆ ಅವನ ಮೇಲೆ ತಿರುಗಿಸಿಬಿಡುವನು.
- 2 Kings 17:7–18 2 ಅರಸುಗಳು 17:7–18ಯಾಕೆ ಹೀಗಾಯಿತಂದರೆ, ಇಸ್ರಾಯೇಲಿನ ಮಕ್ಕಳು, ಐಗುಪ್ತದ ಅರಸನಾದ ಫರೋಹನ ಕೈಯಿಂದ ತಪ್ಪಿಸಿ ಐಗುಪ್ತದೇಶದೊಳಗಿಂದ ಬರ ಮಾಡಿದ ತಮ್ಮ ದೇವರಾದ ಕರ್ತನಿಗೆ ವಿರೋಧ ವಾಗಿ ಪಾಪಮಾಡಿ ಇತರ ದೇವರುಗಳಿಗೆ ಭಯಪಟ್ಟರು. ಇಸ್ರಾಯೇಲ್ಯರ ಮುಂದೆ ಕರ್ತನು ಹೊರ ಡಿಸಿಬಿಟ್ಟ ಅನ್ಯ ಜನಾಂಗಗಳ ಕಟ್ಟಳೆಗಳಲ್ಲಿಯೂ ಇಸ್ರಾ ಯೇಲಿನ ಅರಸುಗಳು ಮಾಡಿದ ಕಟ್ಟಳೆಗಳಲ್ಲಿಯೂ ನಡೆದರು. ಇಸ್ರಾಯೇಲಿನ ಮಕ್ಕಳು ಗುಪ್ತವಾಗಿ ತಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಅಯುಕ್ತ ವಾದವುಗಳನ್ನು ಮಾಡಿ ಬರುವ ಸ್ಥಳಗಳು ಮೊದಲು ಗೊಂಡು ಕೋಟೆಯುಳ್ಳ ಪಟ್ಟಣಗಳ ವರೆಗೂ ತಮ್ಮ ಎಲ್ಲಾ ಪಟ್ಟಣಗಳಲ್ಲಿ ತಮಗೆ ಉನ್ನತ ಸ್ಥಳಗಳನ್ನು ಕಟ್ಟಿಸಿ ಕೊಂಡಿದ್ದರು. ಇದಲ್ಲದೆ ಅವರು ಎತ್ತರವಾದ ಎಲ್ಲಾ ಗುಡ್ಡಗಳಲ್ಲಿ ತೋಪುಗಳನ್ನು ಹಾಕಿ ಹಸುರಾದ ಎಲ್ಲಾ ಮರಗಳ ಕೆಳಗೂ ತಮಗೆ ವಿಗ್ರಹಗಳನ್ನು ನಿಲ್ಲಿಸಿ ಅಲ್ಲಿ ಕರ್ತನು ತಮ್ಮ ಮುಂದೆ ಓಡಿಸಿಬಿಟ್ಟ ಅನ್ಯ ಜನಾಂಗಗಳ ಹಾಗೆ ಅವರು ಎಲ್ಲಾ ಉನ್ನತ ಸ್ಥಳಗಳಲ್ಲಿ ಧೂಪವನ್ನು ಸುಟ್ಟು ಕರ್ತನನ್ನು ಸಿಟ್ಟುಗೊಳಿಸುವ ಹಾಗೆ ಕೆಟ್ಟ ಕಾರ್ಯಗಳನ್ನು ಮಾಡಿದರು-- ನೀವು ಈ ಕಾರ್ಯವನ್ನು ಮಾಡಬೇಡಿರೆಂದು ಕರ್ತನು ತಮಗೆ ಹೇಳಿದ ಮಣ್ಣು ಪ್ರತಿಮೆಗಳನ್ನು ಸೇವಿಸಿದರು. ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ, ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ನ್ಯಾಯಪ್ರಮಾಣದ ಪ್ರಕಾರ ನನ್ನ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳಿರೆಂದು ಕರ್ತನು ಎಲ್ಲಾ ಪ್ರವಾ ದಿಗಳ ಮುಖಾಂತರವಾಗಿಯೂ ಎಲ್ಲಾ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ ಯೆಹೂ ದಕ್ಕೂ ಸಾಕ್ಷಿ ಹೇಳಿದನು. ಆದರೆ ಅವರು ಕೇಳ ದೆಯೂ ತಮ್ಮ ದೇವರಾದ ಕರ್ತನಲ್ಲಿ ನಂಬಿಕೆ ಇಡ ದೆಯೂ ತಮ್ಮ ಪಿತೃಗಳ ಕುತ್ತಿಗೆಯ ಹಾಗೆ ತಮ್ಮ ಕುತ್ತಿಗೆಯನ್ನು ಕಠಿಣಪಡಿಸಿ ಆತನ ಕಟ್ಟಳೆಗಳನ್ನೂ ಆತನು ತಮ್ಮ ಪಿತೃಗಳ ಸಂಗಡ ಮಾಡಿದ ಆತನ ಒಡಂಬಡಿಕೆಯನ್ನೂ ಆತನು ಅವರಿಗೆ ಹೇಳಿದ ಸಾಕ್ಷಿ ಗಳನ್ನೂ ಅಲಕ್ಷ್ಯಮಾಡಿ ವ್ಯರ್ಥವಾದದ್ದನ್ನು ಹಿಂಬಾ ಲಿಸಿ ವ್ಯರ್ಥವಾದವರಾಗಿ -- ನೀವು ಅವರ ಹಾಗೆ ಮಾಡಬೇಡಿರೆಂದು ಕರ್ತನು ಅವರಿಗೆ ಆಜ್ಞಾಪಿಸಿದರೂ ಅವರ ಸುತ್ತಲಿರುವ ಅನ್ಯಜನಾಂಗಗಳ ಹಿಂದೆ ಹೋದರು. ಇದಲ್ಲದೆ ಅವರು ತಮ್ಮ ದೇವರಾದ ಕರ್ತನ ಎಲ್ಲಾ ಆಜ್ಞೆಗಳನ್ನು ಬಿಟ್ಟು ತಮಗೆ ತಾವೇ ಎರಕ ಹೊಯ್ದ ವಿಗ್ರಹಗಳಾದ ಎರಡು ಹೋರಿಗಳನ್ನು ಮಾಡಿಕೊಂಡು ವಿಗ್ರಹಗಳ ತೋಪನ್ನು ಮಾಡಿ ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು ಬಾಳನನ್ನು ಸೇವಿಸಿ ತಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ಬೆಂಕಿಯಲ್ಲಿ ದಾಟಮಾಡಿ ಕಣಿಗಳನ್ನೂ ಶಕುನಗಳನ್ನೂ ಬಳಸಿ ಕರ್ತ ನಿಗೆ ಕೋಪ ಬರುವಂತೆ ಆತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು. ಆದದರಿಂದ ಕರ್ತನು ಇಸ್ರಾಯೇಲಿನ ಮೇಲೆ ಬಹುಕೋಪ ಗೊಂಡು ಅವರನ್ನು ತನ್ನ ಸಮ್ಮುಖದಿಂದ ತೆಗೆದುಹಾಕಿ ದನು. ಯೆಹೂದದ ಗೋತ್ರದ ಹೊರತಾಗಿ ಇನ್ಯಾರೂ ಉಳಿದದ್ದಿಲ್ಲ.
- 1 Samuel 2:30 1 ಸಮುವೇಲನು 2:30ಆದದರಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳುವ ದೇನಂದರೆ--ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಕರ್ತನು ಹೇಳುವದೇನಂದರೆ--ನನಗೆ ಅದು ದೂರವಾಗಿರಲಿ; ಯಾಕಂದರೆ ನನ್ನನ್ನು ಸನ್ಮಾನಿಸು ವವರನ್ನು ನಾನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸು ವವರನ್ನು ನಾನು ತಿರಸ್ಕರಿಸುವೆನು.
- Ezekiel 23:2–10 ಯೆಹೆಜ್ಕೇಲನು 23:2–10ಮನುಷ್ಯಪುತ್ರನೇ, ಒಬ್ಬ ತಾಯಿಯ ಮಕ್ಕಳಾದ ಇಬ್ಬರು ಹೆಂಗಸರಿದ್ದರು; ಅವರು ಐಗುಪ್ತದಲ್ಲಿ ವ್ಯಭಿಚಾರ ಮಾಡುತ್ತಿದ್ದರು. ಅವರು ಎಳೆಯ ಪ್ರಾಯದಲ್ಲಿ ವ್ಯಭಿಚಾರ ಮಾಡಿದ್ದ ರಿಂದ ಕನ್ಯಾವಸ್ಥೆಯ ಅವರ ಸ್ತನಗಳು ಹಿಸುಕಲ್ಪಟ್ಟವು; ಅವುಗಳ ತೊಟ್ಟುಗಳು ನಸುಕಲ್ಪಟ್ಟವು. ಅವರುಗಳ ಹೆಸರುಗಳೇನಂದರೆ ಒಹೊಲ ಎಂಬವಳು ದೊಡ್ಡವಳು ಒಹೊಲೀಬ ಎಂಬವಳು ಚಿಕ್ಕವಳು; ಅವರು ನನ್ನವ ರಾಗಿದ್ದು ಕುಮಾರ ಮತ್ತು ಕುಮಾರ್ತೆಯರನ್ನು ಹೆತ್ತರು; ಅವರ ಹೆಸರು ಹೀಗೆ--ಒಹೋಲ ಎಂಬದು ಸಮಾ ರ್ಯವು ಮತ್ತು ಒಹೊಲೀಬ ಎಂಬದು ಯೆರೂಸ ಲೇಮು. ಒಹೊಲಳು ನನ್ನ ವಶವಾಗಿರುವಾಗ ಅವಳು ತನ್ನ ಪ್ರಿಯರನ್ನು, ತನ್ನ ನೆರೆಯವರಾದ ಅಶ್ಶೂರ್ಯ ದವರನ್ನು, ಅವರೆಲ್ಲರೂ ನೀಲಿಯಿಂದ ಹೊದಿಸಲ್ಪಟ್ಟ (ಧರಿಸಲ್ಪಟ್ಟ) ಯೋಧರು (ಮುಖಂಡರೂ) ಅಧಿಕಾರ ಸ್ಥರೂ ಅಪೇಕ್ಷಿಸತಕ್ಕ ಯೌವನಸ್ಥರೂ ಕುದುರೆಗಳ ಮೇಲೆ ಸವಾರಿ ಮಾಡುವ ರಾಹುತರೂ ಆಗಿರುವ ಅಂಥವರನ್ನು, ಮೋಹಿಸಿದಳು. ಅವರಿಗೆ ಅವಳು ತನ್ನನ್ನು ವ್ಯಭಿಚಾರಿಣಿಯಾಗಿ ಒಪ್ಪಿಸಿದಳು, ಅವರೆಲ್ಲರೂ ಅಶ್ಶೂರದಲ್ಲಿ ಆರಿಸಲ್ಪಟ್ಟವರಾಗಿದ್ದರು. (ನೇಮಿಸ ಲ್ಪಟ್ಟವರು) ಅವಳು ಯಾರನ್ನು ಮೋಹಿಸಿದಳೋ ಅವರ ವಿಗ್ರಹಗಳಿಂದ ತನ್ನನ್ನು ಅಪವಿತ್ರಪಡಿಸಿಕೊಂಡಳು. ಇಲ್ಲವೆ ಅವಳು ಐಗುಪ್ತದಲ್ಲಿದ್ದಂದಿನಿಂದಲೂ ವ್ಯಭಿ ಚಾರವನ್ನು ಸಹ ಬಿಡಲಿಲ್ಲ. ಅವಳ ಯೌವನದಲ್ಲಿ ಅವರು ಅವಳ ಸಂಗಡ ಇದ್ದರು; ಅವರೆಲ್ಲರೂ ಅವಳ ಕನ್ಯತ್ವದ ಸ್ತನಗಳನ್ನು ಒತ್ತಿ, ತಮ್ಮ ವ್ಯಭಿಚಾರಗಳನ್ನು ಅವಳ ಮೇಲೆ ನಡೆಸಿದರು. ಆದದರಿಂದ ನಾನು ಅವಳನ್ನು ಅವಳ ಪ್ರಿಯರಿಂದಲೂ ಒಪ್ಪಿಸುವ ಅವಳ ಅಶ್ಶೂರ್ಯರಿಂದಲೂ ಅವರೆಲ್ಲರಿಂದಲೂ ಮೋಹಿಸ ಲ್ಪಟ್ಟಳು; ಅವರು ಅವಳ ಬೆತ್ತಲೆತನವನ್ನು ಬಯಲು ಪಡಿಸಿದರು ಅವಳ ಪುತ್ರರನ್ನೂ ಹೆಣ್ಣು ಮಕ್ಕಳನ್ನೂ ತೆಗೆದುಕೊಂಡು ಖಡ್ಗದಿಂದ ಕೊಂದುಹಾಕಿದರು; ಸ್ತ್ರೀಯರಲ್ಲಿ (ಕೆಟ್ಟತನಕ್ಕೆ) ಹೆಸರುಗೊಂಡಳು; ಅವಳಲ್ಲಿ ನ್ಯಾಯ ತೀರ್ಪುಮಾಡಿದರು.
- 1 Kings 2:33–34 1 ಅರಸುಗಳು 2:33–34ಆದದರಿಂದ ಅವರ ರಕ್ತಾಪರಾಧವು ಯೋವಾಬನ ತಲೆಯ ಮೇಲೆ ಯೂ ಅವನ ಸಂತತಿಯವರ ತಲೆಯ ಮೇಲೆಯೂ ಯುಗಯುಗಕ್ಕೂ ಇರುವದು. ಆದರೆ ದಾವೀದನ ಮೇಲೆಯೂ ಅವನ ಸಂತಾನದವರ ಮೇಲೆಯೂ ಮನೆಯ ಮೇಲೆಯೂ ಸಿಂಹಾಸನದ ಮೇಲೆಯೂ ಕರ್ತನಿಂದ ಸಮಾಧಾನವು ಯುಗಯುಗಾಂತರಕ್ಕೂ ಇರುವದು ಅಂದನು. ಹಾಗೆಯೇ ಯೆಹೋಯಾ ದಾವನ ಮಗನಾದ ಬೆನಾಯನು ಹೋಗಿ ಅವನ ಮೇಲೆ ಬಿದ್ದು ಅವನನ್ನು ಕೊಂದುಹಾಕಿದನು. ಅವನು ಅರಣ್ಯದಲ್ಲಿರುವ ತನ್ನ ಮನೆಯಲ್ಲಿ ಹೂಣಲ್ಪಟ್ಟನು.
- Ezekiel 24:7–8 ಯೆಹೆಜ್ಕೇಲನು 24:7–8ಅದರ ರಕ್ತವು ಅದರ ಮಧ್ಯದಲ್ಲಿದೆ; ಅದು ಅದನ್ನು ಬಂಡೆಯ ತುದಿಯಲ್ಲಿ ಇಟ್ಟಿದೆ; ದೂಳು ಮುಚ್ಚುವ ಹಾಗೆ ನೆಲದ ಮೇಲೆ ಚೆಲ್ಲಲಿಲ್ಲ; ಮುಯ್ಯಿಗೆಮುಯ್ಯಿ ತೀರಿಸುವದಕ್ಕೆ ರೋಷ ವನ್ನೆಬ್ಬಿಸುವ ಹಾಗೆ ನಾನು ಅದರ ರಕ್ತಾಪರಾಧವನ್ನು ಮುಚ್ಚಿಬಿಡದಂತೆ ಬಂಡೆಯ ತುದಿಯ ಮೇಲೆ ಇಟ್ಟಿ ದ್ದೇನೆ;
- Deuteronomy 28:37 ಧರ್ಮೋಪದೇಶಕಾಂಡ 28:37ಇದಲ್ಲದೆ ದೇವರು ನಿನ್ನನ್ನು ನಡಿಸುವ ಎಲ್ಲಾ ಜನಾಂಗಗಳಲ್ಲಿ ವಿಸ್ಮಯಕ್ಕೂ ಗಾದೆಗೂ ಹಾಸ್ಯಕ್ಕೂ ಗುರಿಯಾಗುವಿ.
- 2 Samuel 1:16 2 ಸಮುವೇಲನು 1:16ದಾವೀದನು ಅವ ನಿಗೆ--ಕರ್ತನ ಅಭಿಷಿಕ್ತನನ್ನು ಕೊಂದುಹಾಕಿದೆನೆಂದು ನಿನ್ನ ಬಾಯಿ ನಿನಗೆ ವಿರೋಧವಾಗಿ ಸಾಕ್ಷಿಹೇಳಿದ್ದರಿಂದ ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರಲಿ ಅಂದನು.
- Hosea 7:16 ಹೋಶೇಯ 7:16ಅವರು ಹಿಂತಿರುಗುತ್ತಾರೆ, ಆದರೆ ಮಹೋನ್ನತನಾ ದಾತನ ಕಡೆಗೆ ಅಲ್ಲ. ಅವರು ಮೋಸ ಮಾಡುವ ಬಿಲ್ಲಿನ ಹಾಗೆ ಇದ್ದಾರೆ; ಅವರ ಪ್ರಧಾನರ ನಾಲಿಗೆಯ ಹುಚ್ಚು ಕೂಗಾಟದ ನಿಮಿತ್ತ ಕತ್ತಿಯಿಂದ ಬೀಳುವರು; ಇದೇ ಐಗುಪ್ತದೇಶದಲ್ಲಿ ಅವರಿಗಿರುವ ನಿಂದೆಯಾಗಿದೆ.
- Ezekiel 33:5 ಯೆಹೆಜ್ಕೇಲನು 33:5ಅವನು ಕಹಳೆಯ ಧ್ವನಿಯನ್ನು ಕೇಳಿ ಎಚ್ಚರಗೊಳ್ಳಲಿಲ್ಲ; ಅವನ ರಕ್ತವು ಅವನ ಮೇಲೆ ಇರುವದು. ಆದರೆ ಎಚ್ಚರಿಕೆಯಾಗುವವನು ತನ್ನ ಪ್ರಾಣವನ್ನು ಉಳಿಸಿಕೊ ಳ್ಳುವನು.