Isaiah · chapter 57 · verse 5
Isaiah 57:5 in Kannada
ಹಸಿರಾದ ಏಲಾ ಮರಗಳ ಕೆಳಗೆ ವಿಗ್ರಹಗಳಿಂದ ಮದವೇರಿಸಿ ಕೊಂಡು ಹಳ್ಳಗಳಲ್ಲಿ ಬಂಡೆಗಳ ಬಿರುಕುಗಳಲ್ಲಿ ಮಕ್ಕಳನ್ನು ಕೊಂದುಹಾಕುವ ನೀವು ದ್ರೋಹದ ಮಕ್ಕಳೂ ಸುಳ್ಳಿನ ಸಂತತಿಯೂ ಅಲ್ಲವೋ?
Hasiraada elaa maragala kelage vigrahagalinda madaverisi kondu hallagalalli bandegala birukugalalli makkalannu konduhaakuva neevu drohada makkaloo sullina santatiyoo allavo?
Isaiah 57:5 in English
- King James Version (KJV)
- Enflaming yourselves with idols under every green tree, slaying the children in the valleys under the clifts of the rocks?
- World English Bible (WEB)
- you who inflame yourselves among the oaks, under every green tree; who kill the children in the valleys, under the clefts of the rocks?
- American Standard Version (ASV)
- ye that inflame yourselves among the oaks, under every green tree; that slay the children in the valleys, under the clefts of the rocks?
- Bible in Basic English (BBE)
- You who are burning with evil desire among the oaks, under every green tree; putting children to death in the valleys, under the cracks of the rocks?
- Darby Translation (DBY)
- inflaming yourselves with idols under every green tree, slaying the children in the valleys under the clefts of the rocks?
- Webster's Bible (WBS)
- Inflaming yourselves with idols under every green tree, slaying the children in the valleys under the cliffs of the rocks?
- Young's Literal Translation (YLT)
- Who are inflamed among oaks, under every green tree, Slaughtering the children in valleys, Under clefts of the rocks.
Read in context
- 3ಆದರೆ ನೀವು ಮಾಟಗಾರತಿಯ ಮಕ್ಕಳೇ, ಸೂಳೆಯ ಮತ್ತು ಜಾರನ ಸಂತಾನದವರೇ, ಇಲ್ಲಿಗೆ ಬನ್ನಿರಿ.
- 4ಯಾರ ವಿಷಯದಲ್ಲಿ ಕುಚೋದ್ಯ ಮಾಡುತ್ತೀರಿ? ಯಾರ ವಿಷಯವಾಗಿ ನೀವು ಬಾಯಿ ಅಗಲ ಮಾಡಿ ನಾಲಿಗೆಯನ್ನು ಚಾಚುತ್ತೀರಿ?
- 5ಹಸಿರಾದ ಏಲಾ ಮರಗಳ ಕೆಳಗೆ ವಿಗ್ರಹಗಳಿಂದ ಮದವೇರಿಸಿ ಕೊಂಡು ಹಳ್ಳಗಳಲ್ಲಿ ಬಂಡೆಗಳ ಬಿರುಕುಗಳಲ್ಲಿ ಮಕ್ಕಳನ್ನು ಕೊಂದುಹಾಕುವ ನೀವು ದ್ರೋಹದ ಮಕ್ಕಳೂ ಸುಳ್ಳಿನ ಸಂತತಿಯೂ ಅಲ್ಲವೋ?
- 6ಹಳ್ಳದ ನುಣುಪಾದ ಕಲ್ಲುಗಳು ನಿನ್ನ ಪಾಲು, ಅವುಗಳೇ ಹೌದು, ಅವೇ ನಿನ್ನ ಪಾಲು, ಅವುಗಳಿಗೆ ನೀನು ಪಾನದ್ರವ್ಯವನ್ನು ಮತ್ತು ಆಹಾರದರ್ಪಣೆಯನ್ನು ಅರ್ಪಿಸಿದ್ದೀ, ಇವುಗಳಿಂದ ನಾನು ಆದರಣೆ ಹೊಂದ ಬೇಕೋ?
- 7ಮಹೋನ್ನತ ಪರ್ವತದಲ್ಲಿ ನೀನು ಹಾಸಿಗೆಯನ್ನು ಹಾಕಿಕೊಂಡಿದ್ದೀ. ಬಲಿ ಅರ್ಪಿಸುವ ದಕ್ಕೂ ಅಲ್ಲಿಗೆ ಏರಿದ್ದೀ.
Cross references
- 2 Kings 16:3–4 2 ಅರಸುಗಳು 16:3–4ಅವನು ತನ್ನ ತಂದೆಯಾದ ದಾವೀದನ ಹಾಗೆ ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಒಳ್ಳೇಯದನ್ನು ಮಾಡದೆ ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದನು. ಇದಲ್ಲದೆ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯಜನಾಂಗಗಳ ಅಸಹ್ಯವಾದವುಗಳ ಪ್ರಕಾರ ಅವನು ತನ್ನ ಮಗನನ್ನು ಬೆಂಕಿ ತುಳಿಯ ಮಾಡಿದನು. ಇದಲ್ಲದೆ ಅವನು ಉನ್ನತ ಸ್ಥಳಗಳ ಮೇಲೆಯೂ ಬೆಟ್ಟಗಳ ಮೇಲೆಯೂ ಹಸುರಾದ ಎಲ್ಲಾ ಮರಗಳ ಕೆಳಗೂ ಬಲಿಗಳನ್ನೂ ಧೂಪವನ್ನೂ ಸಮರ್ಪಿಸಿದನು.
- Ezekiel 16:20 ಯೆಹೆಜ್ಕೇಲನು 16:20ಇದಾದ ಮೇಲೆ ನನಗೆ ಹುಟ್ಟಿದ್ದ ನನ್ನ ಕುಮಾರರನ್ನೂ ಕುಮಾರ್ತೆ ಯರನ್ನೂ ಅವರ ಆಹಾರಕ್ಕಾಗಿ ಅರ್ಪಿಸಿದಿ. ಈ ನಿನ್ನ ವ್ಯಭಿಚಾರ ಸಾಮಾನ್ಯವಾದದ್ದಲ್ಲ,
- Isaiah 1:29 ಯೆಶಾಯ 1:29ನೀವು ಇಷ್ಟ ಪಟ್ಟ ಏಲಾಮರಗಳ ನಿಮಿತ್ತ ನಾಚಿಕೊಳ್ಳುವರು, ಆರಿಸಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.
- 2 Kings 23:10 2 ಅರಸುಗಳು 23:10ಯಾವನೂ ತನ್ನ ಮಗನನ್ನಾದರೂ ಮಗಳನ್ನಾದರೂ ಮೋಲೆಕನಿ ಗೋಸ್ಕರ ಬೆಂಕಿದಾಟಿಸದ ಹಾಗೆ ಹಿನ್ನೋಮನ ಮಕ್ಕಳ ತಗ್ಗಿನಲ್ಲಿದ್ದ ತೋಫೆತನ್ನು ಹೊಲೆಮಾಡಿದನು.
- Jeremiah 7:31 ಯೆರೆಮೀಯ 7:31ಹಿನ್ನೋಮನ ಮಗನ ತಗ್ಗಿನಲ್ಲಿರುವ ತೋಫೆತಿನ ಉನ್ನತ ಸ್ಥಳಗಳನ್ನು ತಮ್ಮ ಕುಮಾರ ಕುಮಾರ್ತೆಯರನ್ನು ಬೆಂಕಿಯಲ್ಲಿ ಸುಡುವದಕ್ಕೆ ಕಟ್ಟಿದ್ದಾರೆ; ಇದನ್ನು ನಾನು ಆಜ್ಞಾಪಿಸಲಿಲ್ಲ, ಇಲ್ಲವೆ ಅದು ನನ್ನ ಮನಸ್ಸಿನಲ್ಲಿ ಬರಲಿಲ್ಲ.
- Leviticus 18:21 ಯಾಜಕಕಾಂಡ 18:21ನಿನ್ನ ದೇವರ ಹೆಸರನ್ನು ಅಶುದ್ಧಪಡಿಸುವಂತೆ ನಿನ್ನ ಸಂತಾನವನ್ನು ಮೋಲೆಕನಿಗೆ ಬೆಂಕಿಯ ಮೂಲಕ ಅರ್ಪಿಸಬಾರದು; ನಾನೇ ಕರ್ತನು.
- Jeremiah 2:20 ಯೆರೆಮೀಯ 2:20ಪೂರ್ವದಲ್ಲಿ ನಾನು ನಿನ್ನ ನೊಗವನ್ನು ಮುರಿದು ನಿನ್ನ ಬಂಧನಗಳನ್ನು ಹರಿದುಬಿಟ್ಟೆನು; ನೀನು--ನಾನು ವಿಾರುವದಿಲ್ಲ ಎಂದು ನೀನು ಹೇಳಿದಿ; ಆದರೆ ಒಂದೊಂದು ಎತ್ತರವಾದ ಗುಡ್ಡದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ನೀನು ಸೂಳೆಯಾಗಿ ಅಲೆದಾಡುತ್ತಿ.
- Jeremiah 3:13 ಯೆರೆಮೀಯ 3:13ನಿನ್ನ ದೇವರಾದ ಕರ್ತನಿಗೆ ವಿರೋಧ ವಾಗಿ ದ್ರೋಹಮಾಡಿ ಒಂದೊಂದು ಹಸಿರು ಮರದ ಕೆಳಗೆ ನಿನ್ನ ಮಾರ್ಗಗಳನ್ನು ಅನ್ಯರಿಗೆ ಚದರಿಸಿ ನನ್ನ ಶಬ್ದಕ್ಕೆ ಕಿವಿಗೊಡಲಿಲ್ಲವೆಂಬ ನಿನ್ನ ಅಕ್ರಮವನ್ನು ಮಾತ್ರ ಅರಿಕೆಮಾಡೆಂದು ಕರ್ತನು ಅನ್ನುತ್ತಾನೆ.
- Ezekiel 6:13 ಯೆಹೆಜ್ಕೇಲನು 6:13ಆಮೇಲೆ ನೀವು ಅವರಲ್ಲಿ ಹತವಾದ ಮನುಷ್ಯರು ಅವರಲ್ಲಿರುವಾಗ ಅವರ ವಿಗ್ರಹಗಳ ಮಧ್ಯದಲ್ಲಿ ಅವರ ಯಜ್ಞವೇದಿಗಳ ಸುತ್ತ ಲಾಗಿಯೂ ಎತ್ತರವಾದ ಪ್ರತಿಯೊಂದು ಗುಡ್ಡದ ಮೇಲೆಯೂ ಸಮಸ್ತ ಪರ್ವತಗಳ ತುದಿಯಲ್ಲಿಯ ಪ್ರತಿಯೊಂದು ಹಸುರಾದ ಮರದ ಕೆಳಗೂ ಪ್ರತಿ ಯೊಂದು ದಪ್ಪವಾದ ಓಕ್ ಮರದ ಕೆಳಗಡೆಯೂ ಅವರು ತಮ್ಮ ವಿಗ್ರಹಗಳಿಗೆಲ್ಲಾ ಸುವಾಸನೆಯನ್ನು ಅರ್ಪಿಸುವದರಲ್ಲಿಯೂ ನಾನೇ ಕರ್ತನೆಂದು ತಿಳಿಯು ವಿರಿಹೀಗೆ ನಾನು ನನ್ನ ಕೈಯನ್ನು ಅವರ ಮೇಲೆ ಚಾಚಿ ಅವರ ದೇಶವನ್ನು ನಾಶಮಾಡುವೆನು. ಹೌದು, ಅವರ ಎಲ್ಲಾ ನಿವಾಸಸ್ಥಳಗಳನ್ನು ದಿಬ್ಲದ ಅರಣ್ಯ ಕ್ಕಿಂತಲೂ ಹೆಚ್ಚಾಗಿ ಹಾಳುಮಾಡುವೆನು; ನಾನೇ ಕರ್ತನೆಂದು ಅವರು ತಿಳಿದುಕೊಳ್ಳುವರು.
- Psalm 106:37–38 ಕೀರ್ತನೆಗಳು 106:37–38ತಮ್ಮ ಗಂಡು ಹೆಣ್ಣು ಮಕ್ಕಳನ್ನೂ ದೆವ್ವಗಳಿಗೆ ಅರ್ಪಿಸಿದರು. ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾ ಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ; ದೇಶವನ್ನು ರಕ್ತದಿಂದ ಅಶುದ್ಧಮಾಡಿದರು.
- Deuteronomy 12:2 ಧರ್ಮೋಪದೇಶಕಾಂಡ 12:2ನೀವು ಸ್ವಾಧೀನಮಾಡಿಕೊಳ್ಳುವ ಜನಾಂಗ ಗಳು ತಮ್ಮ ದೇವರುಗಳಿಗೆ ಎತ್ತರವಾದ ಬೆಟ್ಟಗಳ ಮೇಲೆಯೂ ಗುಡ್ಡಗಳ ಮೇಲೆಯೂ ಹಸುರಾದ ಎಲ್ಲಾ ಮರಗಳ ಕೆಳಗೂ ಸೇವೆಮಾಡಿದ ಸ್ಥಳಗಳನ್ನು, ನೀವು ಪೂರ್ಣವಾಗಿ ನಾಶಮಾಡಬೇಕು.
- Ezekiel 20:26 ಯೆಹೆಜ್ಕೇಲನು 20:26ನಾನೇ ಕರ್ತನೆಂದು ಅವರು ತಿಳಿಯುವ ಹಾಗೆ ಅವರು ತಮ್ಮ ಚೊಚ್ಚಲು ಮಕ್ಕಳನ್ನು ಬೆಂಕಿಗೆ ಆಹುತಿಮಾಡಿದ್ದರಿಂದ ಅವರು ಹಾಳಾಗಿ ಬಿದ್ದಿರುವಂತೆ ನಾನು ಅವರ ಅರ್ಪಣೆಗಳನ್ನು ಅಪವಿತ್ರಪಡಿಸಿದೆನು.