Isaiah · chapter 57 · verse 6
Isaiah 57:6 in Kannada
ಹಳ್ಳದ ನುಣುಪಾದ ಕಲ್ಲುಗಳು ನಿನ್ನ ಪಾಲು, ಅವುಗಳೇ ಹೌದು, ಅವೇ ನಿನ್ನ ಪಾಲು, ಅವುಗಳಿಗೆ ನೀನು ಪಾನದ್ರವ್ಯವನ್ನು ಮತ್ತು ಆಹಾರದರ್ಪಣೆಯನ್ನು ಅರ್ಪಿಸಿದ್ದೀ, ಇವುಗಳಿಂದ ನಾನು ಆದರಣೆ ಹೊಂದ ಬೇಕೋ?
Hallada nunupaada kallugalu ninna paalu, avugale haudu, ave ninna paalu, avugalige neenu paanadravyavannu mattu aahaaradarpaneyannu arpisiddee, ivugalinda naanu aadarane honda beko?
Isaiah 57:6 in English
- King James Version (KJV)
- Among the smooth [stones] of the stream [is] thy portion; they, they [are] thy lot: even to them hast thou poured a drink offering, thou hast offered a meat offering. Should I receive comfort in these?
- World English Bible (WEB)
- Among the smooth stones of the valley is your portion. They, they are your lot. You have even poured a drink offering to them. You have offered an offering. Shall I be appeased for these things?
- American Standard Version (ASV)
- Among the smooth [stones] of the valley is thy portion; they, they are thy lot; even to them hast thou poured a drink-offering, thou hast offered an oblation. Shall I be appeased for these things?
- Bible in Basic English (BBE)
- Among the smooth stones of the valley is your heritage; they, even they, are your part: even to them have you made a drink offering and a meal offering. Is it possible for such things to be overlooked by me?
- Darby Translation (DBY)
- Among the smooth [stones] of the torrent is thy portion; they, they are thy lot: even to them hast thou poured out a drink-offering, thou hast offered an oblation. Shall I be comforted myself as to these things?
- Webster's Bible (WBS)
- Among the smooth [stones] of the stream [is] thy portion; they, they [are] thy lot: even to them hast thou poured a drink-offering, thou hast offered a meat-offering. Should I receive comfort in these?
- Young's Literal Translation (YLT)
- Among the smooth things of a brook [is] thy portion, They — they [are] thy lot, Also to them thou hast poured out an oblation, Thou hast caused a present to ascend, For these things am I comforted?
Read in context
- 4ಯಾರ ವಿಷಯದಲ್ಲಿ ಕುಚೋದ್ಯ ಮಾಡುತ್ತೀರಿ? ಯಾರ ವಿಷಯವಾಗಿ ನೀವು ಬಾಯಿ ಅಗಲ ಮಾಡಿ ನಾಲಿಗೆಯನ್ನು ಚಾಚುತ್ತೀರಿ?
- 5ಹಸಿರಾದ ಏಲಾ ಮರಗಳ ಕೆಳಗೆ ವಿಗ್ರಹಗಳಿಂದ ಮದವೇರಿಸಿ ಕೊಂಡು ಹಳ್ಳಗಳಲ್ಲಿ ಬಂಡೆಗಳ ಬಿರುಕುಗಳಲ್ಲಿ ಮಕ್ಕಳನ್ನು ಕೊಂದುಹಾಕುವ ನೀವು ದ್ರೋಹದ ಮಕ್ಕಳೂ ಸುಳ್ಳಿನ ಸಂತತಿಯೂ ಅಲ್ಲವೋ?
- 6ಹಳ್ಳದ ನುಣುಪಾದ ಕಲ್ಲುಗಳು ನಿನ್ನ ಪಾಲು, ಅವುಗಳೇ ಹೌದು, ಅವೇ ನಿನ್ನ ಪಾಲು, ಅವುಗಳಿಗೆ ನೀನು ಪಾನದ್ರವ್ಯವನ್ನು ಮತ್ತು ಆಹಾರದರ್ಪಣೆಯನ್ನು ಅರ್ಪಿಸಿದ್ದೀ, ಇವುಗಳಿಂದ ನಾನು ಆದರಣೆ ಹೊಂದ ಬೇಕೋ?
- 7ಮಹೋನ್ನತ ಪರ್ವತದಲ್ಲಿ ನೀನು ಹಾಸಿಗೆಯನ್ನು ಹಾಕಿಕೊಂಡಿದ್ದೀ. ಬಲಿ ಅರ್ಪಿಸುವ ದಕ್ಕೂ ಅಲ್ಲಿಗೆ ಏರಿದ್ದೀ.
- 8ಕದಗಳ ಮತ್ತು ನಿಲುವಿನ ಹಿಂಭಾಗದಲ್ಲಿ ನಿನ್ನ ಜ್ಞಾಪಕ ಚಿಹ್ನೆಯನ್ನು ಇಟ್ಟಿದ್ದೀ. ನನ್ನನ್ನು ಬಿಟ್ಟು ಬೇರೊಬ್ಬನಿಗೆ ನಿನ್ನನ್ನು ತೋರ್ಪಡಿಸಿ ಕೊಂಡಿದ್ದೀ; ಏರಿಹೋಗಿ ನಿನ್ನ ಮಂಚವನ್ನು ಅಗಲ ಮಾಡಿಕೊಂಡು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀ; ಅವರ ಮಂಚವನ್ನು ಕಂಡಲ್ಲಿ ಅದನ್ನು ಪ್ರೀತಿಮಾಡಿದ್ದೀ.
Cross references
- Jeremiah 3:9 ಯೆರೆಮೀಯ 3:9ಅವಳ ಸೂಳೆತನದ ಸುದ್ದಿಯಿಂದ ಅವಳು ದೇಶವನ್ನು ಅಪವಿತ್ರ ಮಾಡಿ ಕಲ್ಲುಗಳ ಸಂಗ ಡಲೂ ಮರಗಳ ಸಂಗಡಲೂ ವ್ಯಭಿಚಾರ ಮಾಡಿದಳು.
- Jeremiah 7:18 ಯೆರೆಮೀಯ 7:18ಮಕ್ಕಳು ಕಟ್ಟಿಗೆ ಕೂಡಿಸುತ್ತಾರೆ, ಅವರು ನನಗೆ ಕೋಪವೆಬ್ಬಿಸು ವದಕ್ಕಾಗಿಯೇ ತಂದೆಗಳು ಬೆಂಕಿ ಹಚ್ಚುತ್ತಾರೆ, ಹೆಂಗಸರು ಹಿಟ್ಟು ನಾದುತ್ತಾರೆ.
- Habakkuk 2:19 ಹಬಕ್ಕೂಕ 2:19ಮರಕ್ಕೆ--ಎಚ್ಚರವಾಗು; ಮೂಕವಾದ ಕಲ್ಲಿಗೆ--ಎದ್ದು ಬೋಧಿಸಲಿ ಎಂದು ಹೇಳುವವನಿಗೆ ಅಯ್ಯೋ! ಇಗೋ, ಅದು ಬಂಗಾರದಿಂದಲೂ ಬೆಳ್ಳಿಯಿಂದಲೂ ಹೊದಿಸಲ್ಪಟ್ಟಿದೆ, ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.
- Jeremiah 5:29 ಯೆರೆಮೀಯ 5:29ಇವುಗಳ ನಿಮಿತ್ತ ನಾನು ವಿಚಾರಿಸುವದಿಲ್ಲವೋ? ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ.
- Jeremiah 19:13 ಯೆರೆಮೀಯ 19:13ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ಸೈನ್ಯಕ್ಕೆಲ್ಲಾ ಧೂಪಸುಟ್ಟು ಬೇರೆ ದೇವರುಗಳಿಗೆ ಪಾನದ ಅರ್ಪಣೆ ಗಳನ್ನು ಹೊಯ್ದಿದ್ದಾರೋ ಆ ಎಲ್ಲಾ ಮನೆಗಳ ನಿಮಿತ್ತ ವಾಗಿ ಯೆರೂಸಲೇಮಿನ ಮನೆಗಳೂ ಯೆಹೂದದ ಅರಸರ ಮನೆಗಳೂ ತೋಫೆತಿನ ಸ್ಥಳದ ಹಾಗೆ ಅಶುದ್ಧವಾಗುವವು.
- Jeremiah 32:29 ಯೆರೆಮೀಯ 32:29ಈ ಪಟ್ಟಣಕ್ಕೆ ವಿರೋಧವಾಗಿ ಯುದ್ಧಮಾಡುವ ಕಸ್ದೀಯರು ಬಂದು ಈ ಪಟ್ಟಣಕ್ಕೆ ಬೆಂಕಿ ಹಚ್ಚಿ ಅದನ್ನೂ ಮತ್ತು ಯಾವ ಮನೆಗಳ ಮಾಳಿಗೆಗಳ ಮೇಲೆ ಬಾಳನಿಗೆ ಧೂಪವರ್ಪಿಸಿ ನನಗೆ ಕೋಪದ್ರೇಕ ಎಬ್ಬಿಸುವ ಹಾಗೆ ಬೇರೆ ದೇವರುಗಳಿಗೆ ಪಾನದ ಅರ್ಪಣೆಗಳನ್ನು ಹೊಯಿ ದಿದ್ದಾರೋ ಅವುಗಳನ್ನು ಸುಟ್ಟುಬಿಡುವರು.
- Jeremiah 5:9 ಯೆರೆಮೀಯ 5:9ಇವುಗಳ ನಿಮಿತ್ತ ನಾನು ವಿಚಾರಿಸುವ ದಿಲ್ಲವೋ? ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವದಿಲ್ಲವೋ? ಎಂದು ಕರ್ತನು ಅನ್ನುತ್ತಾನೆ.
- Jeremiah 9:9 ಯೆರೆಮೀಯ 9:9ಇವು ಗಳ ನಿಮಿತ್ತ ನಾನು ಅವರನ್ನು ವಿಚಾರಿಸುವದಿಲ್ಲವೋ? ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ.
- Isaiah 66:3 ಯೆಶಾಯ 66:3ಎತ್ತನ್ನು ಕೊಂದುಹಾಕುವವನು ಮನುಷ್ಯನನ್ನು ಹತ್ಯೆ ಮಾಡು ವವನ ಹಾಗಿದ್ದಾನೆ; ಕುರಿಮರಿಯನ್ನು ಬಲಿಯಾಗಿ ಕೊಡುವವನು ನಾಯಿಯ ಕುತ್ತಿಗೆಯನ್ನು ಕಡಿಯು ವವನ ಹಾಗಿದ್ದಾನೆ; ಕಾಣಿಕೆಯನ್ನು ಅರ್ಪಿಸುವವನು ಹಂದಿಯ ರಕ್ತವನ್ನು ಅರ್ಪಿಸುವವನ ಹಾಗಿದ್ದಾನೆ. ಧೂಪವನ್ನು ಸುಡುವವನು ವಿಗ್ರಹವನ್ನು ಆಶೀರ್ವದಿ ಸುವವನ ಹಾಗಿದ್ದಾನೆ. ಹೌದು, ಅವರು ಸ್ವಂತ ಮಾರ್ಗಗಳನ್ನು ಆದುಕೊಂಡಿದ್ದಾರೆ; ಅವರ ಪ್ರಾಣವು ಅವರ ಅಸಹ್ಯವಾದವುಗಳಲ್ಲಿ ಹರ್ಷಿಸುತ್ತವೆ.
- Jeremiah 44:17–25 ಯೆರೆಮೀಯ 44:17–25ಆದರೆ ಸ್ವಂತ ಬಾಯಿಂದ ಹೊರಡು ವವೆಲ್ಲವನ್ನೂ ಖಂಡಿತವಾಗಿ ಮಾಡುತ್ತೇವೆ; ಗಗನದ ಒಡತಿಗೆ ಧೂಪ ಸುಡುತ್ತೇವೆ. ಪಾನದರ್ಪಣೆಗಳನ್ನು ಅವಳಿಗೆ ಹೊಯ್ಯುತ್ತೇವೆ, ನಮ್ಮ ತಂದೆಗಳೂ ನಮ್ಮ ಅರಸರೂ ನಮ್ಮ ಪ್ರಧಾನರೂ ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಮಾಡಿದ ಪ್ರಕಾರವೇ ನಾವೂ ಮಾಡುವೆವು; ಆಗ ಆಹಾರದಿಂದ ಚೆನ್ನಾಗಿದ್ದೆವು, ಕೇಡು ನೋಡಲಿಲ್ಲ. ಆದರೆ ನಾವು ಗಗನದ ಒಡತಿಗೆ ಧೂಪ ಸುಡುವ ದನ್ನೂ ಪಾನದರ್ಪಣೆಗಳನ್ನೂ ಅವಳಿಗೆ ಹೊಯ್ಯುವ ದನ್ನೂ ಬಿಟ್ಟಂದಿನಿಂದ ನಮಗೆ ಎಲ್ಲಾ ಸಾಲದೆ ಹೋಯಿತು ಕತ್ತಿಯಿಂದಲೂ ಕ್ಷಾಮದಿಂದಲೂ ನಿರ್ಮೂಲವಾದೆವು. ಇದಲ್ಲದೆ ನಾವು ಗಗನದ ಒಡತಿಗೆ ಧೂಪಸುಟ್ಟು, ಅವಳಿಗೆ ಪಾನದರ್ಪಣೆ ಹೊಯ್ದಾಗ ನಮ್ಮ ಗಂಡಂದಿರನ್ನು ಬಿಟ್ಟು ಅವಳ ಪೂಜೆ ಗೋಸ್ಕರ ದೋಸೆಗಳನ್ನು ಮಾಡಿ ಅವಳಿಗೆ ಪಾನ ದರ್ಪಣೆಗಳನ್ನೂ ಹೊಯಿದೆವಲ್ಲವೋ? ಆಗ ಯೆರೆ ವಿಾಯನು ಗಂಡಸರಿಗೂ ಹೆಂಗಸರಿಗೂ ತನಗೆ ಉತ್ತರ ವನ್ನು ಕೊಟ್ಟಿದ್ದ ಜನರೆಲ್ಲರಿಗೂ ಹೇಳಿದ್ದೇನಂದರೆ-- ನೀವೂ ನಿಮ್ಮ ಪಿತೃಗಳೂ ನಿಮ್ಮ ಅರಸರೂ ನಿಮ್ಮ ಪ್ರಧಾನರೂ ದೇಶದ ಜನರೂ ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಸುಟ್ಟಧೂಪವನ್ನೇ ಕರ್ತನು ಜ್ಞಾಪಕ ಮಾಡಿಕೊಂಡದ್ದು ಅಲ್ಲವೋ? ಆತನ ಮನಸ್ಸಿಗೆ ಬಂದದ್ದು ಅದೇ ಅಲ್ಲವೋ? ಹೀಗೆ ನಿಮ್ಮ ಕೃತ್ಯಗಳ ಕೆಟ್ಟತನವನ್ನೂ ನೀವು ಮಾಡಿದ ಅಸಹ್ಯಗಳನ್ನೂ ಕರ್ತನು ಇನ್ನು ತಾಳಲಾರದ್ದದರಿಂದ ನಿಮ್ಮ ದೇಶವು ಈ ದಿನ ಇರುವ ಪ್ರಕಾರ ನಿವಾಸಿಗಳಿಲ್ಲದೆ ಹಾಳಾಗಿಯೂ ವಿಸ್ಮಯ ವಾಗಿಯೂ ಶಾಪವಾಗಿಯೂ ಇದೆ. ನೀವು ಧೂಪಸುಟ್ಟು ಕರ್ತನಿಗೆ ವಿರೋಧವಾಗಿ ಪಾಪ ಮಾಡಿ ಕರ್ತನ ಶಬ್ದವನ್ನು ಕೇಳದೆ ಆತನ ನ್ಯಾಯಪ್ರಮಾಣ ದಲ್ಲಾದರೂ ಆತನ ನಿಯಮಗಳಲ್ಲಾದರೂ ಆತನ ಸಾಕ್ಷಿಗಳಲ್ಲಾದರೂ ನಡೆದು ವಿಧೇಯರಾಗದೆ ಇದದರಿಂದ ಈ ಕೇಡು ಈ ದಿನ ಇರುವ ಹಾಗೆ ನಿಮಗೆ ಸಂಭವಿಸಿದೆ. ಇದಲ್ಲದೆ, ಯೆರೆವಿಾಯನು ಎಲ್ಲಾ ಜನರಿಗೂ ಹೆಂಗಸರಿಗೂ ಹೇಳಿದ್ದೇನಂದರೆ--ಐಗುಪ್ತದೇಶದ ಲ್ಲಿರುವ ಯೆಹೂದದವರೆಲ್ಲರೇ, ಕರ್ತನ ವಾಕ್ಯವನ್ನು ಕೇಳಿರಿ. ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನೀವೂ ನಿಮ್ಮ ಹೆಂಡತಿ ಯರೂ ಗಗನದ ಒಡತಿಗೆ ಧೂಪ ಸುಡುತ್ತೇವೆಂದೂ ಅವಳಿಗೆ ಪಾನದರ್ಪಣೆಗಳನ್ನು ಹೊಯ್ಯುತ್ತೇವೆಂದೂ ನಾವು ಮಾಡಿರುವ ಪ್ರಮಾಣಗಳನ್ನು ನಿಶ್ಚಯವಾಗಿ ನಡಿಸುವೆವೆಂದೂ ನಿಮ್ಮ ಬಾಯಿಗಳಿಂದ ಹೇಳಿ ಕೈಗಳಿಂದ ಈಡೇರಿಸಿದ್ದೀರಿ; ನಿಮ್ಮ ಪ್ರಮಾಣಗಳನ್ನು ನಿಶ್ಚಯವಾಗಿ ಸ್ಥಾಪಿಸುವಿರಿ, ನಿಮ್ಮ ಪ್ರಮಾಣಗಳನ್ನು ನಿಶ್ಚಯವಾಗಿ ನಡಿಸುವಿರಿ.
- Deuteronomy 32:37–38 ಧರ್ಮೋಪದೇಶಕಾಂಡ 32:37–38ಆಗ ಅವನು ಹೇಳುವದೇನಂದರೆ--ಅವರ ದೇವರುಗಳು ಎಲ್ಲಿ? ಅವರು ನಂಬಿಕೊಂಡಂಥ, ಅವರ ಬಲಿಗಳ ಕೊಬ್ಬನ್ನು ತಿಂದಂಥ, ಅವರ ಪಾನದ ಅರ್ಪಣೆಗಳ ದ್ರಾಕ್ಷಾರಸ ಕುಡಿದಂಥ ಅವರ ಬಂಡೆಯು ಎಲ್ಲಿ? ಅವರು ಎದ್ದು ನಿಮಗೆ ಸಹಾಯ ಮಾಡಲಿ; ನಿಮಗೋಸ್ಕರ ಕಾವಲಾಗಲಿ.
- Isaiah 65:11 ಯೆಶಾಯ 65:11ಆದರೆ ಕರ್ತನನ್ನು ಬಿಟ್ಟವರೇ, ನೀವು ನನ್ನ ಪರಿ ಶುದ್ಧ ಪರ್ವತವನ್ನು ಮರೆತವರೇ, ಸೈನ್ಯಕ್ಕೆ ಮೇಜನ್ನು ಸಿದ್ಧಮಾಡಿ ಅವರಿಗೆ ಪಾನದರ್ಪಣೆ ಮಾಡುವವರೇ ಆಗಿದ್ದೀರಿ.