Jeremiah · chapter 29 · verse 19
Jeremiah 29:19 in Kannada
ಅವರು ನನ್ನ ವಾಕ್ಯಗಳನ್ನು ಕೇಳಲಿಲ್ಲ ಎಂದು ಕರ್ತನು ಅನ್ನುತ್ತಾನೆ; ನಾನು ಅವರಿಗೆ ನನ್ನ ಸೇವಕರಾದ ಪ್ರವಾದಿಗಳನ್ನು ಬೆಳಗಿನಲ್ಲಿಯೇ ಕಳುಹಿಸಿದೆನು; ಆದರೆ ನೀವು ಕೇಳಲಿಲ್ಲವೆಂದು ಕರ್ತನು ಅನ್ನುತ್ತಾನೆ.
Avaru nanna vaakyagalannu kelalilla endu kartanu annuttaane; naanu avarige nanna sevakaraada pravaadigalannu belaginalliye kaluhisidenu; aadare neevu kelalillavendu kartanu annuttaane.
Jeremiah 29:19 in English
- King James Version (KJV)
- Because they have not hearkened to my words, saith the LORD, which I sent unto them by my servants the prophets, rising up early and sending [them;] but ye would not hear, saith the LORD.
- World English Bible (WEB)
- because they have not listened to my words,” says the LORD, “with which I sent to them my servants the prophets, rising up early and sending them; but you would not hear,” says the LORD.
- American Standard Version (ASV)
- because they have not hearkened to my words, saith Jehovah, wherewith I sent unto them my servants the prophets, rising up early and sending them; but ye would not hear, saith Jehovah.
- Bible in Basic English (BBE)
- Because they have not given ear to my words, says the Lord, when I sent to them my servants the prophets, getting up early and sending them; but you did not give ear, says the Lord.
- Darby Translation (DBY)
- because they have not hearkened to my words, saith Jehovah, wherewith I sent unto them my servants the prophets, rising early and sending; but ye have not hearkened, saith Jehovah.
- Webster's Bible (WBS)
- Because they have not hearkened to my words, saith the LORD, which I sent to them by my servants the prophets, rising early and sending [them] ; but ye would not hear, saith the LORD.
- Young's Literal Translation (YLT)
- Because that they have not hearkened unto My words — an affirmation of Jehovah — that I sent unto them by My servants the prophets, rising early and sending, and ye hearkened not — an affirmation of Jehovah.
Read in context
- 17ಸೈನ್ಯಗಳ ಕರ್ತನು ಹೇಳುವದೇನಂದರೆ-- ಇಗೋ, ನಾನು ಅವರಲ್ಲಿ ಕತ್ತಿಯನ್ನೂ ಕ್ಷಾಮವನ್ನೂ ಜಾಡ್ಯವನ್ನೂ ಕಳುಹಿಸಿ, ಅವರನ್ನು ಕೆಟ್ಟವರನ್ನಾಗಿ ಮಾಡಿ ರುವದರಿಂದ, ತಿನ್ನಕೂಡದ ಅಸಹ್ಯವಾದ ಅಂಜೂರ ಗಳ ಹಾಗೆ ಮಾಡುವೆನು.
- 18ಕತ್ತಿಯಿಂದಲೂ ಕ್ಷಾಮ ದಿಂದಲೂ ಜಾಡ್ಯದಿಂದಲೂ ಅವರನ್ನು ಹಿಂಸಿಸಿ ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಲ್ಲಿ ಶಾಪಕ್ಕೂ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ನಿಂದೆಗೂ ಗುರಿಯಾಗುವ ಹಾಗೆ ಒಪ್ಪಿಸಿಬಿಡುವೆನು.
- 19ಅವರು ನನ್ನ ವಾಕ್ಯಗಳನ್ನು ಕೇಳಲಿಲ್ಲ ಎಂದು ಕರ್ತನು ಅನ್ನುತ್ತಾನೆ; ನಾನು ಅವರಿಗೆ ನನ್ನ ಸೇವಕರಾದ ಪ್ರವಾದಿಗಳನ್ನು ಬೆಳಗಿನಲ್ಲಿಯೇ ಕಳುಹಿಸಿದೆನು; ಆದರೆ ನೀವು ಕೇಳಲಿಲ್ಲವೆಂದು ಕರ್ತನು ಅನ್ನುತ್ತಾನೆ.
- 20ಆದದ ರಿಂದ ನಾನು ಯೆರೂಸಲೇಮಿ ನಿಂದ ಬಾಬೆಲಿಗೆ ಕಳುಹಿಸಿದ ಸೆರೆಯವರೆಲ್ಲರೇ,
- 21ಕರ್ತನ ವಾಕ್ಯವನ್ನು ಕೇಳಿರಿ--ನನ್ನ ಹೆಸರಿನಲ್ಲಿ ನಿಮಗೆ ಸುಳ್ಳನ್ನು ಪ್ರವಾದಿಸುವ ಕೊಲಾಯನ ಮಗನಾದ ಅಹಾಬ ಮಾಸೇಯನ ಮಗನಾದ ಚಿದ್ಕೀಯನ ವಿಷಯವೂ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಅವರನ್ನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿ ಒಪ್ಪಿಸುತ್ತೇನೆ; ಅವನು ಅವರನ್ನು ನಿಮ್ಮ ಕಣ್ಣುಗಳ ಮುಂದೆ ಕೊಂದು ಹಾಕುವನು.
Cross references
- Jeremiah 6:19 ಯೆರೆಮೀಯ 6:19ಭೂಮಿಯೇ, ಕೇಳು, ಇಗೋ, ನಾನು ಈ ಜನರ ಮೇಲೆ ಕೇಡನ್ನು ಅಂದರೆ ಅವರ ಕಲ್ಪನೆಗಳ ಫಲವನ್ನೇ ಬರಮಾಡುತ್ತೇನೆ. ಅವರು ನನ್ನ ವಾಕ್ಯಗಳನ್ನು ಆಲೈಸದೆ ಹೋದರು, ನನ್ನ ನ್ಯಾಯಪ್ರಮಾಣವನ್ನು ತಿರಸ್ಕರಿಸಿ ದರು.
- Jeremiah 26:5 ಯೆರೆಮೀಯ 26:5ನಾನು ಬೆಳಿಗ್ಗೆ ನಿಮ್ಮ ಬಳಿಗೆ ಕಳುಹಿಸಿದಂಥ ನೀವು ಕೇಳದಂಥ ನನ್ನ ಸೇವಕರಾದ ಪ್ರವಾದಿಗಳ ವಾಕ್ಯಗಳನ್ನು ಕೇಳದೆಹೋದರೆ
- Zechariah 7:11–13 ಜೆಕರ್ಯ 7:11–13ಆದರೆ ಅವರು ಕೇಳುವದಕ್ಕೆ ನಿರಾಕರಿಸಿದರು. ಅವರು ಹೆಗಲನ್ನು ಹಿಂದೆ ಳೆದು ಕೇಳದ ಹಾಗೆ ತಮ್ಮ ಕಿವಿಗಳನ್ನು ಮಂದಮಾಡಿ ಕೊಂಡರು. ಹೌದು, ಅವರು ನ್ಯಾಯಪ್ರಮಾಣ ವನ್ನೂ ಸೈನ್ಯಗಳ ಕರ್ತನು ತನ್ನ ಆತ್ಮದ ಮುಖಾಂತರ ಪೂರ್ವದ ಪ್ರವಾದಿಗಳ ಕೈಯಿಂದ ಕಳುಹಿಸಿದ ವಾಕ್ಯ ಗಳನ್ನೂ ಕೇಳದ ಹಾಗೆ ತಮ್ಮ ಹೃದಯಗಳನ್ನು ವಜ್ರದ ಕಲ್ಲಿನಂತೆ ಮಾಡಿಕೊಂಡರು. ಆದದರಿಂದ ಸೈನ್ಯಗಳ ಕರ್ತನಿಂದ ಮಹಾರೋಷವು ಬಂತು. ಆಗ ಆದದ್ದೇ ನಂದರೆ--ಅವನು ಕೂಗಲು ಅವರು ಕೇಳದೆ ಇದ್ದ ಪ್ರಕಾರ ಅವರು ಕೂಗಲು ನಾನು ಕೇಳದೆ ಇದ್ದೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.ಇದಲ್ಲದೆ ಅವರು ಅರಿಯದ ಎಲ್ಲಾ ಜನಾಂಗಗಳೊಳಗೆ ಅವರನ್ನು ಸುಂಟರ ಗಾಳಿಯಿಂದ ಚದರಿಸಿಬಿಟ್ಟೆನು. ಹೀಗೆ ಅವರ ಹಿಂದೆ ದೇಶವು ನಾಶವಾಯಿತು; ಹಾದುಹೋಗುವವನೂ ತಿರುಗಿಕೊಳ್ಳುವವನೂ ಇಲ್ಲದೆ ಹೋದರು. ರಮ್ಯವಾದ ದೇಶವನ್ನು ಹಾಳಾಗಿ ಮಾಡಿದರು.
- Hebrews 12:25 ಇಬ್ರಿಯರಿಗೆ 12:25ನೀವು ಮಾತನಾಡು ತ್ತಿರುವಾತನನ್ನು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಯಾಕಂದರೆ ಭೂಮಿಯ ಮೇಲೆ ಮಾತನಾಡಿದವನನ್ನು ಅಸಡ್ಡೆ ಮಾಡಿದ್ದಕ್ಕೆ ಅವರು ತಪ್ಪಿಸಿಕೊಳ್ಳದಿದ್ದರೆ ಪರ ಲೋಕದಿಂದ ಮಾತನಾಡುವಾತನಿಂದ ನಾವು ತೊಲಗಿ ದರೆ ಎಷ್ಟೋ ಹೆಚ್ಚಾಗಿ ನಾವು ತಪ್ಪಿಸಿಕೊಳ್ಳಲಾರೆವು.
- Zechariah 1:4–6 ಜೆಕರ್ಯ 1:4–6ನೀವು ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ--ನಿಮ್ಮ ಕೆಟ್ಟ ಮಾರ್ಗಗಳನ್ನೂ ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ; ನನ್ನಲ್ಲಿ ಲಕ್ಷ್ಯ ವಿಡಲಿಲ್ಲವೆಂದು ಕರ್ತನು ಅನ್ನುತ್ತಾನೆ. ನಿಮ್ಮ ಪಿತೃ ಗಳೋ, ಅವರು ಎಲ್ಲಿ? ಪ್ರವಾದಿಗಳು, ಅವರು ನಿತ್ಯವಾಗಿ ಬದುಕುತ್ತಾರೋ? ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯ ಗಳೂ ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿ ಲ್ಲವೋ? ಆಗ ಅವರು ತಿರುಗಿಕೊಂಡು--ಸೈನ್ಯಗಳ ಕರ್ತನು ಯೋಚಿಸಿದ ಹಾಗೆಯೇ ನಮ್ಮ ಮಾರ್ಗಗಳ ಪ್ರಕಾರವಾಗಿಯೂ ನಮ್ಮ ಕ್ರಿಯೆಗಳ ಪ್ರಕಾರವಾ ಗಿಯೂ ನಮಗೆ ಮಾಡಿದ್ದಾನೆಂದು ಹೇಳಿದರು ಎಂಬದು.
- Jeremiah 35:14–16 ಯೆರೆಮೀಯ 35:14–16ರೇಕಾಬನ ಮಗನಾದ ಯೋನಾದಾಬನು ತನ್ನ ಕುಮಾರರಿಗೆ ಅವರು ದ್ರಾಕ್ಷಾರಸ ಕುಡಿಯದ ಹಾಗೆ ಆಜ್ಞಾಪಿಸಿದ ಮಾತುಗಳು ನಡಿಸಲ್ಪಟ್ಟಿವೆ; ಅವರು ಇಂದಿನ ವರೆಗೂ ಅದನ್ನು ಕುಡಿಯದೆ ತಮ್ಮ ತಂದೆಯ ಆಜ್ಞೆಗೆ ವಿಧೇಯರಾಗಿದ್ದಾರೆ; ಆದರೆ ನಾನು ಬೆಳಿಗ್ಗೆ ಎದ್ದು ನಿಮ್ಮ ಸಂಗಡ ಮಾತನಾಡಿದಾಗ್ಯೂ ನೀವು ನನಗೆ ಕಿವಿಗೊಡಲಿಲ್ಲ. ಬೆಳಿಗ್ಗೆ ಎದ್ದು ನನ್ನ ಸಕಲ ಸೇವಕರಾದ ಪ್ರವಾದಿಗಳನ್ನು ಸಹ ನಿಮ್ಮ ಬಳಿಗೆ ಕಳುಹಿಸಿ--ಒಬ್ಬೊಬ್ಬನು ತನ್ನ ತನ್ನ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗಿ ನಿಮ್ಮ ಕ್ರಿಯೆಗಳನ್ನು ಸರಿಮಾಡಿ ಬೇರೆ ದೇವರುಗಳನ್ನು ಸೇವಿಸದೆ ಅವುಗಳನ್ನು ಹಿಂಬಾಲಿಸದೆ ಇರ್ರಿ; ಆಗ ನಾನು ನಿಮಗೂ ನಿಮ್ಮ ತಂದೆಗಳಿಗೂ ಕೊಟ್ಟ ದೇಶದಲ್ಲಿ ವಾಸವಾಗಿರುವಿರಿ ಎಂದು ನಿಮಗೆ ಹೇಳಿಸಿದರೂ ನೀವು ಕಿವಿಗೊಡಲಿಲ್ಲ ನನ್ನ ಮಾತನ್ನೂ ಕೇಳಲಿಲ್ಲ. ಆದುದರಿಂದ ತಮ್ಮ ಪಿತೃಗಳು ತಮಗೆ ಆಜ್ಞಾಪಿಸಿದ ಆಜ್ಞೆಯನ್ನು ರೇಕಾಬಿನ ಮಗನಾದ ಯೋನಾದಾಬನ ಕುಮಾರರು ಅನುಸರಿಸಿದ್ದರಲ್ಲಿ ಈ ಜನರು ನನ್ನ ಮಾತನ್ನು ಕೇಳದೆ ಹೋದದರಿಂದಲೂ
- Jeremiah 7:24–26 ಯೆರೆಮೀಯ 7:24–26ಆದರೆ ಅವರು ಕೇಳಲಿಲ್ಲ, ಇಲ್ಲವೆ ಕಿವಿಗೊಡಲಿಲ್ಲ; ಅವರು ತಮ್ಮ ದುಷ್ಟ ಹೃದಯದ ಆಲೋಚನೆಯ ಪ್ರಕಾರವೂ ಕಲ್ಪನೆಯ ಪ್ರಕಾರವೂ ನಡಕೊಂಡು ಮುಂದಕ್ಕೆ ಅಲ್ಲ, ಹಿಂದಕ್ಕೆ ಹೋದರು. ನಿಮ್ಮ ಪಿತೃಗಳು ಐಗುಪ್ತ ದೇಶವನ್ನು ಬಿಟ್ಟು ಹೋದಂದಿನಿಂದ ಇಂದಿನ ವರೆಗೂ ನಾನು ನನ್ನ ದಾಸರಾಗಿರುವ ಸಕಲ ಪ್ರವಾದಿಗಳನ್ನು ದಿನ ದಿನವೂ ಬೆಳಿಗ್ಗೆ ಎದ್ದು ನಿಮ್ಮ ಬಳಿಗೆ ಕಳುಹಿಸಿದೆನು. ಆದಾಗ್ಯೂ ಅವರು ನನ್ನ ಮಾತನ್ನು ಕೇಳದೆ ಕಿವಿಗೊಡದೆ ತಮ ಕುತ್ತಿಗೆಯನ್ನು ಕಠಿಣಮಾಡಿಕೊಂಡು ತಮ್ಮ ಪಿತೃಗಳಿಗಿಂತ ಕೆಟ್ಟದ್ದನ್ನು ಮಾಡಿದರು.
- Jeremiah 25:3–7 ಯೆರೆಮೀಯ 25:3–7ಯೆಹೂದದ ಅರಸನಾದ ಅಮ್ಮೋನನ ಮಗನಾದ ಯೋಷೀಯನ ಹದಿಮೂರನೇ ವರುಷ ಮೊದಲ್ಗೊಂಡು ಇಂದಿನ ವರೆಗೂ ಈ ಇಪ್ಪತ್ತು ಮೂರು ವರುಷ ಕರ್ತನ ವಾಕ್ಯವು ನನಗೆ ಉಂಟಾಗಿ ನಾನು ಅದನ್ನು ನಿಮಗೆ ಹೇಳಿದ್ದೇನೆ, ಬೆಳಿಗ್ಗೆ ಎದ್ದು ಹೇಳಿದ್ದೇನೆ; ಆದರೆ ನೀವು ಕೇಳಲಿಲ್ಲ. ಇದಲ್ಲದೆ ಕರ್ತನು ತನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ಕಳುಹಿಸಿದ್ದಾನೆ, ಬೆಳಿಗ್ಗೆ ಎದ್ದು ಕಳುಹಿಸಿದ್ದಾನೆ; ಆದರೆ ನೀವು ಕೇಳಲಿಲ್ಲ, ಕೇಳು ವದಕ್ಕೆ ನಿಮ್ಮ ಕಿವಿಗೊಡಲಿಲ್ಲ. ಅವರು ಹೇಳಿದ್ದೇ ನಂದರೆ--ನಿಮ್ಮ ನಿಮ್ಮ ಕೆಟ್ಟ ಮಾರ್ಗವನ್ನು ನಿಮ್ಮ ಕೆಟ್ಟ ದೃಶ್ಯಗಳ ಕೆಟ್ಟತನವನ್ನೂ ಬಿಟ್ಟು ಮತ್ತೆ ತಿರುಗಿಕೊಳ್ಳಿರಿ. ಆಗ ಕರ್ತನು ನಿಮಗೂ ನಿಮ್ಮ ತಂದೆಗಳಿಗೂ ಕೊಟ್ಟ ದೇಶದಲ್ಲಿ ಎಂದೆಂದಿಗೂ ವಾಸಿಸುವಿರಿ. ಬೇರೆ ದೇವರುಗಳನ್ನು ಸೇವಿಸುವದಕ್ಕೂ ಆರಾಧಿಸುವದಕ್ಕೂ ಹಿಂಬಾಲಿಸಬೇಡಿರಿ; ನಿಮ್ಮ ಕೈ ಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸಬೇಡಿರಿ; ಆಗ ನಿಮಗೆ ಯಾವ ಕೇಡೂ ಮಾಡೆನು. ಆದಾಗ್ಯೂ ನೀವು ನನಗೆ ಕಿವಿಗೊಡದೆ ನಿಮಗೆ ಕೇಡು ಬರುವ ಹಾಗೆ ನಿಮ್ಮ ಕೈ ಕೆಲಸಗಳಿಂದ ನನಗೆ ಕೋಪವನ್ನೆಬ್ಬಿಸಿದ್ದೀರಿ ಎಂದು ಕರ್ತನು ಅನ್ನುತ್ತಾನೆ.
- Jeremiah 7:13 ಯೆರೆಮೀಯ 7:13ಈಗ ಕರ್ತನು ಅನ್ನುವದೇನಂದರೆ--ನೀವು ಈ ಕೆಲಸಗಳ ನ್ನೆಲ್ಲಾ ಮಾಡಿದ್ದರಿಂದ ನಾನು ಬೆಳಿಗ್ಗೆ ಎದ್ದು ನಿಮ್ಮ ಸಂಗಡ ಮಾತಾಡಿದರೂ ನೀವು ಕೇಳದೆ ಹೋದಿರಿ. ನಾನು ನಿಮ್ಮನ್ನು ಕರೆದರೂ ನೀವು ಉತ್ತರ ಕೊಡದೆ ಹೋದಿರಿ.
- Jeremiah 34:17 ಯೆರೆಮೀಯ 34:17ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಪ್ರತಿಯೊಬ್ಬನು ತನ್ನ ಸಹೋದರನಿಗೂ ಪ್ರತಿ ಮನುಷ್ಯನು ತನ್ನ ನೆರೆಯವನಿಗೂ ಬಿಡುಗಡೆಯನ್ನು ಸಾರುವದರಲ್ಲಿ ನೀವು ನನಗೆ ಕಿವಿಗೊಡಲಿಲ್ಲ. ಇಗೋ, ನಾನು ಕತ್ತಿ, ಬರ, ಜಾಡ್ಯ ಇವುಗಳಿಗಾಗಿ ನಿಮಗೆ ಬಿಡುಗಡೆಯನ್ನು ಸಾರುತ್ತೇನೆ ಎಂದು ಕರ್ತನು ಹೇಳುತ್ತಾನೆ. ಭೂಮಿಯ ಎಲ್ಲಾ ರಾಜ್ಯಗಳಿಗೆ ನಿಮ್ಮನ್ನು ತೆಗೆದು ಹಾಕುವಂತೆ ಮಾಡುವೆನು.
- Jeremiah 32:33 ಯೆರೆಮೀಯ 32:33ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ; ಆದರೂ ನಾನು ಅವರಿಗೆ ಬೋಧಿಸಿದೆನು. ಬೆಳಿಗ್ಗೆ ಎದ್ದು ಬೋಧಿಸಿದೆನು, ಆದಾಗ್ಯೂ ಉಪದೇಶ ಹೊಂದುವದಕ್ಕೆ ಅವರು ಕಿವಿ ಗೊಡಲಿಲ್ಲ.
- Jeremiah 44:4–5 ಯೆರೆಮೀಯ 44:4–5ಆದಾಗ್ಯೂ ನಾನು ನಿಮ್ಮ ಬಳಿಗೆ ನನ್ನ ಸೇವಕರಾದ ಪ್ರವಾದಿಗಳೆಲ್ಲರನ್ನು ಬೆಳಿಗ್ಗೆ ಎದ್ದು ಕಳುಹಿಸಿ--ಓ, ನಾನು ಹಗೆಮಾಡುವ ಈ ಅಸಹ್ಯವಾದ ಕಾರ್ಯವನ್ನು ಮಾಡಲೇ ಬೇಡಿರೆಂದು ಹೇಳಿದೆನು. ಆದರೆ ಅವರು ಕೇಳಲಿಲ್ಲ; ತಮ್ಮ ಕೆಟ್ಟತನದಿಂದ ತಿರುಗದೆಯೂ, ಬೇರೆ ದೇವರುಗಳಿಗೆ ಧೂಪಸುಡು ವದನ್ನು ಬಿಡದೆಯೂ ಇದ್ದರು; ನನ್ನ ಮಾತಿಗೆ ಕಿವಿ ಗೊಡಲಿಲ್ಲ.