Job · chapter 34 · verse 24
Job 34:24 in Kannada
ಲೆಕ್ಕವಿಲ್ಲದ ಪರಾಕ್ರಮಿಗಳನ್ನು ಚೂರು ಚೂರು ಮಾಡಿ, ಮತ್ತೊಬ್ಬರನ್ನು ಅವರ ಸ್ಥಳದಲ್ಲಿ ನಿಲ್ಲಿಸು ತ್ತಾನೆ.
Lekkavillada paraakramigalannu chooru chooru maadi, mattobbarannu avara sthaladalli nillisu ttaane.
Job 34:24 in English
- King James Version (KJV)
- He shall break in pieces mighty men without number, and set others in their stead.
- World English Bible (WEB)
- He breaks mighty men in pieces in ways past finding out, and sets others in their place.
- American Standard Version (ASV)
- He breaketh in pieces mighty men [in ways] past finding out, And setteth others in their stead.
- Bible in Basic English (BBE)
- He sends the strong to destruction without searching out their cause, and puts others in their place.
- Darby Translation (DBY)
- He breaketh in pieces mighty men without inquiry, and setteth others in their stead;
- Webster's Bible (WBS)
- He shall break in pieces mighty men without number, and set others in their stead.
- Young's Literal Translation (YLT)
- He breaketh the mighty — no searching! And He appointeth others in their stead.
Read in context
- 22ದುಷ್ಟತನ ಮಾಡುವವರು ಅಡಗಿ ಕೊಳ್ಳುವ ಹಾಗೆ ಕತ್ತಲೂ ಇಲ್ಲ, ಮರಣದ ನೆರಳೂ ಇಲ್ಲ.
- 23ದೇವರ ಬಳಿಗೆ ನ್ಯಾಯಕ್ಕೆ ಬರುವ ಹಾಗೆ, ಮನುಷ್ಯನ ಮೇಲೆ ಆತನು ಹೆಚ್ಚು ಗಮನವಿಡುವದಿಲ್ಲ.
- 24ಲೆಕ್ಕವಿಲ್ಲದ ಪರಾಕ್ರಮಿಗಳನ್ನು ಚೂರು ಚೂರು ಮಾಡಿ, ಮತ್ತೊಬ್ಬರನ್ನು ಅವರ ಸ್ಥಳದಲ್ಲಿ ನಿಲ್ಲಿಸು ತ್ತಾನೆ.
- 25ಆದದರಿಂದ ಅವರು ನಾಶವಾಗುವಂತೆ ಆತನು ಅವರ ಕೆಲಸಗಳನ್ನು ತಿಳುಕೊಂಡು ರಾತ್ರಿಯಲ್ಲಿ ತಿರುಗಿಸಿ ಬಿಡುತ್ತಾನೆ.
- 26ಅವರು ದುಷ್ಟರೆಂದು ಬೇರೆಯವರ ದೃಷ್ಟಿಯಲ್ಲಿ ಬಹಿರಂಗವಾಗಿ ಅವರನ್ನು ಹೊಡೆಯುತ್ತಾನೆ.
Cross references
- Daniel 2:21 ದಾನಿಯೇಲನು 2:21ಆತನು ಕಾಲವನ್ನೂ ಸಮಯವನ್ನೂ ಬದಲಾಯಿ ಸುತ್ತಾ ಅರಸನನ್ನು ಮೇಲೆತ್ತುತ್ತಾನೆ; ಜ್ಞಾನಿಗಳಿಗೆ ಜ್ಞಾನ ವನ್ನೂ ಬುದ್ಧಿವಂತರಿಗೆ ತಿಳುವಳಿಕೆಯನ್ನೂ ಕೊಡು ತ್ತಾನೆ.
- Psalm 113:7–8 ಕೀರ್ತನೆಗಳು 113:7–8ಅಧಿಪತಿಗಳ ಸಂಗಡವೂ ತನ್ನ ಜನರ ಅಧಿಪತಿಗಳ ಸಂಗಡವೂ ಕುಳ್ಳಿರಿಸುವದಕ್ಕೆ, ಧೂಳಿನೊಳಗಿಂದ ದರಿದ್ರನನ್ನು ಏಳಮಾಡಿ ತಿಪ್ಪೆಯೊಳಗಿಂದ ಬಡವನನ್ನು ಎತ್ತುತ್ತಾನೆ.ಬಂಜೆಯಾದವಳನ್ನು ಮಕ್ಕಳ ಸಂತೋಷ ವುಳ್ಳ ತಾಯಿಯಾಗಿ ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾನೆ ಕರ್ತನನ್ನು ಸ್ತುತಿಸಿರಿ.
- Psalm 94:5 ಕೀರ್ತನೆಗಳು 94:5ಓ ಕರ್ತನೇ, ನಿನ್ನ ಜನರನ್ನು ತುಂಡುತುಂಡು ಮಾಡುತ್ತಾರೆ; ನಿನ್ನ ಸ್ವಾಸ್ಥ್ಯವನ್ನು ಬಾಧಿಸುತ್ತಾರೆ.
- Psalm 72:4 ಕೀರ್ತನೆಗಳು 72:4ಆತನು ಜನರಲ್ಲಿ ದೀನರಿಗೆ ನ್ಯಾಯತೀರಿಸುವನು; ಬಡವನ ಮಕ್ಕಳನ್ನು ರಕ್ಷಿಸುವನು; ಬಲಾತ್ಕಾರಿಯನ್ನು ಮುರಿದು ತುಂಡು ಮಾಡುವನು.
- Psalm 2:9 ಕೀರ್ತನೆಗಳು 2:9ಕಬ್ಬಿಣದ ಕೋಲಿನಿಂದ ಅವರನ್ನು ಮುರಿದುಬಿಡುವಿ. ಕುಂಬಾರನ ಗಡಿಗೆಯ ಹಾಗೆ ಅವ ರನ್ನು ಒಡೆದು ಚೂರುಚೂರಾಗಿ ಮಾಡಿಬಿಡುವಿ.
- Daniel 5:28–31 ದಾನಿಯೇಲನು 5:28–31ಪೆರೇಸ್ ಅಂದರೆ ನಿನ್ನ ರಾಜ್ಯವು ವಿಭಿನ್ನವಾಗಿ ಮೇದ್ಯಯರಿಗೂ ಪಾರಸೀಯರಿಗೂ ಕೊಡಲ್ಪಟ್ಟಿದೆ ಎಂಬದಾಗಿ ಅರಿಕೆಮಾಡಿದನು. ಆಗ ಬೇಲ್ಯಚ್ಚರನು ಆಜ್ಞಾಪಿಸಲು ದಾನಿಯೇಲನಿಗೆ ಧೂಮ್ರ ವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಹಾರವನ್ನು ಹಾಕಿ, ಇವನು ರಾಜ್ಯದ ಮೂವರು ಅಧಿಕಾರಿಗಳಲ್ಲಿ ಒಬ್ಬನೆಂದು ಸಾರಿ ದನು. ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಕೊಲ್ಲಲ್ಪಟ್ಟನು.ಮೇದ್ಯಯನಾದ ದಾರ್ಯಾವೆಷನು ಅರವತ್ತೆರಡು ವರುಷದವನಾಗಿ ರಾಜ್ಯವನ್ನು ವಶಪಡಿಸಿಕೊಂಡನು. ಮೇದ್ಯಯನಾದ ದಾರ್ಯಾವೆಷನು ಅರವತ್ತೆರಡು ವರುಷದವನಾಗಿ ರಾಜ್ಯವನ್ನು ವಶಪಡಿಸಿಕೊಂಡನು.
- Jeremiah 51:20–23 ಯೆರೆಮೀಯ 51:20–23ನೀನು ನನ್ನ ಸುತ್ತಿಗೆಯೇ, ನನ್ನ ಯುದ್ಧದ ಆಯುಧಗಳೇ, ನಿನ್ನಿಂದ ಜನಾಂಗಗಳನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಾಜ್ಯಗಳನ್ನು ನಾಶಮಾಡುತ್ತೇನೆ; ನಿನ್ನಿಂದ ಕುದುರೆಯನ್ನೂ ಅದರ ಮೇಲೆ ಹತ್ತಿದವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಥವನ್ನೂ ಅದರಲ್ಲಿ ಸವಾರಿ ಮಾಡುವವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಗಂಡಸರನ್ನೂ ಹೆಂಗಸರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಕುರುಬನನ್ನೂ ಅವನ ಮಂದೆಯನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಹಿರಿಯರನ್ನೂ ಕಿರಿಯರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಯೌವನಸ್ಥನನ್ನೂ ಕನ್ನಿಕೆಯನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಒಕ್ಕಲಿಗನನ್ನೂ ಅವನ ನೊಗದ ಎತ್ತುಗಳನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಚೂರು ಚೂರಾಗಿ ಒಡೆದುಬಿಡು ತ್ತೇನೆ.
- Daniel 2:34–35 ದಾನಿಯೇಲನು 2:34–35ನೀನು ನೋಡುತ್ತಿರಲಾಗಿ, ಒಂದು ಕಲ್ಲು ಕೈಗಳ ಸಹಾಯವಿಲ್ಲದೆ ಒಡೆಯಲ್ಪಟ್ಟು ಅರ್ಧ ಕಬ್ಬಿ ಣವೂ ಅರ್ಧ ಮಣ್ಣೂ ಆಗಿದ್ದ ಆ ವಿಗ್ರಹದ ಪಾದ ಗಳನ್ನು ಬಡಿದು ಅವುಗಳನ್ನು ಚೂರುಚೂರು ಮಾಡಿತು. ಆಮೇಲೆ ಕಬ್ಬಿಣವೂ ಮಣ್ಣೂ ಹಿತ್ತಾಳೆಯೂ ಬೆಳ್ಳಿಯೂ ಮತ್ತು ಬಂಗಾರವೂ ಕೂಡ ಒಡೆದು ಚೂರು ಚೂರಾಗಿ ಬೇಸಿಗೆ ಕಾಲದ ಧಾನ್ಯದ ಹೊಟ್ಟಿನ ಹಾಗಾ ದವು; ಅವುಗಳಿಗೆ ಎಡೆ ಸಿಗದ ಹಾಗೆ ಗಾಳಿಯು ಅವುಗಳನ್ನು ಹೊಡೆದುಕೊಂಡು ಹೋಯಿತು; ಪ್ರತಿಮೆಯನ್ನು ಬಡಿದ ಕಲ್ಲು ದೊಡ್ಡ ಬೆಟ್ಟವಾಗಿ ಸಮಸ್ತ ಭೂಮಿಯನ್ನು ತುಂಬಿಸಿತು.
- 1 Samuel 2:30–36 1 ಸಮುವೇಲನು 2:30–36ಆದದರಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳುವ ದೇನಂದರೆ--ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಕರ್ತನು ಹೇಳುವದೇನಂದರೆ--ನನಗೆ ಅದು ದೂರವಾಗಿರಲಿ; ಯಾಕಂದರೆ ನನ್ನನ್ನು ಸನ್ಮಾನಿಸು ವವರನ್ನು ನಾನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸು ವವರನ್ನು ನಾನು ತಿರಸ್ಕರಿಸುವೆನು. ಇಗೋ, ನಿನ್ನ ಮನೆಯಲ್ಲಿ ಒಬ್ಬ ಮುದುಕನೂ ಇಲ್ಲದ ಹಾಗೆ ನಿನ್ನ ತೋಳನ್ನೂ ನಿನ್ನ ತಂದೆಯ ಮನೆಯವರ ತೋಳನ್ನೂ ನಾನು ಛೇದಿಸುವ ದಿವಸಗಳು ಬರುವವು. ಇದಲ್ಲದೆ ಇಸ್ರಾಯೇಲಿಗೆ ಮಾಡುವ ಸಕಲ ಉತ್ತಮವಾದವು ಗಳಿಗೆ ಬದಲಾಗಿ ನೀನು ನನ್ನ ವಾಸಸ್ಥಳದಲ್ಲಿ ಒಬ್ಬ ವೈರಿಯನ್ನು ಕಾಣುವಿ; ಎಂದಿಗೂ ನಿನ್ನ ಮನೆಯಲ್ಲಿ ಒಬ್ಬ ಮುದುಕನೂ ಇರುವದಿಲ್ಲ. ನನ್ನ ಯಜ್ಞ ವೇದಿಯ ಬಳಿಯಿಂದ ನಾನು ಕಡಿದು ಬಿಡದ ಮನು ಷ್ಯನು ನಿನ್ನ ಕಣ್ಣುಗಳನ್ನು ಕಳೆದು ನಿನ್ನ ಹೃದಯವನ್ನು ವೇದನೆಪಡಿಸುವದಕ್ಕೆ ಇರುವನು; ನಿನ್ನ ಮನೆಯವ ರೆಲ್ಲಾ ಯೌವನಸ್ಥರಾದಾಗಲೇ ಸಾಯುವರು. ಇದ ಲ್ಲದೆ ನಿನಗೆ ಗುರುತಾಗಿ ಹೊಫ್ನಿಯು ಫೀನೆಹಾಸನು ಎಂಬ ನಿನ್ನ ಇಬ್ಬರು ಮಕ್ಕಳಿಗೆ ಬರುವದೇನಂದರೆ, ಅವರಿಬ್ಬರೂ ಒಂದೇ ದಿವಸದಲ್ಲಿ ಸಾಯುವರು. ಆದರೆ ನನ್ನ ಹೃದಯಕ್ಕೂ ನನ್ನ ಮನಸ್ಸಿಗೂ ಸಮ ರ್ಪಕವಾದ ಹಾಗೆ ಮಾಡುವ ನಂಬಿಕೆಯಾದ ಒಬ್ಬ ಯಾಜಕನನ್ನು ನನಗೋಸ್ಕರ ಎಬ್ಬಿಸಿ ಅವನಿಗೆ ಸ್ಥಿರ ವಾದ ಮನೆಯನ್ನು ಕಟ್ಟುವೆನು. ಅವನು ನನ್ನ ಅಭಿಷಿಕ್ತನ ಮುಂದೆ ನಿರಂತರವಾಗಿ ನಡೆದುಕೊಳ್ಳುವನು.ನಿನ್ನ ಮನೆಯಲ್ಲಿ ಉಳಿದವರೆಲ್ಲಾ ಬಂದು ಅವನಿಗೆ ಅಡ್ಡ ಬಿದ್ದು ಒಂದು ಬೆಳ್ಳಿ ಹಣವನ್ನೂ ಒಂದು ರೊಟ್ಟಿಯ ಚೂರನ್ನೂ ಬೇಡುತ್ತಾ--ನಾನು ಸ್ವಲ್ಪ ರೊಟ್ಟಿಯನ್ನು ತಿನ್ನುವ ಹಾಗೆ ದಯಮಾಡಿ ನನ್ನನ್ನು ಯಾಜಕ ಸೇವೆ ಯಲ್ಲಿ ಸೇರಿಸಿಕೋ ಎಂದು ಹೇಳುವರು ಅಂದನು. ನಿನ್ನ ಮನೆಯಲ್ಲಿ ಉಳಿದವರೆಲ್ಲಾ ಬಂದು ಅವನಿಗೆ ಅಡ್ಡ ಬಿದ್ದು ಒಂದು ಬೆಳ್ಳಿ ಹಣವನ್ನೂ ಒಂದು ರೊಟ್ಟಿಯ ಚೂರನ್ನೂ ಬೇಡುತ್ತಾ--ನಾನು ಸ್ವಲ್ಪ ರೊಟ್ಟಿಯನ್ನು ತಿನ್ನುವ ಹಾಗೆ ದಯಮಾಡಿ ನನ್ನನ್ನು ಯಾಜಕ ಸೇವೆ ಯಲ್ಲಿ ಸೇರಿಸಿಕೋ ಎಂದು ಹೇಳುವರು ಅಂದನು.
- Job 12:19 ಯೋಬನು 12:19ಆತನು ಪ್ರಧಾನರನ್ನು ಕೇಡಿಗೆ ನಡಿಸು ತ್ತಾನೆ; ಬಲಿಷ್ಠರನ್ನು ಕೆಡವಿಬಿಡುತ್ತಾನೆ.
- Job 19:2 ಯೋಬನು 19:2ಎಷ್ಟರ ವರೆಗೆ ನನ್ನ ಪ್ರಾಣ ವನ್ನು ನೋಯಿಸಿ, ನನ್ನನ್ನು ಮಾತುಗಳಿಂದ ಜಜ್ಜುವಿರಿ?
- 1 Kings 14:7–8 1 ಅರಸುಗಳು 14:7–8ನೀನು ಹೋಗಿ ಯಾರೊಬ್ಬಾಮನಿಗೆ ಹೇಳಬೇಕಾದದ್ದು-- ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇ ನಂದರೆ--ನಾನು ಜನರೊಳಗಿಂದ ಎತ್ತಿ, ನಿನ್ನನ್ನು ಹೆಚ್ಚಿಸಿ ನನ್ನ ಜನರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗ ಮಾಡಿ ದಾವೀದನ ಮನೆಯಿಂದ ರಾಜ್ಯವನ್ನು ಕಿತ್ತು ಕೊಂಡು ನಿನಗೆ ಕೊಟ್ಟೆನು. ಆದರೆ ನನ್ನ ಆಜ್ಞೆಗಳನ್ನು ಕೈಕೊಂಡು ನನ್ನ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದನ್ನು ಮಾಡಿ ತನ್ನ ಸಂಪೂರ್ಣವಾದ ಹೃದಯದಿಂದ ನನ್ನನ್ನು ಹಿಂಬಾಲಿಸಿದ ನನ್ನ ಸೇವಕನಾದ ದಾವೀದನ ಹಾಗೆ ನೀನು ಇರದೆ ನಿನಗೆ ಮುಂಚೆ ಇದ್ದವರೆಲ್ಲರಿಗಿಂತ ಕೆಟ್ಟದ್ದನ್ನು ಮಾಡಿದಿ.