Jeremiah · chapter 14 · verse 8
Jeremiah 14:8 in Kannada
ಓ ಇಸ್ರಾಯೇಲಿನ ನಿರೀಕ್ಷಣೆಯೇ, ಇಕ್ಕಟ್ಟಿನ ಕಾಲದಲ್ಲಿ ಅವನನ್ನು ರಕ್ಷಿಸುವಾತನೇ, ನೀನು ಯಾಕೆ ದೇಶದಲಿ ಅನ್ಯನ ಹಾಗೆಯೂ ರಾತ್ರಿ ಕಳೆಯುವದಕ್ಕೆ ಇಳು ಕೊಳ್ಳುವ ಪ್ರಯಾಣಸ್ಥನ ಹಾಗೆಯೂ ಇರಬೇಕು?
O israayelina nireekshaneye, ikkattina kaaladalli avanannu rakshisuvaatane, neenu yaake deshadali anyana haageyoo raatri kaleyuvadakke ilu kolluva prayaanasthana haageyoo irabeku?
Jeremiah 14:8 in English
- King James Version (KJV)
- O the hope of Israel, the saviour thereof in time of trouble, why shouldest thou be as a stranger in the land, and as a wayfaring man [that] turneth aside to tarry for a night?
- World English Bible (WEB)
- You hope of Israel, its Savior in the time of trouble, why should you be as a foreigner in the land, and as a wayfaring man who turns aside to stay for a night?
- American Standard Version (ASV)
- O thou hope of Israel, the Saviour thereof in the time of trouble, why shouldest thou be as a sojourner in the land, and as a wayfaring man that turneth aside to tarry for a night?
- Bible in Basic English (BBE)
- O you hope of Israel, its saviour in time of trouble, why are you like one who is strange in the land, and like a traveller putting up his tent for a night?
- Darby Translation (DBY)
- Thou hope of Israel, its Saviour in the time of trouble, why wilt thou be as a stranger in the land, and as a traveller that turneth aside to stay a night?
- Webster's Bible (WBS)
- O the hope of Israel, his Savior in time of trouble, why shouldst thou be as a stranger in the land, and as a way-faring man [that] turneth aside to tarry for a night?
- Young's Literal Translation (YLT)
- O Hope of Israel — its saviour in time of trouble, Why art Thou as a sojourner in the land? And as a traveller turned aside to lodge?
Read in context
- 6ಕಾಡು ಕತ್ತೆಗಳು ಉನ್ನತ ಸ್ಥಳಗಳಲ್ಲಿ ನಿಂತು ನರಿಗಳ ಹಾಗೆ ಗಾಳಿಯನ್ನು ಹೀರಿಕೊಳ್ಳುತ್ತವೆ; ಹುಲ್ಲು ಇಲ್ಲದ ಕಾರಣ ಅವುಗಳ ಕಣ್ಣುಗಳು ಕ್ಷೀಣವಾಗುತ್ತವೆ.
- 7ಓ ಕರ್ತನೇ, ನಮ್ಮ ಅಕ್ರಮಗಳು ನಮಗೆ ವಿರೋಧ ವಾಗಿ ಸಾಕ್ಷಿಕೊಟ್ಟರೂ ನೀನೇ ನಿನ್ನ ಹೆಸರಿಗೋಸ್ಕರ ನಡಿಸು; ನಮ್ಮ ಹಿಂಜರಿಯುವಿಕೆಗಳು ಅನೇಕವಾಗಿವೆ; ನಿನಗೆ ವಿರೋಧವಾಗಿ ಪಾಪಮಾಡಿದ್ದೇವೆ.
- 8ಓ ಇಸ್ರಾಯೇಲಿನ ನಿರೀಕ್ಷಣೆಯೇ, ಇಕ್ಕಟ್ಟಿನ ಕಾಲದಲ್ಲಿ ಅವನನ್ನು ರಕ್ಷಿಸುವಾತನೇ, ನೀನು ಯಾಕೆ ದೇಶದಲಿ ಅನ್ಯನ ಹಾಗೆಯೂ ರಾತ್ರಿ ಕಳೆಯುವದಕ್ಕೆ ಇಳು ಕೊಳ್ಳುವ ಪ್ರಯಾಣಸ್ಥನ ಹಾಗೆಯೂ ಇರಬೇಕು?
- 9ನೀನು ಯಾಕೆ ಗಾಬರಿಪಡುವ ಮನುಷ್ಯನ ಹಾಗೆಯೂ ರಕ್ಷಿಸಲಾರದ ಪರಾಕ್ರಮಶಾಲಿಯ ಹಾಗೆಯೂ ಇರಬೇಕು? ಆದರೂ ನೀನು, ಓ ಕರ್ತನೇ, ನಮ್ಮ ಮಧ್ಯದಲ್ಲಿ ಇದ್ದೀ, ನಿನ್ನ ಹೆಸರಿನಿಂದ ನಾವು ಕರೆಯಲ್ಪಟ್ಟಿದ್ದೇವೆ; ನಮ್ಮನ್ನು ಕೈ ಬಿಡಬೇಡ.
- 10ಕರ್ತನು ಈ ಜನರಿಗೆ ಹೀಗೆ ಹೇಳುತ್ತಾನೆ--ಹೀಗೆ ತಿರುಗಾಡುವದಕ್ಕೆ ಅವರು ಪ್ರೀತಿಮಾಡಿದ್ದಾರೆ; ತಮ್ಮ ಕಾಲುಗಳನ್ನು ಹಿಂದೆಗೆಯಲಿಲ್ಲ; ಆದದರಿಂದ ಕರ್ತನು ಅವರನ್ನು ಅಂಗೀಕರಿಸುವದಿಲ್ಲ, ಈಗಲೇ ಅವರ ಅಕ್ರಮವನ್ನು ಜ್ಞಾಪಕಮಾಡಿಕೊಳ್ಳುವನು; ಅವರ ಪಾಪಗಳನ್ನು ವಿಚಾರಿಸುವನು.
Cross references
- Jeremiah 17:13 ಯೆರೆಮೀಯ 17:13ಇಸ್ರಾಯೇಲಿನ ನಿರೀಕ್ಷೆಯಾದ ಓ ಕರ್ತನೇ, ನಿನ್ನನ್ನು ತೊರೆದು ಬಿಟ್ಟವರೆಲ್ಲರು ನಾಚಿಕೆಗೆ ಒಳಗಾಗುವರು, ಜೀವವುಳ್ಳ ನೀರಿನ ಬುಗ್ಗೆಯಾದ ಕರ್ತನಿಂದ ತೊಲಗಿ ಹೋದವರು ದೂಳಿನಲ್ಲಿ ಬರೆಯಲ್ಪಡುವರು.
- Jeremiah 50:7 ಯೆರೆಮೀಯ 50:7ಅವರನ್ನು ಕಂಡವರೆಲ್ಲರು ಅವರನ್ನು ನುಂಗಿಬಿಟ್ಟರು, ಅವರ ಎದುರಾಳಿಗಳು--ನಮ್ಮಲ್ಲಿ ಅಪರಾಧವಿಲ್ಲ; ನೀತಿಯ ನಿವಾಸವಾದ ಕರ್ತನಿಗೆ, ಅವರ ತಂದೆಗಳ ನಿರೀಕ್ಷಣೆಯಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿದ್ದಾರೆಂದು ಅಂದರು.
- Isaiah 43:3 ಯೆಶಾಯ 43:3ನಾನೇ ನಿನ್ನ ಕರ್ತನೂ ದೇವರೂ ಇಸ್ರಾಯೇಲಿನ ಪರಿಶುದ್ಧನೂ ರಕ್ಷಕನೂ ಆಗಿದ್ದೇನೆ. ಐಗುಪ್ತವನ್ನು ನಿನ್ನ ವಿಮೋಚನೆಗೂ ಇಥಿಯೋಪ್ಯ ಮತ್ತು ಸೆಬಾ ಸೀಮೆಗಳನ್ನು ನಿನಗೊಸ್ಕರ ಕೊಟ್ಟಿದ್ದೇನೆ.
- Psalm 50:15 ಕೀರ್ತನೆಗಳು 50:15ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ.
- Isaiah 43:11 ಯೆಶಾಯ 43:11ನಾನೇ, ನಾನೇ, ಕರ್ತನಾಗಿದ್ದೇನೆ, ನನ್ನ ಹೊರತು ಯಾವ ರಕ್ಷಕನೂ ಇಲ್ಲ.
- Psalm 37:39–40 ಕೀರ್ತನೆಗಳು 37:39–40ನೀತಿವಂತರ ರಕ್ಷಣೆಯು ಕರ್ತ ನಿಂದಲೇ; ಇಕ್ಕಟ್ಟಿನ ಕಾಲದಲ್ಲಿ ಅವರ ಬಲವು ಆತನೇ.ಕರ್ತನು ಅವರಿಗೆ ಸಹಾಯಮಾಡಿ ಅವರನ್ನು ತಪ್ಪಿಸುವನು; ದುಷ್ಟರಿಂದ ಅವರನ್ನು ತಪ್ಪಿಸಿ ರಕ್ಷಿಸುವನು; ಅವರು ಆತನಲ್ಲಿ ಭರವಸವಿಟ್ಟಿದ್ದಾರೆ. ಕರ್ತನು ಅವರಿಗೆ ಸಹಾಯಮಾಡಿ ಅವರನ್ನು ತಪ್ಪಿಸುವನು; ದುಷ್ಟರಿಂದ ಅವರನ್ನು ತಪ್ಪಿಸಿ ರಕ್ಷಿಸುವನು; ಅವರು ಆತನಲ್ಲಿ ಭರವಸವಿಟ್ಟಿದ್ದಾರೆ.
- Isaiah 45:21 ಯೆಶಾಯ 45:21ನೀವು ಹೇಳಿರಿ ಮತ್ತು ಅವರನ್ನು ಸವಿಾಪಕ್ಕೆ ತನ್ನಿರಿ; ಹೌದು, ಒಟ್ಟಿಗೆ ಅವರು ಆಲೋಚಿಸಲಿ; ಈ ಸಂಗತಿಗಳನ್ನು ಪುರಾತನ ಕಾಲದಿಂದಲೂ ಪ್ರಕಟಿಸಿದವರು ಯಾರು? ಆ ಕಾಲ ದಿಂದ ತಿಳಿಸಿದವನು ಯಾರು? ಕರ್ತನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲವೇ ಇಲ್ಲ, ನನ್ನ ಹೊರತಾಗಿ ನೀತಿಯುಳ್ಳ ದೇವರೂ ರಕ್ಷಕನೂ ಇಲ್ಲವೇ ಇಲ್ಲ.
- Joel 3:16 ಯೋವೇಲ 3:16ಕರ್ತನು ಚೀಯೋನಿನೊಳಗಿಂದ ಘರ್ಜಿಸಿ ಯೆರೂಸಲೇಮಿನೊಳಗಿಂದ ತನ್ನ ಶಬ್ದವನ್ನು ಕೊಡುವನು. ಆಕಾಶಗಳೂ ಭೂಮಿಯೂ ಕದಲು ವವು; ಆದರೆ ಕರ್ತನು ತನ್ನ ಜನರಿಗೆ ನಿರೀಕ್ಷೆಯೂ ಇಸ್ರಾಯೇಲನ ಮಕ್ಕಳಿಗೆ ಬಲವೂ ಆಗಿರುವನು.
- Psalm 91:15 ಕೀರ್ತನೆಗಳು 91:15ಅವನು ನನ್ನನ್ನು ಕರೆಯುವನು; ನಾನು ಅವನಿಗೆ ಉತ್ತರ ಕೊಡುವೆನು; ಇಕ್ಕಟ್ಟಿನಲ್ಲಿ ನಾನು ಅವನ ಸಂಗಡ ಇದ್ದು ಅವನನ್ನು ತಪ್ಪಿಸಿ; ಘನಪಡಿಸುವೆನು.ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು.
- 2 Corinthians 1:4–5 2 ಕೊರಿಂಥದವರಿಗೆ 1:4–5ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲಿನಮಗೆ ಸಂಭವಿಸುವ ಎಲ್ಲಾ ಸಂಕಟಗಳಲಿ ಆತನು ನಮ್ಮನ್ನು ಸಂತೈಸುತ್ತಾನೆ; ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಇರುವವರನ್ನು ಸಂತೈಸು ವದಕ್ಕೆ ಶಕ್ತರಾಗುತ್ತೇವೆ. ಕ್ರಿಸ್ತನ ನಿಮಿತ್ತ ನಮಗೆ ಬಾಧೆಗಳು ಹೇಗೆ ಹೇರಳವಾಗಿ ಉಂಟಾಗುತ್ತವೆಯೋ ಹಾಗೆಯೇ ಆದರಣೆಯೂ ಕೂಡ ಕ್ರಿಸ್ತನ ಮೂಲಕ ಹೇರಳವಾಗಿ ಉಂಟಾಗುತ್ತದೆ.
- Psalm 9:9 ಕೀರ್ತನೆಗಳು 9:9ಕರ್ತನು ಕುಗ್ಗಿದವರಿಗೆ ಆಶ್ರಯವಾಗಿರುವನು, ಇಕ್ಕಟ್ಟಿನ ಸಮಯದಲ್ಲಿ ಸಹ ಆಶ್ರಯವಾಗಿರುವನು.
- Acts 28:20 ಅಪೊಸ್ತಲರ ಕೃತ್ಯಗಳು 28:20ಈ ಕಾರಣ ದಿಂದಲೇ ನಿಮ್ಮನ್ನು ನೋಡುವದಕ್ಕೂ ನಿಮ್ಮೊಂದಿಗೆ ಮಾತನಾಡುವದಕ್ಕೂ ನಾನು ನಿಮ್ಮನ್ನು ಕರೆಯಿಸಿದೆನು; ಇಸ್ರಾಯೇಲ್ಯರ ನಿರೀಕ್ಷೆಯ ನಿಮಿತ್ತವಾಗಿ ನಾನು ಈ ಸರಪಣಿಯಿಂದ ಕಟ್ಟಲ್ಪಟ್ಟಿದ್ದೇನೆ ಎಂದು ಹೇಳಿದನು.