Job · chapter 34 · verse 28
Job 34:28 in Kannada
ಹೀಗೆ ಬಡವರ ಕೂಗು ಆತನ ಬಳಿಗೆ ಬರುವಂತೆ ಮಾಡು ತ್ತಾರೆ, ಮತ್ತು ಆತನು ಬಾಧಿಸಲ್ಪಡುವವರ ಕೂಗನ್ನು ಕೇಳುತ್ತಾನೆ.
Heege badavara koogu aatana balige baruvante maadu ttaare, mattu aatanu baadhisalpaduvavara koogannu keluttaane.
Job 34:28 in English
- King James Version (KJV)
- So that they cause the cry of the poor to come unto him, and he heareth the cry of the afflicted.
- World English Bible (WEB)
- so that they caused the cry of the poor to come to him. He heard the cry of the afflicted.
- American Standard Version (ASV)
- So that they caused the cry of the poor to come unto him, And he heard the cry of the afflicted.
- Bible in Basic English (BBE)
- So that the cry of the poor might come up to him, and the prayer of those in need come to his ears.
- Darby Translation (DBY)
- So that they cause the cry of the poor to come unto him, and he heareth the cry of the afflicted.
- Webster's Bible (WBS)
- So that they cause the cry of the poor to come to him, and he heareth the cry of the afflicted.
- Young's Literal Translation (YLT)
- To cause to come in unto Him The cry of the poor, And the cry of the afflicted He heareth.
Read in context
- 26ಅವರು ದುಷ್ಟರೆಂದು ಬೇರೆಯವರ ದೃಷ್ಟಿಯಲ್ಲಿ ಬಹಿರಂಗವಾಗಿ ಅವರನ್ನು ಹೊಡೆಯುತ್ತಾನೆ.
- 27ಅವರು ಆತನಿಂದ ಹಿಂತಿರುಗಿ ಆತನ ಮಾರ್ಗಗಳನ್ನು ಲಕ್ಷಿಸಲಿಲ್ಲ.
- 28ಹೀಗೆ ಬಡವರ ಕೂಗು ಆತನ ಬಳಿಗೆ ಬರುವಂತೆ ಮಾಡು ತ್ತಾರೆ, ಮತ್ತು ಆತನು ಬಾಧಿಸಲ್ಪಡುವವರ ಕೂಗನ್ನು ಕೇಳುತ್ತಾನೆ.
- 29ಆತನು ಶಾಂತ ಮಾಡಿದರೆ ಯಾವನು ಕೇಡು ಮಾಡುವನು? ಆತನು ಮುಖವನ್ನು ಮರೆಮಾಡಿದರೆ ಆತನನ್ನು ದೃಷ್ಟಿಸುವವನು ಯಾರು? ಜನಾಂಗಕ್ಕೆ ವಿರೋಧವಾಗಿ ಮಾಡಿದರೂ ಸರಿ, ಮನುಷ್ಯ ಮಾತ್ರದ ವರಿಗಾದರೂ ಸರಿಯೇ.
- 30ಹೀಗೆ ಜನರಿಗೆ ಉರು ಲಾಗದಂತೆ ಕಪಟಿಯು ಆಳುವದಿಲ್ಲ.
Cross references
- James 5:4 ಯಾಕೋಬನು 5:4ಇಗೋ, ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿ ದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ; ಕೊಯಿದವರ ಕೂಗು ಸೈನ್ಯಗಳ ಕರ್ತನ ಕಿವಿಗಳಲ್ಲಿ ಬಿದ್ದಿದೆ.
- Exodus 3:7 ವಿಮೋಚನಕಾಂಡ 3:7ಆಗ ಕರ್ತನು--ಐಗುಪ್ತದಲ್ಲಿರುವ ನನ್ನ ಜನರ ವ್ಯಥೆಯನ್ನು ನಿಶ್ಚಯವಾಗಿಯೂ ಕಂಡಿದ್ದೇನೆ, ಬಿಟ್ಟೀ ಕೆಲಸಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು. ಅವರ ದುಃಖವನ್ನು ಬಲ್ಲೆನು.
- Job 35:9 ಯೋಬನು 35:9ಬಹು ಬಲಾತ್ಕಾರದ ದೆಸೆಯಿಂದ ಬಲಾತ್ಕಾರ ಮಾಡಲ್ಪಟ್ಟವರು ಕೂಗುವಂತೆ ಅವರು ಮಾಡುತ್ತಾರೆ; ಪರಾಕ್ರಮಿಗಳ ತೋಳಿಗೋಸ್ಕರ ಮೊರೆಯಿಡುತ್ತಾರೆ.
- Exodus 3:9 ವಿಮೋಚನಕಾಂಡ 3:9ಆದದರಿಂದ ಈಗ ಕೇಳು, ಇಸ್ರಾಯೇಲ್ ಮಕ್ಕಳ ಕೂಗು ನನ್ನ ಬಳಿಗೆ ಬಂದಿತು; ಐಗುಪ್ತ್ಯರು ಅವರನ್ನು ಬಾಧಿಸುವ ಬಾಧೆಯನ್ನು ನಾನು ನೋಡಿದ್ದೇನೆ.
- Psalm 12:5 ಕೀರ್ತನೆಗಳು 12:5ಬಡವರ ವ್ಯಥೆಗೋಸ್ಕರವೂ ಗತಿಯಿಲ್ಲದವರ ನರ ಳುವಿಕೆಗೋಸ್ಕರವೂ ಈಗ ನಾನು ಏಳುವೆನು ಎಂದು ಕರ್ತನು ಹೇಳುತ್ತಾನೆ; ಉಬ್ಬಿಕೊಂಡವನಿಂದ ನಾನು ಬಡವನನ್ನು ಕಾಪಾಡುವೆನು.
- Exodus 22:23–27 ವಿಮೋಚನಕಾಂಡ 22:23–27ಯಾವದೆ ರೀತಿಯಲ್ಲಿ ಅವರನ್ನು ಬಾಧಿಸಿದರೂ ಅವರು ನನಗೆ ಮೊರೆಯಿಟ್ಟರೆ ನಾನು ನಿಶ್ಚಯವಾಗಿ ಅವರ ಮೊರೆಯನ್ನು ಕೇಳುವೆನು. ಆಗ ನನ್ನ ಕೋಪವು ಉರಿಯುವದು. ಕತ್ತಿಯಿಂದ ನಿಮ್ಮನ್ನು ಕೊಲ್ಲುವೆನು. ನಿಮ್ಮ ಹೆಂಡತಿಯರು ವಿಧವೆಯರಾಗಿ ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು. ನಿನ್ನ ಬಳಿಯಲ್ಲಿ ಬಡವರಾಗಿರುವ ನನ್ನ ಜನರಿಗೆ ಹಣವನ್ನು ಸಾಲವಾಗಿ ಕೊಟ್ಟರೆ ಅವರಿಂದ ಬಡ್ಡಿ ತಕ್ಕೊಳ್ಳಬಾರದು. ಇಲ್ಲವೆ ಅವರ ಮೇಲೆ ಬಡ್ಡಿ ಹೊರಿಸ ಬೇಡ. ನಿನ್ನ ನೆರೆಯವನ ಉಡುಪನ್ನು ಅಡವಾಗಿ ತಂದರೆ ಸೂರ್ಯನು ಮುಳುಗುವದರೊಳಗಾಗಿ ಅವ ನಿಗೆ ಹಿಂದಕ್ಕೆ ಕೊಡಬೇಕು. ಅದು ಅವನಿಗೆ ಒಂದೇ ಹೊದಿಕೆಯಾಗಿದೆ. ಅದೇ ಅವನ ಮೈಗೆ ಉಡುಪು. ಅವನು ಯಾವದನ್ನು ಹೊದ್ದುಕೊಂಡು ಮಲಗಿ ಯಾನು? ಅವನು ನನಗೆ ಮೊರೆಯಿಟ್ಟರೆ ನಾನು ಕೇಳುವೆನು. ನಾನು ಕೃಪಾಳುವು.
- Job 29:12–13 ಯೋಬನು 29:12–13ಮೊರೆ ಯಿಡುವ ದೀನನನ್ನೂ ಸಹಾಯವಿಲ್ಲದ ದಿಕ್ಕಿಲ್ಲದ ವರನ್ನೂ ನಾನು ತಪ್ಪಿಸಿದೆನು. ನಾಶವಾಗುವದಕ್ಕೆ ಸಿದ್ಧವಾದವನ ಆಶೀರ್ವಾದವು ನನ್ನ ಮೇಲೆ ಬರು ತ್ತಿತ್ತು; ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ನಾನು ಮಾಡಿದೆನು.
- Exodus 2:23–24 ವಿಮೋಚನಕಾಂಡ 2:23–24ಹೀಗಿರಲಾಗಿ ಬಹಳ ದಿನಗಳಾದ ಮೇಲೆ ಐಗುಪ್ತದ ಅರಸನು ಸತ್ತನು. ಇಸ್ರಾಯೇಲ್ ಮಕ್ಕಳು ದಾಸತ್ವದ ಕಾರಣದಿಂದ ನಿಟ್ಟುಸುರುಬಿಟ್ಟು ಕೂಗು ತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಬಂತು. ದೇವರು ಅವರ ನರಳಾಟವನ್ನು ಕೇಳಿ ಅಬ್ರಹಾಮ ಇಸಾಕ ಯಾಕೋಬ ಇವರ ಸಂಗಡ ತಾನು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿ ಕೊಂಡನು.ಆಗ ದೇವರು ಇಸ್ರಾಯೇಲ್ ಮಕ್ಕಳನ್ನು ನೋಡಿ ಅವರಲ್ಲಿ ಲಕ್ಷ್ಯವಿಟ್ಟನು.
- Isaiah 5:7 ಯೆಶಾಯ 5:7ಸೈನ್ಯಗಳ ಕರ್ತನ ದ್ರಾಕ್ಷೇ ತೋಟವು ಇಸ್ರಾಯೇಲಿನ ಮನೆಯೇ, ಯೆಹೂದದ ಜನವೋ, ಆತನ ಇಷ್ಟದ ಗಿಡವೇ. ಆತನು ನ್ಯಾಯವನ್ನು ನಿರೀ ಕ್ಷಿಸಲು, ಇಗೋ, ಹಿಂಸೆಯೇ; ನೀತಿಯನ್ನು ನಿರೀಕ್ಷಿಸಲು ಗೋಳಾಟವೇ ಸಿಕ್ಕೀತು.
- Job 24:12 ಯೋಬನು 24:12ಪಟ್ಟಣದೊಳಗಿಂದ ಮನುಷ್ಯರು ನರಳುತ್ತಾರೆ; ಗಾಯಪಟ್ಟವರ ಪ್ರಾಣವು ಕೂಗುತ್ತದೆ; ಆದರೂ ದೇವರು ತಪ್ಪುಹೊರಿಸುವದಿಲ್ಲ.
- Job 31:19–20 ಯೋಬನು 31:19–20ಬಟ್ಟೆ ಇಲ್ಲದೆ ನಾಶ ವಾಗುವವನನ್ನೂ ದರಿದ್ರನಿಗೆ ಹೊದಿಕೆ ಇಲ್ಲದಿರುವ ದನ್ನೂ ನಾನು ನೋಡಿದ್ದರೆ ಅವನ ಸೊಂಟವು ನನ್ನನ್ನು ಆಶೀರ್ವದಿಸದಿದ್ದರೆ ನನ್ನ ಕುರಿ ಮಂದೆಯ ಉಣ್ಣೆಯಿಂದ ಅವನಿಗೆ ಬೆಚ್ಚಗೆ ಆಗದಿದ್ದರೆ
- Job 22:9–10 ಯೋಬನು 22:9–10ವಿಧವೆಯರನ್ನು ಬರಿದಾಗಿ ಕಳುಹಿಸಿದಿ; ದಿಕ್ಕಿಲ್ಲದ ವರ ತೋಳುಗಳನ್ನು ಜಜ್ಜಿದಿ. ಆದದರಿಂದ ನಿನ್ನ ಸುತ್ತಲೂ ಉರುಲುಗಳು ಉಂಟು; ಭಯವು ನಿನ್ನನ್ನು ಫಕ್ಕನೆ ತಲ್ಲಣಪಡಿಸುತ್ತದೆ.