Isaiah · chapter 57 · verse 18
Isaiah 57:18 in Kannada
ನಾನು ಅವನ ಮಾರ್ಗವನ್ನು ನೋಡಿದ್ದೇನೆ. ಅವನನ್ನು ಸ್ವಸ್ಥಮಾಡಿ ಅವನನ್ನು ನಡಿಸುತ್ತೇನೆ ಮತ್ತು ಅವನಿಗೂ ಅವನ ದುಃಖಿತರಿಗೂ ಆದರಣೆಗಳನ್ನು ಪುನಃ ಸ್ಥಾಪಿಸುವೆನು.
Naanu avana maargavannu nodiddene. Avanannu svasthamaadi avanannu nadisuttene mattu avanigoo avana duhkhitarigoo aadaranegalannu punah sthaapisuvenu.
Isaiah 57:18 in English
- King James Version (KJV)
- I have seen his ways, and will heal him: I will lead him also, and restore comforts unto him and to his mourners.
- World English Bible (WEB)
- I have seen his ways, and will heal him. I will lead him also, and restore comforts to him and to his mourners.
- American Standard Version (ASV)
- I have seen his ways, and will heal him: I will lead him also, and restore comforts unto him and to his mourners.
- Bible in Basic English (BBE)
- I have seen his ways, and I will make him well: I will give him rest, comforting him and his people who are sad.
- Darby Translation (DBY)
- I have seen his ways, and will heal him; and I will lead him, and will restore comforts unto him and to those of his that mourn.
- Webster's Bible (WBS)
- I have seen his ways, and will heal him: I will lead him also, and restore comforts to him and to his mourners.
- Young's Literal Translation (YLT)
- His ways I have seen, and I heal him, yea, I lead him, And recompense comforts to him and to his mourning ones.
Read in context
- 16ನಾನು ಎಂದೆಂದಿಗೂ ವ್ಯಾಜ್ಯ ವಾಡುವದಿಲ್ಲ, ಇಲ್ಲವೆ ಯಾವಾಗಲೂ ಕೋಪಿಸಿ ಕೊಳ್ಳೆನು. ಯಾಕಂದರೆ ಆತ್ಮವೂ ನಾನು ಉಂಟು ಮಾಡಿದ ಜೀವವೂ ನನ್ನಿಂದ ಕುಂದಿ ಹೋದಾವು.
- 17ಅವನ ದುರಾಶೆಯ ಅನ್ಯಾಯಕ್ಕೆ ನಾನು ಕೋಪ ಗೊಂಡು ಅವನನ್ನು ಹೊಡೆದೆನು. ನನ್ನ ಮುಖವನ್ನು ಮುಚ್ಚಿಕೊಂಡು ರೋಷಭರಿತ ನಾದೆನು; ಅವನು ಮೊಂಡತನದಿಂದ ತನ್ನ ಮನಸ್ಸಿಗೆ ಬಂದ ಹಾಗೆಯೇ ನಡೆಯುತ್ತಾ ಬಂದಿದ್ದಾನೆ.
- 18ನಾನು ಅವನ ಮಾರ್ಗವನ್ನು ನೋಡಿದ್ದೇನೆ. ಅವನನ್ನು ಸ್ವಸ್ಥಮಾಡಿ ಅವನನ್ನು ನಡಿಸುತ್ತೇನೆ ಮತ್ತು ಅವನಿಗೂ ಅವನ ದುಃಖಿತರಿಗೂ ಆದರಣೆಗಳನ್ನು ಪುನಃ ಸ್ಥಾಪಿಸುವೆನು.
- 19ನಾನು ತುಟಿಗಳಿಗೆ ಫಲವನ್ನುಂಟು ಮಾಡುವ ವನಾಗಿ ಅವನಿಗೆ ದೂರವಾದವನಿಗೂ ಅವನಿಗೆ ಸವಿಾಪವಾದವನಿಗೂ ಸಮಾಧಾನವಿರಲಿ. ನಾನು ಅವನನ್ನು ಸ್ವಸ್ಥಮಾಡುವೆ ನೆಂದು ಕರ್ತನು ಹೇಳು ತ್ತಾನೆ.
- 20ಆದರೆ ದುಷ್ಟರು ಸುಮ್ಮನಿರಲಾರದಂಥ, ಅದರ ನೀರುಗಳು ಕೆಸರನ್ನೂ ಮೈಲಿಗೆಯನ್ನೂ ಕಾರು ವಂಥ, ಅಲ್ಲಕಲ್ಲೋಲವಾಗಿರುವ ಸಮುದ್ರದ ಹಾಗಿ ದ್ದಾರೆ.ದುಷ್ಟರಿಗೆ ಸಮಾಧಾನವೇ ಇಲ್ಲವೆಂದು ನನ್ನ ದೇವರು ಹೇಳುತ್ತಾನೆ.
Cross references
- Jeremiah 33:6 ಯೆರೆಮೀಯ 33:6ಇಗೋ, ನಾನು ಅದಕ್ಕೆ ಕ್ಷೇಮವನ್ನೂ ಸ್ವಸ್ಥತೆಯನ್ನೂ ಹುಟ್ಟಿಸಿ ಅವರನ್ನು ಗುಣಮಾಡಿ ಸಮಾಧಾನದ ಸತ್ಯವನ್ನು ಸಮೃದ್ಧಿಯಾಗಿ ಅವರಿಗೆ ಪ್ರಕಟಮಾಡುವೆನು.
- Revelation 7:17 ಪ್ರಕಟನೆ 7:17ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದಾತನು ಅವರನ್ನು ಮೇಯಿಸಿ ಜೀವ ಜಲದ ಒರತೆಗಳ ಬಳಿಗೆ ನಡಿಸುತ್ತಾನೆ; ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು.
- Jeremiah 3:22 ಯೆರೆಮೀಯ 3:22ಹಿಂಜರಿದ ಮಕ್ಕಳೇ, ನೀವು ತಿರುಗಿಕೊಳ್ಳಿರಿ; ನಿಮ್ಮ ಹಿಂಜರಿಯುವಿಕೆಯನ್ನು ನಾನು ಸ್ವಸ್ಥಮಾಡುವೆನು ಎಂದು ಕರ್ತನು ಅನ್ನುತ್ತಾನೆ. ಇಗೋ, ನಿನ್ನ ಬಳಿಗೆ ಬರುತ್ತೇವೆ; ನೀನು ದೇವರಾದ ನಮ್ಮ ಕರ್ತನಾಗಿದ್ದೀ.
- Hosea 14:4–8 ಹೋಶೇಯ 14:4–8ನಾನು ಅವರ ಹಿಂಜರಿಯುವಿಕೆಯನ್ನು ಸ್ವಸ್ಥ ಮಾಡುವೆನು. ನಾನು ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು. ಯಾಕಂದರೆ ನನ್ನ ಕೋಪವು ಅವನ ಕಡೆಯಿಂದ ತಿರುಗಿಕೊಂಡಿದೆ. ಇಸ್ರಾಯೇಲಿಗೆ ನಾನು ಮಂಜಿನ ಹಾಗೆ ಇರುವೆನು. ಅವನು ತಾವರೆಯ ಹಾಗೆ ಬೆಳೆಯುವನು; ತನ್ನ ಬೇರುಗಳನ್ನು ಲೆಬನೋನಿನ ಹಾಗೆ ಹರಡುವನು. ಅವನ ಕೊಂಬೆಗಳು ಹರಡಿಕೊಂಡು ಅವನ ಸೌಂದರ್ಯವು ಎಣ್ಣೆಯ ಮರಗಳ ಹಾಗೆಯೂ ಅವನ ಪರಿಮಳವು ಲೆಬನೋನಿನ ಹಾಗೆಯೂ ಇರುವದು. ಆತನ ನೆರಳಿನಲ್ಲಿ ವಾಸಿಸುವವರು ಹಿಂತಿರುಗುವರು; ಧಾನ್ಯದ ಹಾಗೆ ಉಜ್ಜೀವಿಸುವರು; ದ್ರಾಕ್ಷೆಯ ಬಳ್ಳಿಯ ಹಾಗೆ ಬೆಳೆಯು ವರು. ಅವನ ಸುವಾಸನೆಯು ಲೆಬನೋನಿನ ದ್ರಾಕ್ಷಾ ರಸದ ಹಾಗೆ ಇರುವದು. ಎಫ್ರಾಯಾಮೇ--ನಾನು ವಿಗ್ರಹಗಳೊಂದಿಗೆ ಇನ್ನು ಏನು ಮಾಡಬೇಕಾಗಿದೆ? ನಾನು ಅವನನ್ನು ಕೇಳಿದ್ದೇನೆ ಮತ್ತು ನಾನು ಅವನನ್ನು ದೃಷ್ಟಿಸಿದ್ದೇನೆ. ನಾನು ಹಸುರಾಗಿ ಬೆಳೆದಿರುವ ತುರಾಯಿ ಮರದಂತಿದ್ದೇನೆ. ನಿನ್ನ ಫಲವು ನನ್ನಿಂದ ಕಂಡುಕೊಂಡಿ ಎಂದು ಅಂದುಕೊಳ್ಳುವದು.ಈ ಸಂಗತಿಗಳನ್ನು ಗ್ರಹಿಸುವ ಜ್ಞಾನಿಯು ಯಾರು? ವಿವೇಕವುಳ್ಳವನು ಅವುಗಳನ್ನು ತಿಳಿದುಕೊಳ್ಳುವನೋ? ಕರ್ತನ ಮಾರ್ಗ ಗಳು ನ್ಯಾಯವಾಗಿದೆ; ಮತ್ತು ನೀತಿವಂತರು ಅದರಲ್ಲಿ ನಡೆಯುವರು; ಆದರೆ ಅಕ್ರಮಗಾರರು ಅವುಗಳಲ್ಲಿ ಬೀಳುವರು.
- Jeremiah 31:3 ಯೆರೆಮೀಯ 31:3ಹಿಂದಿನಂತೆ ಕರ್ತನು ಬಂದು ನನಗೆ ಕಾಣಿಸಿಕೊಂಡು--ಹೌದು, ಶಾಶ್ವತವಾದ ಪ್ರೀತಿ ಯಿಂದ ನಿನ್ನನ್ನು ಪ್ರೀತಿ ಮಾಡಿದ್ದೇನೆ; ಆದದರಿಂದ ಪ್ರೀತಿ ದಯೆಗಳಿಂದ ನಿನ್ನನ್ನು ಎಳೆದಿದ್ದೇನೆ.
- Isaiah 61:1–3 ಯೆಶಾಯ 61:1–3ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ ಕರ್ತನ ಅಂಗೀಕಾರದ ವರುಷವನ್ನು ಸಾರಿ ಹೇಳುವದಕ್ಕೂ ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧಿ ಮಾಡುವದಕ್ಕೂ ದುಃಖವುಳ್ಳವರೆಲ್ಲರನ್ನು ಆದರಿಸುವದಕ್ಕೂ ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು.
- Ezekiel 16:60–63 ಯೆಹೆಜ್ಕೇಲನು 16:60–63ಆದಾಗ್ಯೂ ನಿನ್ನ ಯೌವನದ ದಿನಗಳಲ್ಲಿ ನಾನು ನಿನ್ನ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಂಡು ನಿನಗಾಗಿ ನಿತ್ಯವಾದ ಒಡಂಬಡಿಕೆ ಯೊಂದನ್ನು ಸ್ಥಾಪಿಸುವೆನು. ಆಗ ನೀನು ನಿನ್ನ ಮಾರ್ಗಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಸಹೋ ದರಿಗಳಾದ ನಿನ್ನ ಅಕ್ಕತಂಗಿಯರನ್ನು ಸೇರುವಾಗ ನಾಚಿಕೆಪಡುವಿ. ಅವರನ್ನು ನಿನ್ನ ಕುಮಾರ್ತೆಗಳಂತೆ ಕೊಡುವೆನು. ಆದರೆ ಇದು ನಿನ್ನ ಒಡಂಬಡಿಕೆ ಯಿಂದಲ್ಲ. ನಾನು ಈ ಒಡಂಬಡಿಕೆಯನ್ನು ನಿಮ್ಮೊಂದಿಗೆ ಸ್ಥಾಪಿಸುವೆನು; ಆದದರಿಂದ ನಾನೇ ಕರ್ತ ನೆಂದು ನಿಮಗೆ ಗೊತ್ತಾಗುವದು.ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ ನೀನು ಅವು ಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿನ್ನ ಅವಮಾನದ ನಿಮಿತ್ತ ಇನ್ನು ನೀನು ಬಾಯಿ ತೆರೆಯಲೇಬಾರದೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ. ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ ನೀನು ಅವು ಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿನ್ನ ಅವಮಾನದ ನಿಮಿತ್ತ ಇನ್ನು ನೀನು ಬಾಯಿ ತೆರೆಯಲೇಬಾರದೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ.
- Jeremiah 31:18–20 ಯೆರೆಮೀಯ 31:18–20ಎಫ್ರಾಯಾಮನು ಅಂಗಲಾಚುವದನ್ನು ನಿಶ್ಚಯ ವಾಗಿ ಕೇಳಿದೆನು; ಹೇಗಂದರೆ--ನೀನು ನನ್ನನ್ನು ಶಿಕ್ಷಿ ಸಿದಿ; ತಿದ್ದುಪಾಟಾಗದ ಎತ್ತಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು; ನನ್ನನ್ನು ತಿರುಗಿಸು, ಆಗ ತಿರುಗಿ ಕೊಳ್ಳುವೆನು; ಓ ಕರ್ತನೇ, ನೀನೇ ನನ್ನ ದೇವ ರಾಗಿದ್ದೀ. ನಿಶ್ಚಯವಾಗಿ ನಾನು ತಿರುಗಿಕೊಂಡ ಮೇಲೆ ಪಶ್ಚಾತ್ತಾಪಪಟ್ಟೆನು; ಉಪದೇಶಹೊಂದಿದ ಮೇಲೆ ತೊಡೆಯ ಮೇಲೆ ಬಡಕೊಂಡೆನು; ನಾಚಿಕೆಪಟ್ಟೆನು, ಹೌದು, ಅವಮಾನ ಹೊಂದಿದೆನು; ನನ್ನ ಯೌವನದ ನಿಂದೆಯನ್ನು ತಾಳಿಕೊಂಡೆನು. ಎಫ್ರಾಯಾಮನು ನನಗೆ ಪ್ರಿಯಕುಮಾರನೋ? ಅವನು ಆನಂದವುಳ್ಳ ಮಗುವೋ? ನಾನು ಅವನಿಗೆ ವಿರೋಧವಾಗಿ ಮಾತ ನಾಡಿದಂದಿನಿಂದ ಅವನನ್ನು ಇನ್ನು ಬಹಳವಾಗಿ ಜ್ಞಾಪಕಮಾಡುತ್ತೇನೆ; ಆದದರಿಂದ ನನ್ನ ಕರುಳುಗಳು ಅವನಿಗೋಸ್ಕರ ಕಳವಳಪಡುತ್ತವೆ. ನಾನು ನಿಶ್ಚಯವಾಗಿ ಅವನನ್ನು ಕನಿಕರಿಸುವೆನೆಂದು ಕರ್ತನು ಅನ್ನುತ್ತಾನೆ.
- Jeremiah 13:17 ಯೆರೆಮೀಯ 13:17ಆದರೆ ನೀವು ಅದನ್ನು ಕೇಳದೆ ಹೋದರೆ ನನ್ನ ಪ್ರಾಣವು ನಿಮ್ಮ ಗರ್ವದ ನಿಮಿತ್ತ ಅಂತರಂಗದ ಸ್ಥಳಗಳಲ್ಲಿ ಅಳು ವದು. ನನ್ನ ಆತ್ಮವು ಬಹಳವಾಗಿ ದುಃಖಿಸುವದು; ಕಣ್ಣೀರು ಬಹಳವಾಗಿ ಸುರಿಸುವದು; ಕರ್ತನ ಮಂದೆಯು ಸೆರೆಯಾಗಿ ಒಯ್ಯಲ್ಪಟ್ಟಿದೆ.
- Isaiah 57:15 ಯೆಶಾಯ 57:15ಉನ್ನತನೂ ಎತ್ತರವಾದವನೂ ನಿತ್ಯವಾಗಿ ವಾಸಿ ಸುವವನೂ ಪರಿಶುದ್ಧನೆಂದು ಹೆಸರುಳ್ಳಾತನೂ ಹೀಗೆ ಹೇಳುತ್ತಾನೆ--ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿ ಸುವ ನಾನು ಪಶ್ಚಾತ್ತಾಪದೊಂದಿಗೆ ಮತ್ತು ದೀನನ ಆತ್ಮದೊಂದಿಗೆ ಇದ್ದುಕೊಂಡು ಅವರನ್ನು ಉಜ್ಜೀ ವಿಸುವವನಾಗಿದ್ದೇನೆ.
- Ecclesiastes 9:4 ಪ್ರಸಂಗಿ 9:4ಜೀವಂತರಾಗಿರುವವರೆಲ್ಲ ರೊಂದಿಗೆ ಸೇರಿಕೊಂಡವನಿಗೆ ನಿರೀಕ್ಷೆ ಇರುವದು. ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು.
- Psalm 51:12 ಕೀರ್ತನೆಗಳು 51:12ನಿನ್ನ ರಕ್ಷಣೆಯ ಆನಂದವನ್ನು ನನಗೆ ತಿರುಗಿಕೊಡು; ನಿನ್ನ ಸಿದ್ಧಮನಸ್ಸಿನಿಂದ ನನ್ನನ್ನು ಮೇಲೆತ್ತು.