Isaiah · chapter 57 · verse 17
Isaiah 57:17 in Kannada
ಅವನ ದುರಾಶೆಯ ಅನ್ಯಾಯಕ್ಕೆ ನಾನು ಕೋಪ ಗೊಂಡು ಅವನನ್ನು ಹೊಡೆದೆನು. ನನ್ನ ಮುಖವನ್ನು ಮುಚ್ಚಿಕೊಂಡು ರೋಷಭರಿತ ನಾದೆನು; ಅವನು ಮೊಂಡತನದಿಂದ ತನ್ನ ಮನಸ್ಸಿಗೆ ಬಂದ ಹಾಗೆಯೇ ನಡೆಯುತ್ತಾ ಬಂದಿದ್ದಾನೆ.
Avana duraasheya anyaayakke naanu kopa gondu avanannu hodedenu. Nanna mukhavannu muchchikondu roshabharita naadenu; avanu mondatanadinda tanna manassige banda haageye nadeyuttaa bandiddaane.
Isaiah 57:17 in English
- King James Version (KJV)
- For the iniquity of his covetousness was I wroth, and smote him: I hid me, and was wroth, and he went on frowardly in the way of his heart.
- World English Bible (WEB)
- I was angry because of the iniquity of his covetousness and struck him. I hid myself and was angry; and he went on backsliding in the way of his heart.
- American Standard Version (ASV)
- For the iniquity of his covetousness was I wroth, and smote him; I hid [my face] and was wroth; and he went on backsliding in the way of his heart.
- Bible in Basic English (BBE)
- I was quickly angry with his evil ways, and sent punishment on him, veiling my face in wrath: and he went on, turning his heart from me.
- Darby Translation (DBY)
- For the iniquity of his covetousness was I wroth, and smote him; I hid me, and was wroth, and he went on backslidingly in the way of his heart.
- Webster's Bible (WBS)
- For the iniquity of his covetousness I was wroth, and smote him: I hid me, and was wroth, and he went on frowardly in the way of his heart.
- Young's Literal Translation (YLT)
- For the iniquity of his dishonest gain, I have been wroth, and I smite him, Hiding — and am wroth, And he goeth on turning back in the way of his heart.
Read in context
- 15ಉನ್ನತನೂ ಎತ್ತರವಾದವನೂ ನಿತ್ಯವಾಗಿ ವಾಸಿ ಸುವವನೂ ಪರಿಶುದ್ಧನೆಂದು ಹೆಸರುಳ್ಳಾತನೂ ಹೀಗೆ ಹೇಳುತ್ತಾನೆ--ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿ ಸುವ ನಾನು ಪಶ್ಚಾತ್ತಾಪದೊಂದಿಗೆ ಮತ್ತು ದೀನನ ಆತ್ಮದೊಂದಿಗೆ ಇದ್ದುಕೊಂಡು ಅವರನ್ನು ಉಜ್ಜೀ ವಿಸುವವನಾಗಿದ್ದೇನೆ.
- 16ನಾನು ಎಂದೆಂದಿಗೂ ವ್ಯಾಜ್ಯ ವಾಡುವದಿಲ್ಲ, ಇಲ್ಲವೆ ಯಾವಾಗಲೂ ಕೋಪಿಸಿ ಕೊಳ್ಳೆನು. ಯಾಕಂದರೆ ಆತ್ಮವೂ ನಾನು ಉಂಟು ಮಾಡಿದ ಜೀವವೂ ನನ್ನಿಂದ ಕುಂದಿ ಹೋದಾವು.
- 17ಅವನ ದುರಾಶೆಯ ಅನ್ಯಾಯಕ್ಕೆ ನಾನು ಕೋಪ ಗೊಂಡು ಅವನನ್ನು ಹೊಡೆದೆನು. ನನ್ನ ಮುಖವನ್ನು ಮುಚ್ಚಿಕೊಂಡು ರೋಷಭರಿತ ನಾದೆನು; ಅವನು ಮೊಂಡತನದಿಂದ ತನ್ನ ಮನಸ್ಸಿಗೆ ಬಂದ ಹಾಗೆಯೇ ನಡೆಯುತ್ತಾ ಬಂದಿದ್ದಾನೆ.
- 18ನಾನು ಅವನ ಮಾರ್ಗವನ್ನು ನೋಡಿದ್ದೇನೆ. ಅವನನ್ನು ಸ್ವಸ್ಥಮಾಡಿ ಅವನನ್ನು ನಡಿಸುತ್ತೇನೆ ಮತ್ತು ಅವನಿಗೂ ಅವನ ದುಃಖಿತರಿಗೂ ಆದರಣೆಗಳನ್ನು ಪುನಃ ಸ್ಥಾಪಿಸುವೆನು.
- 19ನಾನು ತುಟಿಗಳಿಗೆ ಫಲವನ್ನುಂಟು ಮಾಡುವ ವನಾಗಿ ಅವನಿಗೆ ದೂರವಾದವನಿಗೂ ಅವನಿಗೆ ಸವಿಾಪವಾದವನಿಗೂ ಸಮಾಧಾನವಿರಲಿ. ನಾನು ಅವನನ್ನು ಸ್ವಸ್ಥಮಾಡುವೆ ನೆಂದು ಕರ್ತನು ಹೇಳು ತ್ತಾನೆ.
Cross references
- Isaiah 56:11 ಯೆಶಾಯ 56:11ಹೌದು, ಎಂದಿಗೂ ಸಾಕೆನ್ನದ ಹೊಟ್ಟೇಬಾಕ ನಾಯಿಗಳು, ಅವರು ಗ್ರಹಿಕೆಯಿಲ್ಲದ ಕುರುಬರು; ಅವರೆಲ್ಲರು ತಮ್ಮ ತಮ್ಮ ಸ್ವಂತ ಮಾರ್ಗಕ್ಕೂ ಪ್ರತಿಯೊಬ್ಬನು ತನಗೆ ಲಾಭ ಸಿಕ್ಕುವ ಕಡೆಗೂ ತಿರುಗಿ ಕೊಳ್ಳುವನು.ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು; ನಮ್ಮನ್ನು ನಾವೇ ಅಮಲೇರುವ ಮದ್ಯದಿಂದ ತುಂಬಿಸಿ ಕೊಳ್ಳುವ! ನಾಳೆಯು ಈ ದಿವಸದಂತೆಯೇ ಬಹಳ ಸಮೃದ್ಧಿಯಾಗಿರುವದು.
- Jeremiah 6:13 ಯೆರೆಮೀಯ 6:13ಅವ ರಲ್ಲಿ ಚಿಕ್ಕವನು ಮೊದಲುಗೊಂಡು ದೊಡ್ಡವರ ವರೆಗೆ ಅವರೆಲ್ಲರೂ ತಮ್ಮನ್ನು ಲೋಭಕ್ಕೆ ಒಪ್ಪಿಸಿ ಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕರ ವರೆಗೆ ಪ್ರತಿ ಯೊಬ್ಬನು ಸುಳ್ಳಾಗಿ ನಡಕೊಳ್ಳುತ್ತಾನೆ.
- Colossians 3:5 ಕೊಲೊಸ್ಸೆಯವರಿಗೆ 3:5ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಅಂದರೆ ಜಾರತ್ವ ಬಂಡುತನ ಕಾಮಾಭಿ ಲಾಷೆ ದುರಾಶೆ ವಿಗ್ರಹಾರಾಧನೆಯಾಗಿರುವ ಲೋಭ ಇವುಗಳನ್ನು ಸಾಯಿಸಿರಿ.
- 2 Peter 2:14 2 ಪೇತ್ರನು 2:14ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲ ಚಿತ್ತರನ್ನು ಮರುಳು ಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ.
- Ephesians 5:3–5 ಎಫೆಸದವರಿಗೆ 5:3–5ಆದರೆ ನಿಮ್ಮೊಳಗೆ ಜಾರತ್ವವಾಗಲಿ ಯಾವ ಅಶುದ್ಧತ್ವವಾಗಲಿ ಇಲ್ಲವೆ ಲೋಭವಾಗಲಿ ಪರಿಶುದ್ಧರಿಗೆ ತಕ್ಕ ಹಾಗೆ ಇವುಗಳ ಹೆಸರನ್ನು ಒಂದು ಸಲವಾದರೂ ಎತ್ತಬಾರದು. ಇಲ್ಲವೆ ಹೊಲಸುತನ ಹುಚ್ಚು ಮಾತು ಕುಚೋದ್ಯ ಇವು ಬೇಡ, ಅಯುಕ್ತವಾಗಿವೆ; ಇವು ಗಳನ್ನು ಬಿಟ್ಟು ಆತನಿಗೆ ಉಪಕಾರ ಸ್ತುತಿಮಾಡುವದೇ ಉತ್ತಮ. ಯಾವ ಜಾರನಾಗಲಿ, ಅಶುದ್ಧನಾಗಲಿ, ವಿಗ್ರಹಾರಾಧಕನಂತಿರುವ ಲೋಭಿಯಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯನಾಗುವದಿಲ್ಲವೆಂದು ನೀವು ಬಲ್ಲಿರಲ್ಲವೇ.
- Ezekiel 33:31 ಯೆಹೆಜ್ಕೇಲನು 33:31ಬೇರೆ ಜನರು ಬರುವ ಹಾಗೆ ಅವರು ನಿನ್ನ ಬಳಿಗೆ ಬಂದು ಜನರು ಕುಳಿತುಕೊಳ್ಳುವ ಹಾಗೆ ನಿನ್ನ ಮುಂದೆ ಕುಳಿತುಕೊಳ್ಳುವರು; ಅವರು ನಿನ್ನ ವಾಕ್ಯಗಳನ್ನು ಕೇಳುವರು, ಆದರೆ ಅವರು ಅವುಗಳನ್ನು ಮಾಡುವದಿಲ್ಲ. ಅವರು ತಮ್ಮ ಬಾಯಿಂದ ಹೆಚ್ಚಾದ ಪ್ರೀತಿಯನ್ನು ತೋರಿಸುವರು; ಆದರೆ ಅವರ ಹೃದಯವು ಲೋಭತ್ವದ ಕಡೆಗೆ ಹೋಗುವದು.
- 1 Timothy 6:9 1 ತಿಮೊಥೆಯನಿಗೆ 6:9ಆದರೆ ಐಶ್ವರ್ಯವಂತರಾಗ ಬೇಕೆಂದು ಮನಸ್ಸು ಮಾಡುವವರು ಶೋಧನೆಯಲ್ಲಿಯೂ ಉರ್ಲಿನಲ್ಲಿಯೂ ಸಿಕ್ಕಿಕೊಂಡು ಅನೇಕ ಬುದ್ಧಿಹೀನತೆಯ ಮತ್ತು ಹಾನಿಕರವಾದ ದುರಾಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ನಾಶನಗಳಲ್ಲಿ ಮುಳುಗಿಸುತ್ತವೆ.
- Isaiah 9:13 ಯೆಶಾಯ 9:13ಹೀಗಿದ್ದಾಗ್ಯೂ ಆ ಜನರು ತಮ್ಮನ್ನು ಹೊಡೆ ದಾತನ ಕಡೆಗೆ ತಿರುಗದೆಯೂ ಇಲ್ಲವೆ ಸೈನ್ಯಗಳ ಕರ್ತನನ್ನು ಹುಡುಕದೆಯೂ ಇದ್ದಾರೆ.
- Luke 12:15 ಲೂಕನು 12:15ಇದಲ್ಲದೆ ಆತನು ಅವರಿಗೆ--ಜಾಗ್ರತೆ ಯಾಗಿದ್ದು ಲೋಭಕ್ಕೆ ಎಚ್ಚರಿಕೆಯಾಗಿರ್ರಿ; ಯಾಕಂದರೆ ಒಬ್ಬ ಮನುಷ್ಯನಿಗೆ ಸಮೃದ್ಧಿಯಾದ ಆಸ್ತಿಯು ಅವನಿಗೆ ಜೀವಾಧಾರವಲ್ಲ ಅಂದನು.
- Ecclesiastes 6:9 ಪ್ರಸಂಗಿ 6:9ಅಪೇಕ್ಷೆಯ ತಿರುಗಾಟ ಕ್ಕಿಂತ ಕಣ್ಣುಗಳ ದೃಷ್ಟಿಯು ಉತ್ತಮ; ಇದೂ ಕೂಡ ವ್ಯರ್ಥವೂ ಮನಸ್ಸಿಗೆ ಆಯಾಸಕರವೂ ಆಗಿದೆ.
- Jeremiah 22:17 ಯೆರೆಮೀಯ 22:17ಆದರೆ ನಿನ್ನ ಕಣ್ಣುಗಳು ನಿನ್ನ ಹೃದಯವು ನಿನ್ನ ದುರ್ಲಾಭದ ಮೇಲೆ, ಅಪರಾಧವಿಲ್ಲದವನ ರಕ್ತ ಚೆಲ್ಲುವದರ ಮೇಲೆ ಮತ್ತು ಪೀಡೆಯನ್ನೂ ಬಲಾತ್ಕಾರವನ್ನೂ ಮಾಡುವದರ ಮೇಲೆಯೇ ಹೊರತು ಮತ್ತಾವದರ ಮೇಲೆಯೂ ಇರುವದಿಲ್ಲ.
- Jeremiah 8:10 ಯೆರೆಮೀಯ 8:10ಆದದರಿಂದ ಅವರ ಹೆಂಡತಿಯರನ್ನು ಬೇರೊಬ್ಬರಿಗೂ ಅವರ ಹೊಲಗಳನ್ನು ಸ್ವಾಧೀನಮಾಡಿಕೊಳ್ಳುವವರಿಗೂ ನಾನು ಕೊಡುವೆನು; ಚಿಕ್ಕವನು ಮೊದಲುಗೊಂಡು ದೊಡ್ಡವನ ತನಕ ಅವರೆಲ್ಲರು ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕನ ವರೆಗೂ ಪ್ರತಿ ಯೊಬ್ಬನು ಮೋಸದಿಂದ ವರ್ತಿಸುತ್ತಾನೆ.