Job · chapter 19 · verse 7
Job 19:7 in Kannada
ಇಗೋ, ತಪ್ಪಿನೊಳಗಿಂದ ಕೂಗುತ್ತೇನೆ, ಉತ್ತರ ಕೊಡುವವನಿಲ್ಲ; ಗಟ್ಟಿಯಾಗಿ ಕೂಗುತ್ತೇನೆ, ನ್ಯಾಯ ತೀರ್ವಿಕೆ ಇಲ್ಲ.
Igo, tappinolaginda kooguttene, uttara koduvavanilla; gattiyaagi kooguttene, nyaaya teervike illa.
Job 19:7 in English
- King James Version (KJV)
- Behold, I cry out of wrong, but I am not heard: I cry aloud, but [there is] no judgment.
- World English Bible (WEB)
- “Behold, I cry out of wrong, but I am not heard. I cry for help, but there is no justice.
- American Standard Version (ASV)
- Behold, I cry out of wrong, but I am not heard: I cry for help, but there is no justice.
- Bible in Basic English (BBE)
- Truly, I make an outcry against the violent man, but there is no answer: I give a cry for help, but no one takes up my cause.
- Darby Translation (DBY)
- Behold, I cry out of wrong, and I am not heard; I cry aloud, but there is no judgment.
- Webster's Bible (WBS)
- Behold, I cry out of wrong, but I am not heard: I cry aloud, but [there is] no judgment.
- Young's Literal Translation (YLT)
- Lo, I cry out — violence, and am not answered, I cry aloud, and there is no judgment.
Read in context
- 5ನಿಶ್ಚಯವಾಗಿ ನನ್ನ ಮೇಲೆ ನಿಮ್ಮನ್ನು ಹೆಚ್ಚಿಸಿ ಕೊಂಡರೆ, ನನ್ನ ನಿಂದೆಯನ್ನು ನನ್ನ ಮೇಲೆ ಹೊರಿಸಿ ವಾದಿಸಿದರೆ,
- 6ದೇವರು ನನ್ನನ್ನು ತೊಲಗಿಸಿಬಿಟ್ಟು, ತನ್ನ ಬಲೆಯನ್ನು ನನ್ನ ಮೇಲೆ ಬೀಸಿದನೆಂದು ತಿಳಿಯಬೇಕಷ್ಟೆ.
- 7ಇಗೋ, ತಪ್ಪಿನೊಳಗಿಂದ ಕೂಗುತ್ತೇನೆ, ಉತ್ತರ ಕೊಡುವವನಿಲ್ಲ; ಗಟ್ಟಿಯಾಗಿ ಕೂಗುತ್ತೇನೆ, ನ್ಯಾಯ ತೀರ್ವಿಕೆ ಇಲ್ಲ.
- 8ನಾನು ದಾಟ ಕೂಡದ ಹಾಗೆ ಆತನು ನನ್ನ ದಾರಿಗೆ ಬೇಲಿ ಹಾಕಿದ್ದಾನೆ; ನನ್ನ ದಾರಿಗಳಲ್ಲಿ ಕತ್ತಲೆ ಇಡುತ್ತಾನೆ.
- 9ನನ್ನ ಘನತೆಯನ್ನು ನನ್ನಲ್ಲಿಂದ ಸುಲಿದುಕೊಂಡನು; ನನ್ನ ತಲೆಯ ಕಿರೀ ಟವನ್ನು ತೆಗೆದುಹಾಕಿದನು.
Cross references
- Habakkuk 1:2–3 ಹಬಕ್ಕೂಕ 1:2–3ಓ ಕರ್ತನೇ, ನಾನು ನಿನಗೆ ಮೊರೆಯಿಟ್ಟರೂ ಎಷ್ಟರ ವರೆಗೆ ನೀನು ಕೇಳದೇ ಇರುವಿ? ಹಿಂಸೆ ಹಿಂಸೆ ಎಂದು ನಿನಗೆ ಕೂಗುತ್ತೇನೆ; ಆದರೆ ನೀನು ರಕ್ಷಿಸುವದಿಲ್ಲ. ಯಾಕೆ ನನಗೆ ಅಪರಾಧವನ್ನು ತೋರಿಸಿ ಕಷ್ಟವನ್ನು ನೋಡಮಾಡುತ್ತೀ? ಸೂರೆಯೂ ಹಿಂಸೆಯೂ ನನ್ನ ಮುಂದೆ ಅವೆ; ಜಗಳವನ್ನೂ ತರ್ಕವನ್ನೂ ಎಬ್ಬಿಸುವವರು ಇದ್ದಾರೆ.
- Lamentations 3:8 ಪ್ರಲಾಪಗಳು 3:8ನಾನು ಮೊರೆಯಿಟ್ಟು ಕೂಗಿದರೂ ಆತನು ನನ್ನ ಪ್ರಾರ್ಥನೆ ಯನ್ನು ಲಾಲಿಸುವದಿಲ್ಲ.
- Job 31:35–36 ಯೋಬನು 31:35–36ಕೇಳುವವನು ನನಗೆ ಸಿಕ್ಕಿದರೆ ವಾಸಿ; ಇಗೋ, ಸರ್ವಶಕ್ತನು ನನಗೆ ಉತ್ತರಕೊಡಲಿ; ನನ್ನ ವಿರೋ ಧಿಯು ಪುಸ್ತಕವನ್ನು ಬರೆಯಲಿ, ಇದೇ ನನ್ನ ಆಶೆ. ನನ್ನ ಹೆಗಲಲ್ಲಿ ಅದನ್ನು ನಿಶ್ಚಯವಾಗಿ ಹೊರುವೆನು; ಅದನ್ನು ಕಿರೀಟವಾಗಿ ಕಟ್ಟಿಕೊಳ್ಳುವೆನು.
- Job 30:20 ಯೋಬನು 30:20ನಿನಗೆ ಮೊರೆಯಿಡುತ್ತೇನೆ, ಆದರೆ ನೀನು ಉತ್ತರ ಕೊಡುವದಿಲ್ಲ; ನಿಂತುಕೊಳ್ಳುತ್ತೇನೆ, ಆದರೆ ನೀನು ನನ್ನನ್ನು ಲಕ್ಷಿಸುವದಿಲ್ಲ.
- Job 23:3–7 ಯೋಬನು 23:3–7ನಾನು ತಿಳಿದುಕೊಂಡು ಆತನನ್ನು ಕಂಡುಕೊಂಡರೆ ಎಷ್ಟೋ ಒಳ್ಳೇದು! ಆತನ ಪೀಠದ ತನಕ ಬರುವೆನು. ನ್ಯಾಯವನ್ನು ಆತನ ಮುಂದೆ ಸಿದ್ಧಮಾಡುವೆನು; ನನ್ನ ಬಾಯನ್ನು ಪ್ರತಿವಾದಗಳಿಂದ ತುಂಬಿಸುವೆನು. ಆತನು ನನಗೆ ಪ್ರತ್ಯುತ್ತರವಾಗಿ ಕೊಡುವ ಮಾತುಗಳನ್ನು ತಿಳಿದು ಆತನು ಹೇಳುವದನ್ನು ಗ್ರಹಿಸುವೆನು. ಬಹು ಶಕ್ತಿಯಿಂದ ನನ್ನ ಸಂಗಡ ಆತನು ವಾದಿಸುವನೋ? ಇಲ್ಲ, ನನ್ನಲ್ಲಿ ಆತನು ಶಕ್ತಿ ಇಡುವನು. ಅಲ್ಲಿ ನೀತಿವಂತನು ಅವನ ಸಂಗಡ ತರ್ಕ ಮಾಡುವನು; ನಾನು ನಿತ್ಯವಾಗಿ ನನ್ನ ನ್ಯಾಯಾಧಿಪತಿಗೆ ತಪ್ಪಿಸಿಕೊಳ್ಳುವೆನು.
- Job 34:5 ಯೋಬನು 34:5ಯೋಬನು--ನಾನು ನೀತಿವಂತನಾಗಿದ್ದೇನೆ, ದೇವರು ನನ್ನ ನ್ಯಾಯತೀ ರ್ಪನ್ನು ತೆಗೆದುಬಿಟ್ಟನು.
- Job 40:8 ಯೋಬನು 40:8ನೀನು ನನ್ನ ನ್ಯಾಯತೀರ್ವಿಕೆಯನ್ನು ತೆಗೆದುಹಾಕುವಿಯೋ? ನೀನು ನೀತಿವಂತ ನಾಗುವ ಹಾಗೆ ನನ್ನನ್ನು ಖಂಡಿಸುವಿಯೋ?
- Job 21:27 ಯೋಬನು 21:27ಇಗೋ, ನಿಮ್ಮ ಆಲೋಚನೆಗಳನ್ನೂ ನೀವು ನನ್ನ ಮೇಲೆ ಬಲಾತ್ಕಾರಿಗಳಾಗಿ ಮಾಡುವ ಯೋಚನೆ ಗಳನ್ನೂ ತಿಳಿದಿದ್ದೇನೆ.
- Job 9:24 ಯೋಬನು 9:24ಲೋಕವು ಕೆಟ್ಟವನ ಕೈಯಲ್ಲಿ ಕೊಡಲ್ಪಟ್ಟಿದೆ. ಅದರ ನ್ಯಾಯಾಧಿಪತಿಗಳ ಮುಖಗ ಳನ್ನು ಆತನು ಮುಚ್ಚುತ್ತಾನೆ. ಇಲ್ಲವಾದರೆ ಆತನು ಎಲ್ಲಿರುತ್ತಿದ್ದನೋ? ಯಾರಾಗಿರುತ್ತಿದ್ದನೋ?
- Psalm 22:2 ಕೀರ್ತನೆಗಳು 22:2ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ; ನೀನು ಉತ್ತರ ಕೊಡುವದಿಲ್ಲ; ರಾತ್ರಿಯಲ್ಲಿಯೂ ನಾನು ಮೌನವಾಗಿರು ವದಿಲ್ಲ.
- Job 16:21 ಯೋಬನು 16:21ಒಬ್ಬನು ತನ್ನ ನೆರೆಯವನಿಗೋಸ್ಕರ ವ್ಯಾಜ್ಯವಾಡುವಂತೆ ಮನುಷ್ಯನಿಗೋಸ್ಕರ ದೇವರ ಮುಂದೆ ವ್ಯಾಜ್ಯವಾಡುತ್ತಿದ್ದರೆ ಎಷ್ಟೋ ಒಳ್ಳೇದು.ಕೆಲವು ವರುಷಗಳು ಮುಗಿದಾಗ ನಾನು ತಿರುಗಿ ಬಾರದ ದಾರಿಹಿಡಿದು ಹೋಗುತ್ತೇನೆ.
- Job 9:32 ಯೋಬನು 9:32ನಾನು ಆತನಿಗೆ ಉತ್ತರ ಕೊಡುವ ಹಾಗೆಯೂ ನಾವು ಕೂಡ ನ್ಯಾಯದಲ್ಲಿ ಸೇರುವ ಹಾಗೆಯೂ ಆತನು ನನ್ನಂಥ ಮನುಷ್ಯನಲ್ಲ.