John · chapter 10 · verse 19
John 10:19 in Kannada
ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ತಿರಿಗಿ ಭೇದಉಂಟಾಯಿತು.
Ee maatugala deseyinda yehoodyara madhyadalli tirigi bhedauntaayitu.
John 10:19 in English
- King James Version (KJV)
- There was a division therefore again among the Jews for these sayings.
- World English Bible (WEB)
- Therefore a division arose again among the Jews because of these words.
- American Standard Version (ASV)
- There arose a division again among the Jews because of these words.
- Bible in Basic English (BBE)
- There was a division again among the Jews because of these words.
- Darby Translation (DBY)
- There was a division again among the Jews on account of these words;
- Webster's Bible (WBS)
- There was a division therefore again among the Jews for these sayings.
- Young's Literal Translation (YLT)
- Therefore, again, there came a division among the Jews, because of these words,
Read in context
- 17ಯಾಕಂದರೆ ನಾನು ನನ್ನ ಪ್ರಾಣವನ್ನು ತಿರಿಗಿಪಡಕೊಳ್ಳುವಂತೆ ಅದನ್ನು ಕೊಡುತ್ತೇನೆ; ಆದದ ರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾನೆ.
- 18ಯಾವ ಮನುಷ್ಯನಾದರೂ ಅದನ್ನು ನನ್ನಿಂದ ತೆಗೆಯುವದಿಲ್ಲ; ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ನಾನು ಅದನ್ನು ಕೊಡುವದಕ್ಕೆ ನನಗೆ ಅಧಿಕಾರವಿದೆ; ಅದನ್ನು ತಿರಿಗಿ ಪಡಕೊಳ್ಳುವದಕ್ಕೆ ನನಗೆ ಅಧಿಕಾರವಿದೆ. ಈ ಅಪ್ಪಣೆಯನ್ನು ನಾನು ನನ್ನ ತಂದೆ ಯಿಂದ ಹೊಂದಿದ್ದೇನೆ ಅಂದನು.
- 19ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ತಿರಿಗಿ ಭೇದಉಂಟಾಯಿತು.
- 20ಅವರಲ್ಲಿ ಅನೇಕರು--ಅವನಿಗೆ ದೆವ್ವ ಹಿಡಿದದೆ ಮತ್ತು ಹುಚ್ಚನಾಗಿ ದ್ದಾನೆ; ನೀವು ಯಾಕೆ ಅವನ ಮಾತನ್ನು ಕೇಳುತ್ತೀರಿ ಅಂದರು.
- 21ಬೇರೆಯವರು--ಇವು ದೆವ್ವ ಹಿಡಿದವನ ಮಾತುಗಳಲ್ಲ, ದೆವ್ವವು ಕುರುಡನ ಕಣ್ಣುಗಳನ್ನು ತೆರೆ ಯುವದಕ್ಕಾದೀತೇ ಅಂದರು.
Cross references
- John 9:16 ಯೋಹಾನನು 9:16ತರುವಾಯ ಫರಿಸಾಯರಲ್ಲಿ ಕೆಲವರು--ಈ ಮನುಷ್ಯನು ದೇವರಿಗೆ ಸಂಬಂಧಪಟ್ಟವನಲ್ಲ; ಯಾಕಂದರೆ ಈತನು ಸಬ್ಬತ್ ದಿನವನ್ನು ಕೈಕೊಳ್ಳುವವನಲ್ಲ ಅಂದರು. ಬೇರೆಯ ವರು--ಪಾಪಿಯಾದ ಒಬ್ಬ ಮನುಷ್ಯನು ಇಂಥ ಅದ್ಭುತ ಕಾರ್ಯಗಳನ್ನು ಹೇಗೆ ಮಾಡುತ್ತಾನೆ ಅಂದರು. ಹೀಗೆ ಅವರಲ್ಲಿ ಭೇದವುಂಟಾ
- 1 Corinthians 3:3 1 ಕೊರಿಂಥದವರಿಗೆ 3:3ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ನಿಮ್ಮೊಳಗೆ ಹೊಟ್ಟೇಕಿಚ್ಚು, ಜಗಳ, ಭೇದಗಳು ಇರುವಲ್ಲಿ ನೀವು ಪ್ರಾಪಂಚಿಕರಾಗಿದ್ದು ಮನುಷ್ಯರಂತೆ ನಡೆಯುತ್ತೀರಲ್ಲವೇ?
- John 7:40–43 ಯೋಹಾನನು 7:40–43ಆದದರಿಂದ ಜನರಲ್ಲಿ ಅನೇಕರು ಈ ಮಾತನ್ನು ಕೇಳಿದಾಗ--ಈತನು ನಿಜವಾಗಿಯೂ ಆ ಪ್ರವಾದಿ ಯಾಗಿದ್ದಾನೆ ಅಂದರು. ಬೇರೆಯವರು--ಈತನೇ ಆ ಕ್ರಿಸ್ತನು ಅಂದರು. ಆದರೆ ಕೆಲವರು--ಕ್ರಿಸ್ತನು ಗಲಿಲಾಯದಿಂದ ಬರುವನೋ? ಆದರೆ ಕ್ರಿಸ್ತನು ದಾವೀದನ ಸಂತಾನದಿಂದಲೂ ದಾವೀದನಿದ್ದ ಬೇತೆಹೇಮೆಂಬ ಊರಿನಿಂದಲೂ ಬರುವನೆಂದು ಬರಹವು ಹೇಳುತ್ತದಲ್ಲವೇ? ಅಂದರು. ಹೀಗೆ ಆತನ ನಿಮಿತ್ತ ವಾಗಿ ಜನರಲ್ಲಿ ಭೇದ ಉಂಟಾಯಿತು;
- Acts 14:4 ಅಪೊಸ್ತಲರ ಕೃತ್ಯಗಳು 14:4ಆದರೆ ಆ ಪಟ್ಟಣದ ಜನಸಮೂಹದವರಲ್ಲಿ ಭೇದವುಂಟಾಗಿ ಕೆಲವರು ಯೆಹೂದ್ಯರ ಪಕ್ಷದವರಾದರು. ಕೆಲವರು ಅಪೊಸ್ತಲರ ಪಕ್ಷದವರಾದರು.
- Acts 23:7–10 ಅಪೊಸ್ತಲರ ಕೃತ್ಯಗಳು 23:7–10ಅವನು ಹಾಗೆ ಹೇಳಿದಾಗ ಫರಿಸಾಯರ ಮತ್ತು ಸದ್ದುಕಾಯರ ನಡುವೆ ಭೇದಉಂಟಾಯಿತು; ಇದರಿಂದ ಸಮೂಹವೂ ವಿಭಾಗವಾಯಿತು. ಪುನರುತ್ಥಾನವಾಗಲೀ ದೂತನಾ ಗಲೀ ಆತ್ಮನಾಗಲೀ ಇಲ್ಲವೆಂದು ಸದ್ದುಕಾಯರು ಹೇಳುತ್ತಾರೆ; ಇವೆಲ್ಲವುಗಳು ಇವೆಯೆಂದು ಫರಿಸಾ ಯರು ಒಪ್ಪಿಕೊಳ್ಳುತ್ತಾರೆ. ಅಲ್ಲಿ ದೊಡ್ಡ ಕೂಗಾಟ ಉಂಟಾದದ್ದರಿಂದ ಫರಿಸಾಯರ ಪಕ್ಷದವರಾದ ಶಾಸ್ತ್ರಿಗಳು ಎದ್ದು--ಈ ಮನುಷ್ಯನಲ್ಲಿ ಯಾವ ಕೆಟ್ಟ ದ್ದನ್ನೂ ನಾವು ಕಾಣಲಿಲ್ಲ; ಆತ್ಮವಾಗಲೀ ದೇವದೂತ ನಾಗಲೀ ಅವನ ಕೂಡ ಮಾತನಾಡಿದರೆ ನಾವು ದೇವರಿಗೆ ವಿರೋಧವಾಗಿ ವ್ಯಾಜ್ಯವಾಡದೆ ಇರೋಣ ಎಂದು ಹೇಳಿ ವಾಗ್ವಾದ ಮಾಡಿದರು. ಅಲ್ಲಿ ದೊಡ್ಡ ಭೇದ ಉಂಟಾದಾಗ ಅವರು ಪೌಲನನ್ನು ಎಳೆದಾಡಿ ತುಂಡುತುಂಡಾಗಿ ಮಾಡಿ ಯಾರು ಎಂದು ಮುಖ್ಯ ನಾಯಕನು ಭಯಪಟ್ಟು ಅವನನ್ನು ಅವರೊಳಗಿಂದ ಬಲವಂತವಾಗಿ ಕೋಟೆಯೊಳಗೆ ತರಬೇಕೆಂದು ಸೈನಿಕರಿಗೆ ಆಜ್ಞಾಪಿಸಿದನು.
- Matthew 10:34–35 ಮತ್ತಾಯನು 10:34–35ನಾನು ಭೂಮಿಯ ಮೇಲೆ ಸಮಾಧಾನವನ್ನು ಕಳುಹಿಸುವದಕ್ಕಾಗಿ ಬಂದೆನೆಂದು ನೆನಸಬೇಡಿರಿ; ಖಡ್ಗ ವನ್ನಲ್ಲದೆ ಸಮಾಧಾನವನ್ನು ಕಳುಹಿಸುವದಕ್ಕೆ ನಾನು ಬಂದಿಲ್ಲ; ಹೇಗಂದರೆ ಮಗನಿಗೂ ಅವನ ತಂದೆಗೂ ಮಗಳಿಗೂ ಆಕೆಯ ತಾಯಿಗೂ ಸೊಸೆಗೂ ಆಕೆಯ ಅತ್ತೆಗೂ ವಿರೋಧವನ್ನು ಹುಟ್ಟಿಸುವದಕ್ಕೆ ನಾನು ಬಂದಿದ್ದೇನೆ.
- Luke 12:51–53 ಲೂಕನು 12:51–53ನಾನು ಭೂಮಿಯ ಮೇಲೆ ಸಮಾಧಾನವನ್ನು ಕೊಡುವದಕ್ಕಾಗಿ ಬಂದಿದ್ದೇ ನೆಂದು ನೀವು ಭಾವಿಸುತ್ತೀರೋ? ಇಲ್ಲ, ಭೇದವನ್ನು ಉಂಟುಮಾಡುವದಕ್ಕೆ ಬಂದಿದ್ದೇನೆಂದು ನಾನು ನಿಮಗೆ ಹೇಳುತ್ತೇನೆ. ಇಂದಿನಿಂದ ಒಂದು ಮನೆಯಲ್ಲಿ ಐದುಮಂದಿ ಭೇದವಾಗಿ ಇಬ್ಬರಿಗೆ ವಿರೋಧವಾಗಿ ಮೂವರು ಮೂವರಿಗೆ ವಿರೋಧವಾಗಿ ಇಬ್ಬರು ಇರುವರು. ಮಗನಿಗೆ ವಿರೋಧವಾಗಿ ತಂದೆಯೂ ತಂದೆಗೆ ವಿರೋಧವಾಗಿ ಮಗನೂ ಮಗಳಿಗೆ ವಿರೋಧವಾಗಿ ತಾಯಿಯೂ ತಾಯಿಗೆ ವಿರೋಧವಾಗಿ ಮಗಳೂ ತನ್ನ ಸೊಸೆಗೆ ವಿರೋಧವಾಗಿ ಅತ್ತೆಯೂ ತನ್ನ ಅತ್ತೆಗೆ ವಿರೋಧವಾಗಿ ಸೊಸೆಯೂ ವಿಭಾಗಿಸ ಲ್ಪಡುವರು.
- 1 Corinthians 11:18 1 ಕೊರಿಂಥದವರಿಗೆ 11:18ಹೇಗಂದರೆ ಮೊದಲನೆಯದು ನೀವು ಸಭೆಯಾಗಿ ಕೂಡಿಬರುವಾಗ ನಿಮ್ಮಲ್ಲಿ ಭೇದಗಳು ಉಂಟಾಗುತ್ತವೆಂದು ಕೇಳುತ್ತೇನೆ; ಇದು ನಿಜವೆಂದು ಸ್ವಲ್ಪಮಟ್ಟಿಗೆ ನಂಬುತ್ತೇನೆ.