Psalms · chapter 115 · verse 8
Psalm 115:8 in Kannada
ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವ ರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
Avugalannu maaduvavaroo avugalalli bharavasaviduvava rellaroo avugala haageye iddaare.
Psalm 115:8 in English
- King James Version (KJV)
- They that make them are like unto them; [so is] every one that trusteth in them.
- World English Bible (WEB)
- Those who make them will be like them; yes, everyone who trusts in them.
- American Standard Version (ASV)
- They that make them shall be like unto them; Yea, every one that trusteth in them.
- Bible in Basic English (BBE)
- Those who make them are like them; and so is everyone who puts his faith in them.
- Darby Translation (DBY)
- They that make them are like unto them, — every one that confideth in them.
- Webster's Bible (WBS)
- They that make them are like them; [so is] every one that trusteth in them.
- Young's Literal Translation (YLT)
- Nor do they mutter through their throat, Like them are their makers, Every one who is trusting in them.
Read in context
- 6ಕಿವಿಗಳುಂಟು; ಕೇಳುವದಿಲ್ಲ. ಮೂಗು ಉಂಟು; ಮೂಸುವದಿಲ್ಲ.
- 7ಕೈಗಳುಂಟು; ಮುಟ್ಟುವ ದಿಲ್ಲ. ಕಾಲುಗಳುಂಟು; ನಡೆಯುವದಿಲ್ಲ. ತಮ್ಮ ಗಂಟಲಿನಿಂದ ಮಾತನಾಡುವದಿಲ್ಲ,
- 8ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವ ರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
- 9ಓ ಇಸ್ರಾಯೇಲೇ, ಕರ್ತನಲ್ಲಿ ಭರವಸವಿಡು; ಆತನೇ ಅವರ ಸಹಾಯವೂ ಗುರಾಣಿಯೂ ಆಗಿ ದ್ದಾನೆ.
- 10ಆರೋನನ ಮನೆಯವರೇ, ಕರ್ತನಲ್ಲಿ ಭರವಸವಿಡಿರಿ; ಆತನೇ ಅವರ ಸಹಾಯವೂ ಗುರಾ ಣಿಯೂ ಆಗಿದ್ದಾನೆ.
Cross references
- Psalm 135:18 ಕೀರ್ತನೆಗಳು 135:18ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸ ವಿಡುವವರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
- Jeremiah 10:8 ಯೆರೆಮೀಯ 10:8ಅವರು ಒಟ್ಟಾರೆ ಕ್ರೂರಿಗಳೂ ಮೂರ್ಖರೂ ಆಗಿದ್ದಾರೆ; ಮರವು ವ್ಯರ್ಥವಾದ ಬೋಧನೆಯಾಗಿವೆ.
- Habakkuk 2:18–19 ಹಬಕ್ಕೂಕ 2:18–19ಅದನ್ನು ಕೆತ್ತಿ ರೂಪಿಸಿದವನ ಕೆತ್ತಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ, ಅದನ್ನು ರೂಪಿಸಿದವನು ಮೂಕ ಬೊಂಬೆಗಳನ್ನು ಮಾಡಿ ಅದರಲ್ಲಿ ನಂಬಿಕೆಯಿಡು ವಂಥ, ಎರಕದ ವಿಗ್ರಹದಿಂದ ಪ್ರಯೋಜನವೇನು? ಮರಕ್ಕೆ--ಎಚ್ಚರವಾಗು; ಮೂಕವಾದ ಕಲ್ಲಿಗೆ--ಎದ್ದು ಬೋಧಿಸಲಿ ಎಂದು ಹೇಳುವವನಿಗೆ ಅಯ್ಯೋ! ಇಗೋ, ಅದು ಬಂಗಾರದಿಂದಲೂ ಬೆಳ್ಳಿಯಿಂದಲೂ ಹೊದಿಸಲ್ಪಟ್ಟಿದೆ, ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.
- Jonah 2:8 ಯೋನ 2:8ಸುಳ್ಳಾದ ವ್ಯರ್ಥತ್ವಗಳನ್ನು ಅನುಸರಿಸುವವರು ತಮ್ಮ ಸ್ವಂತ ಕರುಣೆಯನ್ನು ಮರೆತು ಬಿಡುತ್ತಾರೆ.
- Isaiah 44:9–20 ಯೆಶಾಯ 44:9–20ಕೆತ್ತಿದ ವಿಗ್ರಹವನ್ನು ಮಾಡುವವರೆಲ್ಲರೂ ವ್ಯರ್ಥ ರೇ; ಅವರ ಮನೋರಂಜಕ ವಸ್ತುಗಳು ಯಾತಕ್ಕೂ ಬಾರವು; ಅವರು ನೋಡದೆ ಇಲ್ಲವೆ ತಿಳಿಯದೆ, ನಾಚಿಕೆಗೆ ಗುರಿಯಾಗುವಂತೆ ಅವುಗಳೇ ಅವರಿಗೆ ಸ್ವಂತ ಸಾಕ್ಷಿಗಳಾಗಿರುವವು. ದೇವರನ್ನು ರೂಪಿ ಸುವವರೂ ಇಲ್ಲವೆ ಕೆತ್ತಿದ ವ್ಯರ್ಥವಾದ ವಿಗ್ರಹವನ್ನು ಎರಕ ಹೊಯ್ಯುವವರು ಯಾರು? ಇಗೋ, ಅವನ ಸಂಗಡಿಗರೆಲ್ಲಾ ನಾಚಿಕೆಗೊಳಗಾಗುವರು; ಆ ಕೆಲಸ ದವರು ಮನುಷ್ಯ ಮಾತ್ರದವರೇ; ಅವರೆಲ್ಲರೂ ಒಟ್ಟುಗೂಡಿಕೊಂಡು ನಿಂತುಕೊಳ್ಳಲಿ, ಆದರೂ ಅವರು ಭಯಪಟ್ಟು ಒಟ್ಟಿಗೆ ಲಜ್ಜೆಪಡುವರು. ಕಮ್ಮಾ ರನು ಚಿಮಟದೊಂದಿಗೆ ಬೆಂಕಿಯಲ್ಲಿ ಕೆಲಸ ಮಾಡುತ್ತಾ ಚಮಟಿಗೆಯಿಂದ ಅದನ್ನು ಬಡಿದು ರೂಪಿಸಿ ತನ್ನ ತೋಳಿನ ಬಲದಿಂದ ಕೆಲಸ ಮಾಡುತ್ತಾನೆ; ಹೌದು, ಅವನು ಹಸಿದು ಬಲಹೀನನಾಗಿದ್ದರೂ ನೀರು ಕುಡಿ ಯದೆ ದಣಿಯುತ್ತಾನೆ. ಬಡಗಿಯು ನೂಲನ್ನು ಹಿಡಿದು ಗೆರೆ ಎಳೆದು ಬಾಚಿಯಿಂದ ಸಮಮಾಡಿ, ಕೈವಾರದಿಂದ ಗುರುತಿಸಿ, ಆಮೇಲೆ ಮನುಷ್ಯನ ಆಕಾ ರಕ್ಕೆ ತಂದು ಮನೆಯಲ್ಲಿ ವಾಸಿಸ ತಕ್ಕದ್ದಾಗಲೆಂದು ಮನುಷ್ಯನ ಅಂದದಂತೆ ರೂಪಿಸುವನು. ಅರಣ್ಯದ ಮಧ್ಯದಲ್ಲಿರುವ ಮರಗಳಲ್ಲಿ ದೇವದಾರುಗಳನ್ನು ಕಡಿದು; ತುರಾಯಿ, ಅಲ್ಲೊನ್, ಮತ್ತು ಓಕ್ಮರ ಗಳನ್ನು ತನ್ನ ಬಲಕ್ಕೋಸ್ಕರ ತೆಗೆದು ಕೊಳ್ಳುವನು. ಪೀತದಾರವನ್ನು ಅವನು ನೆಡಲು ಮಳೆಯು ಅದನ್ನು ಬೆಳೆಯಿಸುವದು. ಆಗ ಅದು ಮನುಷ್ಯರು ಉರಿಸು ವದಕ್ಕಾಗುವದು; ಅದರಿಂದ ಚಳಿಕಾಯಿಸಿಕೊಳ್ಳು ವನು, ಹೌದು, ಅದನ್ನು ಬೆಂಕಿ ಹಚ್ಚಿ ರೊಟ್ಟಿ ಸುಡು ವನು; ಹೌದು, ಅವನು ಒಂದು ದೇವರನ್ನು ಮಾಡಿ ಅದಕ್ಕೆ ನಮಸ್ಕರಿಸುವನು; ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡಬಿಳುವನು. ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು; ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು; ಮಾಂಸವನ್ನು ಸುಟ್ಟು ತೃಪ್ತಿಹೊಂದುವನು; ಹೌದು, ಅವನು ಚಳಿಕಾಯಿಸಿ ಕೊಳ್ಳುತ್ತಾ--ಆಹಾ! ಬೆಂಕಿ ಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು; ಅದರಲ್ಲಿ ಉಳಿದ ಭಾಗವನ್ನು ದೇವರನ್ನಾಗಿಯೂ ಕೆತ್ತಿದ ವಿಗ್ರಹವನ್ನಾಗಿಯೂ ಮಾಡಿ ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿ--ನೀನೇ ನನ್ನ ದೇವರು, ನನ್ನನ್ನು ಕಾಪಾಡು ಎಂದು ಬೇಡಿಕೊಳ್ಳುವನು. ಅವರು ಏನೂ ತಿಳಿಯ ದವರು ಇಲ್ಲವೆ ಏನೂ ಗ್ರಹಿಸಲಾರದವರು; ಆತನು ಅವರ ಕಣ್ಣು ಕಾಣದಂತೆಯೂ ಹೃದಯಗಳು ಗ್ರಹಿಸ ದಂತೆಯೂ ಮುಚ್ಚಿ ಬಿಟ್ಟಿದ್ದಾನೆ. ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು; ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ ಮಾಂಸವನ್ನು ಸುಟ್ಟು ತಿಂದೆ ನಲ್ಲಾ; ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ, ಮರದ ತುಂಡಿಗೆ ಅಡ್ಡಬೀಳಬಹುದೋ ಅಂದುಕೊಳ್ಳು ವಷ್ಟು ಜ್ಞಾನವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆತಾರರು. ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿ ತಪ್ಪಿಸಿದ ಕಾರಣ ನನ್ನ ಬಲಗೈಯಲ್ಲಿ ಸುಳ್ಳು ಇದೆಯಲ್ಲಾ ಎಂದು ಅಂದುಕೊಳ್ಳಲೂ ತನ್ನ ಪ್ರಾಣ ವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.