Jeremiah · chapter 50 · verse 32
Jeremiah 50:32 in Kannada
ಆಗ ಅತಿ ಗರ್ವದ (ರಾಜ್ಯವು) ಎಡವಿ ಬೀಳುವದು; ಅದನ್ನು ಎಬ್ಬಿಸುವದಕ್ಕೆ ಯಾರೂ ಇರುವದಿಲ್ಲ; ಅದರ ಪಟ್ಟಣಗಳಲ್ಲಿ ನಾನು ಬೆಂಕಿ ಹಚ್ಚುವೆನು, ಅದು ಅದರ ಸುತ್ತಲಿರುವದನ್ನೆಲ್ಲಾ ನುಂಗಿಬಿಡುವದು.
Aaga ati garvada (raajyavu) edavi beeluvadu; adannu ebbisuvadakke yaaroo iruvadilla; adara pattanagalalli naanu benki hachchuvenu, adu adara suttaliruvadannellaa nungibiduvadu.
Jeremiah 50:32 in English
- King James Version (KJV)
- And the most proud shall stumble and fall, and none shall raise him up: and I will kindle a fire in his cities, and it shall devour all round about him.
- World English Bible (WEB)
- The proud one will stumble and fall, and no one will raise him up. I will kindle a fire in his cities, and it will devour all who are around him.”
- American Standard Version (ASV)
- And the proud one shall stumble and fall, and none shall raise him up; and I will kindle a fire in his cities, and it shall devour all that are round about him.
- Bible in Basic English (BBE)
- And pride will go with uncertain steps and have a fall, and there will be no one to come to his help: and I will put a fire in his towns, burning up everything round about him.
- Darby Translation (DBY)
- and the proud one shall stumble and fall, and none shall raise him up; yea, I will kindle a fire in his cities, and it shall devour all that are round about him.
- Webster's Bible (WBS)
- And the most proud shall stumble and fall, and none shall raise him up: and I will kindle a fire in his cities, and it shall devour all around him.
- Young's Literal Translation (YLT)
- And stumbled hath pride, And he hath fallen, and hath no raiser up, And I have kindled a fire in his cities, And it hath devoured all round about him.
Read in context
- 30ಆದದರಿಂದ ಅದರ ಯೌವನಸ್ಥರು ಬೀದಿಗಳಲ್ಲಿ ಬೀಳುವರು; ಅದರ ಯುದ್ಧಸ್ಥರೆಲ್ಲರು ಆ ದಿವಸದಲ್ಲಿ ತೆಗೆದುಹಾಕಲ್ಪಡು ವರೆಂದು ಕರ್ತನು ಅನ್ನುತ್ತಾನೆ.
- 31ಅತಿ ಗರ್ವಿಷ್ಠನೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ; ನಿನ್ನ ದಿವಸವೂ ನಿನ್ನ ವಿಚಾರಣೆಯ ಕಾಲವೂ ಬಂತು.
- 32ಆಗ ಅತಿ ಗರ್ವದ (ರಾಜ್ಯವು) ಎಡವಿ ಬೀಳುವದು; ಅದನ್ನು ಎಬ್ಬಿಸುವದಕ್ಕೆ ಯಾರೂ ಇರುವದಿಲ್ಲ; ಅದರ ಪಟ್ಟಣಗಳಲ್ಲಿ ನಾನು ಬೆಂಕಿ ಹಚ್ಚುವೆನು, ಅದು ಅದರ ಸುತ್ತಲಿರುವದನ್ನೆಲ್ಲಾ ನುಂಗಿಬಿಡುವದು.
- 33ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ-- ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಕೂಡ ಹಿಂಸಿಸಲ್ಪಟ್ಟರು; ಅವರನ್ನು ಸೆರೆಗೆ ಒಯ್ಯುವವ ರೆಲ್ಲರು ಅವರನ್ನು ಬಲವಾಗಿ ಹಿಡಿದು, ಕಳುಹಿಸಿ ಬಿಡಲೊಲ್ಲದೆ ಇದ್ದರು.
- 34ಅವರ ವಿಮೋಚಕನು ಬಲಿಷ್ಠನೇ, ಸೈನ್ಯಗಳ ಕರ್ತನು ಆತನ ಹೆಸರು; ಆತನು ದೇಶಕ್ಕೆ ಶಾಂತಿಯನ್ನು ಕೊಡುವ ಹಾಗೆಯೂ ಬಾಬೆಲಿನ ನಿವಾಸಿಗಳಿಗೆ ನಡುಗುವಿಕೆಯನ್ನು ಕೊಡುವ ಹಾಗೆಯೂ ಅವರ ವ್ಯಾಜ್ಯವನ್ನು ಪೂರ್ಣವಾಗಿ ತೀರಿಸುವನು.
Cross references
- Jeremiah 21:14 ಯೆರೆಮೀಯ 21:14ನಿಮ್ಮ ಕ್ರಿಯೆಗಳ ಫಲದ ಪ್ರಕಾರ ನಿಮ್ಮನ್ನು ಶಿಕ್ಷಿಸು ತ್ತೇನೆಂದು ಕರ್ತನು ಅನ್ನುತ್ತಾನೆ; ಅದರ ಅಡವಿಗೆ ಬೆಂಕಿಹಚ್ಚುತ್ತೇನೆ; ಅದರ ಸುತ್ತಲಿರುವದನ್ನೆಲ್ಲಾ ಅದು ತಿಂದುಬಿಡುವದು.
- Jeremiah 49:27 ಯೆರೆಮೀಯ 49:27ನಾನು ದಮಸ್ಕದ ಗೋಡೆಯಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ತಿಂದುಬಿಡುವದು.
- Isaiah 10:12–15 ಯೆಶಾಯ 10:12–15ಆದಕಾರಣ, ಕರ್ತನು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತನ್ನ ಕಾರ್ಯಗಳನ್ನು ಮಾಡಿ ಮುಗಿಸಿದ ಮೇಲೆ, ಅಶ್ಶೂರದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿ ಸುವೆನು. ಅವನು ತನ್ನೊಳಗೆ--ನನ್ನ ಕೈಯ ಬಲ ದಿಂದಲೂ ಜ್ಞಾನದಿಂದಲೂ ಅದನ್ನು ಮಾಡಿದೆ; ನಾನು ವಿವೇಕಿ ಮತ್ತು ಜನಾಂಗಗಳ ಮೇರೆಗಳನ್ನು ಕಿತ್ತು ಅವರ ನಿಧಿಗಳನ್ನು ಕೊಳ್ಳೆಹೊಡೆದು ಅದರ ನಿವಾಸಿಗಳನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ. ಜನಗಳ ಐಶ್ವರ್ಯವು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ, ಬಿಡಲ್ಪಟ್ಟ ಮೊಟ್ಟೆಗಳನ್ನು ಕೂಡಿಸುವಂತೆ ಭೂಮಿಯನ್ನೆಲ್ಲಾ ಸಂಗ್ರಹಿಸಿಕೊಂಡಿದ್ದೇನೆ; ರೆಕ್ಕೆಯಾ ಡಿಸಿ ಬಾಯಿತೆರೆದು ಕಿಚುಗುಟ್ಟುವವರು ಯಾರೂ ಇಲ್ಲವೆಂದು ಅಂದುಕೊಂಡನು. ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೆ? ಇಲ್ಲವೆ ಗರಗಸವು ತನ್ನನ್ನು ಎಳೆಯುವವನ ಮೇಲೆ ಹೆಚ್ಚಿಸಿ ಕೊಂಡೀತೇ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತೆ ಅಥವಾ ಬೆತ್ತವು ತಾನು ಮರವಲ್ಲ ಎಂಬಂತೆ ತನ್ನನ್ನು ತಾನು ಎತ್ತಿಕೊಂಡ ಹಾಗೆ ಇರುವದು.
- Amos 2:5 ಆಮೋಸ 2:5ನಾನು ಯೆಹೂದದ ಮೇಲೆ ಬೆಂಕಿಯನ್ನು ಕಳುಹಿಸುವೆನು; ಅದು ಯೆರೂಸಲೇಮಿನ ಅರಮನೆ ಗಳನ್ನು ನುಂಗಿ ಬಿಡುವದು.
- Revelation 18:8 ಪ್ರಕಟನೆ 18:8ಆದದರಿಂದ ಅವಳಿಗೆ ಮರಣ ದುಃಖ ಕ್ಷಾಮ ಎಂಬೀ ಉಪದ್ರವಗಳು ಒಂದೇ ದಿನದಲ್ಲಿ ಸಂಭವಿ ಸುವವು; ಅವಳು ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗುವಳು. ಅವಳಿಗೆ ದಂಡನೆಯನ್ನು ವಿಧಿಸಿದ ದೇವರಾಗಿರುವ ಕರ್ತನು ಬಲಿಷ್ಠನಾಗಿದ್ದಾನೆ.
- Jeremiah 51:26 ಯೆರೆಮೀಯ 51:26ಒಬ್ಬರೂ ನಿನ್ನಿಂದ ಮೂಲೆಯ ಕಲ್ಲನ್ನಾಗಲಿ, ಅಸ್ತಿವಾರದ ಕಲ್ಲನ್ನಾಗಲಿ ತೆಗೆಯರು; ನೀನು ಎಂದೆಂದಿಗೂ ಹಾಳಾಗುವಿ ಎಂದು ಕರ್ತನು ಅನ್ನುತ್ತಾನೆ.
- Ezekiel 28:2–9 ಯೆಹೆಜ್ಕೇಲನು 28:2–9ಮನುಷ್ಯಪುತ್ರನೇ, ತೂರಿನ ಪ್ರಭುವಿಗೆ ಹೇಳಬೇಕಾದದ್ದೇನಂದರೆ, ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಹೃದಯವು ಹೆಚ್ಚಿಸಲ್ಪಟ್ಟಿದ್ದರಿಂದ--ನಾನೇ ದೇವರು ದೇವರ ಸ್ಥಾನದಲ್ಲಿ ಸಮುದ್ರಗಳ ಮಧ್ಯದಲ್ಲಿ ಕುಳಿತುಕೊಂಡಿ ರುವೆನೆಂದು ಹೇಳಿದ್ದರಿಂದ ನೀನು ದೇವರಲ್ಲ, ಮನು ಷ್ಯನೇ; ಆದರೂ ನೀನು ನಿನ್ನ ಹೃದಯವನ್ನು ದೇವರ ಹೃದಯದಂತೆ ಮಾಡಿಕೊಂಡಿರುವೆ. ಇಗೋ, ನೀನು ದಾನಿಯೇಲನಿಗಿಂತ ಜ್ಞಾನಿಯಾಗಿರುವೆ; ರಹಸ್ಯವಾದದ್ದು ಏನಿದ್ದರೂ ನಿನಗೆ ಮರೆಯಾಗಿರುವದಿಲ್ಲ. ನಿನ್ನ ಜ್ಞಾನ ದಿಂದಲೂ ವಿವೇಕದಿಂದಲೂ ನಿನಗೆ ದ್ರವ್ಯವನ್ನುಂಟು ಮಾಡಿಕೊಂಡಿರುವೆ. ಚಿನ್ನವನ್ನೂ ಬೆಳ್ಳಿಯನ್ನೂ ನಿನ್ನ ಭಂಡಾರಗಳಲ್ಲಿ ಇಟ್ಟುಕೊಂಡಿರುವೆ. ನಿನ್ನ ಅಧಿಕ ಜ್ಞಾನದಿಂದಲೂ ವ್ಯಾಪಾರದಿಂದಲೂ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವಿ. ನಿನ್ನ ಆಸ್ತಿಯ ನಿಮಿತ್ತ ನಿನ್ನ ಹೃದಯವು ಹೆಚ್ಚಿಸಿಕೊಂಡಿದೆ; ಆದದರಿಂದ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನಿನ್ನ ಹೃದಯವನ್ನು ದೇವರ ಹೃದಯದಂತೆ ಮಾಡಿಕೊಂಡ ದ್ದರಿಂದ; ಇಗೋ, ನಾನು ನಿನ್ನ ಮೇಲೆ ಭಯಂಕರ ವಾದ ಜನಾಂಗಗಳ ಅಪರಿಚಿತರನ್ನು ತರುತ್ತೇನೆ; ಅವರು ನಿನ್ನ ಜ್ಞಾನದ ಸೊಬಗಿನ ಮೇಲೆ ವಿರುದ್ಧವಾಗಿ ಕತ್ತಿಯನ್ನು ಹಿರಿಯುವರು; ನಿನ್ನ ಪ್ರಕಾಶವನ್ನು ಕೆಡಿಸುವರು. ನಿನ್ನನ್ನು ಪಾತಾಳಕ್ಕೆ ತಳ್ಳಿಬಿಡುವರು, ಸಮುದ್ರಗಳ ಮಧ್ಯದಲ್ಲಿ ಹತವಾದವರ ಹಾಗೆ ನೀನು ಸಾಯುವೆ. ನಿನ್ನನ್ನು ಕೊಲ್ಲಲು ಬರುವವನ ಮುಂದೆ ಇನ್ನು ನಾನು ದೇವರೆಂದು ಹೇಳುವಿಯೋ? ನಿನ್ನನ್ನು ಕೊಲ್ಲುವವನ ಕೈಯಲ್ಲಿ ನೀನು ದೇವರಲ್ಲ ನರ ಪ್ರಾಣಿಯೇ;
- Amos 1:12 ಆಮೋಸ 1:12ಆದರೆ ನಾನು ತೇಮಾನಿನ ಮೇಲೆ ಬೆಂಕಿಯನ್ನು ಕಳುಹಿಸುವೆನು, ಅದು ಬೊಚ್ರದ ಅರಮನೆಗಳನ್ನು ನುಂಗಿಬಿಡುವದು.
- Amos 1:7 ಆಮೋಸ 1:7ಆದರೆ ನಾನು ಗಾಜದ ಗೋಡೆಯಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ; ಅದು ಅವರ ಅರಮನೆಗಳನ್ನು ನುಂಗಿಬಿಡುವದು.
- Proverbs 16:18 ಜ್ಞಾನೋಕ್ತಿಗಳು 16:18ನಾಶನಕ್ಕೆ ಮುಂದಾಗಿ ಗರ್ವ ಹೋಗು ತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು.
- Deuteronomy 32:22 ಧರ್ಮೋಪದೇಶಕಾಂಡ 32:22ನನ್ನ ಕೋಪದಲ್ಲಿ ಬೆಂಕಿಹತ್ತಿತು; ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ ಅದರ ಫಲವನ್ನೂ ತಿಂದುಬಿಟ್ಟು ಬೆಟ್ಟಗಳ ಅಸ್ತಿವಾರವನ್ನು ದಹಿಸುವದು.
- Daniel 5:23–30 ದಾನಿಯೇಲನು 5:23–30ಪರಲೋಕದ ಕರ್ತನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು, ಆಗ ನೀನು, ನಿನ್ನ ಪ್ರಭುಗಳು ಮತ್ತು ಪತ್ನಿ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿಗಳಿಲ್ಲದ ಬೆಳ್ಳಿ ಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗಳು ಯಾರ ಅಧೀನದಲ್ಲಿವೆಯೋ ಆ ದೇವರನ್ನು ಘನಪಡಿಸಲೇ ಇಲ್ಲ. ಅದಕ್ಕಾಗಿಯೇ ಆತನಿಂದ ಕಳುಹಿಸಲ್ಪಟ್ಟ ಕೈಯ ಭಾಗವು ಬಂದು ಆ ಬರಹವನ್ನು ಬರೆಯಿತು. ಆ ಬರಹವು ಏನಂದರೆ ಮೆನೇ ಮೆನೇ ತೇಕಲ್ ಉಫ ರ್ಸಿನ್, ಇದರ ಅರ್ಥವು ಹೀಗಿದೆ--ಮೆನೇ ಅಂದರೆ ದೇವರು ನಿನ್ನ ಆಳ್ವಿಕೆಯ ಕಾಲವನ್ನು ಲೆಕ್ಕಿಸಿ ಕೊನೆ ಗಾಣಿಸಿದ್ದಾನೆ; ತೇಕೆಲ್ ಅಂದರೆ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿರುವಿ. ಪೆರೇಸ್ ಅಂದರೆ ನಿನ್ನ ರಾಜ್ಯವು ವಿಭಿನ್ನವಾಗಿ ಮೇದ್ಯಯರಿಗೂ ಪಾರಸೀಯರಿಗೂ ಕೊಡಲ್ಪಟ್ಟಿದೆ ಎಂಬದಾಗಿ ಅರಿಕೆಮಾಡಿದನು. ಆಗ ಬೇಲ್ಯಚ್ಚರನು ಆಜ್ಞಾಪಿಸಲು ದಾನಿಯೇಲನಿಗೆ ಧೂಮ್ರ ವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಹಾರವನ್ನು ಹಾಕಿ, ಇವನು ರಾಜ್ಯದ ಮೂವರು ಅಧಿಕಾರಿಗಳಲ್ಲಿ ಒಬ್ಬನೆಂದು ಸಾರಿ ದನು. ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಕೊಲ್ಲಲ್ಪಟ್ಟನು.ಮೇದ್ಯಯನಾದ ದಾರ್ಯಾವೆಷನು ಅರವತ್ತೆರಡು ವರುಷದವನಾಗಿ ರಾಜ್ಯವನ್ನು ವಶಪಡಿಸಿಕೊಂಡನು.