Isaiah · chapter 38 · verse 13
Isaiah 38:13 in Kannada
ಆತನು ಸಿಂಹದಂತೆ ಎಲುಬುಗಳನ್ನೆಲ್ಲಾ ಮುರಿದಿದ್ದಾಗ್ಯೂ ಬೆಳಗಿನ ವರೆಗೂ ತಾಳಿಕೊಂಡೇ ಇದ್ದೆನು; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ.
Aatanu sinhadante elubugalannellaa murididdaagyoo belagina varegoo taalikonde iddenu; belagininda raatriyolage nannannu konegaanisuttee.
Isaiah 38:13 in English
- King James Version (KJV)
- I reckoned till morning, [that], as a lion, so will he break all my bones: from day [even] to night wilt thou make an end of me.
- World English Bible (WEB)
- I waited patiently until morning. He breaks all my bones like a lion. From day even to night you will make an end of me.
- American Standard Version (ASV)
- I quieted [myself] until morning; as a lion, so he breaketh all my bones: From day even to night wilt thou make an end of me.
- Bible in Basic English (BBE)
- I am crying out with pain till the morning; it is as if a lion was crushing all my bones.
- Darby Translation (DBY)
- I kept still until the morning; ...as a lion, so doth he break all my bones. From day to night thou wilt make an end of me.
- Webster's Bible (WBS)
- I reckoned till morning, [that] , as a lion, so will he break all my bones: from day [even] to night wilt thou make an end of me.
- Young's Literal Translation (YLT)
- I have set [Him] till morning as a lion, So doth He break all my bones, From day unto night Thou dost end me.
Read in context
- 11ಕರ್ತನನ್ನು, ಜೀವಿತರ ದೇಶದಲ್ಲಿಯೂ ಸಹ ಕರ್ತನನ್ನು ನೋಡೆನೆಂದೂ ಇನ್ನೂ ಭೂಲೋಕ ನಿವಾಸಿಗಳಲ್ಲೊಬ್ಬನಾಗಿ ಮನುಷ್ಯರನ್ನು ನೋಡಲಾರೆ ನಲ್ಲಾ ಎಂದು ಅಂದುಕೊಂಡೆನು.
- 12ನನ್ನ ಆಯುಷ್ಯ ಮುಗಿಯಿತು ಮತ್ತು ಕುರುಬನ ಗುಡಾರದಂತೆ ನನ್ನಿಂದ ತೆಗೆದುಹಾಕಲ್ಪಟ್ಟಿದೆ; ಆತನು ನನ್ನ ಆಯುಷ್ಯದ ಹಾಸನ್ನು ಕತ್ತರಿಸಿದ್ದರಿಂದ ನೇಯಿಗೆಯವನಂತೆ ನನ್ನ ಜೀವಮಾನವನ್ನು ಸುತ್ತಿಬಿಟ್ಟಿದ್ದೇನೆ; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ.
- 13ಆತನು ಸಿಂಹದಂತೆ ಎಲುಬುಗಳನ್ನೆಲ್ಲಾ ಮುರಿದಿದ್ದಾಗ್ಯೂ ಬೆಳಗಿನ ವರೆಗೂ ತಾಳಿಕೊಂಡೇ ಇದ್ದೆನು; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ.
- 14ನಾನು ಬಾನಕ್ಕಿಯಂತೆಯೂ ಬಕದ ಹಾಗೂ ಕೀಚುಗುಟ್ಟಿದೆನು ಪಾರಿವಾಳದಂತೆ ಮೂಲುಗುತ್ತಿದ್ದೆನು. ನನ್ನ ಕಣ್ಣುಗಳು ಮೇಲಕ್ಕೆ ನೋಡುವದರಿಂದ ಕ್ಷೀಣವಾದವು. ಓ ಕರ್ತನೇ, ನಾನು ಬಾಧೆಪಡುತ್ತಿದ್ದೇನೆ; ನೀನು ನನಗೆ ಆಶ್ರಯನಾಗು.
- 15ನಾನು ಏನು ಹೇಳಲಿ; ಆತನು ನನಗೆ ಮಾತುಕೊಟ್ಟು ತಾನೇ ಅದನ್ನು ನೆರವೇರಿಸಿ ದ್ದಾನೆ. ನನ್ನ ಆತ್ಮಕ್ಕೆ ಸಂಭವಿಸಿದ ದುಃಖದಲ್ಲಿ ನನ್ನ ವರುಷಗಳಲ್ಲೆಲ್ಲಾ ಮೆಲ್ಲಗೆ ನಡೆಯುವೆನು.
Cross references
- Daniel 6:24 ದಾನಿಯೇಲನು 6:24ಆಗ ಅರಸನು ಆಜ್ಞಾಪಿಸಲಾಗಿ ದಾನಿಯೇಲನ ಮೇಲೆ ತಪ್ಪುಹೊರಿಸಿದ ಮನುಷ್ಯರನ್ನು ತಂದು ಅವ ರನ್ನೂ ಅವರ ಹೆಂಡತಿ ಮಕ್ಕಳನ್ನೂ ಸಿಂಹಗಳ ಗವಿಯಲ್ಲಿ ಹಾಕಿದರು. ಅವರು ಗವಿಯ ತಳವನ್ನು ಮುಟ್ಟುವದಕ್ಕೆ ಮೊದಲೇ ಸಿಂಹಗಳು ಹಾರಿಬಂದು ಅವರ ಎಲುಬುಗ ಳನ್ನೆಲ್ಲಾ ತುಂಡು ತುಂಡಾಗಿ ಮುರಿದು ಹಾಕಿದವು.
- Psalm 51:8 ಕೀರ್ತನೆಗಳು 51:8ನಾನು ಉತ್ಸಾಹವನ್ನೂ ಸಂತೋಷವನ್ನೂ ಕೇಳುವ ಹಾಗೆ ಮಾಡು. ಆಗ ನನ್ನ ಮುರಿದ ಎಲುಬುಗಳು ಆನಂದಿಸುವವು.
- 1 Kings 13:24–26 1 ಅರಸುಗಳು 13:24–26ಅವನು ಹೋದ ತರುವಾಯ ಸಿಂಹವು ಅವನನ್ನು ದಾರಿಯಲ್ಲಿ ಹಿಡಿದು ಕೊಂದುಹಾಕಿತು. ಅವನ ಹೆಣ ದಾರಿಯಲ್ಲಿ ಹಾಕ ಲ್ಪಟ್ಟಿತು; ಕತ್ತೆಯೂ ಸಿಂಹವೂ ಹೆಣದ ಬಳಿಯಲ್ಲಿ ನಿಂತುಕೊಂಡಿದ್ದವು. ಆಗ ಇಗೋ, ಮನುಷ್ಯರು ಹಾದು ಹೋಗಿ ಮಾರ್ಗದಲ್ಲಿ ಬಿದ್ದಿರುವ ಹೆಣವನ್ನೂ ಹೆಣದ ಬಳಿಯಲ್ಲಿ ನಿಂತಿರುವ ಸಿಂಹವನ್ನೂ ನೋಡಿ ವೃದ್ಧ ಪ್ರವಾದಿಯು ವಾಸವಾಗಿರುವ ಪಟ್ಟಣಕ್ಕೆ ಬಂದು ತಿಳಿಸಿದರು; ಅವನನ್ನು ಮಾರ್ಗದಿಂದ ಹಿಂದಕ್ಕೆ ಕರತಂದ ಪ್ರವಾದಿಯು ಆ ವರ್ತಮಾನವನ್ನು ಕೇಳಿ--ಇವನೇ ಕರ್ತನ ಮಾತಿಗೆ ಅವಿಧೇಯನಾದ ದೇವರ ಮನುಷ್ಯನು; ಕರ್ತನು ಅವನಿಗೆ ಹೇಳಿದ ಮಾತಿನ ಪ್ರಕಾರ ಕರ್ತನು ಅವನನ್ನು ಸಿಂಹಕ್ಕೆ ಒಪ್ಪಿಸಿ ದ್ದಾನೆ; ಅದು ಅವನನ್ನು ಸೀಳಿ ಕೊಂದುಹಾಕಿತು ಅಂದನು.
- Psalm 50:22 ಕೀರ್ತನೆಗಳು 50:22ದೇವರನ್ನು ಮರೆತು ಬಿಡುವವರೇ, ನಾನು ನಿಮ್ಮನ್ನು ಹರಿದು ಚೂರುಮಾಡ ದಂತೆ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವವರು ಯಾರೂ ಇರುವದಿಲ್ಲವೆಂಬದನ್ನು ಗ್ರಹಿಸಿಕೊಳ್ಳಿರಿ.ಸ್ತೊತ್ರವನ್ನು ಅರ್ಪಿಸುವವನು ನನ್ನನ್ನು ಘನ ಪಡಿಸುತ್ತಾನೆ; ತನ್ನ ನಡವಳಿಕೆಯನ್ನು ಕ್ರಮಪಡಿಸಿ ಕೊಳ್ಳುವವನಿಗೆ ದೇವರ ರಕ್ಷಣೆಯನ್ನು ನಾನು ತೋರಿಸುವೆನು.
- Psalm 39:10 ಕೀರ್ತನೆಗಳು 39:10ನನ್ನಿಂದ ನಿನ್ನ ಪೆಟ್ಟನ್ನು ತೊಲಗಿಸು; ನಿನ್ನ ಕೈಹೊಡೆ ತದಿಂದ ನಾನು ಸತ್ತು ಹೋಗುತ್ತೇನೆ.
- Hosea 5:14 ಹೋಶೇಯ 5:14ನಾನು ಎಫ್ರಾಯಾಮಿಗೆ ಸಿಂಹದ ಹಾಗೆಯೂ ಯೆಹೂದದ ಮನೆತನದವರಿಗೆ ಪ್ರಾಯದ ಸಿಂಹದ ಹಾಗೆಯೂ ಇರುವೆನು. ಹೌದು, ನಾನು, ನಾನೇ ಸೀಳಿಬಿಟ್ಟು ಹೋಗುವೆನು, ನಾನು ಎತ್ತಿಕೊಂಡು ಹೋಗಲು ಅವನನ್ನು ಯಾರೂ ಬಿಡಿಸಲಾರರು.ತಾವು ತಮ್ಮ ಅಪರಾಧವನ್ನು ಅರಿಕೆಮಾಡಿ ನನ್ನ ಮುಖವನ್ನು ಹುಡುಕುವ ವರೆಗೂ ನಾನು ತಿರುಗಿ ಕೊಂಡು ನನ್ನ ಸ್ಥಳಕ್ಕೆ ಹೋಗುವೆನು, ಅವರ ಕಷ್ಟದಲ್ಲಿ ಅವರು ನನ್ನನ್ನು ಬೇಗ ಹುಡುಕುವರು.
- Job 10:16–17 ಯೋಬನು 10:16–17ಅದು ಹೆಚ್ಚುತ್ತಿದೆ; ಸಿಂಹದಂತೆ ನನ್ನನ್ನು ಬೇಟೆಯಾಡುವಿ; ಇನ್ನೂ ಆಶ್ಚರ್ಯವಾದವುಗಳನ್ನು ನನಗೆ ತೋರಿಸುವಿ. ಹೊಸ ಸಾಕ್ಷಿಗಳನ್ನು ನನಗೆ ವಿರೋಧವಾಗಿ ಇಡುತ್ತೀ. ನಿನ್ನ ಕೋಪವು ನನ್ನ ಮೇಲೆ ಅಧಿಕಗೊಳ್ಳುತ್ತದೆ; ಬದಲಾವಣೆಗಳೂ ಯುದ್ಧವೂ ನನಗೆ ಎದುರಾಗಿವೆ.
- Job 16:12–14 ಯೋಬನು 16:12–14ನಾನು ಶಾಂತವಾಗಿದ್ದಾಗ ನನ್ನನ್ನು ಪುಡಿಪುಡಿ ಮಾಡಿದನು. ನನ್ನ ಕುತ್ತಿಗೆ ಹಿಡಿದು ಚೂರುಚೂರಾಗಿ ಮಾಡಿದನು; ನನ್ನನ್ನು ತನಗೆ ಗುರಿಯಾಗಿ ನಿಲ್ಲಿಸಿದನು; ಆತನ ಬಿಲ್ಲುಗಾರರು ನನ್ನನ್ನು ಸುತ್ತಿಕೊಂಡಿದ್ದಾರೆ; ನನ್ನ ಗುಂಡಿಗೆಗಳನ್ನು ಕಡಿಯುತ್ತಾನೆ. ಕರುಣಿಸುವದಿಲ್ಲ; ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾನೆ. ನನ್ನನ್ನು ಒಡೆದೊಡೆದು ಸಿಥಿಲಪಡಿಸಿ; ಆತನು ಶೂರನಂತೆ ನನ್ನ ಮೇಲೆ ಓಡಿಬರುತ್ತಾನೆ.
- 1 Corinthians 11:30–32 1 ಕೊರಿಂಥದವರಿಗೆ 11:30–32ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರೂ ರೋಗಿಗಳೂ ಆಗಿದ್ದಾರೆ; ಅನೇಕರು ನಿದ್ರಿಸುತ್ತಾರೆ. ನಮ್ಮನ್ನು ನಾವೇ ವಿಚಾರಿಸಿ ಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ. ಆದರೆ ನಾವು ನಮ್ಮನ್ನು ವಿಚಾರಿಸಿ ಕೊಂಡಾಗ ಲೋಕದವರ ಸಂಗಡ ನಮಗೆ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ಕರ್ತನು ನಮ್ಮನ್ನು ಶಿಕ್ಷಿಸುತ್ತಾನೆ.
- 1 Kings 20:36 1 ಅರಸುಗಳು 20:36ಆದರೆ ಆ ಮನುಷ್ಯನು ಅವನನ್ನು ಹೊಡೆಯಲ್ಲೊಲ್ಲದೆ ಇದ್ದನು. ಆಗ ಅವನು ಇವನಿಗೆ--ನೀನು ಕರ್ತನ ಮಾತಿಗೆ ಅವಿಧೇಯನಾದದರಿಂದ ಇಗೋ, ನೀನು ನನ್ನನ್ನು ಬಿಟ್ಟು ಹೋಗುವಾಗ ಸಿಂಹವು ನಿನ್ನನ್ನು ಕೊಲ್ಲು ವದು ಅಂದನು. ಅವನು ಇವನನ್ನು ಬಿಟ್ಟು ಹೋದಾ ಗಲೆ ಸಿಂಹವು ಅವನನ್ನು ಕಂಡು ಕೊಂದುಹಾಕಿತು.