Isaiah · chapter 57 · verse 10
Isaiah 57:10 in Kannada
ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ ನಿರೀಕ್ಷೆಯೇ ಇಲ್ಲ ಎಂದು ಅಂದುಕೊಳ್ಳಲಿಲ್ಲ. ನಿನ್ನ ಕೈಯಲ್ಲಿರುವ ಜೀವವನ್ನು ಕಂಡುಕೊಂಡಿದ್ದೀ, ಆದದರಿಂದ ನೀನು ದುಃಖಿಸಲಿಲ್ಲ.
Ninna maargadalli bahalavaagi danididdaroo nireeksheye illa endu andukollalilla. Ninna kaiyalliruva jeevavannu kandukondiddee, aadadarinda neenu duhkhisalilla.
Isaiah 57:10 in English
- King James Version (KJV)
- Thou art wearied in the greatness of thy way; [yet] saidst thou not, There is no hope: thou hast found the life of thine hand; therefore thou wast not grieved.
- World English Bible (WEB)
- You were wearied with the length of your ways; yet you didn’t say, ‘It is in vain.’ You found a reviving of your strength; therefore you weren’t faint.
- American Standard Version (ASV)
- Thou wast wearied with the length of thy way; yet saidst thou not, It is in vain: thou didst find a quickening of thy strength; therefore thou wast not faint.
- Bible in Basic English (BBE)
- You were tired with your long journeys; but you did not say, There is no hope: you got new strength, and so you were not feeble.
- Darby Translation (DBY)
- Thou wast wearied by the multitude of thy ways; [but] thou saidst not, It is of no avail. Thou didst find a quickening of thy strength; therefore thou wast not sick [of it].
- Webster's Bible (WBS)
- Thou art wearied in the greatness of thy way; [yet] saidst thou not, There is no hope: thou hast found the life of thy hand; therefore thou wast not grieved.
- Young's Literal Translation (YLT)
- In the greatness of thy way thou hast laboured, Thou hast not said, 'It is desperate.' The life of thy hand thou hast found, Therefore thou hast not been sick.
Read in context
- 8ಕದಗಳ ಮತ್ತು ನಿಲುವಿನ ಹಿಂಭಾಗದಲ್ಲಿ ನಿನ್ನ ಜ್ಞಾಪಕ ಚಿಹ್ನೆಯನ್ನು ಇಟ್ಟಿದ್ದೀ. ನನ್ನನ್ನು ಬಿಟ್ಟು ಬೇರೊಬ್ಬನಿಗೆ ನಿನ್ನನ್ನು ತೋರ್ಪಡಿಸಿ ಕೊಂಡಿದ್ದೀ; ಏರಿಹೋಗಿ ನಿನ್ನ ಮಂಚವನ್ನು ಅಗಲ ಮಾಡಿಕೊಂಡು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀ; ಅವರ ಮಂಚವನ್ನು ಕಂಡಲ್ಲಿ ಅದನ್ನು ಪ್ರೀತಿಮಾಡಿದ್ದೀ.
- 9ಬಹು ಸುಗಂಧ ದ್ರವ್ಯಗಳನ್ನು ಕೂಡಿಸಿ, ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ, ದೂರಕ್ಕೆ ನಿನ್ನ ಸೇವಕರನ್ನು ಕಳುಹಿಸಿದ್ದೀ, ಪಾತಾಳ ದಷ್ಟು ನೀಚಸ್ಥಿತಿಗೆ ಇಳಿದಿದ್ದೀ.
- 10ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ ನಿರೀಕ್ಷೆಯೇ ಇಲ್ಲ ಎಂದು ಅಂದುಕೊಳ್ಳಲಿಲ್ಲ. ನಿನ್ನ ಕೈಯಲ್ಲಿರುವ ಜೀವವನ್ನು ಕಂಡುಕೊಂಡಿದ್ದೀ, ಆದದರಿಂದ ನೀನು ದುಃಖಿಸಲಿಲ್ಲ.
- 11ನೀನು ಸುಳ್ಳು ಹೇಳಿ ನನ್ನನ್ನು ಜ್ಞಾಪಕ ಮಾಡದೆ ಇಲ್ಲವೆ ಅದನ್ನು ಮನಸ್ಸಿಗೆ ತಾರದೆ ಇರುವಾಗ ಯಾರಿಗೆ ಅಂಜಿಕೊಂಡು ಭಯಪಟ್ಟಿ?
- 12ನಾನೇ ನಿನ್ನ ನೀತಿಯನ್ನೂ ನಿನ್ನ ಕ್ರಿಯೆಗಳನ್ನೂ ತಿಳಿಯ ಮಾಡುವೆನು. ಅವು ನಿನಗೆ ಪ್ರಯೋಜನವಾಗು ವದಿಲ್ಲ.
Cross references
- Jeremiah 2:25 ಯೆರೆಮೀಯ 2:25ನಿನ್ನ ಕಾಲು ಬರೀ ಕಾಲಾ ಗದ ಹಾಗೆಯೂ ನಿನ್ನ ಗಂಟಲು ನೀರಡಿಕೆ ಪಡದ ಹಾಗೆಯೂ ಹಿಂತೆಗೆ; ಆದರೆ ನೀನು--ಇಲ್ಲ, ನಿರೀಕ್ಷೆ ಯಿಲ್ಲ, ಯಾಕಂದರೆ ನಾನು ಅನ್ಯರನ್ನು ಪ್ರೀತಿ ಮಾಡಿದ್ದೇನೆ. ಅವರ ಹಿಂದೆ ನಾನು ಹೋಗುತ್ತೇನೆ ಎಂದು ನೀನು ಹೇಳಿದಿ.
- Jeremiah 18:12 ಯೆರೆಮೀಯ 18:12ಆದರೆ ಅವರು--ನಿರೀಕ್ಷೆಯಿಲ್ಲ; ಸ್ವಂತ ಆಲೋಚನೆಗಳ ಪ್ರಕಾರ ನಡೆದುಕೊಳ್ಳುವೆವು; ನಮ್ಮ ನಮ್ಮ ಕೆಟ್ಟ ಹೃದಯಗಳ ಕಲ್ಪನೆಯ ಪ್ರಕಾರ ಮಾಡುವೆವು ಅಂದರು.
- Jeremiah 5:3 ಯೆರೆಮೀಯ 5:3ಓ ಕರ್ತನೇ, ನಿನ್ನ ಕಣ್ಣುಗಳು ಸತ್ಯದ ಮೇಲೆ ಇವೆಯ ಲ್ಲವೋ? ಅವರನ್ನು ಹೊಡೆದಿ, ಆದರೆ ಅವರಿಗೆ ದುಃಖವಾಗಲಿಲ್ಲ; ಅವರನ್ನು ಸಂಹರಿಸಿದಿ, ಆದರೆ ಶಿಕ್ಷೆ ಹೊಂದಲೊಲ್ಲದೆ ಇದ್ದರು; ತಮ್ಮ ಮುಖಗಳನ್ನು ಬಂಡೆಗಿಂತ ಕಠಿಣ ಮಾಡಿಕೊಂಡಿದ್ದಾರೆ; ಅವರು ಹಿಂತಿರುಗುವದಕ್ಕೆ ನಿರಾಕರಿಸಿದ್ದಾರೆ.
- Ezekiel 24:12 ಯೆಹೆಜ್ಕೇಲನು 24:12ಅದರ ಕಲ್ಮಶವು ಆಯಾಸವನ್ನುಂಟು ಮಾಡಿತೇ ಹೊರತು ಅದಕ್ಕೆ ಹತ್ತಿದ್ದ ಆ ಬಹಳವಾದ ಕಿಲುಬು ಹೋಗಲಿಲ್ಲ, ಅದು ಬೆಂಕಿಯಲ್ಲಿರಲಿ;
- Jeremiah 2:36 ಯೆರೆಮೀಯ 2:36ನಿನ್ನ ಮಾರ್ಗವನ್ನು ಬೇರೆಮಾಡಿಕೊಳ್ಳುವಷ್ಟು ಏಕೆ ತಿರುಗಾಡುತ್ತೀ? ನೀನು ಅಶ್ಶೂರಿನ ನಿಮಿತ್ತ ನಾಚಿಕೆ ಪಟ್ಟ ಹಾಗೆ ಐಗುಪ್ತದ ನಿಮಿತ್ತವೂ ನಾಚಿಕೆಪಡುವಿ.ಹೌದು, ಅಲ್ಲಿಂದ ಸಹ ನಿನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಹೊರಟುಹೋಗುವಿ; ಕರ್ತನು ನಿನ್ನ ಭರವಸೆಗಳನ್ನು ತಿರಸ್ಕರಿಸಿದ್ದಾನೆ, ಅವುಗಳಲ್ಲಿ ನಿನಗೆ ಸಫಲವಾಗುವದಿಲ್ಲ.
- Jeremiah 9:5 ಯೆರೆಮೀಯ 9:5ತಮ್ಮ ತಮ್ಮ ನೆರೆಯವರಿಗೆ ವಂಚನೆಮಾಡಿ ಸತ್ಯವನ್ನು ಮಾತಾ ಡರು; ಸುಳ್ಳುಗಳನ್ನು ಹೇಳುವದಕ್ಕೆ ಅವರು ತಮ್ಮ ನಾಲಿಗೆಗೆ ಬೋಧಿಸಿದ್ದಾರೆ. ಅಕ್ರಮ ಮಾಡುವದಕ್ಕೆ ಪ್ರಯಾಸಪಡುತ್ತಾರೆ. 6
- Romans 7:9 ರೋಮಾಪುರದವರಿಗೆ 7:9ಮೊದಲು ನಾನು ನ್ಯಾಯಪ್ರಮಾಣವಿಲ್ಲದವನಾಗಿದ್ದು ಜೀವದಿಂದಿದ್ದೆನು. ಆಜ್ಞೆಯು ಬಂದಾಗ ಪಾಪವು ಪುನರ್ಜೀವವಾಗಿ ನಾನು ಸತ್ತೆನು.
- Isaiah 47:13 ಯೆಶಾಯ 47:13ನೀನು ನಿನ್ನ ಬಹಳವಾದ ಆಲೋಚನೆಗಳಿಂದ ಆಯಾಸಗೊಂಡಿದ್ದೀ. ಖಗೋಲಜ್ಞರು, ಜೋಯಿಸರು, ಪಂಚಾಂಗದವರು ಇವರೆ ಲ್ಲರೂ ನಿಂತುಕೊಂಡು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ರಕ್ಷಿಸಲಿ.
- Jeremiah 44:17–18 ಯೆರೆಮೀಯ 44:17–18ಆದರೆ ಸ್ವಂತ ಬಾಯಿಂದ ಹೊರಡು ವವೆಲ್ಲವನ್ನೂ ಖಂಡಿತವಾಗಿ ಮಾಡುತ್ತೇವೆ; ಗಗನದ ಒಡತಿಗೆ ಧೂಪ ಸುಡುತ್ತೇವೆ. ಪಾನದರ್ಪಣೆಗಳನ್ನು ಅವಳಿಗೆ ಹೊಯ್ಯುತ್ತೇವೆ, ನಮ್ಮ ತಂದೆಗಳೂ ನಮ್ಮ ಅರಸರೂ ನಮ್ಮ ಪ್ರಧಾನರೂ ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಮಾಡಿದ ಪ್ರಕಾರವೇ ನಾವೂ ಮಾಡುವೆವು; ಆಗ ಆಹಾರದಿಂದ ಚೆನ್ನಾಗಿದ್ದೆವು, ಕೇಡು ನೋಡಲಿಲ್ಲ. ಆದರೆ ನಾವು ಗಗನದ ಒಡತಿಗೆ ಧೂಪ ಸುಡುವ ದನ್ನೂ ಪಾನದರ್ಪಣೆಗಳನ್ನೂ ಅವಳಿಗೆ ಹೊಯ್ಯುವ ದನ್ನೂ ಬಿಟ್ಟಂದಿನಿಂದ ನಮಗೆ ಎಲ್ಲಾ ಸಾಲದೆ ಹೋಯಿತು ಕತ್ತಿಯಿಂದಲೂ ಕ್ಷಾಮದಿಂದಲೂ ನಿರ್ಮೂಲವಾದೆವು.
- Habakkuk 2:13 ಹಬಕ್ಕೂಕ 2:13ಇಗೋ, ಇದು ಸೈನ್ಯಗಳ ಕರ್ತನಿಂದ ಅಲ್ಲವೋ? ಏನಂದರೆ, ಜನರು ಬೆಂಕಿಗೋಸ್ಕರ ಪರಿಶ್ರಮಪಟ್ಟ ವ್ಯರ್ಥಕ್ಕೋಸ್ಕರ ಆಯಾಸಪಡುವದೇ.
- 2 Chronicles 28:22–23 2 ಪೂರ್ವಕಾಲವೃತ್ತಾಂತ 28:22–23ಇದಲ್ಲದೆ ಅರಸನಾದ ಆಹಾಜನು ತನ್ನ ಇಕ್ಕಟ್ಟಿನ ಕಾಲದಲ್ಲಿ ಮತ್ತಷ್ಟು ಕರ್ತನಿಗೆ ವಿರೋಧ ವಾಗಿ ಅಪರಾಧ ಮಾಡಿದನು. ಏನಂದರೆ, ಅವನು ಅರಾಮಿನ ಅರಸುಗಳ ದೇವರುಗಳು ಅವರಿಗೆ ಸಹಾಯ ಕೊಟ್ಟದ್ದರಿಂದ--ಅವು ನನಗೆ ಸಹಾಯ ಕೊಡುವ ಹಾಗೆ ನಾನು ಅವುಗಳಿಗೆ ಬಲಿಯನ್ನು ಅರ್ಪಿಸುತ್ತೇನೆ ಎಂದು ಅಂದುಕೊಂಡು ತನ್ನನ್ನು ಹೊಡೆದ ದಮಸ್ಕ ದವರ ದೇವರುಗಳಿಗೆ ಬಲಿಗಳನ್ನು ಅರ್ಪಿಸಿದನು. ಆದರೆ ಅವು ಅವನನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಬೀಳುವಂತೆ ಮಾಡಿದವು.
- Jeremiah 3:3 ಯೆರೆಮೀಯ 3:3ಆದದರಿಂದ ಮಳೆ ನಿಂತು ಹೋಯಿತು, ಹಿಂಗಾರೂ ಆಗಲಿಲ್ಲ; ಸೂಳೆಯ ಹಣೆ ನಿನಗಿತ್ತು; ನಾಚುವದನ್ನು ನಿರಾಕರಿಸಿದಿ.