Job · chapter 28 · verse 1
Job 28:1 in Kannada
ಬೆಳ್ಳಿಗೆ ಗಣಿಯೂ ಬಂಗಾರಕ್ಕೆ ಚೊಕ್ಕ ಮಾಡುವ ಸ್ಥಳವೂ ಉಂಟಲ್ಲಾ?
Bellige ganiyoo bangaarakke chokka maaduva sthalavoo untallaa?
Job 28:1 in English
- King James Version (KJV)
- Surely there is a vein for the silver, and a place for gold [where] they fine [it].
- World English Bible (WEB)
- “Surely there is a mine for silver, and a place for gold which they refine.
- American Standard Version (ASV)
- Surely there is a mine for silver, And a place for gold which they refine.
- Bible in Basic English (BBE)
- Truly there is a mine for silver, and a place where gold is washed out.
- Darby Translation (DBY)
- Surely there is a vein for the silver, and a place for gold which they refine;
- Webster's Bible (WBS)
- Surely there is a vein for the silver, and a place for gold [where] they fine [it] .
- Young's Literal Translation (YLT)
- Surely there is for silver a source, And a place for the gold they refine;
Read in context
- 1ಬೆಳ್ಳಿಗೆ ಗಣಿಯೂ ಬಂಗಾರಕ್ಕೆ ಚೊಕ್ಕ ಮಾಡುವ ಸ್ಥಳವೂ ಉಂಟಲ್ಲಾ?
- 2ಕಬ್ಬಿಣ ವನ್ನು ಭೂಮಿಯಿಂದ ತೆಗೆಯುತ್ತಾರೆ; ಕಲ್ಲನ್ನು ಕರಗಿಸಿ ತಾಮ್ರವನ್ನು ತೆಗೆಯುತ್ತಾರೆ.
- 3ಕತ್ತಲೆಗೆ ಮೇರೆ ಇಡು ತ್ತಾರೆ. ಅಂಧಕಾರದಲ್ಲಿಯೂ ಮರಣದ ನೆರಳಿನ ಲ್ಲಿಯೂ ಇರುವ ಕಲ್ಲುಗಳನ್ನು ಕಟ್ಟಕಡೇ ವರೆಗೂ ಅವರು ಶೋಧಿಸುತ್ತಾರೆ.
Cross references
- 1 Peter 1:7 1 ಪೇತ್ರನು 1:7ಭಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವಮಾನ ಗಳನ್ನು ಉಂಟುಮಾಡುವದು.
- Isaiah 48:10 ಯೆಶಾಯ 48:10ಇಗೋ, ನಾನು ನಿನ್ನನ್ನು ಶೋಧಿಸಿದ್ದೇನೆ; ಆದರೆ ಬೆಳ್ಳಿಯಂತೆ ಅಲ್ಲ; ಸಂಕಟದ ಕುಲುಮೆಯಿಂದ ನಿನ್ನನ್ನು ಆದು ಕೊಂಡಿದ್ದೇನೆ.
- Malachi 3:2–3 ಮಲಾಕಿಯ 3:2–3ಆದರೆ ಆತನ ಬರುವಿಕೆಯ ದಿವಸದಲ್ಲಿ ಯಾರು ಉಳಿದಾರು? ಆತನು ಪ್ರತ್ಯಕ್ಷವಾಗುವಾಗ ಯಾರು ನಿಲ್ಲುವರು? ಆತನು ಅಕ್ಕಸಾಲಿಗನ ಬೆಂಕಿಯ ಹಾಗೆಯೂ ಅಗಸನ ಚೌಳಿನ ಹಾಗೆಯೂ ಇದ್ದಾನೆ. ಆತನು ಬೆಳ್ಳಿಯನ್ನು ಕರಗಿಸಿ ಶುದ್ಧಮಾಡುವವನ ಹಾಗೆ ಕುಳಿತು ಲೇವಿಯ ಕುಮಾರರನ್ನು ಶುದ್ಧಮಾಡಿ ಬಂಗಾರದ ಹಾಗೆಯೂ ಬೆಳ್ಳಿಯ ಹಾಗೆಯೂ ಅವ ರನ್ನು ಶುದ್ಧಮಾಡುವನು.
- Proverbs 17:3 ಜ್ಞಾನೋಕ್ತಿಗಳು 17:3ಬೆಳ್ಳಿ ಬಂಗಾರ ಗಳನ್ನು ಪುಟ ಕುಲುಮೆಗಳು ಶೋಧಿಸುವವು, ಕರ್ತನು ಹೃದಯಗಳನ್ನು ಶೋಧಿಸುತ್ತಾನೆ.
- 1 Kings 7:48–50 1 ಅರಸುಗಳು 7:48–50ಇದಲ್ಲದೆ ಕರ್ತನ ಮನೆಗೆ ಸಂಬಂಧವಾದ ಪಾತ್ರೆ ಗಳನ್ನೆಲ್ಲಾ ಸೊಲೊಮೋನನು ಮಾಡಿಸಿದನು; ಯಾವ ವಂದರೆ, ಚಿನ್ನದ ಧೂಪದ ವೇದಿ, ಸಮ್ಮುಖದ ರೊಟ್ಟಿ ಗಳನ್ನು ಇಡುವದಕ್ಕೆ ಚಿನ್ನದ ಮೇಜು, ದೈವೋಕ್ತಿಯ ಸ್ಥಾನದ ಮುಂಭಾಗದ ಬಲಪಾರ್ಶ್ವದಲ್ಲಿ ಐದು, ಎಡ ಪಾರ್ಶ್ವದಲ್ಲಿ ಐದು, ಅಪರಂಜಿಯ ದೀಪ ಸ್ತಂಭಗಳು, ಚಿನ್ನದ ಅದರ ಹೂವುಗಳು, ದೀಪಗಳು, ಚಿಮಟಗಳು, ಅಪರಂಜಿಯ ತಂಬಿಗೆಗಳು, ಕತ್ತರಿಗಳು, ಸಲಿಕೆಗಳು, ಸೌಟುಗಳು, ಅಗ್ನಿ ಪಾತ್ರೆಗಳು, ಮಹಾಪರಿಶುದ್ಧ ಸ್ಥಳ ವಾದ ಒಳಗಿನ ಮನೆಯ ಕದಗಳಿಗೋಸ್ಕರವೂ ಮಂದಿ ರವೆಂಬ ಮನೆಯ ಕದಗಳಿಗೋಸ್ಕರವೂ ಬಂಗಾರದ ಕೀಲುಗಳನ್ನೆಲ್ಲಾ ಮಾಡಿಸಿದನು.ಹೀಗೆ ಅರಸನಾ ಗಿರುವ ಸೊಲೊಮೋನನು ಕರ್ತನ ಮನೆಗೋಸ್ಕರ ಮಾಡಿಸಿದ ಕೆಲಸವೆಲ್ಲಾ ತೀರಿಸಿದ ನಂತರ ತನ್ನ ತಂದೆ ಯಾದ ದಾವೀದನು ಪ್ರತಿಷ್ಟೆಮಾಡಿದ ಬೆಳ್ಳಿಯನ್ನೂ ಚಿನ್ನವನ್ನೂ ಸಾಮಾನುಗಳನ್ನೂ ತಕ್ಕೊಂಡು ಬಂದು ಕರ್ತನ ಮನೆಯ ಉಗ್ರಾಣಗಳಲ್ಲಿ ಇಟ್ಟನು.
- Psalm 12:6 ಕೀರ್ತನೆಗಳು 12:6ಕರ್ತನ ವಾಕ್ಯಗಳು ಶುದ್ಧವಾಕ್ಯಗಳಾಗಿವೆ: ಮಣ್ಣಿನ ಕುಲುಮೆಯಲ್ಲಿ ಏಳು ಸಾರಿ ಕರಗಿ ಪುಟಕ್ಕೆ ಹಾಕಿದ ಬೆಳ್ಳಿಯಂತೆ ಇವೆ.
- Genesis 23:15 ಆದಿಕಾಂಡ 23:15ಒಡೆಯನೇ, ನನ್ನ ಮಾತನ್ನು ಕೇಳು, ಆ ಭೂಮಿಯು ನಾನೂರು ಬೆಳ್ಳಿಯ ಶೆಕೆಲ್ ಬೆಲೆಯುಳ್ಳದ್ದು; ಅದು ನನಗೂ ನಿನಗೂ ಏನು? ನಿನ್ನ ಹೆಂಡತಿಯ ಶವವನ್ನು ಹೂಣಿಡು ಅಂದನು.
- 1 Chronicles 29:2–5 1 ಪೂರ್ವಕಾಲವೃತ್ತಾಂತ 29:2–5ಆದರೆ ನಾನು ನನ್ನ ಸಮಸ್ತ ಶಕ್ತಿಯಿಂದ ನನ್ನ ದೇವರ ಮನೆಯ ನಿಮಿತ್ತ ಬಂಗಾರದ ಕೆಲಸ ಕ್ಕೋಸ್ಕರ ಬಂಗಾರವನ್ನೂ ಬೆಳ್ಳಿಯ ಕೆಲಸಕ್ಕೋಸ್ಕರ ಬೆಳ್ಳಿಯನ್ನೂ ತಾಮ್ರದ ಕೆಲಸಕ್ಕೋಸ್ಕರ ತಾಮ್ರವನ್ನೂ ಕಬ್ಬಿಣದ ಕೆಲಸಕ್ಕೋಸ್ಕರ ಕಬ್ಬಿಣವನ್ನೂ ಮರದ ಕೆಲಸ ಕ್ಕೋಸ್ಕರ ಮರವನ್ನೂ ನೆಡುವ ನಿಮಿತ್ತ ಗೋಮೇಧಿಕ ಕಲ್ಲುಗಳನ್ನೂ ಕಾಡಿಗೆ ಬಣ್ಣವಾದಂಥ ಚಿತ್ರವಾದಂಥ ಕಲ್ಲುಗಳನ್ನೂ ಸಕಲ ಅಮೂಲ್ಯವಾದ ಕಲ್ಲುಗಳನ್ನೂ ಅಮೃತ ಶಿಲೆಗಳನ್ನೂ ಬಹಳವಾಗಿ ಸಿದ್ಧಮಾಡಿದ್ದೇನೆ. ಇದಲ್ಲದೆ ನನಗೆ ನನ್ನ ದೇವರ ಮನೆಯ ಮೇಲೆ ಪ್ರೀತಿ ಇರುವದರಿಂದ ನಾನು ಪರಿಶುದ್ಧ ಮನೆಗೋಸ್ಕರ ಸಿದ್ಧಮಾಡಿದ ಎಲ್ಲಾದರ ಹೊರತು ನನ್ನ ಸ್ವಸ್ಥಿತಿಯಿಂದ ಬಂಗಾರವನ್ನೂ ಬೆಳ್ಳಿಯನ್ನೂ ನನ್ನ ದೇವರ ಮನೆಗೆ ಕೊಟ್ಟಿದ್ದೇನೆ. ಮನೆಗಳ ಗೋಡೆಗಳನ್ನು ಹೊದಗಿಸು ವದಕ್ಕೆ ಒಫೀರ್ ಬಂಗಾರದಲ್ಲಿ ಮೂರು ಸಾವಿರ ಬಂಗಾರದ ತಲಾಂತುಗಳನ್ನೂ ಏಳು ಸಾವಿರ ಚೊಕ್ಕ ಬೆಳ್ಳಿಯ ತಲಾಂತುಗಳನ್ನೂ ಬಂಗಾರವನ್ನು ಬಂಗಾ ರದ ಕೆಲಸಕ್ಕೂ ಬೆಳ್ಳಿಯನ್ನು ಬೆಳ್ಳಿಯ ಕೆಲಸಕ್ಕೂ ಕೈ ಕೆಲಸದವರಿಂದ ಮಾಡುವ ಎಲ್ಲಾ ಕೆಲಸಕ್ಕೂ ಕೊಟ್ಟಿ ದ್ದೇನೆ. ಇದಲ್ಲದೆ ಇಂದು ತನ್ನ ಸೇವೆಯನ್ನು ಕರ್ತನಿಗೆ ಒಪ್ಪಿಸುವವನು ಯಾರು ಅಂದನು.
- 1 Kings 10:21 1 ಅರಸುಗಳು 10:21ಇದಲ್ಲದೆ ಅರಸನಾದ ಸೊಲೊಮೋನನು ಕುಡಿಯುವ ಪಾತ್ರೆ ಗಳೆಲ್ಲಾ ಬಂಗಾರದವುಗಳಾಗಿದ್ದವು. ಲೆಬನೋನಿನ ಅಡವಿಯ ಮನೆಯ ಪಾತ್ರೆಗಳೆಲ್ಲಾ ಹಾಗೆಯೇ ಬಂಗಾ ರದವುಗಳಾಗಿದ್ದವು. ಬೆಳ್ಳಿಯದು ಯಾವದೂ ಇರಲಿಲ್ಲ. ಯಾಕಂದರೆ ಸೊಲೊಮೋನನ ದಿವಸಗಳಲ್ಲಿ ಅದು ಏನೂ ಇಲ್ಲದ್ದಾಗಿ ಎಣಿಸಲ್ಪಟ್ಟಿತ್ತು.
- Zechariah 13:9 ಜೆಕರ್ಯ 13:9ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ.
- Genesis 2:11–12 ಆದಿಕಾಂಡ 2:11–12ಮೊದಲನೆಯದರ ಹೆಸರು ಪೀಶೋನ್; ಅದು ಹವೀಲ ದೇಶವನ್ನೆಲ್ಲಾ ಸುತ್ತುವದು; ಅದರಲ್ಲಿ ಬಂಗಾರವಿದೆ. ಆ ದೇಶದ ಬಂಗಾರವು ಉತ್ತಮವಾದದ್ದು; ಅದರಲ್ಲಿ ಬದೋಲಖ ಮತ್ತು ಗೋಮೇಧಿಕ ಕಲ್ಲು ಇದೆ.
- Proverbs 27:21 ಜ್ಞಾನೋಕ್ತಿಗಳು 27:21ಬೆಳ್ಳಿ ಬಂಗಾರ ಗಳ ಪುಟಕ್ಕೆ ಕುಲುಮೆ ಹೇಗೆಯೋ ಹಾಗೆಯೇ ತನ್ನ ಹೊಗಳಿಕೆಗೆ ಮನುಷ್ಯನಿದ್ದಾನೆ.