Jeremiah · chapter 49 · verse 4
Jeremiah 49:4 in Kannada
ಹಿಂತಿರುಗು, ಹಿಂಜರಿದು ಹೋದ ಮಗಳೇ, ನನ್ನ ಬಳಿಗೆ ಬರುವವರು ಯಾರೆಂದು ಹೇಳಿ ನಿನ್ನ ಬೊಕ್ಕಸ ಗಳಲ್ಲಿ ನಂಬಿಕೆ ಇಟ್ಟವಳೇ, ನಿನ್ನ ತಗ್ಗು ಹರಿದು ಹೋಗುತ್ತದಲ್ಲಾ? ತಗ್ಗುಗಳ ವಿಷಯ ಯಾಕೆ ಹೆಚ್ಚಳ ಪಡುತ್ತೀ?
Hintirugu, hinjaridu hoda magale, nanna balige baruvavaru yaarendu heli ninna bokkasa galalli nambike ittavale, ninna taggu haridu hoguttadallaa? Taggugala vishaya yaake hechchala paduttee?
Jeremiah 49:4 in English
- King James Version (KJV)
- Wherefore gloriest thou in the valleys, thy flowing valley, O backsliding daughter? that trusted in her treasures, [saying], Who shall come unto me?
- World English Bible (WEB)
- Why do you boast in the valleys, your flowing valley, backsliding daughter? You trusted in her treasures, saying, ‘Who will come to me?’
- American Standard Version (ASV)
- Wherefore gloriest thou in the valleys, thy flowing valley, O backsliding daughter? that trusted in her treasures, [saying], Who shall come unto me?
- Bible in Basic English (BBE)
- Why are you lifted up in pride on account of your valleys, your flowing valley, O daughter ever turning away? who puts her faith in her wealth, saying, Who will come against me?
- Darby Translation (DBY)
- Wherefore gloriest thou in the valleys? Thy valley shall flow down, O backsliding daughter, that trusteth in her treasures, [saying,] Who shall come against me?
- Webster's Bible (WBS)
- Why gloriest thou in the valleys, thy flowing valley, O backsliding daughter? that trusted in her treasures, [saying] , Who shall come to me?
- Young's Literal Translation (YLT)
- What — dost thou boast thyself in valleys? Flowed hath thy valley, O backsliding daughter, Who is trusting in her treasures: Who doth come in unto me?
Read in context
- 2ಆದದರಿಂದ ಇಗೋ, ದಿನಗಳು ಬರುವ ವೆಂದು ಕರ್ತನು ಅನ್ನುತ್ತಾನೆ; ಆಗ ಅಮ್ಮೋನನ ಮಕ್ಕಳು ರಬ್ಬಾದಲ್ಲಿ ಯುದ್ಧದ ಆರ್ಭಟವನ್ನು ಕೇಳುವಂತೆ ನಾನು ಮಾಡುವೆನು; ಅದು ಹಾಳು ದಿಬ್ಬೆಯಾಗುವದು; ಅದರ ಕುಮಾರ್ತೆಯರು ಸಹ ಬೆಂಕಿಯಿಂದ ಸುಡಲ್ಪಡು ವರು; ಆಗ ಇಸ್ರಾಯೇಲು ತನ್ನ ಬಾಧ್ಯಸ್ಥರ ಬಾಧ್ಯ ವನ್ನು ಹೊಂದುವದೆಂದು ಕರ್ತನು ಹೇಳುತ್ತಾನೆ.
- 3ಹೆಷ್ಬೋನೇ, ಗೋಳಾಡು; ಆಯಿ ಹಾಳಾಯಿತು; ರಬ್ಬಾದ ಕುಮಾರ್ತೆಯರೇ ಕೂಗಿರಿ; ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಬೇಲಿಗಳ ಬಳಿಯಲ್ಲಿ ಅತ್ತಿತ್ತ ಓಡಾಡಿರಿ; ಅವರ ಅರಸನೂ ಅವನ ಯಾಜಕರೂ ಅವನ ಪ್ರಧಾನರೂ ಒಟ್ಟಾಗಿ ಸೆರೆಗೆ ಹೋಗುವರು.
- 4ಹಿಂತಿರುಗು, ಹಿಂಜರಿದು ಹೋದ ಮಗಳೇ, ನನ್ನ ಬಳಿಗೆ ಬರುವವರು ಯಾರೆಂದು ಹೇಳಿ ನಿನ್ನ ಬೊಕ್ಕಸ ಗಳಲ್ಲಿ ನಂಬಿಕೆ ಇಟ್ಟವಳೇ, ನಿನ್ನ ತಗ್ಗು ಹರಿದು ಹೋಗುತ್ತದಲ್ಲಾ? ತಗ್ಗುಗಳ ವಿಷಯ ಯಾಕೆ ಹೆಚ್ಚಳ ಪಡುತ್ತೀ?
- 5ಇಗೋ, ನಾನು ನಿನ್ನ ಸುತ್ತಲಿರುವ ವರೆಲ್ಲರಿಂದ ನಿನ್ನ ಮೇಲೆ ಭಯವನ್ನು ಬರಮಾಡು ವೆನೆಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ. ಆಗ ನಿಮ್ಮಲ್ಲಿ ಒಬ್ಬೊಬ್ಬನು ಮುಂದಕ್ಕೆ ಓಡಿಸಲ್ಪಡುವನು; ಅಲೆದಾಡುವವನನ್ನು ಕೂಡಿಸುವವನೂ ಒಬ್ಬನೂ ಇರುವದಿಲ್ಲ.
- 6ಆದರೆ ತರುವಾಯ ಅಮ್ಮೋನನ ಮಕ್ಕಳನ್ನು ಸೆರೆಯಿಂದ ತಿರುಗಿ ತರುವೆನೆಂದು ಕರ್ತನು ಅನ್ನುತ್ತಾನೆ.
Cross references
- 1 Timothy 6:17 1 ತಿಮೊಥೆಯನಿಗೆ 6:17ಈ ಲೋಕದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿ ಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ಭರವಸ ವನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲ ವನ್ನೂ ಹೇರಳವಾಗಿ ದಯಪಾಲಿಸುವ ಜೀವವುಳ್ಳ ದೇವರ ಮೇಲೆ ಭರವಸವನ್ನಿಡಬೇಕೆಂತಲೂ
- Jeremiah 9:23 ಯೆರೆಮೀಯ 9:23ಕರ್ತನು ಹೀಗೆ ಹೇಳುತ್ತಾನೆ--ಜ್ಞಾನಿಯು ತನ್ನ ಜ್ಞಾನದಲ್ಲಿ ಹೆಚ್ಚಳಪಡದಿರಲಿ; ಬಲಿಷ್ಟನು ತನ್ನ ಬಲ ದಲ್ಲಿ ಹೆಚ್ಚಳ ಪಡದಿರಲಿ; ಐಶ್ವರ್ಯವಂತನು ತನ್ನ ಐಶ್ವರ್ಯದಲ್ಲಿ ಹೆಚ್ಚಳಪಡದಿರಲಿ.
- Jeremiah 21:13 ಯೆರೆಮೀಯ 21:13ಇಗೋ, ತಗ್ಗಿನಲ್ಲಿಯೂ ಬೈಲಿನ ಬಂಡೆಯಲ್ಲಿಯೂ ವಾಸಮಾಡುವವರೇ, ನಮ್ಮ ಮೇಲೆ ಯಾರು ಇಳಿದು ಬರುವರೆಂದು ನಮ್ಮ ನಿವಾಸಗಳಲ್ಲಿ ಯಾರು ಸೇರು ವರೆಂದು ಅನ್ನುವವರೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ.ನಿಮ್ಮ ಕ್ರಿಯೆಗಳ ಫಲದ ಪ್ರಕಾರ ನಿಮ್ಮನ್ನು ಶಿಕ್ಷಿಸು ತ್ತೇನೆಂದು ಕರ್ತನು ಅನ್ನುತ್ತಾನೆ; ಅದರ ಅಡವಿಗೆ ಬೆಂಕಿಹಚ್ಚುತ್ತೇನೆ; ಅದರ ಸುತ್ತಲಿರುವದನ್ನೆಲ್ಲಾ ಅದು ತಿಂದುಬಿಡುವದು.
- Jeremiah 48:7 ಯೆರೆಮೀಯ 48:7ನಿನ್ನ ಕ್ರಿಯೆಗಳಲ್ಲಿಯೂ ದ್ರವ್ಯಗಳಲ್ಲಿಯೂ ನಂಬಿಕೆ ಇಟ್ಟದ್ದ ರಿಂದ ನೀನು ಸಹ ಹಿಡಿಯಲ್ಪಡುವಿ; ಕೆಮೋಷನು, ಅವನ ಯಾಜಕರು, ಪ್ರಧಾನರು ಸಹಿತವಾಗಿ ಸೆರೆಗೆ ಹೋಗುವರು.
- Psalm 49:6 ಕೀರ್ತನೆಗಳು 49:6ಅವರು ತಮ್ಮ ಸಂಪತ್ತಿನಲ್ಲಿ ಭರವಸವಿಟ್ಟು ಅಧಿಕ ಐಶ್ವರ್ಯಗಳಲ್ಲಿ ಹೆಚ್ಚಳಪಡುವರು.
- Psalm 62:10 ಕೀರ್ತನೆಗಳು 62:10ಅನ್ಯಾಯದಲ್ಲಿ ಭರ ವಸವಿಡಬೇಡಿರಿ; ಸುಲಿಗೆಯಲ್ಲಿ ವ್ಯರ್ಥರಾಗಬೇಡಿರಿ; ಆಸ್ತಿಯು ಹೆಚ್ಚಿದರೆ ಅದರ ಮೇಲೆ ಮನಸ್ಸಿಡಬೇಡಿರಿ.
- Jeremiah 3:14 ಯೆರೆಮೀಯ 3:14ಹಿಂಜರಿದ ಮಕ್ಕಳೇ, ತಿರುಗಿಕೊಳ್ಳಿರೆಂದು ಕರ್ತನು ಅನ್ನುತ್ತಾನೆ; ನಾನು ನಿಮ್ಮನ್ನು ಮದುವೆಯಾಗಿದ್ದೇನೆ; ನಿಮ್ಮನ್ನು ಪಟ್ಟಣದೊಳಗಿಂದ ಒಬ್ಬನಂತೆಯೂ ಗೋತ್ರ ದೊಳಗಿಂದ ಇಬ್ಬರಂತೆಯೂ ತೆಗೆದುಕೊಂಡು ಚೀಯೋನಿಗೆ ಕರಕೊಂಡು ಬರುವೆನು.
- Psalm 52:7 ಕೀರ್ತನೆಗಳು 52:7ಇಗೋ, ದೇವರನ್ನು ತನ್ನ ಬಲವಾಗಿ ಆಶ್ರಯಿಸದೆ ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ಕೆಟ್ಟತನದಲ್ಲಿ ಬಲಗೊಂಡ ಮನುಷ್ಯನು ಇವನೇ.
- Jeremiah 49:16 ಯೆರೆಮೀಯ 49:16ಬಂಡೆಯ ಬಿರುಕು ಗಳಲ್ಲಿ ವಾಸಮಾಡುವವನೇ ಗುಡ್ಡದ ಕೊನೆಯನ್ನು ಹಿಡಿಯುವವನೇ, ನಿನ್ನ ಭಯಂಕರತ್ವವೂ ಹೃದಯದ ಗರ್ವವೂ ನಿನ್ನನ್ನು ಮೋಸಗೊಳಿಸಿದವು; ನೀನು ಹದ್ದಿನಂತೆ ನಿನ್ನ ಗೂಡನ್ನು ಎತ್ತರ ಮಾಡಿದರೂ ಅಲ್ಲಿಂದ ನಿನ್ನನ್ನು ಇಳಿಸುತ್ತೇನೆಂದು ಕರ್ತನು ಅನ್ನುತ್ತಾನೆ.
- Isaiah 47:7–8 ಯೆಶಾಯ 47:7–8ನಾನು ಶಾಶ್ವತವಾಗಿ ರಾಣಿಯೆಂದು ನೀನು ಅಂದುಕೊಂಡಿದ್ದರಿಂದ ಈ ಸಂಗತಿಗಳನ್ನು ನಿನ್ನ ಹೃದಯ ದಲ್ಲಿಟ್ಟುಕೊಳ್ಳಲಿಲ್ಲ; ಇಲ್ಲವೆ ಅವರ ಅಂತ್ಯವನ್ನು ನೆನಸ ಲಿಲ್ಲ. ನಾನೇ ಇರುವವಳು ನನ್ನ ಹೊರತು ಇನ್ನು ಯಾರೂ ಇಲ್ಲ. ನಾನು ವಿಧವೆಯಾಗಿ ಕೂತುಕೊಳ್ಳು ವದಿಲ್ಲ; ಪುತ್ರಶೋಕವನ್ನು ಅನುಭವಿಸುವದಿಲ್ಲ ಎಂದು ಅಂದುಕೊಳ್ಳುವವಳೇ, ಭೋಗಾಸಕ್ತಳೇ, ನೆಮ್ಮದಿ ಯಾಗಿ ನೆಲೆಗೊಂಡಿರುವವಳೇ, ಈಗ ಇದನ್ನು ಕೇಳು.
- Proverbs 10:15 ಜ್ಞಾನೋಕ್ತಿಗಳು 10:15ಐಶ್ವರ್ಯವಂತನ ಸಂಪತ್ತು ಅವನ ಬಲವಾದ ಪಟ್ಟಣ; ಬಡವರ ನಾಶನವು ಅವರ ಬಡತನವೇ.
- Isaiah 28:1–4 ಯೆಶಾಯ 28:1–4ಎಫ್ರಾಯಾಮ್ಯರ ಕುಡುಕರ ಗರ್ವದ ಕಿರೀಟಕ್ಕೆ ಅಯ್ಯೋ! ದ್ರಾಕ್ಷಾರಸದಿಂದ ಅಮಲೇರಿದವರ ಕೊಬ್ಬುಳ್ಳ ತಗ್ಗಿನ ತಲೆಯ ಮೇಲಿ ರುವ ಅವರ ಅಹಂಕಾರದ ಕಿರೀಟವು ಬಾಡಿದ ಹೂವಾಗಿದೆ. ಇಗೋ, ಕರ್ತನಿಗೆ ಒಬ್ಬ ಮಹಾ ಬಲಿಷ್ಠನು ಇದ್ದಾನೆ. ಅವನು ರಭಸವಾಗಿ ಸುರಿಯುವ ಕಲ್ಮಳೆಯಂತೆಯೂ ಹೊಡೆದುಬಿಡುವ ಬಿರುಗಾಳಿ ಯಂತೆಯೂ ಪ್ರಳಯಮಾಡುವ ಪ್ರಚಂಡ ಮಳೆ ಯನ್ನು ತರುವ ಬಿರುಗಾಳಿಯಂತೆಯೂ ಅದನ್ನು ಕೈ ಯಿಂದ ನೆಲಕ್ಕೆ ಬೀಳಿಸುವನು. ಕುಡುಕರಾದ ಎಫ್ರಾ ಯೀಮ್ಯರ ಗರ್ವದ ಕಿರೀಟವು ಕಾಲಿನಿಂದ ತುಳಿಯ ಲ್ಪಡುವದು. ಫಲವತ್ತಾದ ತಗ್ಗಿನ ತಲೆಯ ಮೇಲಿರುವ ಬಾಡುವ ಹೂವಾದ ಅವರ ಅಲಂಕಾರದ ಶೃಂಗಾರವುಬೇಸಿಗೆ ಮುಂಚೆ ಹುಟ್ಟಿದ ಹಣ್ಣಿನ ಹಾಗೆ ಇರುವದು. ಅದನ್ನು ಕಂಡು ನೋಡಿದಾಕ್ಷಣವೇ ಕೈಗೆ ಸಿಕ್ಕಿದಾಗಲೇ ತಿಂದು ಬಿಡುವನು.