Job · chapter 34 · verse 26
Job 34:26 in Kannada
ಅವರು ದುಷ್ಟರೆಂದು ಬೇರೆಯವರ ದೃಷ್ಟಿಯಲ್ಲಿ ಬಹಿರಂಗವಾಗಿ ಅವರನ್ನು ಹೊಡೆಯುತ್ತಾನೆ.
Avaru dushtarendu bereyavara drushtiyalli bahirangavaagi avarannu hodeyuttaane.
Job 34:26 in English
- King James Version (KJV)
- He striketh them as wicked men in the open sight of others;
- World English Bible (WEB)
- He strikes them as wicked men in the open sight of others;
- American Standard Version (ASV)
- He striketh them as wicked men In the open sight of others;
- Bible in Basic English (BBE)
- The evil-doers are broken by his wrath, he puts his hand on them with force before the eyes of all onlookers.
- Darby Translation (DBY)
- He striketh them as wicked men in the open sight of others,
- Webster's Bible (WBS)
- He striketh them as wicked men in the open sight of others;
- Young's Literal Translation (YLT)
- As wicked He hath stricken them, In the place of beholders.
Read in context
- 24ಲೆಕ್ಕವಿಲ್ಲದ ಪರಾಕ್ರಮಿಗಳನ್ನು ಚೂರು ಚೂರು ಮಾಡಿ, ಮತ್ತೊಬ್ಬರನ್ನು ಅವರ ಸ್ಥಳದಲ್ಲಿ ನಿಲ್ಲಿಸು ತ್ತಾನೆ.
- 25ಆದದರಿಂದ ಅವರು ನಾಶವಾಗುವಂತೆ ಆತನು ಅವರ ಕೆಲಸಗಳನ್ನು ತಿಳುಕೊಂಡು ರಾತ್ರಿಯಲ್ಲಿ ತಿರುಗಿಸಿ ಬಿಡುತ್ತಾನೆ.
- 26ಅವರು ದುಷ್ಟರೆಂದು ಬೇರೆಯವರ ದೃಷ್ಟಿಯಲ್ಲಿ ಬಹಿರಂಗವಾಗಿ ಅವರನ್ನು ಹೊಡೆಯುತ್ತಾನೆ.
- 27ಅವರು ಆತನಿಂದ ಹಿಂತಿರುಗಿ ಆತನ ಮಾರ್ಗಗಳನ್ನು ಲಕ್ಷಿಸಲಿಲ್ಲ.
- 28ಹೀಗೆ ಬಡವರ ಕೂಗು ಆತನ ಬಳಿಗೆ ಬರುವಂತೆ ಮಾಡು ತ್ತಾರೆ, ಮತ್ತು ಆತನು ಬಾಧಿಸಲ್ಪಡುವವರ ಕೂಗನ್ನು ಕೇಳುತ್ತಾನೆ.
Cross references
- Psalm 58:10–11 ಕೀರ್ತನೆಗಳು 58:10–11ಮುಯ್ಯಿಗೆಮುಯ್ಯಿ ಆಗುವದನ್ನು ನೀತಿವಂತನು ದೃಷ್ಟಿಸುವಾಗ ಅವನು ಸಂತೋಷ ಪಡುವನು; ಅವನು ತನ್ನ ಪಾದಗಳನ್ನು ದುಷ್ಟರ ರಕ್ತ ದಲ್ಲಿ ತೊಳೆಯುವನು.ನಿಶ್ಚಯವಾಗಿ ನೀತಿವಂತನಿಗೆ ಪ್ರತಿಫಲವಿದೆ; ನಿಶ್ಚಯವಾಗಿ ಭೂಮಿಯಲ್ಲಿ ನ್ಯಾಯ ತೀರಿಸುವ ದೇವರು ಆತನೇ ಎಂದು ಮನುಷ್ಯನು ಹೇಳುವನು. ನಿಶ್ಚಯವಾಗಿ ನೀತಿವಂತನಿಗೆ ಪ್ರತಿಫಲವಿದೆ; ನಿಶ್ಚಯವಾಗಿ ಭೂಮಿಯಲ್ಲಿ ನ್ಯಾಯ ತೀರಿಸುವ ದೇವರು ಆತನೇ ಎಂದು ಮನುಷ್ಯನು ಹೇಳುವನು.
- Revelation 18:20 ಪ್ರಕಟನೆ 18:20ಪರಲೋಕವೇ, ಪರಿಶುದ್ಧರಾದ ಅಪೊಸ್ತಲರೇ, ಪ್ರವಾದಿಗಳೇ, ಅವಳ ವಿಷಯವಾಗಿ ಆನಂದಪಡಿರಿ. ಯಾಕಂದರೆ ನಿಮ್ಮ ನಿಮಿತ್ತವಾಗಿ ದೇವರು ಇವಳಿಗೆ ಪ್ರತಿ ದಂಡನೆಯನ್ನು ಮಾಡಿದನು ಎಂದು ಹೇಳಿತು.
- 2 Samuel 12:11–12 2 ಸಮುವೇಲನು 12:11–12ಕರ್ತನು--ಇಗೋ, ನಾನು ನಿನ್ನ ಮನೆಯಲ್ಲಿ ಕೆಟ್ಟದ್ದನ್ನು ನಿನಗೆ ವಿರೋಧವಾಗಿ ಏಳುವಂತೆ ಮಾಡಿ ನಿನ್ನ ಕಣ್ಣುಗಳ ಮುಂದೆ ನಿನ್ನ ಹೆಂಡತಿಯರನ್ನು ತೆಗೆದು ನಿನ್ನ ನೆರೆಯವನಿಗೆ ಕೊಡುವೆನು. ಅವನು ಹಗಲಿನಲ್ಲಿಯೇ ಅವರ ಸಂಗಡ ಮಲಗುವನು. ನೀನು ಅದನ್ನು ಮರೆಯಲ್ಲಿ ಮಾಡಿದಿ; ಆದರೆ ನಾನು ಈ ಕಾರ್ಯವನ್ನು ಇಸ್ರಾಯೇಲ್ಯರೆಲ್ಲರ ಮುಂದೆಯೂ ಸೂರ್ಯನ ಮುಂದೆಯೂ ಮಾಡುವೆನು ಅಂದನು.
- 1 Timothy 5:20 1 ತಿಮೊಥೆಯನಿಗೆ 5:20ಪಾಪಮಾಡುವವರನ್ನು ಎಲ್ಲರ ಮುಂದೆಯೇ ಗದರಿಸು; ಇದರಿಂದ ಮಿಕ್ಕಾದವರಿಗೂ ಭಯವುಂಟಾಗುವದು.
- Isaiah 66:24 ಯೆಶಾಯ 66:24ಅವರು ಮುಂದೆ ಹೋಗಿ ನನಗೆ ವಿರೋಧವಾಗಿ ದ್ರೋಹ ಮಾಡಿದ ಮನುಷ್ಯರ ಹೆಣಗಳನ್ನು ನೋಡುವರು; ಯಾಕಂದರೆ ಅವರ ಹುಳ ಸಾಯುವದಿಲ್ಲ; ಅವರ ಬೆಂಕಿ ಆರುವದಿಲ್ಲ; ಅವರು ಎಲ್ಲಾ ಮನುಷ್ಯರಿಗೆ ಹೇಸಿಕೆಯಾಗುವರು.
- Deuteronomy 13:9–11 ಧರ್ಮೋಪದೇಶಕಾಂಡ 13:9–11ಅವನನ್ನು ಖಂಡಿತವಾಗಿ ಕೊಲ್ಲಬೇಕು. ಅವನನ್ನು ಕೊಲ್ಲುವ ಹಾಗೆ ಮೊದಲು ನಿನ್ನ ಕೈ, ಆ ಮೇಲೆ ಎಲ್ಲಾ ಜನರ ಕೈ ಅವನ ಮೇಲೆ ಇರಬೇಕು. ಐಗುಪ್ತ ದೇಶದೊಳಗಿಂದಲೂ ದಾಸತ್ವದ ಮನೆಯೊ ಳಗಿಂದಲೂ ನಿನ್ನನ್ನು ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನ ಬಳಿಯಿಂದ ನಿನ್ನನ್ನು ದೂಡುವದಕ್ಕೆ ಅವನು ಪ್ರಯತ್ನಮಾಡಿದ್ದರಿಂದ ಅವನು ಸಾಯುವಹಾಗೆ ಕಲ್ಲೆಸೆಯಬೇಕು. ಆಗ ಇಸ್ರಾಯೇ ಲೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ನಿನ್ನ ಮಧ್ಯದಲ್ಲಿ ಇಂಥಾ ಕೆಟ್ಟಕಾರ್ಯವನ್ನು ಮಾಡುವದಿಲ್ಲ.
- Exodus 14:30 ವಿಮೋಚನಕಾಂಡ 14:30ಆ ದಿನದಲ್ಲಿ ಕರ್ತನು ಈ ಪ್ರಕಾರ ಇಸ್ರಾಯೇಲ್ಯ ರನ್ನು ಐಗುಪ್ತ್ಯರ ಕೈಯಿಂದ ರಕ್ಷಿಸಿದನು. ಇಸ್ರಾಯೇ ಲ್ಯರು ಸಮುದ್ರತೀರದಲ್ಲಿ ಸತ್ತ ಐಗುಪ್ತ್ಯರನ್ನು ನೋಡಿ ದರು.ಐಗುಪ್ತ್ಯರ ಮೇಲೆ ಕರ್ತನು ಮಾಡಿದ ದೊಡ್ಡ ಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಕರ್ತ ನಿಗೆ ಭಯಪಟ್ಟು ಕರ್ತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.
- Deuteronomy 21:21 ಧರ್ಮೋಪದೇಶಕಾಂಡ 21:21ಆಗ ಅವನ ಪಟ್ಟಣದ ಜನರೆಲ್ಲರು ಅವನು ಸಾಯುವಹಾಗೆ ಅವನನ್ನು ಕಲ್ಲೆಸೆಯಬೇಕು; ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದುಹಾಕ ಬೇಕು; ಇಸ್ರಾಯೇಲ್ಯರಲ್ಲಿ ಇದನ್ನು ಕೇಳಿ ಭಯ ಪಡುವರು.
- 1 Timothy 5:24 1 ತಿಮೊಥೆಯನಿಗೆ 5:24ಕೆಲವರ ಪಾಪಗಳು ತೀರ್ಪಿಗೆ ಮೊದಲೇ ಬಹಿರಂಗವಾಗುತ್ತವೆ; ಕೆಲವರ ಪಾಪಗಳು ತರುವಾಯ ಹಿಂಬಾಲಿಸುತ್ತವೆ.ಅದರಂತೆಯೇ ಕೆಲವರ ಒಳ್ಳೇ ಕ್ರಿಯೆಗಳು ಮೊದಲೇ ಪ್ರತ್ಯಕ್ಷವಾಗಿರುತ್ತವೆ. ಪ್ರತ್ಯಕ್ಷವಾಗದಿರುವವುಗಳು ಮರೆ ಯಾಗಿರಲಾರವು.
- Revelation 18:9–10 ಪ್ರಕಟನೆ 18:9–10ಅವಳೊಂದಿಗೆ ಜಾರತ್ವ ಮಾಡಿ ವೈಭವದಲ್ಲಿ ಬದುಕಿದ ಭೂರಾಜರು ಅವಳ ದಹನದ ಹೊಗೆಯನ್ನು ನೋಡು ವಾಗ ಅವಳಿಗಾಗಿ ಗೋಳಾಡುತ್ತಾ ಪ್ರಲಾಪಿಸುವರು. ಅವರು ದೂರದಲ್ಲಿ ನಿಂತು ಅವಳಿಗುಂಟಾದ ಯಾತ ನೆಯ ಭಯದಿಂದ--ಅಯ್ಯೋ, ಅಯ್ಯೋ, ಆ ಮಹಾಪಟ್ಟಣವಾದ ಬಾಬೆಲೇ, ಬಲಿಷ್ಠವಾದ ನಗ ರಿಯೇ, ಒಂದೇ ಗಳಿಗೆಯಲ್ಲಿ ನಿನಗೆ ತೀರ್ಪಾಯಿತಲ್ಲಾ ಎಂದು ಹೇಳುವರು.