Job · chapter 21 · verse 27
Job 21:27 in Kannada
ಇಗೋ, ನಿಮ್ಮ ಆಲೋಚನೆಗಳನ್ನೂ ನೀವು ನನ್ನ ಮೇಲೆ ಬಲಾತ್ಕಾರಿಗಳಾಗಿ ಮಾಡುವ ಯೋಚನೆ ಗಳನ್ನೂ ತಿಳಿದಿದ್ದೇನೆ.
Igo, nimma aalochanegalannoo neevu nanna mele balaatkaarigalaagi maaduva yochane galannoo tilididdene.
Job 21:27 in English
- King James Version (KJV)
- Behold, I know your thoughts, and the devices [which] ye wrongfully imagine against me.
- World English Bible (WEB)
- “Behold, I know your thoughts, the plans with which you would wrong me.
- American Standard Version (ASV)
- Behold, I know your thoughts, And the devices wherewith ye would wrong me.
- Bible in Basic English (BBE)
- See, I am conscious of your thoughts, and of your violent purposes against me;
- Darby Translation (DBY)
- Lo, I know your thoughts, and the devices ye wrongfully imagine against me.
- Webster's Bible (WBS)
- Behold, I know your thoughts, and the devices [which] ye wrongfully imagine against me.
- Young's Literal Translation (YLT)
- Lo, I have known your thoughts, And the devices against me ye do wrongfully.
Read in context
- 25ಮತ್ತೊಬ್ಬನು ಕಹಿಯಾದ ಪ್ರಾಣದಿಂದ ಸಾಯುತ್ತಾನೆ; ಅವನು ಸಂತೋಷದಲ್ಲಿ ಏನೂ ಉಣ್ಣು ವದಿಲ್ಲ.
- 26ಧೂಳಿನಲ್ಲಿ ಮಲಗುತ್ತಾರೆ; ಹುಳಗಳು ಅವರನ್ನು ಅಡಗಿಸುತ್ತವೆ.
- 27ಇಗೋ, ನಿಮ್ಮ ಆಲೋಚನೆಗಳನ್ನೂ ನೀವು ನನ್ನ ಮೇಲೆ ಬಲಾತ್ಕಾರಿಗಳಾಗಿ ಮಾಡುವ ಯೋಚನೆ ಗಳನ್ನೂ ತಿಳಿದಿದ್ದೇನೆ.
- 28ನೀವು ಅನ್ನುತ್ತೀರಿ--ಪ್ರಧಾನಿಯ ಮನೆ ಎಲ್ಲಿ? ದುಷ್ಟರ ನಿವಾಸಗಳ ಗುಡಾ ರವು ಎಲ್ಲಿ?
- 29ಮಾರ್ಗದಲ್ಲಿ ಹಾದುಹೋಗುವ ವರನ್ನು ಕೇಳಲಿಲ್ಲವೋ? ಅವರ ಗುರುತುಗಳನ್ನು ನೀವು ಗೊತ್ತುಮಾಡಲಿಲ್ಲವೋ?
Cross references
- Luke 5:22 ಲೂಕನು 5:22ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದು ಪ್ರತ್ಯುತ್ತರವಾಗಿ ಅವರಿಗೆ--ನೀವು ನಿಮ್ಮ ಹೃದಯಗಳಲ್ಲಿ ಅಂದು ಕೊಳ್ಳುತ್ತಿರುವದೇನು?
- Psalm 119:86 ಕೀರ್ತನೆಗಳು 119:86ನಿನ್ನ ಆಜ್ಞೆಗಳೆಲ್ಲಾ ನಂಬಿ ಕೆಯುಳ್ಳವುಗಳು; ನನ್ನನ್ನು ಅನ್ಯಾಯವಾಗಿ ಹಿಂಸಿ ಸುತ್ತಾರೆ. ನನಗೆ ಸಹಾಯಮಾಡು.
- Psalm 59:4 ಕೀರ್ತನೆಗಳು 59:4ನನ್ನಲ್ಲಿ ತಪ್ಪು ಇಲ್ಲದಿದ್ದರೂ ಅವರು ಓಡಾಡಿ ಸಿದ್ಧರಾಗುತ್ತಾರೆ; ನನಗೆ ಸಹಾಯ ಮಾಡುವದಕ್ಕೆ ಎಚ್ಚತ್ತು ನೋಡು.
- Job 42:7 ಯೋಬನು 42:7ಕರ್ತನು ಈ ಮಾತುಗಳನ್ನೆಲ್ಲಾ ಯೋಬನಿಗೆ ಹೇಳಿದ ಮೇಲೆ ಕರ್ತನು ತೇಮಾನ್ಯನಾದ ಎಲೀಫಜ ನಿಗೆ -- ನಿನ್ನ ಮೇಲೆಯೂ ನಿನ್ನ ಸ್ನೇಹಿತರಿಬ್ಬರ ಮೇಲೆಯೂ ಕೋಪಗೊಂಡಿದ್ದೇನೆ; ನೀವು ನನ್ನ ಸೇವಕನಾದ ಯೋಬನ ಪ್ರಕಾರ ನನ್ನ ವಿಷಯವಾಗಿ ಸರಿಯಾದವುಗಳನ್ನು ಮಾತಾಡಲಿಲ್ಲ.
- Job 8:3–6 ಯೋಬನು 8:3–6ದೇವರು ಅನ್ಯಾಯವಾದ ತೀರ್ಪುಮಾಡುತ್ತಾನೋ? ಸರ್ವಶಕ್ತನು ನೀತಿಗೆ ವಿರುದ್ಧವಾದದ್ದನ್ನು ಮಾಡು ವನೋ? ನಿನ್ನ ಮಕ್ಕಳು ಆತನಿಗೆ ವಿರೋಧವಾಗಿ ಪಾಪಮಾಡಿದ್ದರೆ, ಅವರ ದ್ರೋಹದ ದೆಸೆಯಿಂದ ಅವರನ್ನು ತಳ್ಳಿಬಿಡುವನು. ನೀನೇ ದೇವರನ್ನು ಜಾಗ್ರ ತೆಯಾಗಿ ಹುಡುಕಿ ಸರ್ವಶಕ್ತನಿಗೆ ಬಿನ್ನಹ ಮಾಡಿದರೆ ನೀನು ಶುದ್ಧನೂ ಯಥಾರ್ಥನೂ ಆಗಿದ್ದರೆ ನಿಶ್ಚಯ ವಾಗಿ ಈಗಲೇ ಆತನು ನಿನಗೋಸ್ಕರ ಎಚ್ಚತ್ತು ನಿನ್ನ ನೀತಿಯ ನಿವಾಸವನ್ನು ಅಭಿವೃದ್ಧಿಗೊಳಿಸುವನು.
- 1 Peter 2:19 1 ಪೇತ್ರನು 2:19ಒಬ್ಬನು ಅನ್ಯಾಯವಾಗಿ ಬಾಧೆಪಡುವವ ನಾಗಿದ್ದು ದೇವರ ವಿಷಯವಾದ ಮನಸ್ಸಾಕ್ಷಿಗೋಸ್ಕರ ಆ ದುಃಖವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ.
- Job 20:29 ಯೋಬನು 20:29ದುಷ್ಟಮನುಷ್ಯನಿಗೆ ದೇವರಿಂದ ಬರುವ ಪಾಲೂ ದೇವರಿಂದ ಅವನಿಗೆ ನೇಮಿಸಲ್ಪ ಟ್ಟಿರುವ ಬಾಧ್ಯತೆಯೂ ಇದೇ.
- Job 32:3 ಯೋಬನು 32:3ಅವನ ಮೂವರು ಸ್ನೇಹಿತರ ಮೇಲೆಯೂ ಅವರು ಉತ್ತರ ಕಂಡುಕೊಳ್ಳದೆ ಯೋಬನನ್ನು ಖಂಡಿಸಿದ್ದರಿಂದ ಅವನ ಕೋಪ ಉರಿಯಿತು.
- Job 20:5 ಯೋಬನು 20:5ಏನಂದರೆ, ದುಷ್ಟರ ಜಯವು ಸ್ವಲ್ಪ ಕಾಲದ್ದೂ ಕಪಟಿಗಳ ಸಂತೋಷವು ಕ್ಷಣ ಮಾತ್ರದ್ದೂ.
- Job 15:20–35 ಯೋಬನು 15:20–35ದುಷ್ಟನು ತನ್ನ ದಿವಸಗಳಲ್ಲೆಲ್ಲಾ ವೇದನೆ ಪಡು ತ್ತಾನೆ; ವರುಷಗಳ ಲೆಕ್ಕವು ಬಲಾತ್ಕಾರಿಗೆ ಮರೆಯಾಗಿದೆ. ಭಯಂಕರವಾದ ಶಬ್ದ ಅವನ ಕಿವಿಗಳಲ್ಲಿ ಅದೆ; ವೃದ್ಧಿಯಲ್ಲಿರುವಾಗ ಹಾಳುಮಾಡುವವನು ಅವನ ಮೇಲೆ ಬರುತ್ತಾನೆ. ಕತ್ತಲೆಯೊಳಗಿಂದ ಹಿಂದಿರುಗು ತ್ತೇನೆಂದು ಅವನು ನಂಬುವದಿಲ್ಲ; ಅವನ ಕತ್ತಿಯು ಅವನಿಗಾಗಿ ಕಾದಿದೆ. ಅವನು ರೊಟ್ಟಿಗೊಸ್ಕರ ಅದು ಎಲ್ಲಿ ಎಂದು ಅಲೆಯುತ್ತಾನೆ; ಕತ್ತಲೆಯ ದಿನ ತನ್ನ ಕೈ ಹತ್ತಿರ ಸಿದ್ಧವಾಗಿದೆ ಎಂದು ತಿಳಿದಿದ್ದಾನೆ. ಇಕ್ಕಟ್ಟೂ ಸಂಕಟವೂ ಅವನನ್ನು ಹೆದರಿಸಿ, ಯುದ್ದಕ್ಕೆ ಸಿದ್ಧವಾದ ಅರಸನಂತೆ ಅವನ ಮೇಲೆ ಬೀಳುತ್ತವೆ. ದೇವ ರಿಗೆ ವಿರೋಧವಾಗಿ ತನ್ನ ಕೈಚಾಚಿ, ಸರ್ವಶಕ್ತನಿಗೆ ವಿರೋಧವಾಗಿ ಬಲಗೊಂಡಿದ್ದಾನೆ. ಅವನೆದುರಿಗೆ ಕುತ್ತಿಗೆಯಿಂದಲೂ ತನ್ನ ಗುರಾಣಿಯ ದಪ್ಪವಾದ ಗುಬ್ಬಿಯಿಂದಲೂ ಓಡುತ್ತಾನೆ. ತನ್ನ ಮುಖವನ್ನು ಕೊಬ್ಬಿನಿಂದ ಮುಚ್ಚಿಕೊಂಡು, ತನ್ನ ನಡುವಿನ ಮೇಲೆ ಬೊಜ್ಜನ್ನು ಕಟ್ಟಿಕೊಂಡಿದ್ದಾನೆ. ಹಾಳಾದ ಪಟ್ಟಣ ಗಳಲ್ಲಿಯೂ ನಿವಾಸಿಗಳು ಇಲ್ಲದಂಥ ದಿಬ್ಬೆಗಳಾ ಗುವದಕ್ಕೆ ಸಿದ್ಧವಾದಂಥ ಮನೆಗಳಲ್ಲಿಯೂ ವಾಸ ಮಾಡುತ್ತಾನೆ. ಅವನು ಐಶ್ವರ್ಯವಂತನಾಗುವದಿಲ್ಲ; ಅವನ ಆಸ್ತಿ ನಿಲ್ಲುವದಿಲ್ಲ; ಅವನ ಸ್ವಾಸ್ಥ್ಯವು ಭೂಮಿಯ ಮೇಲೆ ವಿಸ್ತಾರವಾಗುವದಿಲ್ಲ. ಕತ್ತಲೆಯೊಳಗಿಂದ ಅವನು ತೊಲಗುವದಿಲ್ಲ; ಅವನ ಕೊಂಬೆಗಳನ್ನು ಜ್ವಾಲೆಯು ಬಾಡಿಸುವದು; ಅವನ ಬಾಯಿಯ ಶ್ವಾಸ ದಿಂದ ತೊಲಗಿ ಹೋಗುತ್ತಾನೆ. ಮೋಸ ಹೋದ ವನು ವ್ಯರ್ಥತ್ವವನ್ನು ನಂಬದೇ ಇರಲಿ; ವ್ಯರ್ಥತ್ವವೇ ಅವನ ಪ್ರತಿಫಲವಾಗಿರುವದು. ಅವನ ಸಮಯಕ್ಕೆ ಮುಂಚೆಯೇ ಅದು ತೀರುವದು; ಅವನ ಕೊಂಬೆಯು ಹಸಿರಾಗುವದಿಲ್ಲ. ಹಣ್ಣಾಗದ ದ್ರಾಕ್ಷೆಯ ಗಿಡದಂತೆ ತನ್ನ ಕಾಯಿ ಉದುರಿಸಿ ಎಣ್ಣೆಯ ಮರದಂತೆ ತನ್ನ ಹೂವನ್ನು ಚದರಿಸುವನು. ಕಪಟಿಗಳ ಸಭೆಯು ಹಾಳಾಗುವದು; ಲಂಚದ ಗುಡಾರಗಳನ್ನು ಬೆಂಕಿಯು ಸುಡುವದು.ಅವರು ಕೇಡಿನಿಂದ ಬಸುರಾಗಿ ವ್ಯರ್ಥತ್ವ ವನ್ನು ಹೆರುವರು; ಅವರ ಗರ್ಭವು ಮೋಸವನ್ನು ಸಿದ್ಧಮಾಡುವದು. ಅವರು ಕೇಡಿನಿಂದ ಬಸುರಾಗಿ ವ್ಯರ್ಥತ್ವ ವನ್ನು ಹೆರುವರು; ಅವರ ಗರ್ಭವು ಮೋಸವನ್ನು ಸಿದ್ಧಮಾಡುವದು.
- Job 4:8–11 ಯೋಬನು 4:8–11ನಾನು ಕಂಡ ಹಾಗೆ ದುಷ್ಟತನವನ್ನು ಉಳುವವರೂ ದುಷ್ಟತನವನ್ನು ಬಿತ್ತುವ ವರೂ ಅದನ್ನೇ ಕೊಯ್ಯುತ್ತಾರೆ. ದೇವರ ಸಿಡಿತದಿಂದ ಅವರು ನಾಶವಾಗುತ್ತಾರೆ. ಆತನ ಮೂಗಿನ ಉಸಿರಿ ನಿಂದ ಅವರು ಕ್ಷಯಿಸಿಹೋಗುತ್ತಾರೆ, ಸಿಂಹದ ಘರ್ಜನೆಯೂ ಕ್ರೂರಸಿಂಹದ ಶಬ್ದವೂ ಸಿಂಹದ ಮರಿ ಗಳ ಹಲ್ಲುಗಳೂ ಮುರಿಯಲ್ಪಟ್ಟಿವೆ. ಪ್ರಾಯದ ಸಿಂಹವು ಕೊಳ್ಳೆ ಇಲ್ಲದರಿಂದ ನಾಶವಾಗುತ್ತದೆ. ಸಿಂಹದ ಮರಿಗಳು ಚದುರಿಸಲ್ಪಡುತ್ತವೆ.
- Job 5:3–5 ಯೋಬನು 5:3–5ಮೂಢನು ಬೇರೂರುವದನ್ನು ನಾನು ನೋಡಿದೆನು; ಸಂಗಡಲೇ ಅವನ ಸ್ಥಾನವನ್ನು ನಾನು ಶಪಿಸಿದೆನು. ಅವನ ಮಕ್ಕಳು ಭದ್ರತೆಗೆ ದೂರವಾಗಿ ದ್ದಾರೆ; ತಪ್ಪಿಸುವವನಿಲ್ಲದೆ (ಅವರು) ಬಾಗಿಲಲ್ಲಿ ಜಜ್ಜ ಲ್ಪಡುವರು. ಹಸಿದವನು ಅವನ ಪೈರನ್ನು ತಿನ್ನುವನು, ಮುಳ್ಳುಗಳೊಳಗಿಂದಲೂ ಅದನ್ನು ತೆಗೆದುಕೊಳ್ಳು ವನು; ಕೊಳ್ಳೆಗಾರನು ಅವರ ಆಸ್ತಿಯನ್ನು ನುಂಗಿಬಿಡು ವನು.