Isaiah · chapter 33 · verse 10
Isaiah 33:10 in Kannada
ಕರ್ತನು ಹೀಗನ್ನುತ್ತಾನೆ--ನಾನು ಈಗ ಏಳುವೆನು, ಈಗಲೇ ನನ್ನನ್ನು ಉನ್ನತಪಡಿಸಿ ಕೊಳ್ಳುವೆನು, ಈಗ ಉನ್ನತೋನ್ನತನಾಗುವೆನು.
Kartanu heegannuttaane--naanu eega eluvenu, eegale nannannu unnatapadisi kolluvenu, eega unnatonnatanaaguvenu.
Isaiah 33:10 in English
- King James Version (KJV)
- Now will I rise, saith the LORD; now will I be exalted; now will I lift up myself.
- World English Bible (WEB)
- “Now I will arise,” says the LORD. “Now I will lift myself up. Now I will be exalted.
- American Standard Version (ASV)
- Now will I arise, saith Jehovah; now will I lift up myself; now will I be exalted.
- Bible in Basic English (BBE)
- Now will I come forward, says the Lord; now will I be lifted up; now will my power be seen.
- Darby Translation (DBY)
- Now will I arise, saith Jehovah; now will I be exalted, now will I lift up myself.
- Webster's Bible (WBS)
- Now will I rise, saith the LORD; now will I be exalted; now will I lift up myself.
- Young's Literal Translation (YLT)
- Now, do I arise, saith Jehovah, Now I am exalted, now I am lifted up.
Read in context
- 8ರಾಜಮಾರ್ಗಗಳು ಹಾಳಾಗಿವೆ. ಹಾದಿಯಲ್ಲಿ ಹೋಗುವವರು ನಿಂತುಹೋದರು. ಅವನು ಒಪ್ಪಂದವನ್ನು ವಿಾರಿದ್ದಾನೆ. ಪಟ್ಟಣಗಳನ್ನು ತಿರಸ್ಕಾರಮಾಡಿ ಯಾವ ಮನುಷ್ಯನನ್ನು ಗಣನೆಗೆತಾ ರನು.
- 9ದೇಶವು ಪ್ರಲಾಪಿಸಿ ಕುಗ್ಗುತ್ತದೆ. ಲೆಬನೋನ್ ನಾಚಿಕೆಪಟ್ಟು ಕಡಿದು ಬೀಳುವದು. ಶಾರೋನ್ ಬೆಂಗಾ ಡಾಗಿದೆ. ಬಾಷಾನ್ ಮತ್ತು ಕರ್ಮೆಲ್ ಹಣ್ಣುಗಳನ್ನು ಉದುರಿಸಿಬಿಟ್ಟಿವೆ.
- 10ಕರ್ತನು ಹೀಗನ್ನುತ್ತಾನೆ--ನಾನು ಈಗ ಏಳುವೆನು, ಈಗಲೇ ನನ್ನನ್ನು ಉನ್ನತಪಡಿಸಿ ಕೊಳ್ಳುವೆನು, ಈಗ ಉನ್ನತೋನ್ನತನಾಗುವೆನು.
- 11ನೀವು ಹೊಟ್ಟನ್ನು ಗರ್ಭಧರಿಸಿ ಕೂಳೆಯನ್ನು ಹೆರು ವಿರಿ. ನಿಮ್ಮ ಶ್ವಾಸವು ನಿಮ್ಮನ್ನೇ ನುಂಗುವ ಜ್ವಾಲೆಯಾಗು ವದು.
- 12ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವವು. ಕತ್ತರಿಸಿದ ಮುಳ್ಳು ಕೊಂಪೆಗೆ ಬೆಂಕಿಹಚ್ಚಿದಂತಾಗು ವದು.
Cross references
- Psalm 12:5 ಕೀರ್ತನೆಗಳು 12:5ಬಡವರ ವ್ಯಥೆಗೋಸ್ಕರವೂ ಗತಿಯಿಲ್ಲದವರ ನರ ಳುವಿಕೆಗೋಸ್ಕರವೂ ಈಗ ನಾನು ಏಳುವೆನು ಎಂದು ಕರ್ತನು ಹೇಳುತ್ತಾನೆ; ಉಬ್ಬಿಕೊಂಡವನಿಂದ ನಾನು ಬಡವನನ್ನು ಕಾಪಾಡುವೆನು.
- Psalm 102:13–18 ಕೀರ್ತನೆಗಳು 102:13–18ನೀನು ಎದ್ದು, ಚೀಯೋನನ್ನು ಕನಿ ಕರಿಸುವಿ; ಯಾಕಂದರೆ ಅದನ್ನು ಕರುಣಿಸುವದಕ್ಕೆ ಕಾಲವಾಯಿತು; ಹೌದು ನಿರ್ಣಯಿಸಿದ ಸಮಯವು ಬಂದಿದೆ. ನಿನ್ನ ಸೇವಕರು ಅದರ ಕಲ್ಲುಗಳಲ್ಲಿ ಇಷ್ಟಪಡುತ್ತಾರೆ. ಅದರ ಧೂಳನ್ನು ಕರುಣಿಸುತ್ತಾರೆ. ಜನಾಂಗವು ಕರ್ತನ ಹೆಸರಿಗೂ ಭೂರಾಜರೆಲ್ಲರು ನಿನ್ನ ಮಹಿಮೆಗೂ ಭಯಪಡುವರು. ಕರ್ತನು ಚೀಯೋನನ್ನು ಕಟ್ಟುವನು; ಆತನು ತನ್ನ ಮಹಿಮೆಯಲ್ಲಿ ಕಾಣಿಸಿಕೊಳ್ಳುವನು. ದಿಕ್ಕಿಲ್ಲದವನ ಪ್ರಾರ್ಥನೆಗೆ ಕಿವಿಗೊಡುತ್ತಾನೆ; ಅವರ ಪ್ರಾರ್ಥನೆಯನ್ನು ತಿರಸ್ಕರಿ ಸುವದಿಲ್ಲ. ಇದು ಮುಂದಿನ ಸಂತತಿಗೋಸ್ಕರ ಬರೆಯಲ್ಪಡುವದು; ಹುಟ್ಟಲಿಕ್ಕಿರುವ ಜನರು ಕರ್ತನನ್ನು ಸ್ತುತಿಸುವರು.
- Isaiah 42:13–14 ಯೆಶಾಯ 42:13–14ಕರ್ತನು ಪರಾಕ್ರಮ ಶಾಲಿಯಾಗಿ ಮುಂದೆ ಹೋಗುವನು; ಯುದ್ಧ ವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸು ವನು; ತನ್ನ ಶತ್ರುಗಳಿಗೆ ವಿರೋಧವಾಗಿ ಜಯ ಶಾಲಿಯಾಗುವನು. ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನುಬಿಗಿಹಿಡಿದಿದ್ದೆನು. ಈಗ ನಾನು ಹೆರುವವಳಂತೆ ಕೂಗುವೆನು ನಾನು ನಾಶಮಾಡಿ ಒಂದೇ ಸಾರಿ ನುಂಗಿಬಿಡುವೆನು.
- Isaiah 59:16–17 ಯೆಶಾಯ 59:16–17ಯಾವ ಮನುಷ್ಯನೂ ಇಲ್ಲದೆ ಇರುವದನ್ನು ಆತನು ನೋಡಿ, ಮಧ್ಯಸ್ಥಗಾರನು ಇಲ್ಲವೆಂದು ಆಶ್ಚರ್ಯಪಟ್ಟನು; ಆಗ ಆತನ ಬಾಹು ತನಗೋಸ್ಕರ ರಕ್ಷಣೆಯನ್ನೂ ನೀತಿಯನ್ನೂ ತಂದಿತು. ಅದೇ ಆತನನ್ನು ಉದ್ಧಾರಮಾಡಿತು. ಅವನು ನೀತಿಯನ್ನು ಕವಚದ ಹಾಗೆ ಧರಿಸಿಕೊಂಡು, ರಕ್ಷಣೆಯ ಶಿರಸ್ತ್ರಾಣವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡನು; ಪ್ರತೀಕಾರದ ವಸ್ತ್ರ ಗಳನ್ನು ಹೊದಿಕೆಯಾಗಿ ಹೊದ್ದುಕೊಂಡು ಆಸಕ್ತಿಯನ್ನು ಮೇಲಂಗಿಯಾಗಿ ತೊಟ್ಟುಕೊಂಡನು.
- Amos 6:1 ಆಮೋಸ 6:1ಚೀಯೋನಿನಲ್ಲಿ ನಿಶ್ಚಿಂತೆಯಿಂದಿರುವವ ರಿಗೂ ಸಮಾರ್ಯ ಬೆಟ್ಟದಲ್ಲಿ ನಂಬಿಕೆ ಯಿಡುವವರಿಗೂ ಇಸ್ರಾಯೇಲಿನ ಮನೆತನದವರ ಯಾರ ಬಳಿಗೆ ಬರುತ್ತಾರೋ ಆ ಪ್ರಮುಖ ಜನಾಂಗ ದಲ್ಲಿ ಹೆಸರುಗೊಂಡವರಿಗೂ ಅಯ್ಯೋ!
- Isaiah 30:17–18 ಯೆಶಾಯ 30:17–18ಒಬ್ಬನ ಬೆದರಿ ಕೆಗೆ ಸಾವಿರ ಜನರು ಓಡುವರು; ಐವರು ಹೆದರಿಸು ವದರಿಂದ ನೀವು ಓಡಿಹೋಗುವಿರಿ; ಕಟ್ಟಕಡೆಗೆ ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಲಣ ಕಂಬದಂತೆಯೂ ಒಂಟಿಯಾಗಿ ಉಳಿಯುವಿರಿ. ಹೀಗಿರಲು ಕರ್ತನು ನಿಮಗೆ ಕೃಪೆಯನ್ನು ತೋರಿಸ ಬೇಕೆಂದು ಕಾದಿರುವನು. ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತವಾಗಿ ಕಾಣಿಸಿಕೊಳ್ಳುವನು. ಕರ್ತನು ನ್ಯಾಯಾಧಿಪತಿಯಾದ ದೇವರಾಗಿದ್ದಾನೆ. ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.
- Zephaniah 3:8 ಚೆಫನ್ಯ 3:8ಆದದರಿಂದ ನಾನು ಕೊಳ್ಳೆಗೆ ಏಳುವ ದಿನದ ವರೆಗೂ ನನಗೆ ಕಾದುಕೊಳ್ಳಿರಿ; ಜನಾಂಗಗಳನ್ನು ಕೂಡಿಸುವದಕ್ಕೂ ರಾಜ್ಯಗಳನ್ನು ಒಟ್ಟು ಸೇರಿಸುವದಕ್ಕೂ ಅವುಗಳ ಮೇಲೆ ನನ್ನ ರೌದ್ರವನ್ನೂ ಕೋಪದ ಎಲ್ಲಾ ಉರಿಯನ್ನೂ ಹೊಯ್ಯುವದಕ್ಕೂ ತೀರ್ಮಾನಿಸಿಕೊಂಡಿದ್ದೇನೆ; ನನ್ನ ರೋಷದ ಬೆಂಕಿಯಿಂದ ಭೂಮಿಯೆಲ್ಲಾ ದಹಿಸ ಲ್ಪಡುವದು.
- Isaiah 10:16 ಯೆಶಾಯ 10:16ಆದಕಾರಣ ಸೈನ್ಯಗಳ ಕರ್ತನಾದ ಕರ್ತನು ಅವನ ಕೊಬ್ಬಿನಲ್ಲಿ ಕ್ಷಯವನ್ನುಂಟುಮಾಡುವನು; ದಹಿ ಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭ ವದ ಕೆಳಗೆ ಹತ್ತಿಕೊಳ್ಳುವದು.
- Psalm 7:6 ಕೀರ್ತನೆಗಳು 7:6ಓ ಕರ್ತನೇ, ನಿನ್ನ ಕೋಪದಿಂದ ಏಳು; ನನ್ನ ವೈರಿಗಳ ಉಗ್ರತೆಗಾಗಿ ಎದ್ದೇಳು; ನನ್ನ ನಿಮಿತ್ತ ಎಚ್ಚರಗೊಳ್ಳು; ನೀನು ನ್ಯಾಯತೀರ್ವಿಕೆಯನ್ನು ಆಜ್ಞಾ ಪಿಸಿದ್ದೀಯಲ್ಲಾ.
- Psalm 78:65 ಕೀರ್ತನೆಗಳು 78:65ಆಗ ಕರ್ತನು ನಿದ್ದೆಯಿಂದ ಎಚ್ಚತ್ತವನ ಹಾಗೆಯೂ ದ್ರಾಕ್ಷಾರಸದಿಂದ ಆರ್ಭಟಿಸುವ ಪರಾಕ್ರಮಶಾಲಿಯ ಹಾಗೆಯೂ ಎಚ್ಚತ್ತು,
- Exodus 15:9–12 ವಿಮೋಚನಕಾಂಡ 15:9–12ಶತ್ರುವು--ನಾನು ಹಿಂದಟ್ಟಿ, ಹಿಡಿ ಯುವೆನು, ಕೊಳ್ಳೆಯನ್ನು ಹಂಚಿಕೊಳ್ಳುವೆನು, ನನ್ನ ಆಶೆಗಳು ಅವರಿಂದ ತೃಪ್ತಿಹೊಂದುವವು. ನಾನು ನನ್ನ ಖಡ್ಗವನ್ನು ಹಿರಿಯುವೆನು, ನನ್ನ ಕೈ ಅವರನ್ನು ಸಂಹಾರ ಮಾಡುವದು ಅಂದನು. ನೀನು ನಿನ್ನ ಗಾಳಿಯನ್ನು ಊದಿದಾಗ ಸಮುದ್ರವು ಅವರನ್ನು ಮುಚ್ಚಿಕೊಂಡಿತು. ಅವರು ಸೀಸದಂತೆ ಮಹಾಜಲಗಳಲ್ಲಿ ಮುಳುಗಿ ಹೊದರು. ದೇವರುಗಳಲ್ಲಿ ಓ ಕರ್ತನೇ, ನಿನ್ನ ಹಾಗೆ ಯಾರಿದ್ದಾರೆ? ಪರಿಶುದ್ಧತ್ವದಲ್ಲಿ ಮಹಿಮೆ ಹೊಂದಿದವನೂ ಸ್ತೋತ್ರಗಳಲ್ಲಿ ಭಯಂಕರನೂ ಅದ್ಭುತಗಳನ್ನು ಮಾಡುವಾತನೂ ಆದ ನಿನ್ನ ಹಾಗೆ ಯಾರಿದ್ದಾರೆ? ನೀನು ನಿನ್ನ ಬಲಗೈಯನ್ನು ಚಾಚಲು ಭೂಮಿಯು ಅವರನ್ನು ನುಂಗಿತು.
- Psalm 46:10 ಕೀರ್ತನೆಗಳು 46:10ಶಾಂತ ವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ನಾನು ಹೆಚ್ಚಿಸಲ್ಪಡುವೆನು.ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.