Jeremiah · chapter 4 · verse 23
Jeremiah 4:23 in Kannada
ನಾನು ಭೂಮಿಯನ್ನು ನೋಡಿದೆನು, ಇಗೋ, ಅದು ನಿರಾಕಾರವಾಗಿಯೂ ಹಾಳಾಗಿಯೂ ಶೂನ್ಯವಾಗಿಯೂ ಇತ್ತು; ಆಕಾಶಗಳನ್ನು ಸಹ ನೋಡಿದೆನು, ಅವುಗಳಿಗೆ ಬೆಳಕಿರಲಿಲ್ಲ.
Naanu bhoomiyannu nodidenu, igo, adu niraakaaravaagiyoo haalaagiyoo shoonyavaagiyoo ittu; aakaashagalannu saha nodidenu, avugalige belakiralilla.
Jeremiah 4:23 in English
- King James Version (KJV)
- I beheld the earth, and, lo, [it was] without form, and void; and the heavens, and they [had] no light.
- World English Bible (WEB)
- I saw the earth and, behold, it was waste and void, and the heavens, and they had no light.
- American Standard Version (ASV)
- I beheld the earth, and, lo, it was waste and void; and the heavens, and they had no light.
- Bible in Basic English (BBE)
- Looking at the earth, I saw that it was waste and without form; and to the heavens, that they had no light.
- Darby Translation (DBY)
- I beheld the earth, and lo, it was waste and empty; and the heavens, and they had no light.
- Webster's Bible (WBS)
- I beheld the earth, and lo, [it was] without form, and void; and the heavens, and they [had] no light.
- Young's Literal Translation (YLT)
- I looked [to] the land, and lo, waste and void, And unto the heavens, and their light is not.
Read in context
- 21ಎಷ್ಟರ ವರೆಗೆ ನಾನು ಧ್ವಜವನ್ನು ನೋಡುತ್ತಾ ತುತೂರಿಯ ಶಬ್ದವನ್ನು ಕೇಳಲಿ?
- 22ನನ್ನ ಜನರು ಮೂಢರಾಗಿದ್ದಾರೆ, ನನ್ನನ್ನು ಅವರು ಅರಿಯರು; ಕುಡಿಕರಾದ ಮಕ್ಕಳಾಗಿದ್ದಾರೆ, ಗ್ರಹಿಕೆ ಯುಳ್ಳವರಲ್ಲ; ಕೆಟ್ಟದ್ದನ್ನು ಮಾಡುವದಕ್ಕೆ ಜಾಣರಾಗಿ ದ್ದಾರೆ, ಒಳ್ಳೇದನ್ನು ಮಾಡುವದನ್ನು ಅರಿಯರು.
- 23ನಾನು ಭೂಮಿಯನ್ನು ನೋಡಿದೆನು, ಇಗೋ, ಅದು ನಿರಾಕಾರವಾಗಿಯೂ ಹಾಳಾಗಿಯೂ ಶೂನ್ಯವಾಗಿಯೂ ಇತ್ತು; ಆಕಾಶಗಳನ್ನು ಸಹ ನೋಡಿದೆನು, ಅವುಗಳಿಗೆ ಬೆಳಕಿರಲಿಲ್ಲ.
- 24ಬೆಟ್ಟಗಳನ್ನು ನೋಡಿದೆನು, ಇಗೋ, ಅವು ನಡುಗಿದವು; ಗುಡ್ಡಗಳು ಹೌರವಾಗಿ ಅದುರಿದವು.
- 25ನಾನು ನೋಡಿದೆನು, ಇಗೋ, ಮನುಷ್ಯನು ಇರಲಿಲ್ಲ; ಆಕಾಶದ ಪಕ್ಷಿಗಳೆಲ್ಲಾ ಹಾರಿಹೋಗಿದ್ದವು.
Cross references
- Matthew 24:29 ಮತ್ತಾಯನು 24:29ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕು ಕೊಡದೆ ಇರುವನು; ನಕ್ಷತ್ರಗಳು ಆಕಾಶದಿಂದ ಬೀಳುವವು ಆಕಾಶದ ಶಕ್ತಿಗಳು ಕದಲಿಸಲ್ಪಡುವವು.
- Mark 13:24–25 ಮಾರ್ಕನು 13:24–25ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು. ಆಕಾಶದ ನಕ್ಷತ್ರಗಳು ಬೀಳುವವು ಮತ್ತು ಆಕಾಶದಲ್ಲಿರುವ ಶಕ್ತಿಗಳು ಕದಲುವವು.
- Joel 3:15–16 ಯೋವೇಲ 3:15–16ಸೂರ್ಯ, ಚಂದ್ರ ಕಪ್ಪಾಗುವವು; ನಕ್ಷತ್ರಗಳು ತಮ್ಮ ಪ್ರಕಾಶವನ್ನು ಮರೆಮಾಡುವವು. ಕರ್ತನು ಚೀಯೋನಿನೊಳಗಿಂದ ಘರ್ಜಿಸಿ ಯೆರೂಸಲೇಮಿನೊಳಗಿಂದ ತನ್ನ ಶಬ್ದವನ್ನು ಕೊಡುವನು. ಆಕಾಶಗಳೂ ಭೂಮಿಯೂ ಕದಲು ವವು; ಆದರೆ ಕರ್ತನು ತನ್ನ ಜನರಿಗೆ ನಿರೀಕ್ಷೆಯೂ ಇಸ್ರಾಯೇಲನ ಮಕ್ಕಳಿಗೆ ಬಲವೂ ಆಗಿರುವನು.
- Isaiah 13:10 ಯೆಶಾಯ 13:10ಆಕಾಶದ ನಕ್ಷತ್ರಗಳು ಅದರ ರಾಶಿಗಳು ತಮ್ಮ ಬೆಳಕನ್ನು ಕೊಡುವುದಿಲ್ಲ; ಸೂರ್ಯನು ಮೂಡಿ ಹೋಗುತ್ತಿರುವಾಗಲೇ ಕತ್ತಲಾಗುವನು. ಚಂದ್ರನು ತನ್ನ ಬೆಳಕನ್ನು ಕೊಡುವದಿಲ್ಲ.
- Genesis 1:2 ಆದಿಕಾಂಡ 1:2ಭೂಮಿ ಯು ನಿರಾಕಾರವಾಗಿಯೂ ಶೂನ್ಯವಾಗಿಯೂ ಇತ್ತು; ಅಗಾಧದ ಮೇಲೆ ಕತ್ತಲೆ ಇತ್ತು. ದೇವರ ಆತ್ಮನು ನೀರುಗಳ ಮೇಲೆ ಚಲಿಸುತ್ತಿದ್ದನು.
- Luke 21:25–26 ಲೂಕನು 21:25–26ಸೂರ್ಯ ಚಂದ್ರ ಮತ್ತು ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು; ಇದಲ್ಲದೆ ಭೂಮಿಯ ಮೇಲಿರುವ ಜನಾಂಗಗಳಿಗೆ ಕಳವಳದಿಂದ ಸಂಕಟ ಉಂಟಾಗುವದು; ಸಮುದ್ರದ ಮತ್ತು ತೆರೆಗಳ ಘೋಷಣೆಯ ನಿಮಿತ್ತವಾಗಿ ಕಳವಳವಾಗುವದು. ಆಕಾಶದ ಶಕ್ತಿಗಳು ಕದಲಿಸಲ್ಪಡುವದರಿಂದ ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಸಂಭವಿಸುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.
- Ezekiel 32:7–8 ಯೆಹೆಜ್ಕೇಲನು 32:7–8ಇದಲ್ಲದೆ, ನಾನು ನಿನ್ನನ್ನು ನಂದಿಸುವಾಗ ಆಕಾಶಕ್ಕೆ ಮುಸುಕುಹಾಕಿ ಅಲ್ಲಿನ ನಕ್ಷತ್ರಗಳನ್ನು ಕತ್ತಲಾಗ ಮಾಡಿ, ಸೂರ್ಯನನ್ನು ಮೋಡದಿಂದ ಮುಚ್ಚಿಬಿಡುವೆನು; ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು. ಆಕಾಶದಲ್ಲಿ ಪ್ರಕಾಶಿ ಸುವ ಬೆಳಕುಗಳನ್ನು ನಿನ್ನ ನಿಮಿತ್ತವಾಗಿ ನಾನು ಕತ್ತಲು ಮಾಡುವೆನು; ಆ ಕತ್ತಲೆಯನ್ನು ನಿನ್ನ ದೇಶದ ಮೇಲೆ ಇಡುತ್ತೇನೆಂದು ದೇವರಾದ ಕರ್ತನು ಹೇಳುತ್ತಾನೆ.
- Joel 2:10 ಯೋವೇಲ 2:10ಅವರ ಮುಂದೆ ಭೂಮಿಯು ನಡುಗುತ್ತದೆ; ಆಕಾಶಗಳು ಅದುರುತ್ತವೆ; ಸೂರ್ಯ ಚಂದ್ರರು ಕಪ್ಪಾಗುತ್ತವೆ; ನಕ್ಷತ್ರಗಳು ತಮ್ಮ ಪ್ರಕಾಶವನ್ನು ಮರೆ ಮಾಡುತ್ತವೆ.
- Amos 8:9 ಆಮೋಸ 8:9ದೇವರಾದ ಕರ್ತನು ಹೇಳುತ್ತಾನೆ--ಆ ದಿನದಲ್ಲಿ ಆಗುವದೇನಂದರೆ, ನಾನು ಸೂರ್ಯನನ್ನು ಮಧ್ಯಾಹ್ನದಲ್ಲಿ ಮುಳುಗುವಂತೆ ಮಾಡುತ್ತೇನೆ. ಭೂಮಿಯನ್ನು ಹಗಲಲ್ಲೇ ಕತ್ತಲಾಗುವಂತೆ ಮಾಡು ತ್ತೇನೆ.
- Acts 2:19–20 ಅಪೊಸ್ತಲರ ಕೃತ್ಯಗಳು 2:19–20ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನೂ ಕೆಳಗೆ ಭೂಮಿಯ ಮೇಲೆ ಸೂಚಕ ಕಾರ್ಯಗಳನ್ನೂ ನಾನು ತೋರಿಸುವೆನು. ಇದಲ್ಲದೆ ರಕ್ತ, ಬೆಂಕಿ ಮತ್ತು ಹೊಗೆಯ ಹಬೆಯು ಉಂಟಾಗುವವು. ಕರ್ತನ ಗಂಭೀರವಾದ ಆ ಮಹಾದಿನವು ಬರುವ ಮುಂಚೆ ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗು ವನು.
- Joel 2:30–31 ಯೋವೇಲ 2:30–31ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನೂ ರಕ್ತವನ್ನೂ ಬೆಂಕಿಯನ್ನೂ ಹೊಗೆಯ ಸ್ತಂಭಗಳನ್ನೂ ತೋರಿಸುವೆನು. ಕರ್ತನ ದೊಡ್ಡ ಭಯಂಕರವಾದ ದಿನವು ಬರುವದಕ್ಕಿಂತ ಮುಂಚೆ, ಸೂರ್ಯನು ಕತ್ತಲೆಗೂ ಚಂದ್ರನು ರಕ್ತಕ್ಕೂ ಮಾರ್ಪಡುವವು.ಆಗುವದೇನಂದರೆ--ಕರ್ತನ ಹೆಸರನ್ನು ಹೇಳಿ ಕೊಳ್ಳುವವರೆಲ್ಲರೂ ರಕ್ಷಿಸಲ್ಪಡುವರು; ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಕರ್ತನು ಕರೆಯುವ ಉಳಿದವರಲ್ಲಿಯೂ ಕರ್ತನು ಹೇಳಿದ ಪ್ರಕಾರ ಬಿಡುಗಡೆಯು ಇರುವದು.
- Isaiah 5:30 ಯೆಶಾಯ 5:30ಆ ದಿನದಲ್ಲಿ ಅವರು ಸಮುದ್ರವು ಬೋರ್ಗರೆಯುವಂತೆ ಅವರ ಮೇಲೆ ಘರ್ಜಿಸುವರು; ಭೂಮಿಯನ್ನು ದೃಷ್ಟಿ ಸಿದರೆ ಅಂಧಕಾರವನ್ನೂ ದುಃಖವನ್ನೂ ನೋಡುವಿ. ಆಕಾಶಮಂಡಲದಲ್ಲಿ ಬೆಳಕು ಕತ್ತಲಾಗುವದು.