Job · chapter 21 · verse 4
Job 21:4 in Kannada
ನಾನಾದರೆ ಮನುಷ್ಯನಿಗೆ ನನ್ನ ದೂರು ಹೇಳುವೆನೋ? ಹೇಳಿ ದರೂ ನನ್ನ ಆತ್ಮವು ಯಾಕೆ ವ್ಯಾಕುಲಪಡಬಾರದು?
Naanaadare manushyanige nanna dooru heluveno? Heli daroo nanna aatmavu yaake vyaakulapadabaaradu?
Job 21:4 in English
- King James Version (KJV)
- As for me, [is] my complaint to man? and if [it were so], why should not my spirit be troubled?
- World English Bible (WEB)
- As for me, is my complaint to man? Why shouldn’t I be impatient?
- American Standard Version (ASV)
- As for me, is my complaint to man? And why should I not be impatient?
- Bible in Basic English (BBE)
- As for me, is my outcry against man? is it then to be wondered at if my spirit is troubled?
- Darby Translation (DBY)
- As for me, is my complaint to a man? or wherefore should not my spirit be impatient?
- Webster's Bible (WBS)
- As for me, [is] my complaint to man? and if [it were so] , why should not my spirit be troubled?
- Young's Literal Translation (YLT)
- I — to man [is] my complaint? and if [so], wherefore May not my temper become short?
Read in context
- 2ನನ್ನ ಮಾತನ್ನು ಲಕ್ಷ್ಯವಿಟ್ಟು ಕೇಳಿರಿ; ಇವು ನಿಮ್ಮ ಆದರಣೆಗಳಾಗಿರಲಿ.
- 3ನನ್ನನ್ನು ತಾಳಿಕೊಳ್ಳಿರಿ, ನಾನು ಮಾತನಾಡುವೆನು; ನಾನು ಮಾತ ನಾಡಿದ ಮೇಲೆ ಹಾಸ್ಯ ಮಾಡಬಹುದು.
- 4ನಾನಾದರೆ ಮನುಷ್ಯನಿಗೆ ನನ್ನ ದೂರು ಹೇಳುವೆನೋ? ಹೇಳಿ ದರೂ ನನ್ನ ಆತ್ಮವು ಯಾಕೆ ವ್ಯಾಕುಲಪಡಬಾರದು?
- 5ನನ್ನನ್ನು ಗಮನಿಸಿ ಆಶ್ಚರ್ಯಪಡಿರಿ; ಬಾಯಿಯ ಮೇಲೆ ಕೈ ಇಟ್ಟುಕೊಳ್ಳಿರಿ.
- 6ನಾನು ನೆನಪು ಮಾಡಿಕೊಂಡರೆ ತಲ್ಲಣ ಪಡುತ್ತೇನೆ; ನಡುಗುವಿಕೆಯು ನನ್ನ ಮಾಂಸವನ್ನು ಹಿಡಿಯುತ್ತದೆ.
Cross references
- Psalm 102:1 ಕೀರ್ತನೆಗಳು 102:1ಓ ಕರ್ತನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಮೊರೆಯು ನಿನ್ನ ಬಳಿಗೆ ಸೇರಲಿ.
- Psalm 42:11 ಕೀರ್ತನೆಗಳು 42:11ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ನಾನು ಇನ್ನೂ ಕೊಂಡಾಡುವೆನು.
- Psalm 142:2–3 ಕೀರ್ತನೆಗಳು 142:2–3ಆತನ ಮುಂದೆ ನನ್ನ ಚಿಂತೆಯನ್ನು ಹೊಯ್ದಿದ್ದೇನೆ; ನನ್ನ ಇಕ್ಕಟ್ಟನ್ನು ಆತನ ಮುಂದೆ ತಿಳಿಸಿದ್ದೇನೆ. ನನ್ನ ಆತ್ಮವು ನನ್ನಲ್ಲಿ ಕುಂದಿ ಹೋದಾಗ ನೀನು ನನ್ನ ದಾರಿಯನ್ನು ತಿಳುಕೊಂಡಿದ್ದೀ; ನಾನು ನಡೆಯುವ ದಾರಿಯಲ್ಲಿ ಗುಪ್ತವಾಗಿ ನನಗೆ ಉರ್ಲನ್ನು ಒಡ್ಡಿದ್ದಾರೆ.
- 1 Samuel 1:16 1 ಸಮುವೇಲನು 1:16ನಿನ್ನ ದಾಸಿಯನ್ನು ಬೆಲಿಯಾಳನ ಮಗಳೆಂದು ನೆನಸಬೇಡ; ಯಾಕಂದರೆ ನನ್ನ ಹೆಚ್ಚಾದ ಚಿಂತೆಯಿಂದಲೂ ದುಃಖದಿಂದಲೂ ಈ ವರೆಗೂ ಮಾತನಾಡಿಕೊಳ್ಳುತ್ತಾ ಇದ್ದೆನು ಅಂದಳು.
- Psalm 77:3–9 ಕೀರ್ತನೆಗಳು 77:3–9ನಾನು ವ್ಯಥೆಪಡುತ್ತಾ ದೇವರನ್ನು ಜ್ಞಾಪಕಮಾಡಿಕೊಂಡೆನು. ನಾನು ಚಿಂತಿ ಸುವದರಿಂದ ನನ್ನ ಆತ್ಮವು ಬಳಲಿ ಹೋಗಿದೆ ಸೆಲಾ. ನನ್ನ ಕಣ್ಣುಗಳನ್ನು ಮುಚ್ಚದಂತೆ ನೀನು ಹಿಡಿಯುತ್ತೀ; ನಾನು ಮಾತಾಡದಂತೆ ಕಳವಳಪಟ್ಟಿದ್ದೇನೆ. ಪುರಾ ತನ ದಿವಸಗಳನ್ನೂ ಆದಿಕಾಲದ ವರುಷಗಳನ್ನೂ ಯೋಚಿಸಿದೆನು. ನನ್ನ ಹಾಡನ್ನು ರಾತ್ರಿಯಲ್ಲಿ ಜ್ಞಾಪಕ ಮಾಡಿಕೊಳ್ಳುತ್ತೇನೆ; ನನ್ನ ಹೃದಯದ ಸಂಗಡ ಮಾತಾ ಡುತ್ತೇನೆ; ನನ್ನ ಆತ್ಮವು ಪರಿಶೋಧನೆ ಮಾಡಿತು. ನಿರಂತರವಾಗಿ ಕರ್ತನು ತಳ್ಳಿಬಿಡುವನೋ? ಇನ್ನು ದಯೆತೋರದೆ ಇರುವನೋ? ಆತನ ಕೃಪೆಯು ಸದಾಕಾಲಕ್ಕೆ ನಿಂತು ಹೋಗುತ್ತದೋ? ನಿರಂತರಕ್ಕೂ ವಾಗ್ದಾನ ತಪ್ಪಿಹೋಗುತ್ತದೋ? ದೇವರು ಕರು ಣಿಸುವದನ್ನು ಮರೆತು ಬಿಟ್ಟಿದ್ದಾನೋ? ತನ್ನ ಅಂತಃ ಕರಣಗಳನ್ನು ಕೋಪದಿಂದ ಮುಚ್ಚಿಕೊಂಡಿದ್ದಾನೋ? ಸೆಲಾ.
- Exodus 6:9 ವಿಮೋಚನಕಾಂಡ 6:9ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಹಾಗೆ ಹೇಳಿ ದಾಗ ಅವರು ಮನೋವೇದನೆಯ ದೆಸೆಯಿಂದಲೂ ಕ್ರೂರವಾದ ದಾಸತ್ವದ ದೆಸೆಯಿಂದಲೂ ಮೋಶೆಯ ಮಾತನ್ನು ಕೇಳಲಿಲ್ಲ.
- Psalm 22:1–3 ಕೀರ್ತನೆಗಳು 22:1–3ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಯಾಕೆ ನನಗೆ ಸಹಾಯ ಮಾಡದೆಯೂ ನನ್ನ ಕೂಗಿಗೆ ಕಿವಿ ಗೊಡದೆಯೂ ದೂರವಾಗಿದ್ದೀ. ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ; ನೀನು ಉತ್ತರ ಕೊಡುವದಿಲ್ಲ; ರಾತ್ರಿಯಲ್ಲಿಯೂ ನಾನು ಮೌನವಾಗಿರು ವದಿಲ್ಲ. ಆದರೆ ನೀನು ಪರಿಶುದ್ಧನಾಗಿದ್ದೀ; ನೀನು ಇಸ್ರಾಯೇಲಿನ ಸ್ತೋತ್ರಗಳಲ್ಲಿ ವಾಸ ಮಾಡುವಾ ತನು.
- Job 7:11–21 ಯೋಬನು 7:11–21ಆದದರಿಂದ ನಾನು ನನ್ನ ಬಾಯಿಯನ್ನು ಮುಚ್ಚು ವದಿಲ್ಲ; ನಾನು ಆತ್ಮ ವೇದನೆಯಿಂದ ಮಾತನಾಡು ವೆನು; ನನ್ನ ಮನೋವ್ಯಥೆಯಲ್ಲಿ ನಾನು ಗುಣುಗುಟ್ಟು ವೆನು. ನೀನು ನನಗೆ ಕಾವಲಿಡುವದಕ್ಕೆ ನಾನೇನು ಸಮುದ್ರವೋ? ಇಲ್ಲವೆ ತಿಮಿಂಗಲವೋ? ನನ್ನ ಮಂಚವು ನನ್ನನ್ನು ಆದರಿಸಲಿ, ನನ್ನ ಹಾಸಿಗೆಯು ನನ್ನ ಚಿಂತೆಯನ್ನು ಶಮನಮಾಡಲಿ ಅನ್ನಲಾಗಿ ಸ್ವಪ್ನ ಗಳಿಂದ ನನ್ನನ್ನು ಹೆದರಿಸುತ್ತೀ; ದರ್ಶನಗಳಿಂದ ನನ್ನನ್ನು ನಡುಗಿಸುತ್ತೀ. ಆದದರಿಂದ ನನ್ನ ಪ್ರಾಣವು ಕೊರಳು ಹಿಸುಕುವದನ್ನೂ ನನ್ನ ಜೀವವು ಮರಣವನ್ನೂ ಆದು ಕೊಳ್ಳುತ್ತದೆ. ನಾನು ಬೇಸರಗೊಂಡಿದ್ದೇನೆ; ನಿತ್ಯವಾಗಿ ನಾನು ಬದುಕಲೊಲ್ಲೆನು; ನನ್ನನ್ನು ಬಿಟ್ಟು ಬಿಡು; ಯಾಕಂದರೆ ನನ್ನ ದಿವಸಗಳು ವ್ಯರ್ಥವಾಗಿವೆ. ನೀನು ಅವನನ್ನು ಹೆಚ್ಚಿಸುವ ಹಾಗೆಯೂ ಅವನ ಮೇಲೆ ನಿನ್ನ ಹೃದಯ ಇಡುವ ಹಾಗೆಯೂ ಅವನನ್ನು ಪ್ರತಿ ಉದಯದಲ್ಲಿ ದರ್ಶಿಸುವ ಹಾಗೆಯೂ ಕ್ಷಣ ಕ್ಷಣಕ್ಕೆ ಅವನನ್ನು ಪರೀಕ್ಷಿಸುವ ಹಾಗೆಯೂ ಮನುಷ್ಯನು ಎಷ್ಟರವನು? ಎಷ್ಟರ ವರೆಗೆ ನನ್ನ ಕಡೆಯಿಂದ ದೃಷ್ಟಿ ತೊಲಗಿಸುವದಿಲ್ಲ? ನಾನು ಉಗುಳು ನುಂಗುವ ದಕ್ಕೂ ನನ್ನನ್ನು ಬಿಡುವದಿಲ್ಲವೋ? ನಾನು ಪಾಪ ಮಾಡಿದ್ದೇನೆ; ಓ ಮನುಷ್ಯರನ್ನು ಕಾಯುವವನೇ, ನಾನು ನಿನಗೆ ಏನು ಮಾಡಲಿ? ನನಗೆ ನಾನೇ ಭಾರವಾಗುವ ಹಾಗೆ ನನ್ನನ್ನು ನಿನಗೆ ಗುರಿಯಾಗಿ ಇಟ್ಟು ಕೊಳ್ಳುವದು ಯಾಕೆ?ಯಾಕೆ ನನ್ನ ದ್ರೋಹವನ್ನು ಮನ್ನಿಸುವದಿಲ್ಲ? ನನ್ನ ಅಕ್ರಮವನ್ನು ಪರಿಹರಿಸುವ ದಿಲ್ಲವೇಕೆ? ಈಗ ಧೂಳಿನಲ್ಲಿ ಮಲಗಿಕೊಳ್ಳುವೆನು; ನೀನು ಮುಂಜಾವಿನಲ್ಲಿ ನನ್ನನ್ನು ಹುಡುಕಿದರೆ ನಾನು ಇರುವದಿಲ್ಲ. ಯಾಕೆ ನನ್ನ ದ್ರೋಹವನ್ನು ಮನ್ನಿಸುವದಿಲ್ಲ? ನನ್ನ ಅಕ್ರಮವನ್ನು ಪರಿಹರಿಸುವ ದಿಲ್ಲವೇಕೆ? ಈಗ ಧೂಳಿನಲ್ಲಿ ಮಲಗಿಕೊಳ್ಳುವೆನು; ನೀನು ಮುಂಜಾವಿನಲ್ಲಿ ನನ್ನನ್ನು ಹುಡುಕಿದರೆ ನಾನು ಇರುವದಿಲ್ಲ.
- 2 Kings 6:26–27 2 ಅರಸುಗಳು 6:26–27ಇಸ್ರಾ ಯೇಲಿನ ಅರಸನು ಗೋಡೆಯ ಮೇಲೆ ಹಾದು ಹೋಗುತ್ತಿರುವಾಗ ಒಬ್ಬ ಸ್ತ್ರೀಯು ಅವನನ್ನು ಬೇಡುವ ವಳಾಗಿ--ನನ್ನ ಯಜಮಾನನೇ, ಅರಸನೇ, ಸಹಾಯ ಮಾಡು ಅಂದಳು. ಅದಕ್ಕವನು--ಕರ್ತನು ನಿನ್ನನ್ನು ಸಂರಕ್ಷಿಸದೆ ಹೋದರೆ ನಾನು ಎಲ್ಲಿಂದ ನಿನ್ನನ್ನು ರಕ್ಷಿ ಸಲಿ? ಕಣದಿಂದಲೋ ಇಲ್ಲವೆ ದ್ರಾಕ್ಷೇ ಅಲೆಯಿಂದ ಲೋ ಅಂದನು.
- Matthew 26:38 ಮತ್ತಾಯನು 26:38ಆತನು ಅವರಿಗೆ--ನನ್ನ ಪ್ರಾಣವು ಮರಣಹೊಂದುವಷ್ಟು ಅತಿ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರ್ರಿ ಅಂದನು.
- Job 6:11 ಯೋಬನು 6:11ನಾನು ನಿರೀಕ್ಷಿಸುವ ಹಾಗೆ ನನ್ನ ಶಕ್ತಿ ಏನು? ನಾನು ನನ್ನ ಆಯುಷ್ಯವನ್ನು ಹೆಚ್ಚಿಸುವ ಹಾಗೆ ನನ್ನ ಅಂತ್ಯವೇನು?
- Job 10:1–2 ಯೋಬನು 10:1–2ನನ್ನ ಪ್ರಾಣವು ನನ್ನ ಜೀವನಕ್ಕಾಗಿ ಬೇಸರಗೊಂಡಿದೆ. ನನ್ನ ದೂರುಗಳನ್ನು ನನ್ನ ಮೇಲೆಯೇ ಬಿಡುವೆನು; ನನ್ನ ಮನೋವ್ಯಥೆ ಯಿಂದ ಮಾತನಾಡುವೆನು. ನಾನು ದೇವರಿಗೆ ಹೀಗೆ ಹೇಳುತ್ತೇನೆ--ನನ್ನನ್ನು ಖಂಡಿಸಬೇಡ; ಯಾವದಕ್ಕೋ ಸ್ಕರ ನನ್ನ ಸಂಗಡ ವ್ಯಾಜ್ಯಮಾಡುತ್ತೀ ಎಂದು ನನಗೆ ತಿಳಿಸು.