Isaiah · chapter 57 · verse 11
Isaiah 57:11 in Kannada
ನೀನು ಸುಳ್ಳು ಹೇಳಿ ನನ್ನನ್ನು ಜ್ಞಾಪಕ ಮಾಡದೆ ಇಲ್ಲವೆ ಅದನ್ನು ಮನಸ್ಸಿಗೆ ತಾರದೆ ಇರುವಾಗ ಯಾರಿಗೆ ಅಂಜಿಕೊಂಡು ಭಯಪಟ್ಟಿ?
Neenu sullu heli nannannu jnyaapaka maadade illave adannu manassige taarade iruvaaga yaarige anjikondu bhayapatti?
Isaiah 57:11 in English
- King James Version (KJV)
- And of whom hast thou been afraid or feared, that thou hast lied, and hast not remembered me, nor laid [it] to thy heart? have not I held my peace even of old, and thou fearest me not?
- World English Bible (WEB)
- “Whom have you dreaded and feared, so that you lie, and have not remembered me, nor laid it to your heart? Haven’t I held my peace for a long time, and you don’t fear me?
- American Standard Version (ASV)
- And of whom hast thou been afraid and in fear, that thou liest, and hast not remembered me, nor laid it to thy heart? have not I held my peace even of long time, and thou fearest me not?
- Bible in Basic English (BBE)
- And of whom were you in fear, so that you were false, and did not keep me in mind, or give thought to it? Have I not been quiet, keeping myself secret, and so you were not in fear of me?
- Darby Translation (DBY)
- And of whom hast thou been afraid or feared, that thou hast lied, and hast not remembered me, nor taken it to heart? Have not I even of long time held my peace, and thou fearest me not?
- Webster's Bible (WBS)
- And of whom hast thou been afraid or feared, that thou hast lied, and hast not remembered me, nor laid [it] to thy heart? have not I held my peace even of old, and thou fearest me not?
- Young's Literal Translation (YLT)
- And of whom hast thou been afraid, and fearest, That thou liest, and Me hast not remembered? Thou hast not laid [it] to thy heart, Am not I silent, even from of old? And Me thou fearest not?
Read in context
- 9ಬಹು ಸುಗಂಧ ದ್ರವ್ಯಗಳನ್ನು ಕೂಡಿಸಿ, ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ, ದೂರಕ್ಕೆ ನಿನ್ನ ಸೇವಕರನ್ನು ಕಳುಹಿಸಿದ್ದೀ, ಪಾತಾಳ ದಷ್ಟು ನೀಚಸ್ಥಿತಿಗೆ ಇಳಿದಿದ್ದೀ.
- 10ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ ನಿರೀಕ್ಷೆಯೇ ಇಲ್ಲ ಎಂದು ಅಂದುಕೊಳ್ಳಲಿಲ್ಲ. ನಿನ್ನ ಕೈಯಲ್ಲಿರುವ ಜೀವವನ್ನು ಕಂಡುಕೊಂಡಿದ್ದೀ, ಆದದರಿಂದ ನೀನು ದುಃಖಿಸಲಿಲ್ಲ.
- 11ನೀನು ಸುಳ್ಳು ಹೇಳಿ ನನ್ನನ್ನು ಜ್ಞಾಪಕ ಮಾಡದೆ ಇಲ್ಲವೆ ಅದನ್ನು ಮನಸ್ಸಿಗೆ ತಾರದೆ ಇರುವಾಗ ಯಾರಿಗೆ ಅಂಜಿಕೊಂಡು ಭಯಪಟ್ಟಿ?
- 12ನಾನೇ ನಿನ್ನ ನೀತಿಯನ್ನೂ ನಿನ್ನ ಕ್ರಿಯೆಗಳನ್ನೂ ತಿಳಿಯ ಮಾಡುವೆನು. ಅವು ನಿನಗೆ ಪ್ರಯೋಜನವಾಗು ವದಿಲ್ಲ.
- 13ನೀನು ಕೂಗುವಾಗ ನಿನ್ನ ವಿಗ್ರಹಗಳು ನಿನ್ನನ್ನು ತಪ್ಪಿಸಲಿ; ಆದರೆ ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವದು; ವ್ಯರ್ಥವಾದದ್ದು ಅವುಗಳನ್ನು ತೆಗೆದುಕೊಂಡು ಹೋಗುವದು; ಆದರೆ ನನ್ನಲ್ಲಿ ನಂಬಿಕೆ ಇಡುವವನು ದೇಶವನ್ನು ವಶಮಾಡಿ ಕೊಂಡು ನನ್ನ ಪರಿಶುದ್ಧ ಪರ್ವತವನ್ನು ಬಾಧ್ಯವಾಗಿ ಹೊಂದುವನು.
Cross references
- Isaiah 51:12–13 ಯೆಶಾಯ 51:12–13ನಾನೇ, ನಾನೇ ನಿನ್ನನ್ನು ಆದರಿಸುವವನಾಗಿ ದ್ದೇನೆ; ಹಾಗಾದರೆ ಸಾಯುವ ಮನುಷ್ಯನಿಗೂ ಹುಲ್ಲಿನಂತೆ ಮಾಡಲ್ಪಟ್ಟಿರುವ ನರಪುತ್ರನಿಗೂ ಭಯ ಪಡುವ ನೀನು ಯಾರು? ಆಕಾಶವನ್ನು ಹಾಸಿ, ಭೂಮಿಗೆ ಅಸ್ತಿವಾರವನ್ನು ಹಾಕಿ, ನಿನ್ನನ್ನು ಉಂಟು ಮಾಡಿದ ಕರ್ತನನ್ನು ನೀನು ಮರೆತುಬಿಟ್ಟು ಹಿಂಸಕನ ಉಗ್ರಕ್ಕೆ ಎಡೆಬಿಡದೆ ಪ್ರತಿದಿನವೂ ಅವನು ನಾಶ ಪಡಿಸುವನೋ ಎಂಬಂತೆ ಅಂಜಿಕೊಂಡಿದ್ದಿಯಲ್ಲಾ? ಮತ್ತು ಆ ಹಿಂಸಕನ ಉಗ್ರವು ಎಲ್ಲಿ?
- Proverbs 29:25 ಜ್ಞಾನೋಕ್ತಿಗಳು 29:25ಮನುಷ್ಯನ ಭಯವು ಉರುಲನ್ನು ತರುತ್ತದೆ; ಕರ್ತನಲ್ಲಿ ಭರವಸ ವಿಡುವವನು ಕ್ಷೇಮದಿಂದಿರುವನು.
- Psalm 50:21 ಕೀರ್ತನೆಗಳು 50:21ಇವುಗಳನ್ನು ನೀನು ಮಾಡಿದಾಗ್ಯೂ ನಾನು ಮೌನವಾಗಿದ್ದೆನು; ಆದದರಿಂದ ನಾನೂ ಸಹ ನಿನ್ನ ಹಾಗೆ ಒಬ್ಬನೆಂದು ನೀನು ನೆನಸಿದಿ; ಆದರೆ ನಾನು ನಿನ್ನನ್ನು ಗದರಿಸಿ ನಿನ್ನ ಕಣ್ಣುಗಳ ಮುಂದೆ ಈ ಕೃತ್ಯಗಳನ್ನು ಕ್ರಮವಾಗಿಡುವೆನು.
- Jeremiah 3:21 ಯೆರೆಮೀಯ 3:21ಉನ್ನತ ಸ್ಥಳಗಳ ಮೇಲೆ ಸ್ವರವು ಕೇಳಲ್ಪಟ್ಟಿತು, ಅವು ಇಸ್ರಾಯೇಲಿನ ಮಕ್ಕಳ ಅಳುವಿಕೆಯ ಬೇಡಿ ಕೆಗಳೇ; ಯಾಕಂದರೆ ತಮ್ಮ ಮಾರ್ಗವನ್ನು ಡೊಂಕು ಮಾಡಿ ತಮ್ಮ ದೇವರಾದ ಕರ್ತನನ್ನು ಮರೆತುಬಿಟ್ಟಿ ದ್ದರು.
- Isaiah 59:3–4 ಯೆಶಾಯ 59:3–4ನಿಮ್ಮ ಕೈಗಳು ರಕ್ತದಿಂದಲೂ ನಿಮ್ಮ ಬೆರಳುಗಳು ಅಕ್ರಮದಿಂದಲೂ ಮೈಲಿಗೆಯಾಗಿವೆ; ನಿಮ್ಮ ತುಟಿಗಳು ಸುಳ್ಳನ್ನು ಮಾತಾಡುತ್ತವೆ; ನಿಮ್ಮ ನಾಲಿಗೆ ಅನ್ಯಾಯವನ್ನು ನುಡಿಯುತ್ತದೆ. ನ್ಯಾಯಕ್ಕೋಸ್ಕರ ಕರೆಯುವವನು ಯಾವನೂ ಇಲ್ಲ; ಇಲ್ಲವೆ ಸತ್ಯಕ್ಕೋಸ್ಕರ ಬೇಡು ವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡು ತ್ತಾರೆ. ಸುಳ್ಳನ್ನು ಮಾತಾಡುತ್ತಾರೆ; ಕೇಡನ್ನು ಗರ್ಭಧರಿಸಿ ಕೊಳ್ಳುತ್ತಾರೆ ಅಕ್ರಮವನ್ನು ಹೆರುತ್ತಾರೆ.
- Isaiah 26:10 ಯೆಶಾಯ 26:10ದುಷ್ಟನಿಗೆ ಕನಿಕರ ತೋರಿಸಿದಾಗ್ಯೂ ನೀತಿಯನ್ನು ಅವನು ಕಲಿಯಲಾರನು. ಯಥಾರ್ಥವಂತನ ದೇಶದಲ್ಲಿ ಅವನು ಅನ್ಯಾ ಯವನ್ನಾಚರಿಸುವನು ಮತ್ತು ಕರ್ತನ ಮಹತ್ವವನ್ನು ಲಕ್ಷಿಸುವದಿಲ್ಲ.
- Jeremiah 2:32 ಯೆರೆಮೀಯ 2:32ಯುವತಿಯು ತನ್ನ ಆಭರಣಗಳನ್ನೂ ಮದಲಗಿತ್ತಿಯು ತನ್ನ ಒಡ್ಯಾಣವನ್ನೂ ಮರೆತುಬಿಡುವಳೋ? ಆದಾಗ್ಯೂ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳು ನನ್ನನ್ನು ಮರೆತುಬಿಟ್ಟಿದ್ದಾರೆ.
- Ecclesiastes 8:11 ಪ್ರಸಂಗಿ 8:11ದುಷ್ಟ ಕೆಲಸಕ್ಕೆ ದಂಡನೆಯು ಕೂಡಲೇ ಆಗದಿರುವದರಿಂದ ಮನುಷ್ಯಪುತ್ರರ ಹೃದ ಯವು ಅವರನ್ನು ಕೆಟ್ಟದ್ದನ್ನು ಮಾಡುವದರಲ್ಲಿಯೇ ತುಂಬಿಸುವದು.
- Isaiah 30:9 ಯೆಶಾಯ 30:9ಏನಂದರೆ, ಇವರು ತಿರುಗಿ ಬೀಳುವ ಜನರು. ಸುಳ್ಳಾಡುವ ಮಕ್ಕಳು, ಕರ್ತನ ನ್ಯಾಯಪ್ರಮಾಣವನ್ನು ಕೇಳಲೊಲ್ಲದ ಮಕ್ಕಳು.
- Jeremiah 9:3–5 ಯೆರೆಮೀಯ 9:3–5ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಸುಳ್ಳುಗಳಿಗಾಗಿ ಬೊಗ್ಗಿಸುತ್ತಾರೆ. ಆದರೆ ಭೂಮಿಯಲ್ಲಿ ಸತ್ಯಕ್ಕಾಗಿ ಬಲಿಷ್ಠರಾಗುವದಿಲ್ಲ; ಅವರು ಕೇಡಿನಿಂದ ಕೇಡಿಗೆ ಹೋಗುತ್ತಾ ನನ್ನನ್ನು ಅರಿಯದೆ ಇದ್ದಾರೆಂದು ಕರ್ತನು ಅನ್ನುತ್ತಾನೆ. ನಿಮ್ಮ ನಿಮ್ಮ ನೆರೆಯವರಿಗೆ ಎಚ್ಚರಿಕೆಯಾಗಿರಿ; ಯಾವ ಸಹೋದರ ನಲ್ಲಾದರೂ ನಂಬಿಕೆ ಇಡಬೇಡಿರಿ; ಸಹೋದರರೆಲ್ಲರೂ ಸಂಪೂರ್ಣವಾಗಿ ಮೋಸಮಾಡುವರು, ನೆರೆಯವ ರೆಲ್ಲರು ಚಾಡಿಹೇಳುತ್ತಾ ತಿರುಗಾಡುವರು. ತಮ್ಮ ತಮ್ಮ ನೆರೆಯವರಿಗೆ ವಂಚನೆಮಾಡಿ ಸತ್ಯವನ್ನು ಮಾತಾ ಡರು; ಸುಳ್ಳುಗಳನ್ನು ಹೇಳುವದಕ್ಕೆ ಅವರು ತಮ್ಮ ನಾಲಿಗೆಗೆ ಬೋಧಿಸಿದ್ದಾರೆ. ಅಕ್ರಮ ಮಾಡುವದಕ್ಕೆ ಪ್ರಯಾಸಪಡುತ್ತಾರೆ. 6
- Hosea 11:12 ಹೋಶೇಯ 11:12ಎಫ್ರಾಯಾಮು ಸುಳ್ಳಿನಿಂದ ಮತ್ತು ಇಸ್ರಾ ಯೇಲಿನ ಮನೆಯವರು ಮೋಸದಿಂದ ನನ್ನನ್ನು ಸುತ್ತಿಕೊಂಡಿದ್ದಾರೆ, ಆದರೆ ಯೆಹೂದನು ಇನ್ನೂ ದೇವರ ಸಂಗಡ ಆಳುತ್ತಾನೆ; ಮತ್ತು ಪರಿಶುದ್ಧರ ಸಂಗಡ ನಂಬಿಗಸ್ತನಾಗಿದ್ದಾನೆ.
- Ezekiel 13:22 ಯೆಹೆಜ್ಕೇಲನು 13:22ನಾನು ಯಾವನನ್ನು ದುಃಖಪಡಿಸಲಿಲ್ಲವೋ ಆ ನೀತಿವಂತನ ಹೃದಯಕ್ಕೆ ನೀವು ಸುಳ್ಳಾಡಿ ದುಃಖಪಡಿಸಿ ದ್ದೀರಿ; ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನ ಕೈಗಳನ್ನು ಬಲಪಡಿಸಿದ್ದೀರಿ.ಆದದರಿಂದ ನೀವು ಇನ್ನು ಮೇಲೆ ವ್ಯರ್ಥವಾದದ್ದನ್ನು ಕಾಣುವದಿಲ್ಲ; ಭವಿಷ್ಯವನ್ನೂ ಕಾಣು ವದಿಲ್ಲ; ಯಾಕಂದರೆ ನಾನು ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು; ನಾನೇ ಕರ್ತನೆಂದು ನೀವು ತಿಳಿದುಕೊಳ್ಳುವಿರಿ.