Hosea · chapter 13 · verse 2
Hosea 13:2 in Kannada
ಈಗ ಅವರು ಹೆಚ್ಚೆಚ್ಚಾಗಿ ಪಾಪವನ್ನು ಮಾಡುತ್ತಾರೆ; ಸ್ವಂತ ಬುದ್ಧಿಯ ಪ್ರಕಾರ ತಮ್ಮ ಬೆಳ್ಳಿಯಿಂದ ಎರಕದ ವಿಗ್ರಹಗಳನ್ನೂ ಮೂರ್ತಿಗಳನ್ನೂ ಮಾಡಿಕೊಂಡಿದ್ದಾರೆ. ಅವೆಲ್ಲವೂ ಶಿಲ್ಪಿಗಳ ಕೈಕೆಲಸವೇ, ಬಲಿ ಅರ್ಪಿಸುವ ಮನುಷ್ಯರು ಹಸುಗಳಿಗೆ ಮುದ್ದಿಡಲೆಂದು ಅವರು ಅವರ ವಿಷಯ ವಾಗಿ ಹೇಳಿದರು.
Eega avaru hechchechchaagi paapavannu maaduttaare; svanta buddhiya prakaara tamma belliyinda erakada vigrahagalannoo moortigalannoo maadikondiddaare. Avellavoo shilpigala kaikelasave, bali arpisuva manushyaru hasugalige muddidalendu avaru avara vishaya vaagi helidaru.
Hosea 13:2 in English
- King James Version (KJV)
- And now they sin more and more, and have made them molten images of their silver, [and] idols according to their own understanding, all of it the work of the craftsmen: they say of them, Let the men that sacrifice kiss the calves.
- World English Bible (WEB)
- Now they sin more and more, and have made themselves molten images of their silver, even idols according to their own understanding, all of them the work of the craftsmen. They say of them, ‘They offer human sacrifice and kiss the calves.’
- American Standard Version (ASV)
- And now they sin more and more, and have made them molten images of their silver, even idols according to their own understanding, all of them the work of the craftsmen: they say of them, Let the men that sacrifice kiss the calves.
- Bible in Basic English (BBE)
- And now their sins are increased; they have made themselves a metal image, false gods from their silver, after their designs, all of them the work of the metal-workers; they say of them, Let them give offerings, let men give kisses to the oxen.
- Darby Translation (DBY)
- And now they sin more and more, and have made them molten images of their silver, idols according to their own understanding, all of it the work of the craftsmen: they say of them, Let the men that sacrifice kiss the calves.
- Webster's Bible (WBS)
- And now they sin more and more, and have made them molten images of their silver, [and] idols according to their own understanding, all of it the work of artificers: they say of them, Let the men that sacrifice kiss the calves.
- Young's Literal Translation (YLT)
- And now do they add to sin, And make to them a molten image of their silver, By their own understanding — idols, A work of artisans — all of it, Of them they say, who [are] sacrificers among men, 'The calves let them kiss.'
Read in context
- 1ಎಫ್ರಾಯಾಮು ನಡುಗುತ್ತಾ ಮಾತನಾಡಿದಾಗ ಅವನು ತನ್ನನ್ನು ಇಸ್ರಾಯೇಲಿನಲ್ಲಿ ಹೆಚ್ಚಿಸಿಕೊಂಡನು; ಆದರೆ ಬಾಳನ ವಿಷಯದಲ್ಲಿ ಅವನು ಅಪರಾಧಿಯಾದ ಮೇಲೆ ಸತ್ತನು.
- 2ಈಗ ಅವರು ಹೆಚ್ಚೆಚ್ಚಾಗಿ ಪಾಪವನ್ನು ಮಾಡುತ್ತಾರೆ; ಸ್ವಂತ ಬುದ್ಧಿಯ ಪ್ರಕಾರ ತಮ್ಮ ಬೆಳ್ಳಿಯಿಂದ ಎರಕದ ವಿಗ್ರಹಗಳನ್ನೂ ಮೂರ್ತಿಗಳನ್ನೂ ಮಾಡಿಕೊಂಡಿದ್ದಾರೆ. ಅವೆಲ್ಲವೂ ಶಿಲ್ಪಿಗಳ ಕೈಕೆಲಸವೇ, ಬಲಿ ಅರ್ಪಿಸುವ ಮನುಷ್ಯರು ಹಸುಗಳಿಗೆ ಮುದ್ದಿಡಲೆಂದು ಅವರು ಅವರ ವಿಷಯ ವಾಗಿ ಹೇಳಿದರು.
- 3ಆದದರಿಂದ ಅವರು ಪ್ರಾತಃ ಕಾಲದ ಮೇಘದ ಹಾಗೆಯೂ ಬೇಗನೆ ಮಾಯ ವಾಗುವ ಇಬ್ಬನಿ ಹಾಗೆಯೂ ಸುಳಿಗಾಳಿಯು ನೆಲದಿಂದ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೂ ಚಿಮಿಣಿಗೆಯಿಂದ ಹೊರಡುವ ಹೊಗೆಯ ಹಾಗೆಯೂ ಇರುವರು.
- 4ಆದಾಗ್ಯೂ ನಾನು ಐಗುಪ್ತದಿಂದ ನಿನ್ನ ದೇವರಾಗಿರುವ ಕರ್ತನಾಗಿದ್ದೇನೆ, ನೀನು ನನ್ನ ಹೊರತು ಯಾವ ದೇವರನ್ನೂ ತಿಳಿದುಕೊಳ್ಳಬಾರದು; ಯಾಕಂದರೆ ನನ್ನ ಹೊರತು ನಿನಗೆ ಬೇರೆ ರಕ್ಷಕನು ಇಲ್ಲ.
Cross references
- Isaiah 44:17–20 ಯೆಶಾಯ 44:17–20ಅದರಲ್ಲಿ ಉಳಿದ ಭಾಗವನ್ನು ದೇವರನ್ನಾಗಿಯೂ ಕೆತ್ತಿದ ವಿಗ್ರಹವನ್ನಾಗಿಯೂ ಮಾಡಿ ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿ--ನೀನೇ ನನ್ನ ದೇವರು, ನನ್ನನ್ನು ಕಾಪಾಡು ಎಂದು ಬೇಡಿಕೊಳ್ಳುವನು. ಅವರು ಏನೂ ತಿಳಿಯ ದವರು ಇಲ್ಲವೆ ಏನೂ ಗ್ರಹಿಸಲಾರದವರು; ಆತನು ಅವರ ಕಣ್ಣು ಕಾಣದಂತೆಯೂ ಹೃದಯಗಳು ಗ್ರಹಿಸ ದಂತೆಯೂ ಮುಚ್ಚಿ ಬಿಟ್ಟಿದ್ದಾನೆ. ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು; ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ ಮಾಂಸವನ್ನು ಸುಟ್ಟು ತಿಂದೆ ನಲ್ಲಾ; ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ, ಮರದ ತುಂಡಿಗೆ ಅಡ್ಡಬೀಳಬಹುದೋ ಅಂದುಕೊಳ್ಳು ವಷ್ಟು ಜ್ಞಾನವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆತಾರರು. ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿ ತಪ್ಪಿಸಿದ ಕಾರಣ ನನ್ನ ಬಲಗೈಯಲ್ಲಿ ಸುಳ್ಳು ಇದೆಯಲ್ಲಾ ಎಂದು ಅಂದುಕೊಳ್ಳಲೂ ತನ್ನ ಪ್ರಾಣ ವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.
- Isaiah 46:6 ಯೆಶಾಯ 46:6ಚೀಲದಿಂದ ಚಿನ್ನವನ್ನು ಸುರಿದು ತ್ರಾಸಿ ನಲ್ಲಿ ಬೆಳ್ಳಿಯನ್ನು ತೂಗಿ, ಅಕ್ಕಸಾಲಿಗನಿಗೆ ಕೂಲಿ ಕೊಟ್ಟಾಗ, ಅವನು ಅದನ್ನು ದೇವರನ್ನಾಗಿ ಮಾಡಲು ಅವರು ಅದಕ್ಕೆ ಎರಗಿ ಪೂಜೆ ಮಾಡುವರು.
- 1 Kings 19:18 1 ಅರಸುಗಳು 19:18ಆದರೆ ಬಾಳನಿಗೆ ಬೊಗ್ಗದೆ ಇರುವ ಸಕಲ ಮೊಣ ಕಾಲುಗಳೂ ಅದನ್ನು ಮುದ್ದಿಡದ ಸಕಲ ಬಾಯಿಗಳೂ ಆಗಿರುವ ಏಳು ಸಾವಿರ ಮಂದಿಯನ್ನು ಇಸ್ರಾಯೇ ಲಿನಲ್ಲಿ ನನಗೋಸ್ಕರ ಉಳಿಸಿಕೊಂಡಿದ್ದೇನೆ ಅಂದನು.
- Jeremiah 10:4 ಯೆರೆಮೀಯ 10:4ಬೆಳ್ಳಿಯಿಂದಲೂ ಬಂಗಾರದಿಂದಲೂ ಅದನ್ನು ಅಲಂಕರಿಸುತ್ತಾರೆ; ಮೊಳೆಗಳಿಂದಲೂ ಸುತ್ತಿಗೆ ಗಳಿಂದಲೂ ಚಲಿಸದ ಹಾಗೆ ಅದನ್ನು ಬಿಗಿಸುತ್ತಾರೆ.
- Hosea 2:8 ಹೋಶೇಯ 2:8ಅವರು ಬಾಳನಿಗಾಗಿ ಸಿದ್ಧಮಾಡಿದ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ನಾನು ಕೊಟ್ಟು ಅವ ಳಿಗೆ ಬೆಳ್ಳಿ ಬಂಗಾರವನ್ನು ನಾನೇ ಹೆಚ್ಚಿಸಿದ್ದೇನೆಂದು ಅವಳಿಗೆ ತಿಳಿಯಲಿಲ್ಲ.
- Habakkuk 2:18–19 ಹಬಕ್ಕೂಕ 2:18–19ಅದನ್ನು ಕೆತ್ತಿ ರೂಪಿಸಿದವನ ಕೆತ್ತಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ, ಅದನ್ನು ರೂಪಿಸಿದವನು ಮೂಕ ಬೊಂಬೆಗಳನ್ನು ಮಾಡಿ ಅದರಲ್ಲಿ ನಂಬಿಕೆಯಿಡು ವಂಥ, ಎರಕದ ವಿಗ್ರಹದಿಂದ ಪ್ರಯೋಜನವೇನು? ಮರಕ್ಕೆ--ಎಚ್ಚರವಾಗು; ಮೂಕವಾದ ಕಲ್ಲಿಗೆ--ಎದ್ದು ಬೋಧಿಸಲಿ ಎಂದು ಹೇಳುವವನಿಗೆ ಅಯ್ಯೋ! ಇಗೋ, ಅದು ಬಂಗಾರದಿಂದಲೂ ಬೆಳ್ಳಿಯಿಂದಲೂ ಹೊದಿಸಲ್ಪಟ್ಟಿದೆ, ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.
- 2 Timothy 3:13 2 ತಿಮೊಥೆಯನಿಗೆ 3:13ಆದರೆ ದುಷ್ಟರೂ ವಂಚಕರೂ ಮೋಸಮಾಡುತ್ತಾ ತಾವೇ ಮೋಸ ಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.
- Romans 11:4 ರೋಮಾಪುರದವರಿಗೆ 11:4ಆದರೆ ದೇವರು ಅವನಿಗೆ ಕೊಟ್ಟ ಉತ್ತರವೇನಂದರೆ--ಬಾಳನ ವಿಗ್ರಹಕ್ಕೆ ಮೊಣಕಾಲೂರದ ಏಳುಸಾವಿರ ಜನರನ್ನು ನಾನು ನನಗೋಸ್ಕರ ಉಳಿಸಿಕೊಂಡಿದ್ದೇನೆ ಎಂಬದು.
- Romans 1:22–25 ರೋಮಾಪುರದವರಿಗೆ 1:22–25ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚ ರಾದರು; ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಕ್ಷಿ, ಪಶುಗಳ ಮತ್ತು ಹರಿದಾಡುವವುಗಳ ಪ್ರತಿಮೆಗೆ ಮಾರ್ಪಡಿಸಿದರು. ಆದಕಾರಣ ತಮ್ಮ ಹೃದಯಗಳ ದುರಾಶೆಗಳ ಮೂಲಕ ತಮ್ಮ ಸ್ವಂತ ದೇಹಗಳನ್ನು ತಮ್ಮೊಳಗೆ ಅವ ಮಾನಪಡಿಸಿಕೊಳ್ಳುವಂತೆ ದೇವರು ಅವರನ್ನು ಅಶುದ್ಧ ತನಕ್ಕೆ ಒಪ್ಪಿಸಿದನು; ಅವರು ದೇವರ ವಿಷಯವಾದ ಸತ್ಯವನ್ನು ಸುಳ್ಳಿಗೆ ಬದಲಾಯಿಸಿ ಸೃಷ್ಟಿಕರ್ತನಿಗಿಂತ ಹೆಚ್ಚಾಗಿ ಸೃಷ್ಟಿಯನ್ನೇ ಆರಾಧಿಸಿ ಸೇವಿಸಿದರು; ಆತನು (ಸೃಷ್ಟಿಕರ್ತನು) ಎಂದೆಂದಿಗೂ ಸ್ತುತಿ ಹೊಂದತಕ್ಕವನು. ಆಮೆನ್.
- 2 Chronicles 33:23 2 ಪೂರ್ವಕಾಲವೃತ್ತಾಂತ 33:23ತನ್ನ ತಂದೆಯಾದ ಮನಸ್ಸೆಯು ತನ್ನನ್ನು ತಗ್ಗಿಸಿಕೊಂಡ ಹಾಗೆ ಆಮೋನನು ಕರ್ತನ ಮುಂದೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ; ಆದರೆ ಆಮೋನನು ಅಧಿಕ ವಾಗಿ ಅಪರಾಧ ಮಾಡಿದನು.
- Psalm 115:4–8 ಕೀರ್ತನೆಗಳು 115:4–8ಅವರ ವಿಗ್ರಹಗಳು ಬೆಳ್ಳಿಯೂ ಬಂಗಾರವೂ ಮನುಷ್ಯನ ಕೈಕೆಲಸವೂ ಆಗಿವೆ. ಅವುಗಳಿಗೆ ಬಾಯಿ ಉಂಟು; ಮಾತಾಡುವದಿಲ್ಲ; ಕಣ್ಣುಗಳುಂಟು; ನೋಡು ವದಿಲ್ಲ. ಕಿವಿಗಳುಂಟು; ಕೇಳುವದಿಲ್ಲ. ಮೂಗು ಉಂಟು; ಮೂಸುವದಿಲ್ಲ. ಕೈಗಳುಂಟು; ಮುಟ್ಟುವ ದಿಲ್ಲ. ಕಾಲುಗಳುಂಟು; ನಡೆಯುವದಿಲ್ಲ. ತಮ್ಮ ಗಂಟಲಿನಿಂದ ಮಾತನಾಡುವದಿಲ್ಲ, ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವ ರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
- Romans 2:5 ರೋಮಾಪುರದವರಿಗೆ 2:5ಹೀಗೆ ನಿನ್ನ ಕಾಠಿಣ್ಯತೆ ಮತ್ತು ಪಶ್ಚಾತ್ತಾಪವಿಲ್ಲದ ಹೃದಯದಿಂದ ಉಗ್ರತೆಯ ದಿನಕ್ಕಾಗಿಯೂ ದೇವರ ನೀತಿಯುಳ್ಳ ನ್ಯಾಯತೀರ್ವಿಕೆಯ ಪ್ರತ್ಯಕ್ಷತೆಗಾಗಿಯೂ ದೇವರ ಕೋಪವನ್ನು ನಿನಗೋಸ್ಕರ ಕೂಡಿಸಿಟ್ಟುಕೊಳ್ಳುತ್ತಾ ಇದ್ಧೀ.
Original words (Hebrew)
- sin · H2398חָטָא châṭâʼ
- more · H3254יָסַף yâçaph
- made · H6213עָשָׂה ʻâsâh
- images · H4541מַסֵּכָה maççêkâh
- silver · H3701כֶּסֶף keçeph
- idols · H6091עָצָב ʻâtsâb
- understanding · H8394תָּבוּן tâbûwn
- work · H4639מַעֲשֶׂה maʻăseh
- craftsmen · H2796חָרָשׁ chârâsh
- say · H559אָמַר ʼâmar
- men · H120אָדָם ʼâdâm
- sacrifice · H2076זָבַח zâbach
- kiss · H5401נָשַׁק nâshaq
- calves · H5695עֵגֶל ʻêgel