Isaiah · chapter 33 · verse 11
Isaiah 33:11 in Kannada
ನೀವು ಹೊಟ್ಟನ್ನು ಗರ್ಭಧರಿಸಿ ಕೂಳೆಯನ್ನು ಹೆರು ವಿರಿ. ನಿಮ್ಮ ಶ್ವಾಸವು ನಿಮ್ಮನ್ನೇ ನುಂಗುವ ಜ್ವಾಲೆಯಾಗು ವದು.
Neevu hottannu garbhadharisi kooleyannu heru viri. Nimma shvaasavu nimmanne nunguva jvaaleyaagu vadu.
Isaiah 33:11 in English
- King James Version (KJV)
- Ye shall conceive chaff, ye shall bring forth stubble: your breath, [as] fire, shall devour you.
- World English Bible (WEB)
- You will conceive chaff. You will give birth to stubble. Your breath is a fire that will devour you.
- American Standard Version (ASV)
- Ye shall conceive chaff, ye shall bring forth stubble: your breath is a fire that shall devour you.
- Bible in Basic English (BBE)
- Your designs will be without profit, and their effect will be nothing: you will be burned up by the fire of my breath.
- Darby Translation (DBY)
- Ye shall conceive dry grass, ye shall bring forth stubble: your breath shall devour you [as] fire.
- Webster's Bible (WBS)
- Ye shall conceive chaff, ye shall bring forth stubble: your breath, [as] fire, shall devour you.
- Young's Literal Translation (YLT)
- Ye conceive chaff, ye bear stubble, Your spirit! — fire devoureth you.
Read in context
- 9ದೇಶವು ಪ್ರಲಾಪಿಸಿ ಕುಗ್ಗುತ್ತದೆ. ಲೆಬನೋನ್ ನಾಚಿಕೆಪಟ್ಟು ಕಡಿದು ಬೀಳುವದು. ಶಾರೋನ್ ಬೆಂಗಾ ಡಾಗಿದೆ. ಬಾಷಾನ್ ಮತ್ತು ಕರ್ಮೆಲ್ ಹಣ್ಣುಗಳನ್ನು ಉದುರಿಸಿಬಿಟ್ಟಿವೆ.
- 10ಕರ್ತನು ಹೀಗನ್ನುತ್ತಾನೆ--ನಾನು ಈಗ ಏಳುವೆನು, ಈಗಲೇ ನನ್ನನ್ನು ಉನ್ನತಪಡಿಸಿ ಕೊಳ್ಳುವೆನು, ಈಗ ಉನ್ನತೋನ್ನತನಾಗುವೆನು.
- 11ನೀವು ಹೊಟ್ಟನ್ನು ಗರ್ಭಧರಿಸಿ ಕೂಳೆಯನ್ನು ಹೆರು ವಿರಿ. ನಿಮ್ಮ ಶ್ವಾಸವು ನಿಮ್ಮನ್ನೇ ನುಂಗುವ ಜ್ವಾಲೆಯಾಗು ವದು.
- 12ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವವು. ಕತ್ತರಿಸಿದ ಮುಳ್ಳು ಕೊಂಪೆಗೆ ಬೆಂಕಿಹಚ್ಚಿದಂತಾಗು ವದು.
- 13ದೂರದಲ್ಲಿರುವವರೇ, ನಾನು ಮಾಡಿದ್ದನ್ನು ಕೇಳಿರಿ. ಸವಿಾಪದಲ್ಲಿರುವವರೇ, ನನ್ನ ಪರಾಕ್ರಮ ವನ್ನು ತಿಳಿದುಕೊಳ್ಳಿರಿ.
Cross references
- Psalm 7:14 ಕೀರ್ತನೆಗಳು 7:14ಇಗೋ, ಅವನು ದುಷ್ಟತನದಿಂದ ಪ್ರಸವವೇದನೆ ಪಡುತ್ತಾನೆ. ಕೇಡನ್ನು ಗರ್ಭಧರಿಸಿಕೊಂಡು ಸುಳ್ಳನ್ನು ಹೆರುವನು.
- Isaiah 59:4 ಯೆಶಾಯ 59:4ನ್ಯಾಯಕ್ಕೋಸ್ಕರ ಕರೆಯುವವನು ಯಾವನೂ ಇಲ್ಲ; ಇಲ್ಲವೆ ಸತ್ಯಕ್ಕೋಸ್ಕರ ಬೇಡು ವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡು ತ್ತಾರೆ. ಸುಳ್ಳನ್ನು ಮಾತಾಡುತ್ತಾರೆ; ಕೇಡನ್ನು ಗರ್ಭಧರಿಸಿ ಕೊಳ್ಳುತ್ತಾರೆ ಅಕ್ರಮವನ್ನು ಹೆರುತ್ತಾರೆ.
- James 1:15 ಯಾಕೋಬನು 1:15ಆಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ; ಪಾಪವು ಸಂಪೂರ್ಣವಾದ ಮೇಲೆ ಮರಣ ವನ್ನು ಹಡೆಯುತ್ತದೆ.
- Acts 5:4 ಅಪೊಸ್ತಲರ ಕೃತ್ಯಗಳು 5:4ಆ ಆಸ್ತಿಯು ಇದ್ದಾಗ ಅದು ನಿನ್ನ ಸ್ವಂತದ್ದಾಗಿತ್ತಲ್ಲವೇ? ಅದನ್ನು ಮಾರಿದ ಮೇಲೆಯೂ ನಿನ್ನ ಅಧೀನದಲ್ಲಿಯೇ ಇತ್ತಲ್ಲವೇ? ನಿನ್ನ ಹೃದಯದಲ್ಲಿ ಅದನ್ನು ಯಾಕೆ ಯೋಚಿಸಿದ್ದೀ? ನೀನು ಮನುಷ್ಯರಿಗಲ್ಲ, ದೇವರಿಗೇ ಸುಳ್ಳಾಡಿದ್ದೀ ಅಂದನು.
- Isaiah 5:24 ಯೆಶಾಯ 5:24ಅವರು ಸೈನ್ಯಗಳ ಕರ್ತನ ನ್ಯಾಯ ಪ್ರಮಾಣವನ್ನು ನಿರಾಕರಿಸಿದ್ದರಿಂದಲೂ ಇಸ್ರಾಯೇ ಲಿನ ಪರಿಶುದ್ಧನ ವಾಕ್ಯವನ್ನು ಅಸಡ್ಡೆಮಾಡಿದ್ದ ರಿಂದಲೂ ಬೆಂಕಿಯು ಕೊಳ್ಳಿಯನ್ನು ನುಂಗಿಬಿಡುವ ಹಾಗೂ ಜ್ವಾಲೆಯು ಹೊಟ್ಟನ್ನು ಸುಟ್ಟುಬಿಡುವಂತೆಯೂ ಅದರ ಬೇರು ಕೊಳೆಯುವಂತೆಯೂ ಚಿಗುರು ಅವರ ಧೂಳಿನಂತೆಯೂ ತೂರಿಹೋಗುವವು.
- Nahum 1:5–10 ನಹೂಮ 1:5–10ಬೆಟ್ಟಗಳು ಆತನ ಮುಂದೆ ಕಂಪಿಸುತ್ತವೆ; ಗುಡ್ಡಗಳು ಕರಗುತ್ತವೆ; ಭೂಮಿಯೂ ಹೌದು, ಲೋಕವೂ ಅದರಲ್ಲಿ ವಾಸಿಸು ವವರೆಲ್ಲರೂ ಆತನ ಮುಂದೆ ಸುಟ್ಟು ಹೋಗುವರು. ಆತನ ರೌದ್ರದ ಎದುರಿಗೆ ಯಾರು ನಿಲ್ಲುವರು? ಆತನ ರೋಷಾಗ್ನಿಗೆ ಯಾರು ನಿಂತುಕೊಳ್ಳುವರು? ಆತನ ಉಗ್ರವು ಬೆಂಕಿಯ ಹಾಗೆ ಸುರಿಸಲ್ಪಟ್ಟಿದೆ; ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ. ಕರ್ತನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಬಲವಾದ ಕೋಟೆಯಾಗಿದ್ದಾನೆ; ತನ್ನಲ್ಲಿ ನಂಬಿಕೆಯಿಡು ವವರನ್ನು ಬಲ್ಲನು. ಆದರೆ ಮೇರೆ ವಿಾರುವ ಪ್ರಳಯ ದಿಂದ ಅದರ ಸ್ಥಳವನ್ನು ಮುಗಿಸಿಬಿಡುವನು; ಕತ್ತಲೆ ಆತನ ಶತ್ರುಗಳನ್ನು ಹಿಂದಟ್ಟುವದು. ಕರ್ತನಿಗೆ ವಿರೋಧವಾಗಿ ಏನು ಯೋಚಿಸುತ್ತೀರಿ? ಆತನು ಸಂಪೂರ್ಣವಾಗಿ ಮುಗಿಸಿಬಿಡುತ್ತಾನೆ; ಇಕ್ಕಟ್ಟು ಎರ ಡನೇ ಸಾರಿ ಏಳದು. ಅವರು ಮುಳ್ಳುಗಳ ಹಾಗೆ ಹೊಂದಿಕೊಂಡಿದ್ದರೂ ತಮ್ಮ ದ್ರಾಕ್ಷಾರಸದಿಂದ ಮತ್ತ ರಾಗಿದ್ದರೂ ಪೂರ್ಣವಾಗಿ ಒಣಗಿದ ಕೊಳೆಯಂತೆ ನಾಶವಾಗುವರು.
- Isaiah 26:18 ಯೆಶಾಯ 26:18ನಾವು ಗರ್ಭಧರಿಸಿ ವೇದನೆಪಟ್ಟು ಗಾಳಿಯನ್ನು ಹೆತ್ತಂತಾಯಿತು, ಭೂಮಿಗೆ ನಮ್ಮಿಂದ ಯಾವ ಬಿಡು ಗಡೆಯೂ ಆಗಲಿಲ್ಲ. ಇಲ್ಲವೇ ಭೂಲೋಕದ ನಿವಾಸಿ ಗಳು ಬೀಳಲಿಲ್ಲ.
- Psalm 2:1 ಕೀರ್ತನೆಗಳು 2:1ಅನ್ಯಜನರು ಕೋಪೋದ್ರೇಕಗೊಳ್ಳುವದೂ ಪ್ರಜೆಗಳು ವ್ಯರ್ಥವಾದದ್ದನ್ನು ಯೋಚಿಸುವದೂ ಯಾಕೆ?
- Isaiah 17:13 ಯೆಶಾಯ 17:13ಮಹಾ ಜಲಪ್ರವಾಹ ಗಳು ಘೋಷಿಸುವಂತೆ ಜನಾಂಗಗಳು ಘೋಷಿಸು ತ್ತವೆ. ಆದರೆ ದೇವರು ಅವರನ್ನು ಗದರಿಸುತ್ತಲೇ ಅವರು ದೂರ ಓಡಿಹೋಗಿ ಬೆಟ್ಟಗಳಲ್ಲಿ ಗಾಳಿಗೆ ಸಿಕ್ಕಿದ ಹೊಟ್ಟಿನಂತೆಯೂ ಸುಂಟರಗಾಳಿಯಿಂದ ಸುತ್ತಿ ಯಾಡುವ ದೂಳಿನಂತೆಯೂ ಅಟ್ಟಲ್ಪಡುವರು.ಇಗೋ, ಸಾಯಂಕಾಲದಲ್ಲಿ ಭಯಭ್ರಾಂತಿ; ಉದ ಯಕ್ಕೆ ಮುಂಚೆ ಅವನು ಇಲ್ಲದಂತಾಗುವನು. ನಮ್ಮನ್ನು ಸೂರೆಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆ ಹೊಡೆಯುವವರ ಪಾಡು ಇದೇ.
- Isaiah 1:31 ಯೆಶಾಯ 1:31ನಿಮ್ಮಲ್ಲಿನ ಬಲಿಷ್ಠನೇ ಸಣಬಿನ ನಾರು, ಅದನ್ನು ಮಾಡುವವನು ಕಿಡಿ, ಅವೆರಡೂ ಸೇರಿ ಯಾರೂ ಆರಿಸಲಾಗದಂತೆ ಅವು ಸುಟ್ಟುಹೋಗುವವು.
- Psalm 83:5–18 ಕೀರ್ತನೆಗಳು 83:5–18ಅವರು ಕೂಡ ಏಕಮನಸ್ಸಾಗಿ ಆಲೋಚನೆ ಮಾಡಿಕೊಂಡಿ ದ್ದಾರೆ; ನಿನಗೆ ವಿರೋಧವಾಗಿ ಒಡಂಬಟ್ಟಿದ್ದಾರೆ. ಎದೋಮ್ಯರ ಮತ್ತು ಇಷ್ಮಾಯೇಲ್ಯರ ಗುಡಾರಗಳೂ ಮೋವಾಬೂ ಹಗ್ರೀಯರೂ ಗೆಬಾಲ್ಯರೂ ಅಮ್ಮೋನಿ ಯರೂ ಮಾಲೇಕ್ಯರೂ ತೂರಿನ ನಿವಾಸಿಗಳು ಸಹಿತವಾಗಿ ಫಿಲಿಷ್ಟಿಯರದೇ; ಅಶ್ಶೂರ್ಯರೂ ಸಹ ಅವ ರಲ್ಲಿ ಕೂಡಿಕೊಂಡು; ಅವರು ಲೋಟನ ಮಕ್ಕಳಿಗೆ ಸಹಾಯ ಮಾಡಿದ್ದಾರೆ ಸೆಲಾ. ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡು. ಇವರು ಎಂದೋರಿನಲ್ಲಿ ನಾಶವಾಗಿ ಭೂಮಿಗೆ ಗೊಬ್ಬರವಾದರು. ಅವರನ್ನೂ ಅವರ ಅಧಿಪತಿಗಳನ್ನೂ ಓರೇಬ್ ಜೇಬ್ ಹಾಗೆಯೂ ಅವರ ಪ್ರಮುಖರೆಲ್ಲರನ್ನು ಜೇಬಹ ಚಲ್ಮುನ್ನರ ಹಾಗೆಯೂ ಮಾಡು. ಅವರು--ನಾವು ದೇವರ ನಿವಾಸಗಳನ್ನು ಸ್ವತಂತ್ರಿಸಿಕೊಳ್ಳೋಣ ಅನ್ನುತ್ತಾರೆ. ಓ ನನ್ನ ದೇವರೇ, ಅವರನ್ನು ಚಕ್ರದ ಹಾಗೆಯೂ ಗಾಳಿಯ ಮುಂದಿರುವ ಕಸದ ಹಾಗೆಯೂ ಮಾಡು. ಕಾಡನ್ನು ಸುಡುವ ಬೆಂಕಿಯ ಹಾಗೆಯೂ ಬೆಟ್ಟಗಳನ್ನು ದಹಿಸುವ ಜ್ವಾಲೆಯ ಹಾಗೆಯೂ ನಿನ್ನ ಬಿರುಗಾಳಿಯಿಂದ ಅವರನ್ನು ಹಿಂಸಿಸಿ ನಿನ್ನ ಸುಳಿ ಗಾಳಿಯಿಂದ ಅವರನ್ನು ತಲ್ಲಣ ಪಡಿಸು. ಓ ಕರ್ತನೇ, ನಿನ್ನ ನಾಮವನ್ನು ಅವರು ಹುಡುಕುವ ಹಾಗೆ ಅವರ ಮುಖಗಳನ್ನು ನಾಚಿಕೆ ಯಿಂದ ತುಂಬಿಸು. ಅವರು ನಾಚಿಕೆಪಟ್ಟು ಎಂದೆಂ ದಿಗೂ ಕಳವಳಗೊಳ್ಳಲಿ; ಹೌದು, ಅವರು ಲಜ್ಜೆ ಯಿಂದ ನಾಶವಾಗಲಿ.ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ. ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ.
- Isaiah 37:23–29 ಯೆಶಾಯ 37:23–29ನೀನು ಯಾರನ್ನು ನಿಂದಿಸಿ ದೂಷಿಸಿದ್ದೀ? ಯಾರಿಗೆ ವಿರೋಧವಾಗಿ ನಿನ್ನ ಸ್ವರವೆತ್ತಿ ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾ ಯೇಲಿನ ಪರಿಶುದ್ಧನಿಗಲ್ಲವೋ? ನೀನು ನಿನ್ನ ಸೇವಕರ ಮುಖಾಂತರವಾಗಿ ಕರ್ತನನ್ನು ನಿಂದಿಸಿ--ನನ್ನ ರಥಸಮೂಹದೊಡನೆ ಪರ್ವತ ಶಿಖರಗಳನ್ನು ಹತ್ತಿದ್ದೇನೆ; ಲೆಬನೋನಿನ ಭಾಗಗಳಿಗೆ ಹೋಗಿದ್ದೇನೆ; ಅದರ ಎತ್ತರವಾದ ದೇವದಾರು, ಶ್ರೇಷ್ಠವಾದ ತುರಾಯಿ ಮರಗಳನ್ನು ಕಡಿದುಬಿಟ್ಟಿದ್ದೇನೆ; ಅಂಚಿನ ಉನ್ನತವಾದ ಸ್ಥಳವನ್ನೂ ಮತ್ತು ಅದರ ಕರ್ಮೇಲಿನ ಅಡವಿಯನ್ನೂ ಪ್ರವೇಶಿಸಿದ್ದೇನೆ; ನಾನೇ ಅಗೆದು ನೀರನ್ನು ಕುಡಿದಿದ್ದೇನೆ; ನನ್ನ ಅಂಗಾಲಿನಿಂದ ಐಗು ಪ್ತದ ಎಲ್ಲಾ ಹೊಳೆಗಳನ್ನು ಬತ್ತಿಸಿದ್ದೇನೆ ಎಂಬದಾಗಿ ನೀನು ಹೇಳಿದ್ದೀ. ಹೀಗಾಗಬೇಕೆಂದು ಬಹುಕಾಲದ ಹಿಂದೆಯೇ ಗೊತ್ತುಮಾಡಿದ್ದನ್ನು ನೀನು ಕೇಳಿಲ್ಲವೋ? ಈಗ ಪೂರ್ವಕಾಲದಲ್ಲಿ ನಿರ್ಣಯಿಸಿದ್ದನ್ನು ನೆರವೇರಿ ಸಿದ್ದೇನೆ. ಆದದರಿಂದಲೇ ಕೋಟೆಗಳುಳ್ಳ ಪಟ್ಟಣ ಗಳನ್ನು ಹಾಳು ದಿಬ್ಬಗಳನ್ನಾಗಿ ಮಾಡುವದು ನಿನಗೆ ಸಾಧ್ಯವಾಯಿತು; ಆದದರಿಂದ ಅವುಗಳ ನಿವಾಸಿ ಗಳು ಬಲವಿಲ್ಲದವರಾಗಿ ಆಶಾಭಂಗ ಪಟ್ಟು ಕಳವಳ ಗೊಂಡರು; ಅವರು ಹೊಲದ ಹುಲ್ಲಿನಂತೆಯೂ ಹಸಿರು ಎಲೆಯಂತೆಯೂ ಮಾಳಿಗೆಯ ಮೇಲಿನ ಹುಲ್ಲಿನಂತೆಯೂ ಹೊಡೆಯುವದಕ್ಕಿಂತ ಮೊದಲೇ ಬಾಡಿಹೋಗುವ ಪೈರಿನಂತೆಯೂ ಇದ್ದರು. ನೀನು ವಾಸಿಸುವದು ಹೊರಗೆ ಹೋಗುವದು, ಒಳಗೆ ಬರುವದು; ನೀನು ನನ್ನ ಮೇಲೆ ರೌದ್ರಾವೇಶನಾಗಿ ರುವದನ್ನೂ ನಾನು ಬಲ್ಲೆನು. ನೀನು ನನಗೆ ವಿರೋಧವಾಗಿ ರೌದ್ರನಾಗಿರುವದೂ ಗೊಂದಲ ದಿಂದಿರುವದೂ ನನ್ನ ಕಿವಿಗೆ ಕೇಳಿಬಂತು. ಆದದರಿಂದ ನಾನು ನಿನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ ನನ್ನ ಕಡಿವಾಣವನ್ನು ನಿನ್ನ ತುಟಿಗಳಲ್ಲಿಯೂ ಹಾಕಿ, ನೀನು ಬಂದು ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು ಎಂಬದಾಗಿ ಹೇಳಿ ದ್ದಾನೆ.