Job · chapter 31 · verse 8
Job 31:8 in Kannada
ನಾನು ಬಿತ್ತುವದನ್ನು ಬೇರೊಬ್ಬನು ತಿನ್ನಲಿ; ಹೌದು, ನನ್ನ ಸಂತತಿಯು ನಿರ್ಮೂಲವಾಗಲಿ.
Naanu bittuvadannu berobbanu tinnali; haudu, nanna santatiyu nirmoolavaagali.
Job 31:8 in English
- King James Version (KJV)
- [Then] let me sow, and let another eat; yea, let my offspring be rooted out.
- World English Bible (WEB)
- then let me sow, and let another eat. Yes, let the produce of my field be rooted out.
- American Standard Version (ASV)
- Then let me sow, and let another eat; Yea, let the produce of my field be rooted out.
- Bible in Basic English (BBE)
- Let me put seed in the earth for another to have the fruit of it, and let my produce be uprooted.
- Darby Translation (DBY)
- Let me sow, and another eat; and let mine offspring be rooted out.
- Webster's Bible (WBS)
- [Then] let me sow, and let another eat; yes, let my offspring be rooted out.
- Young's Literal Translation (YLT)
- Let me sow — and another eat, And my products let be rooted out.
Read in context
- 6ಆತನು ನೀತಿಯ ತ್ರಾಸಿನಲ್ಲಿ ನನ್ನನ್ನು ತೂಗಲಿ; ದೇವರು ನನ್ನ ಸಂಪೂರ್ಣತೆಯನ್ನು ತಿಳಿದುಕೊಳ್ಳಲಿ.
- 7ನನ್ನ ಹೆಜ್ಜೆಯು ದಾರಿಯಿಂದ ತೊಲಗಿದ್ದರೆ, ನನ್ನ ಕಣ್ಣುಗಳ ಹಿಂದೆ ನನ್ನ ಹೃದಯವು ಹೋಗಿದ್ದರೆ, ನನ್ನ ಅಂಗೈಗಳಲ್ಲಿ ದೋಷ ಹತ್ತಿದ್ದರೆ,
- 8ನಾನು ಬಿತ್ತುವದನ್ನು ಬೇರೊಬ್ಬನು ತಿನ್ನಲಿ; ಹೌದು, ನನ್ನ ಸಂತತಿಯು ನಿರ್ಮೂಲವಾಗಲಿ.
- 9ನನ್ನ ಹೃದಯವು ಸ್ತ್ರೀಗೋಸ್ಕರ ಮರುಳು ಗೊಂಡಿದ್ದರೆ, ನನ್ನ ನೆರೆಯವನ ಬಾಗಲ ಹತ್ತಿರ ನಾನು ಹೊಂಚಿಕೊಂಡಿದ್ದರೆ,
- 10ನನ್ನ ಹೆಂಡತಿ ಮತ್ತೊಬ್ಬನಿ ಗೊಸ್ಕರ ಬೀಸಲಿ; ಮತ್ತೊಬ್ಬರು ಅವಳ ಮೇಲೆ ಒರಗಲಿ.
Cross references
- Micah 6:15 ಮೀಕ 6:15ನೀನು ಬೀಜ ಬಿತ್ತಿ ಕೊಯ್ಯದೆ ಇರುವಿ; ಇಪ್ಪೆಗಳನ್ನು ತುಳಿದು ಎಣ್ಣೆ ಹಚ್ಚಿಕೊಳ್ಳದೆ ಇರುವಿ; ದ್ರಾಕ್ಷಾರಸ ಮಾಡಿ ಕುಡಿಯದೆ ಇರುವಿ.ಒಮ್ರಿಯ ನಿಯಮಗಳನ್ನೂ ಅಹಾಬನ ಮನೆಯ ಸಮಸ್ತ ಕ್ರಿಯೆಗಳನ್ನೂ ಕೈಕೊಳ್ಳುತ್ತೀರಿ; ನಾನು ನಿನ್ನನ್ನು ಹಾಳಾ ಗಿಯೂ ಅದರ ನಿವಾಸಿಗಳನ್ನು ಸಿಳ್ಳಿಡುವಿಕೆಗಾಗಿಯೂ ಮಾಡುವ ಹಾಗೆ ಅವರ ಆಲೋಚನೆಗಳಲ್ಲಿ ನಡ ಕೊಳ್ಳುತ್ತೀರಿ; ಆದದರಿಂದ ನನ್ನ ಜನರ ನಿಂದೆಯನ್ನು ಹೊರುವಿರಿ.
- Leviticus 26:16 ಯಾಜಕಕಾಂಡ 26:16ನಾನು ಸಹ ಇದನ್ನು ನಿಮಗೆ ಮಾಡು ವೆನು; ನಿಮ್ಮ ಮೇಲೆ ಭೀತಿಯನ್ನೂ ಕಣ್ಣುಗಳನ್ನು ಕ್ಷೀಣಿಸು ವಂತೆಯೂ ಹೃದಯವು ಕುಗ್ಗಿ ದುಃಖಕ್ಕೊಳಗಾಗು ವಂತೆಯೂ ಮಾಡುವ ಕ್ಷಯರೋಗವನ್ನು ಚಳಿಜ್ವರ ವನ್ನೂ ಬರಮಾಡುವೆನು. ನೀವು ವ್ಯರ್ಥವಾಗಿ ನಿಮ್ಮ ಬೀಜವನ್ನು ಬಿತ್ತುವಿರಿ; ನಿಮ್ಮ ಶತ್ರುಗಳು ಅದನ್ನು ತಿಂದುಬಿಡುವರು.
- Deuteronomy 28:38 ಧರ್ಮೋಪದೇಶಕಾಂಡ 28:38ಬಹಳ ಬೀಜವನ್ನು ಹೊಲಕ್ಕೆ ತಂದು ಸ್ವಲ್ಪ ಕೂಡಿಸುವಿ; ಯಾಕಂದರೆ ಮಿಡತೆ ಅದನ್ನು ತಿಂದು ಬಿಡುವದು.
- Job 18:19 ಯೋಬನು 18:19ಅವನ ಜನರಲ್ಲಿ ಅವನಿಗೆ ಮಗನೂ ಇಲ್ಲ, ಮೊಮ್ಮಗನೂ ಇಲ್ಲ; ಅವನ ನಿವಾಸಗಳಲ್ಲಿ ಉಳಿ ದವನೂ ಇಲ್ಲ.
- Job 20:18 ಯೋಬನು 20:18ದುಡಿದದ್ದನ್ನ್ನು ನುಂಗದೆ ತಿರುಗಿ ಕೊಡುವನು; ಆಸ್ತಿಯ ಮೇರೆಗೆ ಬದಲು ಕೊಡುವನು; ಅವನು ಉಲ್ಲಾಸ ಹೊಂದುವದಿಲ್ಲ.
- Job 24:6 ಯೋಬನು 24:6ಹೊಲದಲ್ಲಿ ತಮ್ಮ ತಮ್ಮ ಬೆಳೆಯನ್ನು ಕೊಯ್ದು ದುಷ್ಟನ ದ್ರಾಕ್ಷೆಯ ತೋಟದಲ್ಲಿ ಹಣ್ಣು ಆರಿಸುತ್ತಾರೆ.
- Psalm 109:13 ಕೀರ್ತನೆಗಳು 109:13ಅವನ ಸಂತಾನವು ನಿರ್ನಾಮವಾಗಲಿ; ಎರಡನೇ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ.
- Deuteronomy 28:30–33 ಧರ್ಮೋಪದೇಶಕಾಂಡ 28:30–33ಹೆಂಡತಿಯನ್ನು ನಿಶ್ಚಯಿಸಿಕೊಂಡರೆ ಮತ್ತೊಬ್ಬನು ಅವಳನ್ನು ಮದುವೆ ಮಾಡಿಕೊಳ್ಳುವನು; ಮನೆಯನ್ನು ಕಟ್ಟಿದರೆ ಅದರಲ್ಲಿ ವಾಸಮಾಡುವದಿಲ್ಲ; ದ್ರಾಕ್ಷೇತೋಟವನ್ನು ನೆಟ್ಟರೆ ಅದರ ಫಲವನ್ನು ಕೂಡಿಸುವದಿಲ್ಲ. ನಿನ್ನ ಎತ್ತು ನಿನ್ನ ಕಣ್ಣುಗಳ ಮುಂದೆ ಕೊಯ್ಯಲ್ಪಟ್ಟಾಗ ನೀನು ಅದರಲ್ಲಿ ತಿನ್ನುವದಿಲ್ಲ; ನಿನ್ನ ಕತ್ತೆ ನಿನ್ನ ಕಣ್ಣುಗಳ ಮುಂದೆ ಬಲಾತ್ಕಾರವಾಗಿ ಒಯ್ಯಲ್ಪಟ್ಟು ನಿನಗೆ ಮತ್ತೆ ಸಿಕ್ಕುವದಿಲ್ಲ; ನಿನ್ನ ಕುರಿಗಳು ನಿನ್ನ ಶತ್ರುವಿಗೆ ಕೊಡಲ್ಪಡುವವು; ಅವುಗಳನ್ನು ರಕ್ಷಿಸುವದಕ್ಕೆ ಯಾರೂ ಇರುವದಿಲ್ಲ. ನಿನ್ನ ಕುಮಾರ ಕುಮಾರ್ತೆಯರು ಬೇರೆ ಜನಕ್ಕೆ ಕೊಡಲ್ಪಟ್ಟಿರಲಾಗಿ ನಿನ್ನ ಕಣ್ಣುಗಳು ಅದನ್ನು ನೋಡಿ ಅವರ ನಿಮಿತ್ತ ಕ್ಷೀಣಿಸುತ್ತಾ ಇರುವಾಗ ನಿನ್ನ ಕೈಯಲ್ಲಿ ಏನೂ ತ್ರಾಣವಿಲ್ಲದೆ ಇರುವದು. ನಿನ್ನ ಭೂಮಿಯ ಫಲವನ್ನೂ ನಿನ್ನ ಎಲ್ಲಾ ಆದಾಯವನ್ನೂ ನೀನರಿಯದ ಜನವು ತಿಂದುಬಿಡುವದು; ನೀನು ಯಾವಾ ಗಲೂ ಬಲಾತ್ಕಾರವನ್ನೂ ಸಂಕಟವನ್ನೂ ಅನುಭವಿ ಸುವಿ.
- Job 15:30 ಯೋಬನು 15:30ಕತ್ತಲೆಯೊಳಗಿಂದ ಅವನು ತೊಲಗುವದಿಲ್ಲ; ಅವನ ಕೊಂಬೆಗಳನ್ನು ಜ್ವಾಲೆಯು ಬಾಡಿಸುವದು; ಅವನ ಬಾಯಿಯ ಶ್ವಾಸ ದಿಂದ ತೊಲಗಿ ಹೋಗುತ್ತಾನೆ.
- Judges 6:3–6 ನ್ಯಾಯಸ್ಥಾಪಕರು 6:3–6ಇಸ್ರಾಯೇಲ್ಯರು ಬೀಜ ಬಿತ್ತಿದ ತರುವಾಯ ಮಿದ್ಯಾನ್ಯರೂ ಅಮಾಲೇ ಕ್ಯರೂ ಮೂಡಣದ ಮಕ್ಕಳೂ ಅವರಿಗೆ ವಿರೋಧವಾಗಿ ಬಂದು ದಂಡಿಳಿದು ಗಾಜಾದ ಪ್ರದೇಶದ ಮಟ್ಟಿಗೂ ಭೂಮಿಯ ಫಲವನ್ನು ಕೆಡಿಸಿಬಿಟ್ಟು ಇಸ್ರಾಯೇಲಿನಲ್ಲಿ ಆಹಾರವಾದರೂ ಕುರಿದನ ಕತ್ತೆಗಳಾದರೂ ಉಳಿಯ ಗೊಡಿಸಲಿಲ್ಲ. ಅವರು ತಮ್ಮ ಕುರಿದನಗಳೂ ಡೇರೆ ಗಳೂ ಸಹಿತವಾಗಿ ಮಿಡಿತೆಗಳ ಹಾಗೆ ಗುಂಪಾಗಿ ಬಂದರು. ಅವರಿಗೂ ಅವರ ಒಂಟೆಗಳಿಗೂ ಎಣಿಕೆ ಇರಲಿಲ್ಲ. ಹೀಗೆ ಅವರು ಅದನ್ನು ಕೆಡಿಸಿಬಿಡುವದಕ್ಕೆ ದೇಶದಲ್ಲಿ ಬಂದರು. ಆದಕಾರಣ ಇಸ್ರಾಯೇಲ್ಯರು ಮಿದ್ಯಾನ್ಯರಿಂದ ಬಹಳ ಕುಗ್ಗಿಹೋದರು. ಆಗ ಇಸ್ರಾ ಯೇಲ್ ಮಕ್ಕಳು ಕರ್ತನಿಗೆ ಕೂಗಿಕೊಂಡರು.
- Deuteronomy 28:51 ಧರ್ಮೋಪದೇಶಕಾಂಡ 28:51ಅದು ನಿನ್ನ ಪಶುಗಳ ಫಲವನ್ನೂ ನಿನ್ನ ಭೂಮಿಯ ಫಲವನ್ನೂ ನೀನು ನಾಶವಾಗುವ ವರೆಗೆ ತಿಂದು ಬಿಡುವದು; ಅದು ನಿನ್ನನ್ನು ಕೆಡಿಸುವ ವರೆಗೆ ಧಾನ್ಯ ದ್ರಾಕ್ಷಾರಸ ಎಣ್ಣೆಗಳನ್ನೂ ಪಶುಗಳ ಅಭಿವೃದ್ಧಿಯನ್ನೂ ಕುರಿಗಳ ಮಂದೆಗಳನ್ನೂ ನಿನಗೆ ಉಳಿಸದು.
- Job 5:4–5 ಯೋಬನು 5:4–5ಅವನ ಮಕ್ಕಳು ಭದ್ರತೆಗೆ ದೂರವಾಗಿ ದ್ದಾರೆ; ತಪ್ಪಿಸುವವನಿಲ್ಲದೆ (ಅವರು) ಬಾಗಿಲಲ್ಲಿ ಜಜ್ಜ ಲ್ಪಡುವರು. ಹಸಿದವನು ಅವನ ಪೈರನ್ನು ತಿನ್ನುವನು, ಮುಳ್ಳುಗಳೊಳಗಿಂದಲೂ ಅದನ್ನು ತೆಗೆದುಕೊಳ್ಳು ವನು; ಕೊಳ್ಳೆಗಾರನು ಅವರ ಆಸ್ತಿಯನ್ನು ನುಂಗಿಬಿಡು ವನು.