Joel · chapter 2 · verse 10
Joel 2:10 in Kannada
ಅವರ ಮುಂದೆ ಭೂಮಿಯು ನಡುಗುತ್ತದೆ; ಆಕಾಶಗಳು ಅದುರುತ್ತವೆ; ಸೂರ್ಯ ಚಂದ್ರರು ಕಪ್ಪಾಗುತ್ತವೆ; ನಕ್ಷತ್ರಗಳು ತಮ್ಮ ಪ್ರಕಾಶವನ್ನು ಮರೆ ಮಾಡುತ್ತವೆ.
Avara munde bhoomiyu naduguttade; aakaashagalu aduruttave; soorya chandraru kappaaguttave; nakshatragalu tamma prakaashavannu mare maaduttave.
Joel 2:10 in English
- King James Version (KJV)
- The earth shall quake before them; the heavens shall tremble: the sun and the moon shall be dark, and the stars shall withdraw their shining:
- World English Bible (WEB)
- The earth quakes before them. The heavens tremble. The sun and the moon are darkened, and the stars withdraw their shining.
- American Standard Version (ASV)
- The earth quaketh before them; the heavens tremble; the sun and the moon are darkened, and the stars withdraw their shining.
- Bible in Basic English (BBE)
- The earth is troubled before them and the heavens are shaking: the sun and the moon have become dark, and the stars keep back their shining:
- Darby Translation (DBY)
- The earth quaketh before them; the heavens tremble; the sun and the moon are darkened, and the stars withdraw their shining.
- Webster's Bible (WBS)
- The earth shall quake before them; the heavens shall tremble: the sun and the moon shall be dark, and the stars shall withdraw their shining:
- Young's Literal Translation (YLT)
- At their face trembled hath the earth, Shaken have the heavens, Sun and moon have been black, And stars have gathered up their shining.
Read in context
- 8ಒಬ್ಬನು ಇನ್ನೊಬ್ಬ ನನ್ನು ನೂಕುವದಿಲ್ಲ; ಅವರಲ್ಲಿ ಪ್ರತಿಯೊಬ್ಬನು ತನ್ನ ತನ್ನ ದಾರಿಯಲ್ಲಿ ಹೋಗುತ್ತಾನೆ; ಆಯುಧಗಳಲ್ಲಿ ಬಿದ್ದರೂ ಗಾಯವಾಗುವದಿಲ್ಲ.
- 9ಪಟ್ಟಣದಲ್ಲಿ ಅತ್ತಿತ್ತ ತಿರುಗಾಡುತ್ತಾರೆ; ಗೋಡೆಯ ಮೇಲೆ ಓಡುತ್ತಾರೆ; ಮನೆಗಳ ಮೇಲೆ ಹತ್ತುತ್ತಾರೆ; ಕಳ್ಳನ ಹಾಗೆ ಕಿಟಕಿಗಳಿಂದ ಪ್ರವೇಶಿಸುತ್ತಾರೆ.
- 10ಅವರ ಮುಂದೆ ಭೂಮಿಯು ನಡುಗುತ್ತದೆ; ಆಕಾಶಗಳು ಅದುರುತ್ತವೆ; ಸೂರ್ಯ ಚಂದ್ರರು ಕಪ್ಪಾಗುತ್ತವೆ; ನಕ್ಷತ್ರಗಳು ತಮ್ಮ ಪ್ರಕಾಶವನ್ನು ಮರೆ ಮಾಡುತ್ತವೆ.
- 11ಕರ್ತನು ತನ್ನ ಸೈನ್ಯದ ಮುಂದೆ ತನ್ನ ಶಬ್ದವನ್ನು ಮಾಡುತ್ತಾನೆ; ಆತನ ದಂಡು ಬಹು ದೊಡ್ಡದಾಗಿದೆ; ಹೌದು, ಬಲವಾದ ದ್ದಾಗಿದ್ದು ಆತನ ವಾಕ್ಯವನ್ನು ನಡಿಸುತ್ತದೆ; ಕರ್ತನ ದಿನವು ದೊಡ್ಡದು, ಮಹಾ ಭಯಂಕರವಾದದ್ದು, ಅದನ್ನು ತಾಳಿಕೊಳ್ಳುವವನ್ಯಾರು?
- 12ಹೀಗಿರುವದರಿಂದ ಈಗ ಕರ್ತನು ಅನ್ನುವದೇ ನಂದರೆ--ಪೂರ್ಣ ಹೃದಯದಿಂದಲೂ ಉಪವಾಸ ದಿಂದಲೂ ಅಳುವಿಕೆಯಿಂದಲೂ ಗೋಳಾಟದಿಂದ ಲೂ ನನ್ನ ಕಡೆಗೆ ತಿರುಗಿಕೊಳ್ಳಿರಿ.
Cross references
- Matthew 24:29 ಮತ್ತಾಯನು 24:29ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕು ಕೊಡದೆ ಇರುವನು; ನಕ್ಷತ್ರಗಳು ಆಕಾಶದಿಂದ ಬೀಳುವವು ಆಕಾಶದ ಶಕ್ತಿಗಳು ಕದಲಿಸಲ್ಪಡುವವು.
- Isaiah 13:10 ಯೆಶಾಯ 13:10ಆಕಾಶದ ನಕ್ಷತ್ರಗಳು ಅದರ ರಾಶಿಗಳು ತಮ್ಮ ಬೆಳಕನ್ನು ಕೊಡುವುದಿಲ್ಲ; ಸೂರ್ಯನು ಮೂಡಿ ಹೋಗುತ್ತಿರುವಾಗಲೇ ಕತ್ತಲಾಗುವನು. ಚಂದ್ರನು ತನ್ನ ಬೆಳಕನ್ನು ಕೊಡುವದಿಲ್ಲ.
- Joel 3:15–16 ಯೋವೇಲ 3:15–16ಸೂರ್ಯ, ಚಂದ್ರ ಕಪ್ಪಾಗುವವು; ನಕ್ಷತ್ರಗಳು ತಮ್ಮ ಪ್ರಕಾಶವನ್ನು ಮರೆಮಾಡುವವು. ಕರ್ತನು ಚೀಯೋನಿನೊಳಗಿಂದ ಘರ್ಜಿಸಿ ಯೆರೂಸಲೇಮಿನೊಳಗಿಂದ ತನ್ನ ಶಬ್ದವನ್ನು ಕೊಡುವನು. ಆಕಾಶಗಳೂ ಭೂಮಿಯೂ ಕದಲು ವವು; ಆದರೆ ಕರ್ತನು ತನ್ನ ಜನರಿಗೆ ನಿರೀಕ್ಷೆಯೂ ಇಸ್ರಾಯೇಲನ ಮಕ್ಕಳಿಗೆ ಬಲವೂ ಆಗಿರುವನು.
- Psalm 18:7 ಕೀರ್ತನೆಗಳು 18:7ಆಗ ಆತನು ಕೋಪಗೊಂಡಿದ್ದನು. ಭೂಮಿಯು ಕದಲಿ ಕಂಪಿಸಿತು; ಪರ್ವತಗಳ ಅಸ್ತಿವಾರಗಳು ಸಹ ನಡುಗಿ ಕದಲಿದವು;
- Acts 2:20 ಅಪೊಸ್ತಲರ ಕೃತ್ಯಗಳು 2:20ಕರ್ತನ ಗಂಭೀರವಾದ ಆ ಮಹಾದಿನವು ಬರುವ ಮುಂಚೆ ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗು ವನು.
- Ezekiel 32:7–8 ಯೆಹೆಜ್ಕೇಲನು 32:7–8ಇದಲ್ಲದೆ, ನಾನು ನಿನ್ನನ್ನು ನಂದಿಸುವಾಗ ಆಕಾಶಕ್ಕೆ ಮುಸುಕುಹಾಕಿ ಅಲ್ಲಿನ ನಕ್ಷತ್ರಗಳನ್ನು ಕತ್ತಲಾಗ ಮಾಡಿ, ಸೂರ್ಯನನ್ನು ಮೋಡದಿಂದ ಮುಚ್ಚಿಬಿಡುವೆನು; ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು. ಆಕಾಶದಲ್ಲಿ ಪ್ರಕಾಶಿ ಸುವ ಬೆಳಕುಗಳನ್ನು ನಿನ್ನ ನಿಮಿತ್ತವಾಗಿ ನಾನು ಕತ್ತಲು ಮಾಡುವೆನು; ಆ ಕತ್ತಲೆಯನ್ನು ನಿನ್ನ ದೇಶದ ಮೇಲೆ ಇಡುತ್ತೇನೆಂದು ದೇವರಾದ ಕರ್ತನು ಹೇಳುತ್ತಾನೆ.
- Mark 13:24–25 ಮಾರ್ಕನು 13:24–25ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು. ಆಕಾಶದ ನಕ್ಷತ್ರಗಳು ಬೀಳುವವು ಮತ್ತು ಆಕಾಶದಲ್ಲಿರುವ ಶಕ್ತಿಗಳು ಕದಲುವವು.
- Jeremiah 4:23 ಯೆರೆಮೀಯ 4:23ನಾನು ಭೂಮಿಯನ್ನು ನೋಡಿದೆನು, ಇಗೋ, ಅದು ನಿರಾಕಾರವಾಗಿಯೂ ಹಾಳಾಗಿಯೂ ಶೂನ್ಯವಾಗಿಯೂ ಇತ್ತು; ಆಕಾಶಗಳನ್ನು ಸಹ ನೋಡಿದೆನು, ಅವುಗಳಿಗೆ ಬೆಳಕಿರಲಿಲ್ಲ.
- Revelation 6:12 ಪ್ರಕಟನೆ 6:12ಆತನು ಆರನೆಯ ಮುದ್ರೆ ತೆರೆಯುವದನ್ನು ನಾನು ಕಂಡೆನು. ಆಗ ಇಗೋ, ಮಹಾಭೂಕಂಪ ಉಂಟಾಯಿತು; ಸೂರ್ಯನು ಕೂದಲಿನ ಗೋಣಿ ಯಂತೆ ಕಪ್ಪಾದನು. ಚಂದ್ರನು ರಕ್ತದಂತಾದನು.
- Revelation 8:12 ಪ್ರಕಟನೆ 8:12ನಾಲ್ಕನೆಯ ದೂತನು ಊದಿದಾಗ ಸೂರ್ಯನ ಮೂರರಲ್ಲಿ ಒಂದು ಭಾಗವೂ ಚಂದ್ರನ ಮೂರರಲ್ಲಿ ಒಂದು ಭಾಗವೂ ನಕ್ಷತ್ರಗಳ ಮೂರರಲ್ಲಿ ಒಂದು ಭಾಗವೂ ಒಡೆಯಲ್ಪಟ್ಟದ್ದರಿಂದ ಮೂರನೇ ಭಾಗವು ಕತ್ತಲಾಯಿತು; ಹಗಲಿನೊಳಗೆ ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಇತ್ತು; ರಾತ್ರಿಯು ಹಾಗೆಯೇ ಆಆಮೇಲೆ ನಾನು ನೋಡಲಾಗಿ ಇಗೋ, ಒಬ್ಬ ದೂತನು ಆಕಾಶ ಮಧ್ಯದಲ್ಲಿ ಹಾರುತ್ತಾ--ಇನ್ನೂ ಊದಬೇಕಾಗಿರುವ ಮೂವರು ದೂತರ ಮಿಕ್ಕಾದ ತುತೂರಿಯ ಧ್ವನಿಗಳು ಉಂಟಾಗುವಾಗ ಭೂನಿವಾಸಿ ಗಳಿಗೆ ಅಯ್ಯೋ, ಅಯ್ಯೋ, ಅಯ್ಯೋ ಎಂದು ಮಹಾ ಶಬ್ದದಿಂದ ಹೇಳುವದನ್ನು ಕೇಳಿದೆನು.
- Nahum 1:5 ನಹೂಮ 1:5ಬೆಟ್ಟಗಳು ಆತನ ಮುಂದೆ ಕಂಪಿಸುತ್ತವೆ; ಗುಡ್ಡಗಳು ಕರಗುತ್ತವೆ; ಭೂಮಿಯೂ ಹೌದು, ಲೋಕವೂ ಅದರಲ್ಲಿ ವಾಸಿಸು ವವರೆಲ್ಲರೂ ಆತನ ಮುಂದೆ ಸುಟ್ಟು ಹೋಗುವರು.
- Isaiah 34:4 ಯೆಶಾಯ 34:4ಆಕಾಶದ ಸೈನ್ಯವೆಲ್ಲಾ ಗತಿಸಿ ಹೋಗುವದು. ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವದು, ದ್ರಾಕ್ಷೆಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ ಅಂಜೂರ ಮರದಿಂದ ತರಗು ಉದುರುವ ಹಾಗೂ ಅವುಗಳ ಸೈನ್ಯವೆಲ್ಲಾ ಬಾಡಿ ಕೆಳಗೆ ಬೀಳುವದು.