Job · chapter 31 · verse 9
Job 31:9 in Kannada
ನನ್ನ ಹೃದಯವು ಸ್ತ್ರೀಗೋಸ್ಕರ ಮರುಳು ಗೊಂಡಿದ್ದರೆ, ನನ್ನ ನೆರೆಯವನ ಬಾಗಲ ಹತ್ತಿರ ನಾನು ಹೊಂಚಿಕೊಂಡಿದ್ದರೆ,
Nanna hrudayavu streegoskara marulu gondiddare, nanna nereyavana baagala hattira naanu honchikondiddare,
Job 31:9 in English
- King James Version (KJV)
- If mine heart have been deceived by a woman, or [if] I have laid wait at my neighbour’s door;
- World English Bible (WEB)
- “If my heart has been enticed to a woman, and I have laid wait at my neighbor’s door,
- American Standard Version (ASV)
- If my heart hath been enticed unto a woman, And I have laid wait at my neighbor’s door;
- Bible in Basic English (BBE)
- If my heart went after another man's wife, or if I was waiting secretly at my neighbour's door;
- Darby Translation (DBY)
- If my heart have been enticed unto a woman, so that I laid wait at my neighbour's door,
- Webster's Bible (WBS)
- If my heart hath been deceived by a woman, or [if] I have laid wait at my neighbor's door;
- Young's Literal Translation (YLT)
- If my heart hath been enticed by woman, And by the opening of my neighbour I laid wait,
Read in context
- 7ನನ್ನ ಹೆಜ್ಜೆಯು ದಾರಿಯಿಂದ ತೊಲಗಿದ್ದರೆ, ನನ್ನ ಕಣ್ಣುಗಳ ಹಿಂದೆ ನನ್ನ ಹೃದಯವು ಹೋಗಿದ್ದರೆ, ನನ್ನ ಅಂಗೈಗಳಲ್ಲಿ ದೋಷ ಹತ್ತಿದ್ದರೆ,
- 8ನಾನು ಬಿತ್ತುವದನ್ನು ಬೇರೊಬ್ಬನು ತಿನ್ನಲಿ; ಹೌದು, ನನ್ನ ಸಂತತಿಯು ನಿರ್ಮೂಲವಾಗಲಿ.
- 9ನನ್ನ ಹೃದಯವು ಸ್ತ್ರೀಗೋಸ್ಕರ ಮರುಳು ಗೊಂಡಿದ್ದರೆ, ನನ್ನ ನೆರೆಯವನ ಬಾಗಲ ಹತ್ತಿರ ನಾನು ಹೊಂಚಿಕೊಂಡಿದ್ದರೆ,
- 10ನನ್ನ ಹೆಂಡತಿ ಮತ್ತೊಬ್ಬನಿ ಗೊಸ್ಕರ ಬೀಸಲಿ; ಮತ್ತೊಬ್ಬರು ಅವಳ ಮೇಲೆ ಒರಗಲಿ.
- 11ಯಾಕಂದರೆ ಅದು ಮಹಾ ಪಾಪವೂ ಹೌದು, ನ್ಯಾಯಾಧಿಪತಿಗಳಿಗೆ ಬರುವ ಅಕ್ರಮವೂ ಆಗಿರುವದು.
Cross references
- 1 Kings 11:4 1 ಅರಸುಗಳು 11:4ಸೊಲೊಮೋನನು ಮುದುಕನಾದ ಕಾಲದಲ್ಲಿ ಏನಾಯಿತಂದರೆ, ಅವನ ಪತ್ನಿಯರು ಅನ್ಯದೇವರುಗಳ ಕಡೆಗೆ ಅವನ ಹೃದಯವನ್ನು ತಿರುಗ ಮಾಡಿದರು. ಅವನ ಹೃದಯವು ತನ್ನ ತಂದೆಯಾದ ದಾವೀದನ ಹೃದಯದ ಹಾಗೆ ತನ್ನ ದೇವರಾದ ಕರ್ತನ ಸಂಗಡ ಪರಿಪೂರ್ಣವಾಗಿ ಇರಲಿಲ್ಲ.
- Judges 16:5 ನ್ಯಾಯಸ್ಥಾಪಕರು 16:5ಅವಳ ಬಳಿಗೆ ಫಿಲಿಷ್ಟಿಯರ ಅಧಿಪತಿಗಳು ಬಂದು ಅವಳಿಗೆ--ನೀನು ಅವನನ್ನು ಮರುಳುಗೊಳಿಸಿ, ನಾವು ಅವನನ್ನು ಯಾವ ಪ್ರಕಾರ ಗೆದ್ದು ಕಟ್ಟಿ ಬಾಧಿಸಬಹುದೆಂದು ಅವನ ದೊಡ್ಡ ಶಕ್ತಿ ಯಾವದರಲ್ಲಿ ಅದೆ ಎಂದೂ ನೋಡು; ನಾವು ಒಬ್ಬೊಬ್ಬರು ನಿನಗೆ ಸಾವಿರದ ನೂರು ಬೆಳ್ಳಿಯ ನಾಣ್ಯ ಗಳನ್ನು ಕೊಡುವೆವು ಅಂದರು.
- Ecclesiastes 7:26 ಪ್ರಸಂಗಿ 7:26ತನ್ನ ಹೃದಯವು ಉರುಲುಗಳೂ ಬಲೆ ಗಳೂ ಅವಳ ಕೈಗಳ ಕಟ್ಟುಗಳೂ ಆಗಿರುವ ಸ್ತ್ರೀಯು ಮರಣಕ್ಕಿಂತಲೂ ಕಠೋರವಾಗಿದ್ದಾಳೆಂದು ನಾನು ಕಂಡಿದ್ದೇನೆ. ದೇವರನ್ನು ಮೆಚ್ಚಿಸಿದವನು ಅವಳಿಂದ ತಪ್ಪಿಸಿಕೊಳ್ಳುವನು; ಪಾಪಿಯು ಅವಳಿಂದ ಹಿಡಿಯಲ್ಪ ಡುವನು.
- Proverbs 22:14 ಜ್ಞಾನೋಕ್ತಿಗಳು 22:14ಪರಸ್ತ್ರೀಯ ಬಾಯಿ ಆಳವಾದ ಕುಣಿ; ಕರ್ತನಿಗೆ ಅಸಹ್ಯವಾದವನು ಅದರಲ್ಲಿ ಬೀಳುವನು.
- Hosea 7:4 ಹೋಶೇಯ 7:4ಅವರೆ ಲ್ಲರೂ ವ್ಯಭಿಚಾರಿಗಳು; ರೊಟ್ಟಿಗಾರನು ಬಿಸಿಮಾಡಿದ ಒಲೆಯ ಹಾಗೆ ಇದ್ದಾರೆ, ಅವನು ಹಿಟ್ಟು ನಾದಿದ ಮೇಲೆ ಅದು ಹುಳಿಯಾಗುವ ತನಕ ಬಿಸಿಮಾಡುವ ದನ್ನು ಬಿಟ್ಟುಬಿಡುತ್ತಾನೆ.
- Proverbs 6:25 ಜ್ಞಾನೋಕ್ತಿಗಳು 6:25ನಿನ್ನ ಹೃದಯದಲ್ಲಿ ಅವಳ ಸೌಂದರ್ಯವನ್ನು ಮೋಹಿಸಬೇಡ; ಇದಲ್ಲದೆ ಅವಳ ಕಣ್ಣುರೆಪ್ಪೆಗಳಿಂದ ನಿನ್ನನ್ನು ಅವಳು ವಶಮಾಡಿಕೊಳ್ಳದೆ ಇರಲಿ.
- Nehemiah 13:26 ನೆಹೆಮೀಯ 13:26ಇಸ್ರಾಯೇಲಿನ ಅರಸನಾದ ಸೊಲೊಮೋನನು ಇವುಗಳಿಂದ ಪಾಪ ಮಾಡಿದ ನಲ್ಲವೇ? ಆದರೆ ಅನೇಕ ಜನಾಂಗಗಳಲ್ಲಿ ಅವನ ಹಾಗೆ ಮತ್ತೊಬ್ಬ ಅರಸನು ಇದ್ದದ್ದಿಲ್ಲ; ಅವನು ತನ್ನ ದೇವರಿಗೆ ಪ್ರಿಯನಾಗಿದ್ದ ಕಾರಣ ದೇವರು ಅವನನ್ನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನನ್ನಾಗಿ ಮಾಡಿ ದನು; ಆದರೂ ಅನ್ಯಸ್ತ್ರೀಯರು ಅವನನ್ನು ಸಹ ಪಾಪ ಮಾಡುವ ಹಾಗೆ ಮಾಡಿದರು.
- Job 24:15–16 ಯೋಬನು 24:15–16ವ್ಯಭಿಚಾರಿಯ ಕಣ್ಣು ಮುಂಗತ್ತಲೆಗೆ ಕಾದುಕೊಂಡು -- ಯಾವ ಕಣ್ಣೂ ನನ್ನನ್ನು ನೋಡುವದಿಲ್ಲವೆಂದು ಹೇಳುತ್ತದೆ; ಮುಖ ವನ್ನು ಮುಚ್ಚಿಕೊಳ್ಳುತ್ತಾನೆ. ಹಗಲು ಹೊತ್ತು ಗೊತ್ತು ಮಾಡಿಕೊಂಡ ಮನೆಗಳನ್ನು ಕತ್ತಲೆಯಲ್ಲಿ ಕೊರೆಯು ತ್ತಾರೆ; ಅವರು ಬೆಳಕನ್ನು ತಿಳಿಯರು.
- Proverbs 2:16–19 ಜ್ಞಾನೋಕ್ತಿಗಳು 2:16–19ಪರಸ್ತ್ರೀ ಯಿಂದ ಅಂದರೆ ತನ್ನ ಮಾತುಗಳಿಂದ ಮುಖಸ್ತುತಿ ಮಾಡುವ ಸ್ತ್ರೀಯಿಂದ ತನ್ನ ದೇವರ ಒಡಂಬಡಿಕೆ ಯನ್ನು ಮರೆತು ತನ್ನ ಯೌವನ ಕಾಲದ ಸಂಗಾತಿ ಯನ್ನು ತ್ಯಜಿಸುವವಳಿಂದ ಅದು ನಿನ್ನನ್ನು ತಪ್ಪಿಸುವದು. ಅವಳ ಮನೆಯು ಮರಣದ ಕಡೆಗೆ, ಅವಳ ದಾರಿ ಗಳು ಮೃತರ ಕಡೆಗೆ ಇಳಿಸುತ್ತವೆ. ಅವಳ ಬಳಿಗೆ ಹೋಗುವ ಯಾವನೂ ಹಿಂತಿರುಗುವದಿಲ್ಲ, ಇಲ್ಲವೆ ಜೀವದ ಮಾರ್ಗಗಳನ್ನು ಅವನು ಹಿಡಿಯುವದೇ ಇಲ್ಲ.
- Jeremiah 5:8 ಯೆರೆಮೀಯ 5:8ಬೆಳಗಿ ನಲ್ಲಿ ಕೊಬ್ಬಿದ ಕುದುರೆಗಳ ಹಾಗಿದ್ದಾರೆ; ತಮ್ಮ ತಮ್ಮ ನೆರೆಯವರ ಹೆಂಡತಿಯರಿಗೋಸ್ಕರ ಹೂಂಕರಿ ಸುತ್ತಾರೆ.
- Proverbs 7:21 ಜ್ಞಾನೋಕ್ತಿಗಳು 7:21ಬಹಳವಾದ ತನ್ನ ಸವಿಮಾತಿನಿಂದ ಅವಳು ಅವನನ್ನು ಒಪ್ಪಿಸಿ ತನ್ನ ತುಟಿಗಳ ಮುಖಸ್ತುತಿ ಯಿಂದ ಅವನನ್ನು ಬಲಾತ್ಕರಿಸಿದಳು.
- Proverbs 5:3–23 ಜ್ಞಾನೋಕ್ತಿಗಳು 5:3–23ಪರಸ್ತ್ರೀಯ ತುಟಿಗಳು ಜೇನು ತುಪ್ಪದಂತೆ ತೊಟ್ಟಿ ರುವವು, ಅವಳ ಬಾಯಿಯು ಎಣ್ಣೆಗಿಂತಲೂ ಮೃದು ವಾಗಿದೆ. ಆದರೆ ಅವಳ ಅಂತ್ಯವು ಮಾಚಿ ಪತ್ರೆಯಂತೆ ಕಹಿಯೂ ಇಬ್ಬಾಯಿ ಕತ್ತಿಯಂತೆ ಹರಿತವೂ ಇರುತ್ತದೆ. ಅವಳ ಪಾದಗಳು ಮರಣದ ಕಡೆಗೆ ಇಳಿದು ಹೋಗು ತ್ತವೆ. ಅವಳ ಹೆಜ್ಜೆಗಳು ಪಾತಾಳವನ್ನು ಹಿಡಿಯುತ್ತವೆ. ಅವುಗಳನ್ನು ನೀನು ತಿಳಿದುಕೊಳ್ಳಲಾರದಂತೆ ಜೀವದ ಮಾರ್ಗವನ್ನು ನೀನು ವಿವೇಚಿಸಲಾರದಷ್ಟು ಅವಳ ಮಾರ್ಗಗಳು ಚಂಚಲವಾಗಿವೆ. ಆದದರಿಂದ ಓ ಮಕ್ಕಳಿರಾ, ಈಗ ನನ್ನ ಕಡೆಗೆ ಕಿವಿಗೊಡಿರಿ, ನನ್ನ ಬಾಯಿಯ ಮಾತುಗಳಿಂದ ಹೊರಟುಹೋಗಬೇಡಿರಿ. ಅವಳ ಕಡೆಯಿಂದ ನಿನ್ನ ದಾರಿಯನ್ನು ದೂರಮಾಡು. ಅವಳ ಮನೆಯ ಬಾಗಲ ಹತ್ತಿರಕ್ಕೆ ಬಾರದೆ ಇರು. ನೀನು ನಿನ್ನ ಗೌರವವನ್ನು ಬೇರೆಯವರಿಗೂ ನಿನ್ನ ವರುಷ ಗಳನ್ನು ಕ್ರೂರರಿಗೂ ಕೊಡಬೇಡ. ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳದಂತೆಯೂ ನಿನ್ನ ಪ್ರಯಾಸಗಳು ಪರನ ಮನೆಯಲ್ಲಿ ಇರದಂತೆಯೂ ಮಾಡು. ನಿನ್ನ ಮಾಂಸವೂ ದೇಹವೂ ಕ್ಷೀಣಿಸಿದಾಗ ನೀನು ಕೊನೆಯಲ್ಲಿ ಶೋಕಿಸುತ್ತಾ-- ಶಿಕ್ಷಣವನ್ನು ನಾನು ಎಷ್ಟೋ ಹಗೆಮಾಡಿದೆನು; ನನ್ನ ಹೃದಯವು ಗದರಿಕೆಯನ್ನು ತಿರಸ್ಕಾರ ಮಾಡಿತು. ನನ್ನ ಬೋಧ ಕರ ಸ್ವರಕ್ಕೆ ನಾನು ವಿಧೇಯನಾಗದೆ ಇಲ್ಲವೆ ಶಿಕ್ಷಕರಿಗೆ ನಾನು ಕಿವಿಗೊಡದೆ ಹೋದೆನು. ನಾನು ಕೂಟ ಮತ್ತು ಸಭೆಯ ಮಧ್ಯದಲ್ಲಿ ಹೆಚ್ಚು ಕಡಿಮೆ ಎಲ್ಲಾ ಕೇಡಿನಲ್ಲಿ ಇದ್ದೆನು ಎಂದು ಹೇಳುವಿ. ನಿನ್ನ ಸ್ವಂತ ಕೊಳದ ನೀರನ್ನು, ನಿನ್ನ ಸ್ವಂತ ಬಾವಿ ಯೊಳಗಿಂದ ಉಕ್ಕಿಬರುವ ಜಲವನ್ನು ಕುಡಿ. ನಿನ್ನ ಬುಗ್ಗೆಗಳು ಹೊರಗೆ ಮತ್ತು ನೀರಿನ ನದಿಗಳು ಬೀದಿ ಗಳಲ್ಲಿ ಹರಡಿಹೋಗಲಿ. ಅವು ನಿನ್ನ ಸ್ವಂತದವು ಗಳಾಗಿಯೇ ಇರಲಿ. ನಿನ್ನೊಂದಿಗಿರುವ ಪರರಿಗೆ ಇಲ್ಲ ದಿರಲಿ. ನಿನ್ನ ಬುಗ್ಗೆಯು ಆಶೀರ್ವದಿಸಲ್ಪಡಲಿ; ನಿನ್ನ ಯೌವನ ಕಾಲದ ಹೆಂಡತಿಯೊಂದಿಗೆ ಆನಂದಿಸು. ಆಕೆಯು ಮನೋಹರವಾದ ಜಿಂಕೆಯಂತೆಯೂ ಅಂದವಾದ ಹೆಣ್ಣು ಜಿಂಕೆಯ ಹಾಗೆಯೂ ಇರಲಿ; ಆಕೆಯ ಸ್ತನಗಳು ನಿನ್ನನ್ನು ಯಾವಾಗಲೂ ತೃಪ್ತಿಪಡಿ ಸಲಿ; ಆಕೆಯ ಪ್ರೀತಿಯಿಂದ ನೀನು ಯಾವಾಗಲೂ ಆನಂದಪರವಶನಾಗು. ನನ್ನ ಮಗನೇ, ಪರಸ್ತ್ರೀ ಯಲ್ಲಿ ನೀನು ಯಾಕೆ ಆನಂದ ಪರವಶನಾಗಿ ಅವಳ ಎದೆಯನ್ನು ಅಪ್ಪಿಕೊಳ್ಳುವಿ? ಮನುಷ್ಯನ ಮಾರ್ಗ ಗಳು ಕರ್ತನ ಕಣ್ಣುಗಳ ಮುಂದೆಯೇ ಅವೆ; ಆತನು ಅವನ ಮಾರ್ಗಗಳನ್ನೆಲ್ಲಾ ಪರೀಕ್ಷಿಸುತ್ತಾನೆ. ದುಷ್ಟ ನನ್ನು ಅವನ ಸ್ವಂತ ಅಕ್ರಮಗಳೇ ಹಿಡಿಯುವವು; ತನ್ನ ಪಾಪಗಳ ಪಾಶಗಳಿಂದಲೇ ಅವನು ಬಂಧಿಸಲ್ಪಡು ವನು.ಶಿಕ್ಷಣವಿಲ್ಲದೆ ಅವನು ಸಾಯುವನು; ತನ್ನ ಮೂಢತ್ವದ ದೊಡ್ಡಸ್ತಿಕೆಯಲ್ಲಿ ತಪ್ಪಿಹೋಗುವನು. ಶಿಕ್ಷಣವಿಲ್ಲದೆ ಅವನು ಸಾಯುವನು; ತನ್ನ ಮೂಢತ್ವದ ದೊಡ್ಡಸ್ತಿಕೆಯಲ್ಲಿ ತಪ್ಪಿಹೋಗುವನು.