John · chapter 17 · verse 5
John 17:5 in Kannada
ಓ ತಂದೆಯೇ, ಹೀಗೆ ಲೋಕವು ಇದ್ದದ್ದಕ್ಕಿಂತ ಮುಂಚೆ ನಿನ್ನೊಂದಿಗೆ ನನಗಿದ್ದ ಮಹಿಮೆಯಿಂದ ನೀನು ಸ್ವತಃ ನನ್ನನ್ನು ಮಹಿಮೆಪಡಿಸು.
O tandeye, heege lokavu iddaddakkinta munche ninnondige nanagidda mahimeyinda neenu svatah nannannu mahimepadisu.
John 17:5 in English
- King James Version (KJV)
- And now, O Father, glorify thou me with thine own self with the glory which I had with thee before the world was.
- World English Bible (WEB)
- Now, Father, glorify me with your own self with the glory which I had with you before the world existed.
- American Standard Version (ASV)
- And now, Father, glorify thou me with thine own self with the glory which I had with thee before the world was.
- Bible in Basic English (BBE)
- And now, Father, let me have glory with you, even that glory which I had with you before the world was.
- Darby Translation (DBY)
- and now glorify me, thou Father, along with thyself, with the glory which I had along with thee before the world was.
- Webster's Bible (WBS)
- And now, O Father, glorify thou me with thy ownself, with the glory which I had with thee before the world was.
- Young's Literal Translation (YLT)
- 'And now, glorify me, Thou Father, with Thyself, with the glory that I had before the world was, with Thee;
Read in context
- 3ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ಅವರು ಅರಿತು ಕೊಳ್ಳುವದೇ ನಿತ್ಯಜೀವ.
- 4ನಾನು ನಿನ್ನನ್ನು ಭೂಮಿಯ ಮೇಲೆ ಮಹಿಮೆಪಡಿಸಿದ್ದೇನೆ; ನೀನು ನನಗೆ ಕೊಟ್ಟ ಕೆಲಸವನ್ನು ನಾನು ಮುಗಿಸಿದ್ದೇನೆ;
- 5ಓ ತಂದೆಯೇ, ಹೀಗೆ ಲೋಕವು ಇದ್ದದ್ದಕ್ಕಿಂತ ಮುಂಚೆ ನಿನ್ನೊಂದಿಗೆ ನನಗಿದ್ದ ಮಹಿಮೆಯಿಂದ ನೀನು ಸ್ವತಃ ನನ್ನನ್ನು ಮಹಿಮೆಪಡಿಸು.
- 6ಲೋಕದೊಳಗಿಂದ ನೀನು ನನಗೆ ಕೊಟ್ಟ ಮನು ಷ್ಯರಿಗೆ ನಾನು ನಿನ್ನ ಹೆಸರನ್ನು ಪ್ರತ್ಯಕ್ಷಪಡಿಸಿದ್ದೇನೆ. ಅವರು ನಿನ್ನವರಾಗಿದ್ದರು; ನೀನು ಅವರನ್ನು ನನಗೆ ಕೊಟ್ಟಿದ್ದೀ; ಇದಲ್ಲದೆ ಅವರು ನಿನ್ನ ವಾಕ್ಯವನ್ನು ಕೈ ಕೊಂಡಿದ್ದಾರೆ.
- 7ನೀನು ನನಗೆ ಕೊಟ್ಟಿರುವವುಗಳೆಲ್ಲವು ನಿನ್ನವುಗಳೇ ಎಂದು ಈಗ ಅವರು ತಿಳಿದುಕೊಂಡಿದ್ದಾರೆ.
Cross references
- John 1:1–3 ಯೋಹಾನನು 1:1–3ಆದಿಯಲ್ಲಿ ವಾಕ್ಯವಿದ್ದನು; ಆ ವಾಕ್ಯವು ದೇವರೊಂದಿಗೆ ಇದ್ದನು; ಆ ವಾಕ್ಯವು ದೇವರಾಗಿದ್ದನು. ಆತನೇ ಆದಿಯಲ್ಲಿ ದೇವರೊಂದಿಗೆ ಇದ್ದನು. ಎಲ್ಲವು ಆತನಿಂದ ಉಂಟಾಯಿತು; ಉಂಟಾದದ್ದರಲ್ಲಿ ಆತನಿಲ್ಲದೆ ಯಾವದೂ ಉಂಟಾಗ ಲಿಲ್ಲ.
- Colossians 1:15–17 ಕೊಲೊಸ್ಸೆಯವರಿಗೆ 1:15–17ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಪ್ರತಿಯೊಂದು ಸೃಷ್ಟಿಗೆ ಜ್ಯೇಷ್ಠನೂ ಆಗಿದ್ದಾನೆ. ಭೂಪರಲೋಕ ಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ ಸಿಂಹಾಸನ ಗಳಾಗಲಿ ಇಲ್ಲವೆ ಪ್ರಭುತ್ವಗಳಾಗಲಿ ಇಲ್ಲವೆ ದೊರೆ ತನಗಳಾಗಲಿ ಇಲ್ಲವೆ ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪಟ್ಟವು. ಸರ್ವವು ಆತನಿಂದಲೂ ಆತನಿ ಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು. ಆತನು ಎಲ್ಲದಕ್ಕೂ ಮೊದಲು ಇದ್ದಾತನು; ಆತನು ಸಮಸ್ತಕ್ಕೂ ಆಧಾರನಾಗಿದ್ದಾನೆ.
- John 10:30 ಯೋಹಾನನು 10:30ನಾನು ಮತ್ತು ನನ್ನ ತಂದೆಯು ಒಂದಾಗಿದ್ದೇವೆ ಎಂದು ಉತ್ತರಕೊಟ್ಟನು.
- 1 Peter 1:20 1 ಪೇತ್ರನು 1:20ಆತನು ಜಗದುತ್ಪತ್ತಿಗೆ ಮೊದಲೇ ನೇಮಿಸಲ್ಪಟ್ಟು ಈ ಅಂತ್ಯ ಕಾಲಗಳಲ್ಲಿ ನಿಮಗಾಗಿ ಪ್ರತ್ಯಕ್ಷನಾದನು.
- Philippians 2:6 ಫಿಲಿಪ್ಪಿಯವರಿಗೆ 2:6ಆತನು ದೇವಸ್ವರೂಪ ನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವೆನೆಂದಿಣಿ ಸದೆ
- Hebrews 1:3 ಇಬ್ರಿಯರಿಗೆ 1:3ಈತನು ದೇವರ ಮಹಿಮೆಯ ಪ್ರಕಾಶವೂ ಆತನ ವ್ಯಕ್ತಿತ್ವದ ಪ್ರತಿರೂಪವೂ ತನ್ನ ಬಲವುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ತೊಳೆದ ಮೇಲೆ ಉನ್ನತದೊಳಗೆ ಮಹೋನ್ನತನ ಬಲ ಗಡೆಯಲ್ಲಿ ಕೂತುಕೊಂಡನು.
- Revelation 5:9–14 ಪ್ರಕಟನೆ 5:9–14ಅವರು ಹೊಸ ಹಾಡನ್ನು ಹಾಡುತ್ತಾ--ನೀನು ಪುಸ್ತಕವನ್ನು ತೆಗೆದುಕೊಳ್ಳುವದಕ್ಕೂ ಅದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯೋಗ್ಯ ನಾಗಿದ್ದೀ; ಯಾಕಂದರೆ ನೀನು ವಧಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳ ವರಿಂದ ನಮ್ಮನ್ನು ದೇವರಿಗಾಗಿ ವಿಮೋಚಿಸಿದ್ದೀ; ನಮ್ಮನ್ನು ನಮ್ಮ ದೇವರಿಗೊಸ್ಕರ ರಾಜರನ್ನಾಗಿಯೂ ಯಾಜಕರನ್ನಾ ಗಿಯೂ ಮಾಡಿದ್ದೀ; ನಾವು ಭೂಮಿಯ ಮೇಲೆ ಆಳುವೆವು ಎಂದು ಹೇಳಿದರು. ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಮತ್ತು ಹಿರಿಯರ ಸುತ್ತಲು ಬಹುಮಂದಿ ದೂತರ ಶಬ್ದವನ್ನು ಕೇಳಿದೆನು; ಅವರ ಸಂಖ್ಯೆಯು ಕೋಟ್ಯಾನುಕೋಟಿ ಯಾಗಿಯೂ ಲಕ್ಷೋಪಲಕ್ಷವಾಗಿಯೂ ಇತ್ತು. ಅವರು--ವಧಿತನಾದ ಕುರಿಮರಿಯು ಬಲ ಐಶ್ವರ್ಯ ಜ್ಞಾನ ಸಾಮರ್ಥ್ಯ ಮಾನಪ್ರಭಾವ ಸ್ತೋತ್ರಗಳನ್ನು ಹೊಂದುವದಕ್ಕೆ ಯೋಗ್ಯನು ಎಂದು ಮಹಾಶಬ್ದದಿಂದ ಹೇಳಿದರು. ಇದಲ್ಲದೆ ಆಕಾಶ ದಲ್ಲಿಯೂ ಭೂಮಿಯ ಮೇಲೆಯೂ ಭೂಮಿಯ ಕೆಳಗೂ ಸಮುದ್ರದಲ್ಲಿಯೂ ಅವುಗಳಲ್ಲಿರುವ ಎಲ್ಲಾ ಸೃಷ್ಟಿಗಳೂ--ಸಿಂಹಾಸನಾಸೀನನಾಗಿರುವಾತನಿಗೂ ಕುರಿಮರಿಯಾದಾತನಿಗೂ ಸ್ತೋತ್ರಮಾನ ಪ್ರಭಾವ ಬಲವು ಯುಗಯುಗಾಂತರಗಳಲ್ಲಿಯೂ ಇರಲಿ ಎಂದು ಹೇಳುವದನ್ನು ನಾನು ಕೇಳಿದೆನು.ಆಗ ನಾಲ್ಕು ಜೀವಿಗಳು--ಆಮೆನ್ ಅಂದವು; ಇಪ್ಪತ್ತನಾಲ್ಕು ಮಂದಿ ಹಿರಿಯರು ಅಡ್ಡ ಬಿದ್ದು ಯುಗಯುಗಾಂತರಗಳಲ್ಲಿ ಜೀವಿಸುವಾತನನ್ನು ಆರಾಧಿಸಿದರು. ಆಗ ನಾಲ್ಕು ಜೀವಿಗಳು--ಆಮೆನ್ ಅಂದವು; ಇಪ್ಪತ್ತನಾಲ್ಕು ಮಂದಿ ಹಿರಿಯರು ಅಡ್ಡ ಬಿದ್ದು ಯುಗಯುಗಾಂತರಗಳಲ್ಲಿ ಜೀವಿಸುವಾತನನ್ನು ಆರಾಧಿಸಿದರು.
- Hebrews 1:10 ಇಬ್ರಿಯರಿಗೆ 1:10ಕರ್ತನೇ, ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ, ಆಕಾಶಗಳು ನಿನ್ನ ಕೈಕೆಲಸಗಳಾಗಿವೆ.
- John 17:24 ಯೋಹಾನನು 17:24ತಂದೆ ಯೇ, ನೀನು ನನಗೆ ಕೊಟ್ಟಿರುವ ಮಹಿಮೆಯನ್ನು ನೀನು ನನಗೆ ಕೊಟ್ಟವರು ಸಹ ನೋಡುವ ಹಾಗೆಯೂ ನಾನಿರುವಲ್ಲಿ ಅವರು ನನ್ನೊಂದಿಗೆ ಇರುವಂತೆಯೂ ನಾನು ಇಚ್ಛೈಸುತ್ತೇನೆ. ಜಗದುತ್ಪತ್ತಿಗೆ ಮುಂಚೆ ನೀನು ನನ್ನನ್ನು ಪ್ರೀತಿಸಿದಿ.
- Proverbs 8:22–31 ಜ್ಞಾನೋಕ್ತಿಗಳು 8:22–31ತನ್ನ ಮಾರ್ಗದ ಹಾದಿಯಲ್ಲಿ ಆತನ ಪುರಾತನ ಕಾರ್ಯಗಳಿಗಿಂತ ಮೊದಲು ಕರ್ತನು ನನ್ನನ್ನು ಪಡೆದು ಕೊಂಡಿದ್ದನು. ನಿತ್ಯತ್ವದಿಂದ ಇಲ್ಲವೆ ಆರಂಭದಿಂದ, ಭೂಮಿಯು ಇರುವದಕ್ಕೆ ಮುಂಚೆ ನಾನು ಸ್ಥಾಪಿಸಲ್ಪ ಟ್ಟೆನು. ಅಗಾಧಗಳು ಇಲ್ಲದೆ ಇರುವಾಗ, ನೀರಿನಿಂದ ಸಮೃದ್ಧಿಯಾದ ಬುಗ್ಗೆಗಳು ಇಲ್ಲದೆ ಇರುವಾಗ ನಾನು ಉಂಟುಮಾಡಲ್ಪಟ್ಟೆನು. ಬೆಟ್ಟಗುಡ್ಡಗಳು ಸ್ಥಾಪಿಸಲ್ಪ ಡುವದಕ್ಕಿಂತ ಮುಂಚೆ ಭೂಮಿಯನ್ನೂ ಹೊಲ ಗಳನ್ನೂ ಲೋಕದ ಅತ್ಯಧಿಕ ಭಾಗದ ಧೂಳನ್ನೂ ಆತನು ಇನ್ನು ನಿರ್ಮಿಸದೆ ಇರುವಾಗಲೇ ನಾನು ಉಂಟು ಮಾಡಲ್ಪಟ್ಟೆನು. ಆತನು ಆಕಾಶಗಳನ್ನು ಸಿದ್ಧಪಡಿಸಿದಾಗ ಅಗಾಧದ ಮೇಲೆ ಚಕ್ರವನ್ನು ಹಾಕಿ ದಾಗ ಮೇಲೆ ಮೇಘಗಳನ್ನು ಆತನು ಸ್ಥಾಪಿಸಿದಾಗ ಅಗಾಧದ ಬುಗ್ಗೆಗಳನ್ನು ಆತನು ಬಲಪಡಿಸಿದಾಗ ಪ್ರವಾಹಗಳು ತನ್ನ ಆಜ್ಞೆಯನ್ನು ವಿಾರದಂತೆ ಸಮು ದ್ರಕ್ಕೆ ಆತನು ನಿಯಮವನ್ನು ಕೊಟ್ಟಿದಾಗ ಭೂಮಿಯ ಅಸ್ತಿವಾರಗಳನ್ನು ಆತನು ನೇಮಿಸಿದಾಗ ನಾನು ಆತ ನೊಂದಿಗೆ ಇದ್ದೆನು. ಆಗ ಆತನೊಂದಿಗೆ ಬೆಳೆದ ವನಂತೆ ಆತನ ಹತ್ತಿರ ಇದ್ದೆನು; ದಿನಾಲು ನಾನು ಆತನ ಆನಂದವಾಗಿ ಆತನ ಮುಂದೆ ಯಾವಾಗಲೂ ಸಂತೋಷಿಸುತ್ತಿದ್ದೆನು. ಆತನ ಭೂಮಿಯ ವಾಸ ಸ್ಥಳದ ಭಾಗದಲ್ಲಿ ಸಂತೋಷಿಸುತ್ತಿದ್ದೆನು. ಮನುಷ್ಯರ ಕುಮಾರರೊಂದಿಗೆ ನನ್ನ ಆನಂದವಿದ್ದಿತು.
- John 1:18 ಯೋಹಾನನು 1:18ಯಾವನೂ ಯಾವ ಕಾಲದಲ್ಲೂ ದೇವರನ್ನು ಕಂಡಿಲ್ಲ. ತಂದೆಯ ಎದೆಯಲ್ಲಿರುವ ಆ ಒಬ್ಬನೇ ಮಗ ನಾಗಿರುವಾತನು ಆತನನ್ನು ತಿಳಿಯಪಡಿಸಿದ್ದಾನೆ.
- John 8:58 ಯೋಹಾನನು 8:58ಯೇಸು ಅವರಿಗೆ--ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನಿಗಿಂತ ಮುಂಚೆಯೇ ನಾನು ಇದ್ದೇನೆ ಅಂದನು.ಆಗ ಅವರು ಆತನ ಮೇಲೆ ಕಲ್ಲುಗಳನ್ನು ಎಸೆಯಲು ತಕ್ಕೊಂಡರು; ಆದರೆ ಯೇಸು ಅಡಗಿಕೊಂಡು ಅವರ ಮಧ್ಯದಿಂದ ದೇವಾಲಯದ ಹೊರಗೆ ಬಂದು ಅಲ್ಲಿಂದ ಹಾದು ಹೊರಟು ಹೋದನು.