Job · chapter 19 · verse 8
Job 19:8 in Kannada
ನಾನು ದಾಟ ಕೂಡದ ಹಾಗೆ ಆತನು ನನ್ನ ದಾರಿಗೆ ಬೇಲಿ ಹಾಕಿದ್ದಾನೆ; ನನ್ನ ದಾರಿಗಳಲ್ಲಿ ಕತ್ತಲೆ ಇಡುತ್ತಾನೆ.
Naanu daata koodada haage aatanu nanna daarige beli haakiddaane; nanna daarigalalli kattale iduttaane.
Job 19:8 in English
- King James Version (KJV)
- He hath fenced up my way that I cannot pass, and he hath set darkness in my paths.
- World English Bible (WEB)
- He has walled up my way so that I can’t pass, and has set darkness in my paths.
- American Standard Version (ASV)
- He hath walled up my way that I cannot pass, And hath set darkness in my paths.
- Bible in Basic English (BBE)
- My way is walled up by him so that I may not go by: he has made my roads dark.
- Darby Translation (DBY)
- He hath hedged up my way that I cannot pass, and he hath set darkness in my paths.
- Webster's Bible (WBS)
- He hath fenced up my way that I cannot pass, and he hath set darkness in my paths.
- Young's Literal Translation (YLT)
- My way He hedged up, and I pass not over, And on my paths darkness He placeth.
Read in context
- 6ದೇವರು ನನ್ನನ್ನು ತೊಲಗಿಸಿಬಿಟ್ಟು, ತನ್ನ ಬಲೆಯನ್ನು ನನ್ನ ಮೇಲೆ ಬೀಸಿದನೆಂದು ತಿಳಿಯಬೇಕಷ್ಟೆ.
- 7ಇಗೋ, ತಪ್ಪಿನೊಳಗಿಂದ ಕೂಗುತ್ತೇನೆ, ಉತ್ತರ ಕೊಡುವವನಿಲ್ಲ; ಗಟ್ಟಿಯಾಗಿ ಕೂಗುತ್ತೇನೆ, ನ್ಯಾಯ ತೀರ್ವಿಕೆ ಇಲ್ಲ.
- 8ನಾನು ದಾಟ ಕೂಡದ ಹಾಗೆ ಆತನು ನನ್ನ ದಾರಿಗೆ ಬೇಲಿ ಹಾಕಿದ್ದಾನೆ; ನನ್ನ ದಾರಿಗಳಲ್ಲಿ ಕತ್ತಲೆ ಇಡುತ್ತಾನೆ.
- 9ನನ್ನ ಘನತೆಯನ್ನು ನನ್ನಲ್ಲಿಂದ ಸುಲಿದುಕೊಂಡನು; ನನ್ನ ತಲೆಯ ಕಿರೀ ಟವನ್ನು ತೆಗೆದುಹಾಕಿದನು.
- 10ಸುತ್ತಲೂ ನನ್ನನ್ನು ನಾಶ ಪಡಿಸಿದ್ದರಿಂದ ನಾನು ಹೋಗುತ್ತೇನೆ; ಮರವನ್ನು ಕೀಳುವ ಹಾಗೆ ನನ್ನ ನಿರೀಕ್ಷೆಯನ್ನು ಕಿತ್ತುಬಿಟ್ಟನು.
Cross references
- Lamentations 3:7 ಪ್ರಲಾಪಗಳು 3:7ನಾನು ಹೊರಗೆ ಬಾರದ ಹಾಗೆ ಆತನು ನನ್ನ ಸುತ್ತಲೂ ಬೇಲಿ ಹಾಕಿದ್ದಾನೆ; ಆತನು ನನ್ನ ಸಂಕೋಲೆಯ ಭಾರವನ್ನು ಹೆಚ್ಚಿಸಿದ್ದಾನೆ.
- Job 3:23 ಯೋಬನು 3:23ದೇವರು ಸುತ್ತು ಬೇಲಿ ಹಾಕಿದ್ದರಿಂದ ಅಡಗಿದ ಮಾರ್ಗವುಳ್ಳವರಿಗೂ ಬೆಳಕು ಯಾಕೆ?
- Proverbs 4:19 ಜ್ಞಾನೋಕ್ತಿಗಳು 4:19ದುಷ್ಟರ ಮಾರ್ಗವು ಕತ್ತಲೆ ಯಂತಿದೆ. ಅವರು ಯಾವದಕ್ಕೆ ಎಡವಿ ಬೀಳುತ್ತಾರೋ ಅದು ಅವರಿಗೆ ಗೊತ್ತಾಗದು.
- Psalm 88:8 ಕೀರ್ತನೆಗಳು 88:8ನನ್ನ ಪರಿಚಿತರನ್ನು ನನಗೆ ದೂರಮಾಡಿದ್ದೀ; ನನ್ನನ್ನು ಅವ ರಿಗೆ ಅಸಹ್ಯ ಮಾಡಿದ್ದೀ; ಮುಚ್ಚಲ್ಪಟ್ಟಿದ್ದೇನೆ, ಹೊರಗೆ ಬರಲಾರೆನು.
- Lamentations 3:9 ಪ್ರಲಾಪಗಳು 3:9ಕೆತ್ತಿದ ಕಲ್ಲಿನಿಂದ ನನ್ನ ಮಾರ್ಗಗಳನ್ನು ಮುಚ್ಚಿ ಆತನು ನನ್ನ ದಾರಿಗಳನ್ನು ಡೊಂಕು ಮಾಡಿದ್ದಾನೆ.
- Hosea 2:6 ಹೋಶೇಯ 2:6ಆದದರಿಂದ ಇಗೋ, ನಾನು ನಿನ್ನ ಮಾರ್ಗಕ್ಕೆ ಮುಳ್ಳುಗಳ ಬೇಲಿ ಹಾಕುವೆನು; ಅವಳು ತನ್ನ ಹಾದಿಗಳನ್ನು ಕಾಣದ ಹಾಗೆ ಗೋಡೆಯನ್ನು ಕಟ್ಟುವೆನು.
- Joshua 24:7 ಯೆಹೋಶುವ 24:7ಅವರು ಕರ್ತನಿಗೆ ಕೂಗಿದಾಗ ನಿಮಗೂ ಐಗುಪ್ತ್ಯರಿಗೂ ಮಧ್ಯದಲ್ಲಿ ಅಂಧಕಾರವನ್ನು ಇರಿಸಿ ಸಮುದ್ರವನ್ನು ಅವರ ಮೇಲೆ ಬರಮಾಡಿ ಅವರನ್ನು ಮುಚ್ಚಿಬಿಟ್ಟೆನು.
- Isaiah 50:10 ಯೆಶಾಯ 50:10ನಿಮ್ಮೊಳಗೆ ಕರ್ತನಿಗೆ ಭಯಪಟ್ಟು ಆತನ ಸೇವ ಕನ ಸ್ವರವನ್ನು ಕೇಳಿ ಬೆಳಕಿಲ್ಲದೆ ಕತ್ತಲೆಯಲ್ಲಿ ನಡೆ ಯುವವನು ಯಾರು? ಅವನು ಕರ್ತನ ಹೆಸರಿನಲ್ಲಿ ನಂಬಿಕೆಯಿಟ್ಟು ತನ್ನ ದೇವರ ಮೇಲೆ ಆತುಕೊಳ್ಳಲಿ.ಇಗೋ, ಕಿಡಿಗಳಿಂದ ಆವರಿಸಿಕೊಳ್ಳುವಂತೆ ಬೆಂಕಿ ಯನ್ನು ಹತ್ತಿಸಿಕೊಳ್ಳುವವರೆಲ್ಲರೇ, ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ ನೀವು ಹತ್ತಿಸಿದ ಕಿಡಿಗಳಲ್ಲಿಯೂ ನಡೆಯಿರಿ. ನನ್ನ ಹಸ್ತದಿಂದ ನಿಮಗಾಗುವದು ಇದೇ; ನೀವು ದುಃಖದಲ್ಲಿ ಬಿದ್ದುಕೊಂಡಿರುವಿರಿ.
- Job 30:26 ಯೋಬನು 30:26ನಾನು ಒಳ್ಳೇದನ್ನು ನಿರೀಕ್ಷಿಸಲು ಕೇಡುಬಂತು; ಬೆಳಕನ್ನು ಎದುರು ನೋಡಲು, ಅಂಧಕಾರ ಬಂತು.
- Jeremiah 23:12 ಯೆರೆಮೀಯ 23:12ಆದದರಿಂದ ಅವರ ಮಾರ್ಗವು ಕತ್ತಲೆಯಲ್ಲಿರುವ ಜಾರುವ ಸ್ಥಳಗಳ ಹಾಗೆ ಅವರಿಗಿರುವದು; ಅವರು ತಳ್ಳಲ್ಪಟ್ಟು ಬೀಳುವರು; ಕೇಡನ್ನು, ಅವರ ವಿಚಾರಣೆಯ ವರುಷವನ್ನು ಅವರ ಮೇಲೆ ಬರಮಾಡುವೆನೆಂದು ಕರ್ತನು ಅನ್ನುತ್ತಾನೆ.
- Jeremiah 13:16 ಯೆರೆಮೀಯ 13:16ಆತನು ಕತ್ತಲೆಯನ್ನು ತರುವದಕ್ಕಿಂತ ಮುಂಚೆಯೂ ನಿಮ್ಮ ಕಾಲುಗಳು ಅಂಧಕಾರದ ಪರ್ವತಗಳ ಮೇಲೆ ಎಡವುವದಕ್ಕಿಂತ ಮುಂಚೆಯೂ ನೀವು ಬೆಳಕಿಗೆ ಕಾದುಕೊಳ್ಳುತ್ತಿರುವಾಗ ಆತನು ಅದನ್ನು ಮರಣದ ನೆರಳಾಗಿ ಮಾಡಿ ಕಾರ್ಗ ತ್ತಲಿಗೆ ಬದಲಾಯಿಸುವದಕ್ಕಿಂತ ಮುಂಚೆಯೇ ನಿಮ್ಮ ದೇವರಾದ ಕರ್ತನನ್ನು ಮಹಿಮೆಪಡಿಸಿರಿ.
- John 8:12 ಯೋಹಾನನು 8:12ತರುವಾಯ ಯೇಸು ತಿರಿಗಿ ಮಾತನಾಡಿ ಅವರಿಗೆ--ನಾನೇ ಲೋಕಕ್ಕೆ ಬೆಳಕಾಗಿದ್ದೇನೆ; ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ನಡೆಯುವದಿಲ್ಲ; ಆದರೆ ಜೀವದ ಬೆಳಕನ್ನು ಹೊಂದುವನು ಎಂದು ಹೇಳಿದನು.