Isaiah · chapter 9 · verse 12
Isaiah 9:12 in Kannada
ಅವರು ಇಸ್ರಾಯೇಲನ್ನು ತೆರೆದ ಬಾಯಿಂದ ನುಂಗಿ ಬಿಡುವರು; ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
Avaru israayelannu tereda baayinda nungi biduvaru; ishtaadaroo aatana kopavu teerade aatana kai innoo chaachiye ide.
Isaiah 9:12 in English
- King James Version (KJV)
- The Syrians before, and the Philistines behind; and they shall devour Israel with open mouth. For all this his anger is not turned away, but his hand [is] stretched out still.
- World English Bible (WEB)
- The Syrians in front, and the Philistines behind; and they will devour Israel with open mouth. For all this, his anger is not turned away, but his hand is stretched out still.
- American Standard Version (ASV)
- the Syrians before, and the Philistines behind; and they shall devour Israel with open mouth. For all this his anger is not turned away, but his hand is stretched out still.
- Bible in Basic English (BBE)
- Aram on the east, and the Philistines on the west, who have come against Israel with open mouths. For all this his wrath is not turned away, but his hand is stretched out still.
- Darby Translation (DBY)
- the Syrians on the east, and the Philistines on the west; and they shall devour Israel with open mouth. For all this his anger is not turned away, and his hand is stretched out still.
- Webster's Bible (WBS)
- The Syrians before, and the Philistines behind; and they shall devour Israel with open mouth. For all this his anger is not turned away, but his hand [is] stretched out still.
- Young's Literal Translation (YLT)
- Aram from before, and Philistia from behind, And they devour Israel with the whole mouth. With all this not turned back hath His anger, And still His hand is stretched out.
Read in context
- 10ಅತ್ತಿಮರಗಳು ಕಡಿಯಲ್ಪಟ್ಟರೂ ದೇವದಾರುಗಳನ್ನು ಹಾಕುವೆವು ಎಂದು ಹೃದಯದ ಗರ್ವದಿಂದಲೂ ಕೆಚ್ಚೆದೆಯಿಂದಲೂ ಹೇಳಿಕೊಳ್ಳುವ ಎಲ್ಲಾ ಜನರಿಗೂ ಎಫ್ರಾಯಾಮ್ಯ ರಿಗೂ ಸಮಾರ್ಯದ ನಿವಾಸಿಗಳೆಲ್ಲರಿಗೂ ಆ ಮಾತು ಗೊತ್ತಾಗುವದು.
- 11ಹೀಗಿರುವದರಿಂದ ಕರ್ತನು ರೆಚೀ ನನ ವೈರಿಗಳನ್ನು ಅವನಿಗೆ ವಿರೋಧವಾಗಿ ಎಬ್ಬಿಸಿ ಅವನ ಶತ್ರುಗಳಾದ ಸಿರಿಯಾದವರನ್ನು ಮುಂದೆಯೂ ಫಿಲಿಷ್ಟಿಯರನ್ನು ಹಿಂದೆಯೂ ಒಟ್ಟುಗೂಡಿಸುವನು.
- 12ಅವರು ಇಸ್ರಾಯೇಲನ್ನು ತೆರೆದ ಬಾಯಿಂದ ನುಂಗಿ ಬಿಡುವರು; ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
- 13ಹೀಗಿದ್ದಾಗ್ಯೂ ಆ ಜನರು ತಮ್ಮನ್ನು ಹೊಡೆ ದಾತನ ಕಡೆಗೆ ತಿರುಗದೆಯೂ ಇಲ್ಲವೆ ಸೈನ್ಯಗಳ ಕರ್ತನನ್ನು ಹುಡುಕದೆಯೂ ಇದ್ದಾರೆ.
- 14ಆದದರಿಂದ ಕರ್ತನು ಇಸ್ರಾಯೇಲಿನಿಂದ ತಲೆಬಾಲಗಳನ್ನೂ ಕೊಂಬೆ ರೆಂಬೆಗಳನ್ನೂ ಒಂದು ದಿನದಲ್ಲಿ ಕತ್ತರಿಸಿ ಹಾಕುವನು.
Cross references
- Isaiah 5:25 ಯೆಶಾಯ 5:25ಆದಕಾರಣ ಕರ್ತನ ಕೋಪವು ಜನರಿಗೆ ವಿರೋ ಧವಾಗಿ ಉರಿಗೊಂಡು ಅವರ ಮೇಲೆ ತನ್ನ ಕೈಚಾಚಿ ಅವರನ್ನು ಹೊಡೆದಿದ್ದಾನೆ; ಗುಡ್ಡಗಳು ಕಂಪಿಸಿದವು. ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿ ರುವವು. ಇಷ್ಟೆಲ್ಲಾ ಆದರೂ ಆತನ ಕೋಪವು ಹಿಂತಿರುಗದೆ ಇನ್ನೂ ಕೈಚಾಚಿಯೇ ಇದೆ.
- 2 Chronicles 28:18 2 ಪೂರ್ವಕಾಲವೃತ್ತಾಂತ 28:18ಇದಲ್ಲದೆ ಫಿಲಿ ಷ್ಟಿಯರು ತಗ್ಗಿನ ದೇಶದ ಪಟ್ಟಣಗಳಲ್ಲಿಯೂ ಯೆಹೂ ದದ ದಕ್ಷಿಣ ಪಾರ್ಶ್ವದಲ್ಲಿಯೂ ಹೊಕ್ಕು ಬೇತ್ಷೆಮೆ ಷನ್ನೂ ಅಯ್ಯಾಲೋನನ್ನೂ ಗೆದೇರೋತನ್ನೂ ಸೋಕೋವನ್ನೂ ಅದರ ಗ್ರಾಮಗಳನ್ನೂ ತಿಮ್ನಾ ವನ್ನೂ ಅದರ ಗ್ರಾಮಗಳನ್ನೂ ಗಿಮ್ಜೋವನ್ನೂ ಅದರ ಗ್ರಾಮಗಳನ್ನೂ ತಕ್ಕೊಂಡು ಅಲ್ಲಿ ವಾಸವಾಗಿದ್ದರು.
- 2 Kings 16:6 2 ಅರಸುಗಳು 16:6ಅದೇ ವೇಳೆಯಲ್ಲಿ ಅರಾಮ್ಯರ ಅರಸನಾದ ರೆಚೀನನು ಏಲ ತನ್ನು ಅರಾಮಿಗೆ ತಿರಿಗಿ ಸೇರಿಸಿಕೊಂಡು ಏಲತಿನಿಂದ ಯೆಹೂದ್ಯರನ್ನು ಓಡಿಸಿಬಿಟ್ಟನು; ಅರಾಮ್ಯರು ಏಲತಿಗೆ ಬಂದು ಇಂದಿನವರೆಗೂ ಅಲ್ಲಿ ವಾಸ ಮಾಡುತ್ತಿದ್ದಾರೆ.
- Psalm 79:7 ಕೀರ್ತನೆಗಳು 79:7ಅವರು ಯಾಕೋಬನ್ನು ನುಂಗಿಬಿಟ್ಟಿದ್ದಾರೆ; ಅವನ ನಿವಾಸವನ್ನು ಹಾಳುಮಾಡಿದ್ದಾರೆ.
- Isaiah 10:4 ಯೆಶಾಯ 10:4ನಾನಿಲ್ಲದೆ ಕೈದಿಗಳ ಕೆಳಗೆ ಮುದುರಿಕೊಂಡು, ಹತರಾಗಿರುವವರ ಕೆಳಗೆ ಬಿದ್ದಿರುವದೇ ಇವರ ಗತಿ. ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇರುವದು.
- Isaiah 9:21 ಯೆಶಾಯ 9:21ಹೀಗೆ ಮನಸ್ಸೆಯು ಎಫ್ರಾಯಾಮನ್ನು ಮತ್ತು ಎಫ್ರಾಯಾಮು ಮನಸ್ಸೆ ಯನ್ನು ತಿಂದುಬಿಡುವವು; ಅವರು ಒಟ್ಟಾಗಿ ಸೇರಿ ಯೆಹೂದಕ್ಕೆ ವಿರೋಧವಾಗಿರುವರು. ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇರುವದು.
- Jeremiah 10:25 ಯೆರೆಮೀಯ 10:25ನಿನ್ನನ್ನು ತಿಳಿಯದ ಅನ್ಯರ ಮೇಲೆಯೂ ನಿನ್ನ ಹೆಸರನ್ನು ಕರೆಯದ ಕುಟುಂಬಗಳ ಮೇಲೆಯೂ ನಿನ್ನ ರೌದ್ರವನ್ನು ಹೊಯಿದುಬಿಡು; ಅವರು ಯಾಕೋ ಬ್ಯರನ್ನು ತಿಂದು ಬಿಟ್ಟಿದ್ದಾರೆ; ಅವರನ್ನು ನುಂಗಿ ಇಲ್ಲದಾಗಿ ಮಾಡಿ ಅವರ ನಿವಾಸವನ್ನು ಹಾಳುಮಾಡಿದ್ದಾರೆ.
- Isaiah 9:17 ಯೆಶಾಯ 9:17ಹೀಗಿರಲು ಕರ್ತನು ಅವರ ಯೌವನಸ್ಥರಲ್ಲಿ ಆನಂದಿಸುವದಿಲ್ಲ; ಅವರ ಅನಾಥರನ್ನೂ ವಿಧವೆಯರನ್ನೂ ಕರುಣಿಸುವದಿಲ್ಲ; ಪ್ರತಿಯೊಬ್ಬನು ಕಪಟಿಯೂ ಕೇಡು ಮಾಡುವವನೂ ಆಗಿದ್ದಾನೆ. ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. ಆದದರಿಂದ ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
- Jeremiah 35:11 ಯೆರೆಮೀಯ 35:11ಆದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ದೇಶದಲ್ಲಿ ಬಂದಾಗ ನಾವು--ಬನ್ನಿ, ಕಸ್ದೀಯರ ದಂಡಿಗೂ ಅರಾಮಿನ ದಂಡಿಗೂ ಎಡೆಯಾಗಿ ಯೆರೂಸ ಲೇಮಿಗೆ ಹೋಗೋಣ ಅಂದೆವು. ಹೀಗೆ ಯೆರೂಸ ಲೇಮಿನಲ್ಲಿ ವಾಸಮಾಡುತ್ತೇವೆ ಅಂದರು.
- Jeremiah 4:8 ಯೆರೆಮೀಯ 4:8ಇದಕ್ಕಾಗಿ ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಗೋಳಾಡಿರಿ; ಕರ್ತನ ಕೋಪದ ಉರಿಯು ನಮ್ಮಿಂದ ಹಿಂತಿರುಗಲಿಲ್ಲ.
- Psalm 129:3–6 ಕೀರ್ತನೆಗಳು 129:3–6ಉಳುವವರು ನನ್ನ ಬೆನ್ನಿನ ಮೇಲೆ ಉತ್ತು ತಮ್ಮ ಸಾಲುಗಳನ್ನು ಉದ್ದ ಮಾಡಿದ್ದಾರೆ. ಕರ್ತನು ನೀತಿವಂತನು; ದುಷ್ಟರ ಹಗ್ಗಗಳನ್ನು ಕೊಯಿದುಬಿಟ್ಟಿದ್ದಾನೆ. ಚೀಯೋನನ್ನು ಹಗೆಮಾಡುವವರೆಲ್ಲರು ನಾಚಿಕೆಪಟ್ಟು ಹಿಂದಿರುಗಲಿ. ಕೀಳುವದಕ್ಕಿಂತ ಮುಂಚೆ ಒಣಗಿ ಹೋಗುವ ಮಾಳಿಗೇ ಹುಲ್ಲಿನ ಹಾಗೆ ಅವರು ಇರಲಿ.
- Deuteronomy 31:17 ಧರ್ಮೋಪದೇಶಕಾಂಡ 31:17ಆ ದಿವಸದಲ್ಲಿ ನನ್ನ ಕೋಪವು ಅವರ ಮೇಲೆ ಉರಿಯು ವದು. ನಾನು ಅವರನ್ನು ಬಿಟ್ಟುಬಿಟ್ಟು ನನ್ನ ಮುಖವನ್ನು ಅವರಿಗೆ ಮರೆಮಾಡುವೆನು; (ವಿರೋಧಿಗಳು) ಅವ ರನ್ನು ನುಂಗಿ ಬಿಡುವರು; ಬಹಳ ಕೇಡುಗಳೂ ಇಕ್ಕಟ್ಟು ಗಳೂ ಅವರಿಗೆ ಸಂಭವಿಸುವವು; ಆ ದಿವಸದಲ್ಲಿ ಅವರು--ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ಈ ಕೇಡುಗಳು ನಮ್ಮನ್ನು ಹಿಡಿದವಲ್ಲಾ ಎಂದು ಹೇಳುವರು.