Job · chapter 34 · verse 32
Job 34:32 in Kannada
ನಾನು ನೋಡಿದ್ದನ್ನು ನೀನು ನನಗೆ ಬೋಧಿಸು; ನಾನು ಅನ್ಯಾಯವನ್ನು ಮಾಡಿದ್ದರೆ, ಇನ್ನು ಮೇಲೆ ತಿರುಗಿ ಮಾಡೆನು.
Naanu nodiddannu neenu nanage bodhisu; naanu anyaayavannu maadiddare, innu mele tirugi maadenu.
Job 34:32 in English
- King James Version (KJV)
- [That which] I see not teach thou me: if I have done iniquity, I will do no more.
- World English Bible (WEB)
- Teach me that which I don’t see. If I have done iniquity, I will do it no more’?
- American Standard Version (ASV)
- That which I see not teach thou me: If I have done iniquity, I will do it no more?
- Bible in Basic English (BBE)
- ...
- Darby Translation (DBY)
- What I see not, teach thou me; if I have done wrong, I will do so no more?
- Webster's Bible (WBS)
- [That which] I see not teach thou me: if I have done iniquity, I will do no more.
- Young's Literal Translation (YLT)
- Besides [that which] I see, shew Thou me, If iniquity I have done — I do not add?'
Read in context
- 30ಹೀಗೆ ಜನರಿಗೆ ಉರು ಲಾಗದಂತೆ ಕಪಟಿಯು ಆಳುವದಿಲ್ಲ.
- 31ನಿಶ್ಚಯವಾಗಿ ದೇವರಿಗೆ ಹೇಳತಕ್ಕದ್ದೇನಂದರೆ--ನಾನು ಶಿಕ್ಷೆಯನ್ನು ತಾಳಿದ್ದೇನೆ, ಇನ್ನು ಮೇಲೆ ಕೆಟ್ಟತನ ಮಾಡುವದಿಲ್ಲ.
- 32ನಾನು ನೋಡಿದ್ದನ್ನು ನೀನು ನನಗೆ ಬೋಧಿಸು; ನಾನು ಅನ್ಯಾಯವನ್ನು ಮಾಡಿದ್ದರೆ, ಇನ್ನು ಮೇಲೆ ತಿರುಗಿ ಮಾಡೆನು.
- 33ನಿನ್ನ ಮನಸ್ಸಿನ ಪ್ರಕಾರ ಇರ ಬೇಕೋ? ನೀನು ತಿರಸ್ಕರಿಸಿದರೂ ಆದು ಕೊಂಡರೂ ಆತನು ಪ್ರತಿಫಲ ಕೊಡುವನು ನಾನಲ್ಲ.
- 34ತಿಳುವಳಿಕೆ ಯುಳ್ಳವರು ನನಗೆ ಹೇಳಲಿ, ಜ್ಞಾನಿಯು ನನ್ನ ಮಾತನ್ನು ಕೇಳಲಿ.
Cross references
- Psalm 32:8 ಕೀರ್ತನೆಗಳು 32:8ನಾನು -- ನಿನಗೆ ಬುದ್ದಿ ಹೇಳುವೆನು; ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು; ನನ್ನ ಕಣ್ಣಿನಿಂದ ನಿನ್ನನ್ನು ನಡಿಸುವೆನು.
- Psalm 19:12 ಕೀರ್ತನೆಗಳು 19:12ತನ್ನ ತಪ್ಪುಗಳನ್ನು ತಿಳಿದುಕೊಳ್ಳುವವನಾರು? ಗುಪ್ತವಾದ ಪಾಪಗಳಿಂದ ನನ್ನನ್ನು ನಿರ್ಮಲಮಾಡು.
- Psalm 25:4–5 ಕೀರ್ತನೆಗಳು 25:4–5ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿ ಸು; ನಿನ್ನ ದಾರಿಗಳನ್ನು ನನಗೆ ಕಲಿಸು. ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸು ತ್ತೇನೆ.
- Psalm 139:23–24 ಕೀರ್ತನೆಗಳು 139:23–24ದೇವರೇ, ನನ್ನನ್ನು ಶೋಧಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಪರೀಕ್ಷಿಸಿ ನನ್ನ ಆಲೋಚನೆಗಳನ್ನು ತಿಳಿದುಕೋ.ನನ್ನಲ್ಲಿ ದುಷ್ಟತ ನದ ಮಾರ್ಗ ಉಂಟೇನೋ ನೋಡಿ ನಿತ್ಯವಾದ ಮಾರ್ಗದಲ್ಲಿ ನನ್ನನ್ನು ನಡಿಸು. ನನ್ನಲ್ಲಿ ದುಷ್ಟತ ನದ ಮಾರ್ಗ ಉಂಟೇನೋ ನೋಡಿ ನಿತ್ಯವಾದ ಮಾರ್ಗದಲ್ಲಿ ನನ್ನನ್ನು ನಡಿಸು.
- Psalm 143:8–10 ಕೀರ್ತನೆಗಳು 143:8–10ಹೊತ್ತಾರೆಯಲ್ಲಿ ನಿನ್ನ ಪ್ರೀತಿಕರುಣೆಯನ್ನು ನಾನು ಕೇಳುವಂತೆ ಮಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ; ನಾನು ಹೋಗಬೇಕಾದ ಮಾರ್ಗವನ್ನು ನನಗೆ ತಿಳಿಯಪಡಿಸು; ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ. ಓ ಕರ್ತನೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸು; ನಾನು ಅಡಗಿಕೊಳ್ಳು ವಂತೆ ನಿನ್ನ ಬಳಿಗೆ ಓಡುತ್ತೇನೆ. ನಿನ್ನ ಚಿತ್ತದಂತೆ ಮಾಡುವದಕ್ಕೆ ನನಗೆ ಬೋಧಿಸು; ನೀನು ನನ್ನ ದೇವರು; ಒಳ್ಳೇದಾಗಿರುವ ನಿನ್ನ ಆತ್ಮವು ನನ್ನನ್ನು ನೆಟ್ಟನೆಯ ಭೂಮಿಯಲ್ಲಿ ನಡಿಸಲಿ.
- Job 10:2 ಯೋಬನು 10:2ನಾನು ದೇವರಿಗೆ ಹೀಗೆ ಹೇಳುತ್ತೇನೆ--ನನ್ನನ್ನು ಖಂಡಿಸಬೇಡ; ಯಾವದಕ್ಕೋ ಸ್ಕರ ನನ್ನ ಸಂಗಡ ವ್ಯಾಜ್ಯಮಾಡುತ್ತೀ ಎಂದು ನನಗೆ ತಿಳಿಸು.
- Proverbs 28:13 ಜ್ಞಾನೋಕ್ತಿಗಳು 28:13ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನು ಕರುಣೆ ಹೊಂದುವನು.
- Job 35:11 ಯೋಬನು 35:11ಆತನು ಭೂಮಿಯ ಮೃಗಗಳಿಗಿಂತ ನಮಗೆ ಹೆಚ್ಚು ಕಲಿಸಿ, ಆಕಾಶದ ಪಕ್ಷಿಗಳಿಗಿಂತ ನಮಗೆ ಅಧಿಕ ಜ್ಞಾನವನ್ನು ಕೊಡುತ್ತಾನೆ.
- Luke 3:8–14 ಲೂಕನು 3:8–14ಹಾಗಾದರೆ ಮಾನಸಾ ಂತರಕ್ಕೆ ಯೋಗ್ಯವಾದ ಫಲಗಳನ್ನು ಫಲಿಸಿರಿ,--ಅಬ್ರಹಾಮನು ನಮಗೆ ತಂದೆಯಾಗಿದ್ದಾನೆಂದು ನಿಮ್ಮೊಳಗೆ ಅಂದುಕೊಳ್ಳುವದಕ್ಕೆ ಆರಂಭಿಸಬೇ ಡಿರಿ; ಯಾಕಂದರೆ--ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸಶಕ್ತನೆಂದು ನಾನು ನಿಮಗೆ ಹೇಳುತ್ತೇನೆ. ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇಫಲ ಫಲಿ ಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿಯಲ್ಲಿ ಹಾಕಲ್ಪಡುವದು ಎಂದು ಹೇಳಿದನು. ಆಗ ಜನರು ಅವನಿಗೆ--ಹಾಗಾದರೆ ನಾವೇನು ಮಾಡಬೇಕು ಎಂದು ಕೇಳಿದರು. ಅವನು ಪ್ರತ್ಯುತ್ತರವಾಗಿ ಅವರಿಗೆ--ಎರಡು ಅಂಗಿಗಳುಳ್ಳವನು ಏನೂ ಇಲ್ಲದವ ನಿಗೆ ಕೊಡಲಿ; ಆಹಾರವುಳ್ಳವನು ಹಾಗೆಯೇ ಮಾಡಲಿ ಎಂದು ಹೇಳಿದನು. ತರುವಾಯ ಸುಂಕದವರು ಸಹ ಬಾಪ್ತಿಸ್ಮ ಮಾಡಿಸಿಕೊಳ್ಳುವದಕ್ಕಾಗಿ ಬಂದು ಅವನಿಗೆ--ಬೋಧಕನೇ, ನಾವೇನು ಮಾಡಬೇಕು ಎಂದು ಕೇಳಿದರು. ಅದಕ್ಕವನು ಅವರಿಗೆ-- ನಿಮಗೆ ನೇಮಿಸಲ್ಪಟ್ಟದ್ದಕ್ಕಿಂತ ಹೆಚ್ಚೇನೂ ತೆಗೆದು ಕೊಳ್ಳಬೇಡಿರಿ ಅಂದನು. ಅದರಂತೆಯೇ ಸೈನಿ ಕರು--ನಾವೇನು ಮಾಡತಕ್ಕದ್ದು ಎಂದು ಕೇಳಿದ್ದಕ್ಕೆ ಅವನು ಅವರಿಗೆ--ಯಾರನ್ನೂ ಹಿಂಸಿಸಬೇಡಿರಿ; ಇಲ್ಲವೆ ಯಾರ ಮೇಲೆಯೂ ಸುಳ್ಳಾಗಿ ದೂರು ಹೇಳಬೇಡಿರಿ; ನಿಮ್ಮ ಸಂಬಳದಲ್ಲಿ ತೃಪ್ತರಾಗಿರ್ರಿ ಎಂದು ಹೇಳಿದನು.
- Ephesians 4:22 ಎಫೆಸದವರಿಗೆ 4:22ಯೇಸುವಿನಲ್ಲಿರುವ ಸತ್ಯೋಪದೇಶವು ಯಾವದೆಂದರೆ--ನೀವು ನಿಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವ ವನ್ನು ತೆಗೆದು ಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟು ಹೋಗುವಂಥದು.
- Ephesians 4:25–28 ಎಫೆಸದವರಿಗೆ 4:25–28ಆದ ಕಾರಣ ಸುಳ್ಳಾಡುವದನ್ನು ಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ; ಯಾಕಂದರೆ ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವಲ್ಲಾ. ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; ಸೈತಾನನಿಗೆ ಅವಕಾಶ ಕೊಡಲೇಬೇಡಿರಿ. ಕಳವು ಮಾಡುವವನು ಇನ್ನು ಮೇಲೆ ಕಳವು ಮಾಡದೆ ಕೈಯಿಂದ ಯಾವದಾದರೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ; ಆಗ ಕೊರತೆಯಲ್ಲಿರುವವರಿಗೆ ಕೊಡು ವದಕ್ಕೆ ಅವನಿಂದಾ ಗುವದು.