John · chapter 2 · verse 13
John 2:13 in Kannada
ಯೆಹೂದ್ಯರ ಪಸ್ಕವು ಹತ್ತಿರವಾದಾಗ ಯೇಸು ಯೆರೂಸಲೇಮಿಗೆ ಹೋಗಿ
Yehoodyara paskavu hattiravaadaaga yesu yeroosalemige hogi
John 2:13 in English
- King James Version (KJV)
- And the Jews’ passover was at hand, and Jesus went up to Jerusalem,
- World English Bible (WEB)
- The Passover of the Jews was at hand, and Jesus went up to Jerusalem.
- American Standard Version (ASV)
- And the passover of the Jews was at hand, and Jesus went up to Jerusalem.
- Bible in Basic English (BBE)
- The time of the Passover of the Jews was near and Jesus went up to Jerusalem.
- Darby Translation (DBY)
- And the passover of the Jews was near, and Jesus went up to Jerusalem.
- Webster's Bible (WBS)
- And the Jews' passover was at hand, and Jesus went up to Jerusalem,
- Young's Literal Translation (YLT)
- And the passover of the Jews was nigh, and Jesus went up to Jerusalem,
Read in context
- 11ಯೇಸು ಈ ಮೊದಲನೆಯ ಅದ್ಭುತ ಕಾರ್ಯವನ್ನು ಗಲಿಲಾಯದ ಕಾನಾದಲ್ಲಿ ಮಾಡಿ ತನ್ನ ಮಹಿಮೆಯನ್ನು ತೋರ್ಪಡಿಸಿದನು; ಮತ್ತು ಆತನ ಶಿಷ್ಯರು ಆತನ ಮೇಲೆ ನಂಬಿಕೆ ಇಟ್ಟರು.
- 12ಇದಾದ ಮೇಲೆ ಆತನೂ ಆತನ ತಾಯಿಯೂ ಆತನ ಸಹೋದರರೂ ಆತನ ಶಿಷ್ಯರೂ ಕಪೆರ್ನೌಮಿಗೆ ಹೋಗಿ ಅಲ್ಲಿ ಕೆಲವು ದಿವಸ ಇದ್ದರು.
- 13ಯೆಹೂದ್ಯರ ಪಸ್ಕವು ಹತ್ತಿರವಾದಾಗ ಯೇಸು ಯೆರೂಸಲೇಮಿಗೆ ಹೋಗಿ
- 14ದೇವಾಲಯದಲ್ಲಿ ಎತ್ತು ಕುರಿ ಪಾರಿವಾಳ ಇವುಗಳನ್ನು ಮಾರುವವ ರನ್ನೂ ಹಣ ಬದಲಾಯಿಸುವವರು ಕೂತಿರುವದನೂ ಕಂಡನು;
- 15ಆಗ ಆತನು ಸಣ್ಣ ಹಗ್ಗಗಳಿಂದ ಕೊರಡೆ ಮಾಡಿ ಕುರಿ ಎತ್ತು ಸಹಿತ ಎಲ್ಲರನ್ನೂ ದೇವಾಲಯದ ಹೊರಕ್ಕೆ ಅಟ್ಟಿ ಚಿನಿವಾರರ ಹಣವನ್ನು ಚೆಲ್ಲಿ ಮೇಜು ಗಳನ್ನು ಕೆಡವಿದನು.
Cross references
- Luke 2:41 ಲೂಕನು 2:41ಆತನ ತಂದೆತಾಯಿಗಳು ಪ್ರತಿ ವರುಷವೂ ಪಸ್ಕ ಹಬ್ಬದಲ್ಲಿ ಯೆರೂಸಲೇಮಿಗೆ ಹೋಗುತ್ತಿದ್ದರು.
- John 11:55 ಯೋಹಾನನು 11:55ಆಗ ಯೆಹೂದ್ಯರ ಪಸ್ಕವು ಹತ್ತಿರವಾಗಿತ್ತು; ಅನೇಕರು ತಮ್ಮನ್ನು ಶುದ್ಧಿ ಮಾಡಿಕೊಳ್ಳುವದಕ್ಕೋಸ್ಕರ ಪಸ್ಕಕ್ಕೆ ಮುಂಚೆ ಹಳ್ಳಿಗಳಿಂದ ಯೆರೂಸಲೇಮಿಗೆ ಹೋದರು.
- John 2:23 ಯೋಹಾನನು 2:23ಆತನು ಪಸ್ಕಹಬ್ಬದ ದಿನದಲ್ಲಿ ಯೆರೂಸಲೇಮಿ ನಲ್ಲಿದ್ದಾಗ ಆತನು ಮಾಡಿದ ಅದ್ಭುತ ಕಾರ್ಯಗಳನ್ನು ಅನೇಕರು ನೋಡಿ ಆತನ ಹೆಸರಿನಲ್ಲಿ ನಂಬಿಕೆ ಇಟ್ಟರು.
- Deuteronomy 16:1–8 ಧರ್ಮೋಪದೇಶಕಾಂಡ 16:1–8ಆಬೀಬ್ ತಿಂಗಳನ್ನು ಆಚರಿಸು. ಅದರಲ್ಲಿ ನಿನ್ನ ದೇವರಾದ ಕರ್ತನಿಗೆ ಪಸ್ಕವನ್ನು ಆಚರಿಸಬೇಕು; ಯಾಕಂದರೆ ಆಬೀಬ್ ತಿಂಗಳಿನಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ರಾತ್ರಿಯಲ್ಲಿ ಐಗುಪ್ತ ದೊಳಗಿಂದ ಹೊರಗೆ ಬರಮಾಡಿದನು; ಹೀಗಿರುವ ದರಿಂದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲಿ ನಿನ್ನ ದೇವರಾದ ಕರ್ತನಿಗೆ ಕುರಿಪಶುಗಳ ಪಸ್ಕವನ್ನು ಅರ್ಪಿಸಬೇಕು. ಅದರಲ್ಲಿ ಹುಳಿ ರೊಟ್ಟಿಯನ್ನು ತಿನ್ನಬಾರದು. ಏಳು ದಿವಸ ಹುಳಿ ಇಲ್ಲದ ಶ್ರಮೆಯ ರೊಟ್ಟಿಗಳನ್ನು ಅದರಲ್ಲಿ ತಿನ್ನಬೇಕು; ತ್ವರೆಯಾಗಿ ಐಗುಪ್ತದೇಶದೊಳಗಿಂದ ನೀನು ಹೊರಗೆ ಬಂದಿ; ಆದಕಾರಣ ನೀನು ಐಗುಪ್ತದೇಶದೊಳಗಿಂದ ಹೊರಗೆ ಬಂದ ದಿವಸವನ್ನು ನೀನು ಜೀವಿಸುವ ದಿವಸ ಗಳಲ್ಲೆಲ್ಲಾ ಜ್ಞಾಪಕಮಾಡಬೇಕು. ಏಳು ದಿವಸ ಹುಳಿ ಕಲಸಿದ ರೊಟ್ಟಿ ನಿನ್ನ ಮೇರೆಗಳಲ್ಲೆಲ್ಲೂ ಕಾಣಬಾರದು. ಮೊದಲನೇ ದಿನದ ಸಾಯಂಕಾಲದಲ್ಲಿ ನೀನು ಕೊಯ್ದ ಮಾಂಸದಲ್ಲಿ ಏನಾದರೂ ಮರು ದಿವಸದ ವರೆಗೆ ಉಳಿಸಬಾರದು. ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದ್ವಾರಗಳ ಯಾವದೊಂದರಲ್ಲಾದರೂ ನೀನು ಪಸ್ಕವನ್ನು ಅರ್ಪಿಸ ಬಾರದು. ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲೇ ನೀನು ಪಸ್ಕವನ್ನು ಸಾಯಂಕಾಲದಲ್ಲಿ ಸೂರ್ಯನು ಅಸ್ತಮಿಸುವಾಗ ನೀನು ಐಗುಪ್ತವನ್ನು ಬಿಟ್ಟುಹೋದ ಸಮಯದಲ್ಲಿ ಅರ್ಪಿಸಬೇಕು. ನಿನ್ನ ದೇವರಾದ ಕರ್ತನು ಆದು ಕೊಳ್ಳುವ ಸ್ಥಳದಲ್ಲಿ ಅದನ್ನು ಬೇಯಿಸಿ ತಿನ್ನಬೇಕು; ಮರುದಿವಸದಲ್ಲಿ ತಿರುಗಿಕೊಂಡು ನಿನ್ನ ಗುಡಾರಗಳಿಗೆ ಹೋಗಬೇಕು; ಆರು ದಿವಸ ಹುಳಿ ಇಲ್ಲದ ರೊಟ್ಟಿ ಗಳನ್ನು ತಿನ್ನಬೇಕು; ಏಳನೇ ದಿನದಲ್ಲಿ ನಿನ್ನ ದೇವರಾದ ಕರ್ತನಿಗೆ ವಿಶೇಷ ಸಭೆ ಸೇರಬೇಕು; ಅದರಲ್ಲಿ ಕೆಲಸ ಮಾಡಬಾರದು.
- Exodus 12:6–14 ವಿಮೋಚನಕಾಂಡ 12:6–14ಅದನ್ನು ಈ ತಿಂಗಳಿನ ಹದಿನಾಲ್ಕನೆಯ ದಿನದ ವರೆಗೆ ಇಟ್ಟುಕೊಳ್ಳಬೇಕು. ತರುವಾಯ ಸಾಯಂ ಕಾಲದಲ್ಲಿ ಇಸ್ರಾಯೇಲಿನ ಕೂಟದ ಇಡೀ ಸಭೆಯು ಅದನ್ನು ಕೊಲ್ಲಬೇಕು. ರಕ್ತದಲ್ಲಿ ಸ್ವಲ್ಪ ತೆಗೆದು ಅವರು ಊಟ ಮಾಡುವ ಮನೆಗಳ ಎರಡು ನಿಲುವು ಗಂಬಗ ಳಿಗೂ ಬಾಗಿಲ ಮೇಲಿನ ಅಡ್ಡಗಂಬಕ್ಕೂ ಹಚ್ಚಬೇಕು. ಆ ರಾತ್ರಿಯಲ್ಲಿಯೇ ಆ ಮಾಂಸವನ್ನು ತಿನ್ನಬೇಕು. ಬೆಂಕಿಯಲ್ಲಿ ಸುಟ್ಟು ಅದನ್ನೂ ಹುಳಿಯಿಲ್ಲದ ರೊಟ್ಟಿಗ ಳನ್ನೂ ಕಹಿಯಾದ ಪಲ್ಯಗಳ ಸಂಗಡ ತಿನ್ನಬೇಕು. ಅದರಲ್ಲಿ ಯಾವದನ್ನೂ ಹಸಿಯಾದದ್ದಾಗಲಿ ನೀರಿ ನಲ್ಲಿ ಬೇಯಿಸಿದ್ದಾಗಲಿ ತಿನ್ನದೆ ಅದರ ತಲೆ ತೊಡೆ ಒಳಗಿನವುಗಳ ಸಹಿತವಾಗಿ ಬೆಂಕಿಯಲ್ಲಿ ಸುಟ್ಟೇ ಅದನ್ನು ತಿನ್ನಬೇಕು. ಅದರಲ್ಲಿ ಬೆಳಗಿನ ವರೆಗೆ ಏನನ್ನೂ ಉಳಿಸಬಾರದು. ಬೆಳಗಿನ ವರೆಗೆ ಅದರಲ್ಲಿ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. ನೀವು ಅದನ್ನು ತಿನ್ನತಕ್ಕ ರೀತಿ ಇದೇ: ನೀವು ನಿಮ್ಮ ನಡುಕಟ್ಟಿಕೊಂಡು, ಕೆರ ಮೆಟ್ಟಿಕೊಂಡು, ಕೋಲನ್ನು ಹಿಡಿದುಕೊಂಡು, ತ್ವರೆಯಾಗಿ ಅದನ್ನು ತಿನ್ನಬೇಕು. ಅದು ಕರ್ತನ ಪಸ್ಕವಾಗಿದೆ. ನಾನು ಈ ರಾತ್ರಿ ಐಗುಪ್ತದೇಶದಲ್ಲಿ ಹಾದುಹೋಗುತ್ತೇನೆ. ಐಗುಪ್ತದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಇರುವ ಚೊಚ್ಚ ಲಾದವುಗಳನ್ನು ಸಂಹರಿಸುವೆನು. ಐಗುಪ್ತದ ದೇವರುಗ ಳಿಗೆಲ್ಲಾ ನಾನು ನ್ಯಾಯತೀರಿಸುವೆನು; ನಾನೇ ಕರ್ತನು. ಆದರೆ ನೀವು ಇರುವ ಎಲ್ಲಾ ಮನೆಗಳ ಮೇಲೆ ರಕ್ತವು ನಿಮಗೆ ಗುರುತಾಗಿರುವದು. ಆ ರಕ್ತವನ್ನು ನಾನು ನೋಡುವಾಗ ನಿಮ್ಮನ್ನು ದಾಟಿಹೋಗುವೆನು. ಐಗುಪ್ತದೇಶವನ್ನು ನಾನು ಹೊಡೆಯುವ ಸಮಯದಲ್ಲಿ ನಿಮ್ಮನ್ನು ನಾಶಮಾಡುವ ಯಾವ ಬಾಧೆಯೂ ನಿಮ್ಮ ಮೇಲೆ ಬರುವದಿಲ್ಲ. ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವದು; ನೀವು ಇದನ್ನು ಕರ್ತನಿಗೆ ಹಬ್ಬವಾಗಿ ತಲತಲಾಂತರ ಗಳಲ್ಲಿ ಆಚರಿಸಬೇಕು; ಇದನ್ನು ನಿತ್ಯ ಶಾಸನದಂತೆ ಎಂದೆಂದಿಗೂ ಆಚರಿಸಬೇಕು.
- John 6:4 ಯೋಹಾನನು 6:4ಆಗ ಯೆಹೂದ್ಯರ ಪಸ್ಕ ಹಬ್ಬವು ಸವಿಾಪವಾಗಿತ್ತು.
- John 5:1 ಯೋಹಾನನು 5:1ಇದಾದ ಮೇಲೆ ಯೆಹೂದ್ಯರದೊಂದು ಹಬ್ಬ ಇದ್ದದರಿಂದ ಯೇಸು ಯೆರೂ ಸಲೇಮಿಗೆ ಹೋದನು.
- Numbers 28:16–25 ಅರಣ್ಯಕಾಂಡ 28:16–25ಆದರೆ ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸವು ಕರ್ತನ ಪಸ್ಕವಾಗಿರಬೇಕು. ಆ ತಿಂಗಳಿನ ಹದಿನೈದನೇ ದಿವಸವು ಹಬ್ಬವಾಗಿದೆ; ಏಳು ದಿವಸಗಳ ವರೆಗೂ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು. ಮೊದಲನೇ ದಿವಸದಲ್ಲಿ ಪರಿಶುದ್ಧ ಸಭೆಯನ್ನು ಕೂಡಿಸಬೇಕು. ಯಾವ ತರವಾದ ಕಷ್ಟಕರವಾದ ಕೆಲಸ ವನ್ನು ನೀವು ಆ ದಿವಸದಲ್ಲಿ ಮಾಡಬಾರದು. ಆದರೆ ನೀವು ಕರ್ತನಿಗೆ ಬೆಂಕಿಯಿಂದ ಮಾಡಿದ ದಹನ ಬಲಿಯನ್ನು ಅರ್ಪಿಸಬೇಕು. ಯಾವದಂದರೆ--ಎರಡು ಎಳೇ ಹೋರಿಗಳು, ಒಂದು ಟಗರು, ವರುಷದ ಏಳು ಕುರಿಮರಿಗಳು; ನಿಮಗೆ ಇವು ದೋಷವಿಲ್ಲದ ಪೂರ್ಣಾಂಗಗಳಾಗಿರಬೇಕು. ಅವುಗಳ ಆಹಾರದ ಅರ್ಪಣೆಯನ್ನೂ ಎಣ್ಣೇ ಕಲಸಿದ ಹಿಟ್ಟನ್ನೂ ಹೋರಿಗೆ ಮೂರು ದಶಾಂಶಗಳನ್ನೂ ಟಗರಿಗೆ ಎರಡು ದಶಾಂಶ ಗಳನ್ನೂ ಅರ್ಪಿಸಬೇಕು. ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶವನ್ನು ಅರ್ಪಿಸಬೇಕು. ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಪಾಪ ಬಲಿಗಾಗಿ ಒಂದು ಹೋತವನ್ನು ಅರ್ಪಿಸಬೇಕು. ಇವುಗಳನ್ನು ನಿತ್ಯವಾದ ದಹನಬಲಿಯಾಗಿರುವ ಉದಯದ ದಹನಬಲಿಯ ಹೊರತಾಗಿ ನೀವು ಅರ್ಪಿಸಬೇಕು. ಈ ಪ್ರಕಾರ ನೀವು ಏಳು ದಿವಸಗಳ ಮಟ್ಟಿಗೂ ದಿನ ದಿನಕ್ಕೆ ಕರ್ತನಿಗೆ ಸುವಾಸೆನೆಗಾಗಿ ದಹನಬಲಿಯ ಆಹಾರವನ್ನು ಅರ್ಪಿಸಬೇಕು; ಅದನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನೂ ನಿತ್ಯವಾದ ದಹನಬಲಿಯ ಹೊರತಾಗಿ ಅರ್ಪಿಸಬೇಕು. ಏಳನೇ ದಿವಸದಲ್ಲಿ ನಿಮಗೆ ಪರಿಶುದ್ಧವಾದ ಸಭೆಯು ಇರಬೇಕು; ಯಾವ ಕೆಲಸವನ್ನೂ ನೀವು ಮಾಡಬಾರದು.
- Deuteronomy 16:16 ಧರ್ಮೋಪದೇಶಕಾಂಡ 16:16ವರುಷಕ್ಕೆ ಮೂರು ಸಾರಿ ನಿನ್ನ ಗಂಡಸರೆಲ್ಲರು ನಿನ್ನ ದೇವರಾದ ಕರ್ತನ ಮುಂದೆ ಆತನು ಆದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು, ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬದಲ್ಲಿ, ವಾರಗಳ ಹಬ್ಬದಲ್ಲಿ, ಗುಡಾರ ಗಳ ಹಬ್ಬದಲ್ಲಿ ಕಾಣಿಸಿಕೊಳ್ಳಬೇಕು. ಇದಲ್ಲದೆ ಅವರು ಕರ್ತನ ಸಮ್ಮುಖಕ್ಕೆ ಬರಿ ಕೈಯಾಗಿ ಬರಬಾರದು.