Jeremiah · chapter 30 · verse 5
Jeremiah 30:5 in Kannada
ಕರ್ತನು ಹೀಗೆ ಹೇಳುತ್ತಾನೆ--ನಾವು ನಡುಗುವಿಕೆಯ ಮತ್ತು ಭಯದ ಸ್ವರವನ್ನು ಕೇಳಿದ್ದೇವೆಯೇ ಹೊರತು ಸಮಾಧಾನದ್ದಲ್ಲ.
Kartanu heege heluttaane--naavu naduguvikeya mattu bhayada svaravannu keliddeveye horatu samaadhaanaddalla.
Jeremiah 30:5 in English
- King James Version (KJV)
- For thus saith the LORD; We have heard a voice of trembling, of fear, and not of peace.
- World English Bible (WEB)
- For the LORD says: “We have heard a voice of trembling; a voice of fear, and not of peace.
- American Standard Version (ASV)
- For thus saith Jehovah: We have heard a voice of trembling, of fear, and not of peace.
- Bible in Basic English (BBE)
- This is what the Lord has said: A voice of shaking fear has come to our ears, of fear and not of peace.
- Darby Translation (DBY)
- for thus saith Jehovah: We have heard a voice of trembling, there is fear, and no peace.
- Webster's Bible (WBS)
- For thus saith the LORD; We have heard a voice of trembling, of fear, and not of peace.
- Young's Literal Translation (YLT)
- Surely thus said Jehovah: A voice of trembling we have heard, Fear — and there is no peace.
Read in context
- 3ಇಗೋ, ದಿನಗಳು ಬರುವವೆಂದು ಕರ್ತನು ಅನ್ನು ತ್ತಾನೆ; ಆಗ ನಾನು ನನ್ನ ಜನರಾದ ಇಸ್ರಾಯೇಲ್ ಮತ್ತು ಯೆಹೂದದ ಸೆರೆಯವರನ್ನು ತಿರುಗಿ ಬರ ಮಾಡುತ್ತೇನೆ; ಆಗ ನಾನು ಅವರ ತಂದೆಗಳಿಗೆ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡುತ್ತೇನೆ; ಅವರು ಅದನ್ನು ಸ್ವಾಧೀನ ಮಾಡಿಕೊಳ್ಳುವರು.
- 4ಕರ್ತನು ಇಸ್ರಾಯೇಲನ್ನೂ ಯೆಹೂದವನ್ನೂ ಕುರಿತು ಹೇಳಿದ ವಾಕ್ಯಗಳು ಇವೇ--
- 5ಕರ್ತನು ಹೀಗೆ ಹೇಳುತ್ತಾನೆ--ನಾವು ನಡುಗುವಿಕೆಯ ಮತ್ತು ಭಯದ ಸ್ವರವನ್ನು ಕೇಳಿದ್ದೇವೆಯೇ ಹೊರತು ಸಮಾಧಾನದ್ದಲ್ಲ.
- 6ಈಗ ವಿಚಾರಿಸಿ ನೋಡಿರಿ; ಗಂಡಸು ಪ್ರಸವವೇದನೆ ಪಡುವದುಂಟೇ? ನಾನು ಯಾಕೆ ಪುರುಷರೆಲ್ಲರನು ಪ್ರಸವವೇದನೆ ಪಡುವ ಸ್ತ್ರೀಯ ಹಾಗೆ ನಡುವಿನ ಮೇಲೆ ಕೈ ಇಟ್ಟವರ ಹಾಗೆ ನೋಡುತ್ತೇನೆ; ಯಾಕೆ ಮುಖಗಳೆಲ್ಲಾ ಕಳೆಗುಂದಿದವು?
- 7ಅಯ್ಯೋ, ಆ ದಿನವು ಭಯಂಕರವಾದದ್ದು; ಅದರಂಥದ್ದು ಯಾವದೂ ಇಲ್ಲ; ಅದು ಯಾಕೋಬನಿಗೆ ಇಕ್ಕಟ್ಟಿನ ಕಾಲವೇ; ಆದಾಗ್ಯೂ ಅವನು ಅದರಿಂದ ರಕ್ಷಿಸಲ್ಪಡುವನು.
Cross references
- Amos 8:10 ಆಮೋಸ 8:10ನಿಮ್ಮ ಹಬ್ಬಗಳನ್ನು ದುಃಖಕ್ಕೂ ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು; ಎಲ್ಲರೂ ಸೊಂಟಗಳಿಗೆ ಗೋಣೀತಟ್ಟನ್ನು ಕಟ್ಟಿಕೊಂಡು ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು; ಅದನ್ನು ಒಬ್ಬನೇ ಮಗನಿಗಾಗಿ ದುಃಖಿಸುವಂತೆಯೂ ಅದರ ಅಂತ್ಯವು ಕಹಿಯಾದ ದಿನವಾಗುವಂತೆಯೂ ಮಾಡುವೆನು.
- Luke 19:41–44 ಲೂಕನು 19:41–44ತರುವಾಯ ಆತನು ಸವಿಾಪಿಸಿದಾಗ ಪಟ್ಟಣ ವನ್ನು ನೋಡಿ ಅದರ ವಿಷಯವಾಗಿ ಅತ್ತು-- ನೀನು ಈ ನಿನ್ನ ದಿನದಲ್ಲಿಯಾದರೂ ನಿನ್ನ ಸಮಾ ಧಾನಕ್ಕೆ ಸಂಬಂಧಪಟ್ಟವುಗಳನ್ನು ತಿಳಿದುಕೊಳ್ಳಬೇಕಾ ಗಿತ್ತು; ಆದರೆ ಈಗ ಅವುಗಳು ನಿನ್ನ ಕಣ್ಣುಗಳಿಗೆ ಮರೆಯಾಗಿವೆ. ಯಾಕಂದರೆ ನಿನ್ನ ಶತೃಗಳು ನಿನ್ನ ಸುತ್ತಲೂ ಕಂದಕವನ್ನು ತೋಡಿ ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಒಳಗೆ ಇರಿಸುವ ದಿನಗಳು ನಿನ್ನ ಮೇಲೆ ಬರುವವು. ಇದಲ್ಲದೆ ಅವರು ನಿನ್ನನ್ನೂ ನಿನ್ನೊಳ ಗಿರುವ ನಿನ್ನ ಮಕ್ಕಳನ್ನೂ ನೆಲಸಮ ಮಾಡುವರು; ಮತ್ತು ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಇರದಂತೆ ಮಾಡುವರು; ಯಾಕಂದರೆ ನಿನ್ನನ್ನು ಸಂಧಿಸಿದ ಸಮಯವನ್ನು ನೀನು ತಿಳುಕೊಳ್ಳಲಿಲ್ಲ ಅಂದನು.
- Isaiah 5:30 ಯೆಶಾಯ 5:30ಆ ದಿನದಲ್ಲಿ ಅವರು ಸಮುದ್ರವು ಬೋರ್ಗರೆಯುವಂತೆ ಅವರ ಮೇಲೆ ಘರ್ಜಿಸುವರು; ಭೂಮಿಯನ್ನು ದೃಷ್ಟಿ ಸಿದರೆ ಅಂಧಕಾರವನ್ನೂ ದುಃಖವನ್ನೂ ನೋಡುವಿ. ಆಕಾಶಮಂಡಲದಲ್ಲಿ ಬೆಳಕು ಕತ್ತಲಾಗುವದು.
- Zephaniah 1:10–11 ಚೆಫನ್ಯ 1:10–11ಆ ದಿನದಲ್ಲಿ ಆಗುವದೇನಂದರೆ--ವಿಾನುಬಾಗಲಿಂದ ಕೂಗಿನ ಶಬ್ದವೂ ಮತ್ತೊಂದ ರಿಂದ ಗೋಳಾಟವೂ ಗುಡ್ಡಗಳ ಕಡೆಯಿಂದ ದೊಡ್ಡ ಮುರಿಯೋಣವೂ ಇರುವದು. ಮಕ್ತೇಷಿನ ನಿವಾಸಿ ಗಳೇ, ಗೋಳಾಡಿರಿ; ವರ್ತಕರ ಜನರೆಲ್ಲಾ ಸಂಹಾರ ವಾದರು; ಬೆಳ್ಳಿ ಹೊತ್ತವರೆಲ್ಲರೂ ಕಡಿದುಬಿಡಲ್ಪಟ್ಟಿ ದ್ದಾರೆ.
- Luke 23:29–30 ಲೂಕನು 23:29–30ಯಾಕಂದರೆ--ಇಗೋ, ಬಂಜೆಯರೂ ಎಂದಿಗೂ ಗರ್ಭಿಣಿಯಾಗದವರೂ ಎಂದಿಗೂ ಮೊಲೆ ಕುಡಿಸದವರೂ ಧನ್ಯರು ಎಂದು ಹೇಳುವ ದಿವಸಗಳು ಬರುತ್ತವೆ. ಆಗ ಅವರು ಬೆಟ್ಟಗಳಿಗೆ--ನಮ್ಮ ಮೇಲೆ ಬೀಳಿರಿ; ಗುಡ್ಡಗಳಿಗೆ-- ನಮ್ಮನ್ನು ಮುಚ್ಚಿಕೊಳ್ಳಿರಿ ಎಂದು ಹೇಳಲಾರಂಭಿಸು ವರು.
- Jeremiah 4:15–20 ಯೆರೆಮೀಯ 4:15–20ಒಂದು ಶಬ್ದವು ದಾನಿನಿಂದ ಪ್ರಕಟ ಮಾಡುತ್ತದೆ; ಎಫ್ರಾಯಾಮಿನ ಬೆಟ್ಟದಿಂದ ಆಪತ್ತನ್ನು ತಿಳಿಯಪಡಿಸುತ್ತದೆ. ಜನಾಂಗಗಳಿಗೆ ತಿಳಿಸಿರಿ. ಇಗೋ, ಯೆರೂಸಲೇಮಿಗೆ ವಿರೋಧವಾಗಿ ತಿಳಿಯ ಪಡಿಸಿರಿ; ಏನಂದರೆ ಮುತ್ತಿಗೆ ಹಾಕುವವರು ದೂರ ದೇಶದಿಂದ ಬರುತ್ತಾರೆ, ಯೆಹೂದದ ಪಟ್ಟಣಗಳಿಗೆ ವಿರೋಧವಾಗಿ ತಮ್ಮ ಸ್ವರವನ್ನೆತ್ತುತ್ತಾರೆ. ಹೊಲ ಕಾಯುವವರಂತೆ ಸುತ್ತಲಾಗಿ ಅವಳಿಗೆ ವಿರೋಧವಾಗಿ ದ್ದಾರೆ; ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾಳೆಂದು ಕರ್ತನು ಅನ್ನುತ್ತಾನೆ. ನಿನ್ನ ಮಾರ್ಗಗಳು ನಿನ್ನ ಕ್ರಿಯೆಗಳು ಇವುಗಳನ್ನು ನಿನಗೆ ಉಂಟುಮಾಡಿದವು, ಇದು ನಿನ್ನ ಕೆಟ್ಟತನವೇ; ಅದು ಕಹಿಯಾದದ್ದಲ್ಲವೋ? ನಿನ್ನ ಹೃದಯಕ್ಕೆ ತಾಕುತ್ತದ್ದಲ್ಲವೋ? ನನ್ನ ಕರುಳುಗಳು, ನನ್ನ ಕರುಳುಗಳು! ನನ್ನ ಹೃದಯದಲ್ಲಿಯೇ ನೊಂದುಕೊಂಡಿದ್ದೇನೆ; ನನ್ನ ಹೃದ ಯವು ನನ್ನಲ್ಲಿ ಕೂಗುತ್ತದೆ, ಮೌನವಾಗಿರಲಾರೆನು; ಓ ನನ್ನ ಪ್ರಾಣವೇ, ತುತೂರಿಯ ಶಬ್ದವನ್ನೂ ಯುದ್ಧದ ಆರ್ಭಟವನ್ನೂ ನೀನು ಕೇಳಿದ್ದೀ. ನಾಶ ನದ ಮೇಲೆ ನಾಶನವು ಕೂಗಲ್ಪಟ್ಟಿದೆ, ದೇಶವೆಲ್ಲಾ ಹಾಳಾಯಿತು; ಫಕ್ಕನೆ ನನ್ನ ಗುಡಾರಗಳೂ ಕ್ಷಣ ಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.
- Jeremiah 46:5 ಯೆರೆಮೀಯ 46:5ಅವರು ದಿಗಿಲುಪಟ್ಟು ಹಿಂತಿರುಗಿದ್ದನ್ನು ನಾನು ಕಂಡದ್ದೇನು? ಅವರ ಪರಾಕ್ರಮಶಾಲಿಗಳು ಬಡಿಯಲ್ಪಟ್ಟಿದ್ದಾರೆ; ಹಿಂದೆ ನೋಡದೆ ಓಡಿಹೋಗು ತ್ತಾರೆ; ಸುತ್ತಲು ಅಂಜಿಕೆ ಇದೆ ಎಂದು ಕರ್ತನು ಅನ್ನುತ್ತಾನೆ.
- Jeremiah 8:19 ಯೆರೆಮೀಯ 8:19ಏನಂ ದರೆ--ಕರ್ತನು ಚೀಯೋನಿನಲ್ಲಿ ಇಲ್ಲವೋ? ಅವಳ ಅರಸನು ಅವಳಲ್ಲಿ ಇಲ್ಲವೋ ಎಂಬದು. ಅವರು ತಮ್ಮ ವಿಗ್ರಹಗಳಿಂದಲೂ ವಿಚಿತ್ರವಾದ ವ್ಯರ್ಥತ್ವ ಗಳಿಂದಲೂ ನನಗೆ ಕೋಪವನ್ನೆಬ್ಬಿಸಿದ್ದು ಯಾಕೆ?
- Isaiah 59:11 ಯೆಶಾಯ 59:11ನಾವೆಲ್ಲರೂ ಕರಡಿಗಳ ಹಾಗೆ ಗುರುಗುಟ್ಟುತ್ತೇವೆ; ಪಾರಿವಾಳಗಳ ಹಾಗೆ ಬಹಳವಾಗಿ ಮೂಲ್ಗುತ್ತೇವೆ; ನ್ಯಾಯಕ್ಕಾಗಿ ಕಾದುಕೊಳ್ಳುತ್ತೇವೆ, ಆದರೆ ಅದು ಇಲ್ಲವೇ ಇಲ್ಲ; ರಕ್ಷಣೆಯಾದರೋ ಅದು ನಮಗೆ ದೂರವಾಗಿದೆ.
- Jeremiah 25:36 ಯೆರೆಮೀಯ 25:36ಕುರುಬರ ಕೂಗಿನ ಶಬ್ದವೂ ಮಂದೆಯ ಗೋಳಾಡುವಿಕೆಯೂ ಪ್ರಮುಖರಿಗೆ ಕೇಳ ಲ್ಪಡುವದು.
- Jeremiah 6:23–25 ಯೆರೆಮೀಯ 6:23–25ಅವರು ಬಿಲ್ಲನ್ನೂ ಬಲ್ಲೆಯನ್ನೂ ಹಿಡಿದ ಕ್ರೂರಿಗಳಾಗಿದ್ದಾರೆ, ಕನಿಕರ ತೋರಿಸುವದಿಲ್ಲ; ಅವರ ಶಬ್ದವು ಸಮುದ್ರದ ಹಾಗೆ ಘೋಷಿಸುತ್ತದೆ; ಕುದುರೆ ಗಳ ಮೇಲೆ ಸವಾರಿ ಮಾಡುತ್ತಾರೆ; ಚೀಯೋನಿನ ಕುಮಾರಿಯೇ, ನಿನಗೆ ವಿರೋಧವಾಗಿ ಯುದ್ದ ಮಾಡುವ ಮನುಷ್ಯರಂತೆ ಸಿದ್ಧಮಾಡಿಕೊಂಡಿದ್ದಾರೆ; ಅದರ ಕೀರ್ತಿಯನ್ನು ಕೇಳಿದ್ದೇವೆ, ನಮ್ಮ ಕೈಗಳು ಜೋಲಾ ಡುತ್ತವೆ; ಸಂಕಟವೂ ಹೆರುವವಳಂತಿರುವ ನೋವೂ ನಮ್ಮನ್ನು ಹಿಡಿಯಿತು. ಹೊಲಕ್ಕೆ ಹೊರಡಬೇಡ; ದಾರಿಯಲ್ಲಿ ನಡೆಯಬೇಡ; ಯಾಕಂದರೆ ಶತ್ರುವಿನ ಕತ್ತಿಯೂ ಅಂಜಿಕೆಯೂ ಸುತ್ತಲು ಆವೆ.
- Jeremiah 9:19 ಯೆರೆಮೀಯ 9:19ನಾವು ಹೇಗೆ ಹಾಳಾದೆವು, ನಾವು ದೇಶವನ್ನು ಬಿಟ್ಟದ್ದರಿಂದಲೂ ನಮ್ಮ ನಿವಾಸಗಳು ನಮ್ಮನ್ನು ಹೊರಗೆ ಹಾಕಿದ್ದರಿಂದಲೂ ಬಹಳವಾಗಿ ನಾಚಿಕೆಪಡುತ್ತೇವೆ ಎಂಬ ಗೋಳಾಟದ ಶಬ್ದವು ಚೀಯೋನಿನಿಂದ ಕೇಳಿ ಬಂತು.