Luke · chapter 2 · verse 41
Luke 2:41 in Kannada
ಆತನ ತಂದೆತಾಯಿಗಳು ಪ್ರತಿ ವರುಷವೂ ಪಸ್ಕ ಹಬ್ಬದಲ್ಲಿ ಯೆರೂಸಲೇಮಿಗೆ ಹೋಗುತ್ತಿದ್ದರು.
Aatana tandetaayigalu prati varushavoo paska habbadalli yeroosalemige hoguttiddaru.
Luke 2:41 in English
- King James Version (KJV)
- Now his parents went to Jerusalem every year at the feast of the passover.
- World English Bible (WEB)
- His parents went every year to Jerusalem at the feast of the Passover.
- American Standard Version (ASV)
- And his parents went every year to Jerusalem at the feast of the passover.
- Bible in Basic English (BBE)
- And every year his father and mother went to Jerusalem at the feast of the Passover.
- Darby Translation (DBY)
- And his parents went yearly to Jerusalem at the feast of the passover.
- Webster's Bible (WBS)
- Now his parents went to Jerusalem every year at the feast of the passover.
- Young's Literal Translation (YLT)
- And his parents were going yearly to Jerusalem, at the feast of the passover,
Read in context
- 39ಅವರು ಕರ್ತನ ನ್ಯಾಯ ಪ್ರಮಾಣದ ಪ್ರಕಾರ ಎಲ್ಲವುಗಳನ್ನು ಮಾಡಿ ಮುಗಿ ಸಿದ ಮೇಲೆ ತಮ್ಮ ಸ್ವಂತ ಪಟ್ಟಣವಾದ ಗಲಿಲಾಯದ ನಜರೇತಿಗೆ ಹಿಂದಿರುಗಿದರು.
- 40ಆ ಶಿಶುವು ಬೆಳೆದು ಆತ್ಮದಲ್ಲಿ ಬಲಗೊಂಡು ಜ್ಞಾನದಿಂದ ತುಂಬಿದವ ನಾದನು; ದೇವರ ಕೃಪೆಯು ಆತನ ಮೇಲೆ ಇತ್ತು.
- 41ಆತನ ತಂದೆತಾಯಿಗಳು ಪ್ರತಿ ವರುಷವೂ ಪಸ್ಕ ಹಬ್ಬದಲ್ಲಿ ಯೆರೂಸಲೇಮಿಗೆ ಹೋಗುತ್ತಿದ್ದರು.
- 42ಆತನು ಹನ್ನೆರಡು ವರುಷದವನಾಗಿದ್ದಾಗ ಅವರು ಹಬ್ಬದ ಪದ್ಧತಿಯ ಪ್ರಕಾರ ಯೆರೂಸಲೇಮಿಗೆ ಹೋದರು.
- 43ಅವರು ಆ ದಿವಸಗಳನ್ನು ಮುಗಿಸಿ ಕೊಂಡು ಹಿಂದಿರುಗುವಾಗ ಬಾಲಕನಾದ ಯೇಸುವು ಹಿಂದೆ ಯೆರೂಸಲೇಮಿನಲ್ಲಿಯೇ ಉಳಿದನು; ಅದು ಯೋಸೇಫನಿಗೂ ಆತನ ತಾಯಿಗೂ ತಿಳಿದಿರಲಿಲ್ಲ.
Cross references
- Exodus 34:23 ವಿಮೋಚನಕಾಂಡ 34:23ವರುಷಕ್ಕೆ ಮೂರುಸಾರಿ ನಿಮ್ಮ ಗಂಡು ಮಕ್ಕಳೆಲ್ಲಾ ಕರ್ತನಾದ ದೇವರ ಮುಂದೆ ಅಂದರೆ ಇಸ್ರಾಯೇಲಿನ ದೇವರ ಮುಂದೆ ಬರಬೇಕು.
- Numbers 28:16 ಅರಣ್ಯಕಾಂಡ 28:16ಆದರೆ ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸವು ಕರ್ತನ ಪಸ್ಕವಾಗಿರಬೇಕು.
- Leviticus 23:5 ಯಾಜಕಕಾಂಡ 23:5ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿವ ಸದ ಸಾಯಂಕಾಲದಲ್ಲಿ ಕರ್ತನ ಪಸ್ಕವು.
- Exodus 12:14 ವಿಮೋಚನಕಾಂಡ 12:14ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವದು; ನೀವು ಇದನ್ನು ಕರ್ತನಿಗೆ ಹಬ್ಬವಾಗಿ ತಲತಲಾಂತರ ಗಳಲ್ಲಿ ಆಚರಿಸಬೇಕು; ಇದನ್ನು ನಿತ್ಯ ಶಾಸನದಂತೆ ಎಂದೆಂದಿಗೂ ಆಚರಿಸಬೇಕು.
- Deuteronomy 16:1–8 ಧರ್ಮೋಪದೇಶಕಾಂಡ 16:1–8ಆಬೀಬ್ ತಿಂಗಳನ್ನು ಆಚರಿಸು. ಅದರಲ್ಲಿ ನಿನ್ನ ದೇವರಾದ ಕರ್ತನಿಗೆ ಪಸ್ಕವನ್ನು ಆಚರಿಸಬೇಕು; ಯಾಕಂದರೆ ಆಬೀಬ್ ತಿಂಗಳಿನಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ರಾತ್ರಿಯಲ್ಲಿ ಐಗುಪ್ತ ದೊಳಗಿಂದ ಹೊರಗೆ ಬರಮಾಡಿದನು; ಹೀಗಿರುವ ದರಿಂದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲಿ ನಿನ್ನ ದೇವರಾದ ಕರ್ತನಿಗೆ ಕುರಿಪಶುಗಳ ಪಸ್ಕವನ್ನು ಅರ್ಪಿಸಬೇಕು. ಅದರಲ್ಲಿ ಹುಳಿ ರೊಟ್ಟಿಯನ್ನು ತಿನ್ನಬಾರದು. ಏಳು ದಿವಸ ಹುಳಿ ಇಲ್ಲದ ಶ್ರಮೆಯ ರೊಟ್ಟಿಗಳನ್ನು ಅದರಲ್ಲಿ ತಿನ್ನಬೇಕು; ತ್ವರೆಯಾಗಿ ಐಗುಪ್ತದೇಶದೊಳಗಿಂದ ನೀನು ಹೊರಗೆ ಬಂದಿ; ಆದಕಾರಣ ನೀನು ಐಗುಪ್ತದೇಶದೊಳಗಿಂದ ಹೊರಗೆ ಬಂದ ದಿವಸವನ್ನು ನೀನು ಜೀವಿಸುವ ದಿವಸ ಗಳಲ್ಲೆಲ್ಲಾ ಜ್ಞಾಪಕಮಾಡಬೇಕು. ಏಳು ದಿವಸ ಹುಳಿ ಕಲಸಿದ ರೊಟ್ಟಿ ನಿನ್ನ ಮೇರೆಗಳಲ್ಲೆಲ್ಲೂ ಕಾಣಬಾರದು. ಮೊದಲನೇ ದಿನದ ಸಾಯಂಕಾಲದಲ್ಲಿ ನೀನು ಕೊಯ್ದ ಮಾಂಸದಲ್ಲಿ ಏನಾದರೂ ಮರು ದಿವಸದ ವರೆಗೆ ಉಳಿಸಬಾರದು. ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದ್ವಾರಗಳ ಯಾವದೊಂದರಲ್ಲಾದರೂ ನೀನು ಪಸ್ಕವನ್ನು ಅರ್ಪಿಸ ಬಾರದು. ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲೇ ನೀನು ಪಸ್ಕವನ್ನು ಸಾಯಂಕಾಲದಲ್ಲಿ ಸೂರ್ಯನು ಅಸ್ತಮಿಸುವಾಗ ನೀನು ಐಗುಪ್ತವನ್ನು ಬಿಟ್ಟುಹೋದ ಸಮಯದಲ್ಲಿ ಅರ್ಪಿಸಬೇಕು. ನಿನ್ನ ದೇವರಾದ ಕರ್ತನು ಆದು ಕೊಳ್ಳುವ ಸ್ಥಳದಲ್ಲಿ ಅದನ್ನು ಬೇಯಿಸಿ ತಿನ್ನಬೇಕು; ಮರುದಿವಸದಲ್ಲಿ ತಿರುಗಿಕೊಂಡು ನಿನ್ನ ಗುಡಾರಗಳಿಗೆ ಹೋಗಬೇಕು; ಆರು ದಿವಸ ಹುಳಿ ಇಲ್ಲದ ರೊಟ್ಟಿ ಗಳನ್ನು ತಿನ್ನಬೇಕು; ಏಳನೇ ದಿನದಲ್ಲಿ ನಿನ್ನ ದೇವರಾದ ಕರ್ತನಿಗೆ ವಿಶೇಷ ಸಭೆ ಸೇರಬೇಕು; ಅದರಲ್ಲಿ ಕೆಲಸ ಮಾಡಬಾರದು.
- Exodus 23:14–17 ವಿಮೋಚನಕಾಂಡ 23:14–17ವರುಷಕ್ಕೆ ಮೂರು ಸಾರಿ ನನಗೆ ಹಬ್ಬ ಮಾಡ ಬೇಕು. ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು; (ಅಬೀಬ್ ತಿಂಗಳಿನ ನೇಮಕವಾದ ಸಮಯದಲ್ಲಿ ಏಳು ದಿನಗಳ ವರೆಗೆ ನಾನು ನಿನಗೆ ಆಜ್ಞಾಪಿಸಿದ ಪ್ರಕಾರ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಯಾಕಂದರೆ ನೀನು ಆ ತಿಂಗಳಲ್ಲೇ ಐಗುಪ್ತ ದಿಂದ ಹೊರಗೆ ಬಂದಿದ್ದಿ. ಒಬ್ಬರೂ ಬರೀಗೈಯಿಂದ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬಾರದು.) ನಿನ್ನ ಹೊಲದಲ್ಲಿ ಬಿತ್ತಿದ ಬೆಳೆಯ ಪ್ರಥಮ ಫಲಗಳ ಸುಗ್ಗಿ ಹಬ್ಬವನ್ನೂ ನಿನ್ನ ಬೆಳೆಯನ್ನು ಹೊಲದಿಂದ ಕೂಡಿಸಿದ ಮೇಲೆ ವರುಷದ ಅಂತ್ಯದಲ್ಲಿ ಕೂಡಿಸುವ ಹಬ್ಬವನ್ನೂ ಆಚರಿಸಬೇಕು. ವರುಷಕ್ಕೆ ಮೂರು ಸಾರಿ ನಿಮ್ಮ ಲ್ಲಿರುವ ಎಲ್ಲಾ ಪುರುಷರು ದೇವರಾದ ಕರ್ತನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.
- Deuteronomy 12:18 ಧರ್ಮೋಪದೇಶಕಾಂಡ 12:18ಅವುಗಳನ್ನು ನಿನ್ನ ದೇವರಾದ ಕರ್ತನ ಮುಂದೆ ನಿನ್ನ ದೇವರಾದ ಕರ್ತನು ಆದುಕೊಳ್ಳುವ ಸ್ಥಳದಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ನಿನ್ನ ಬಾಗಲುಗಳ ಲ್ಲಿರುವ ಲೇವಿಯನೂ ತಿನ್ನಬೇಕು; ಆಗ ನಿನ್ನ ಎಲ್ಲಾ ಕೈ ಕೆಲಸದಲ್ಲಿ ನಿನ್ನ ದೇವರಾದ ಕರ್ತನ ಮುಂದೆ ನೀನು ಸಂತೋಷಪಡಬೇಕು.
- Deuteronomy 16:16 ಧರ್ಮೋಪದೇಶಕಾಂಡ 16:16ವರುಷಕ್ಕೆ ಮೂರು ಸಾರಿ ನಿನ್ನ ಗಂಡಸರೆಲ್ಲರು ನಿನ್ನ ದೇವರಾದ ಕರ್ತನ ಮುಂದೆ ಆತನು ಆದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು, ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬದಲ್ಲಿ, ವಾರಗಳ ಹಬ್ಬದಲ್ಲಿ, ಗುಡಾರ ಗಳ ಹಬ್ಬದಲ್ಲಿ ಕಾಣಿಸಿಕೊಳ್ಳಬೇಕು. ಇದಲ್ಲದೆ ಅವರು ಕರ್ತನ ಸಮ್ಮುಖಕ್ಕೆ ಬರಿ ಕೈಯಾಗಿ ಬರಬಾರದು.
- John 13:1 ಯೋಹಾನನು 13:1ಆಗ ಪಸ್ಕ ಹಬ್ಬದ ಮುಂಚೆ ಯೇಸು ತಾನು ಈ ಲೋಕದೊಳಗಿಂದ ತಂದೆಯ ಬಳಿಗೆ ಹೋಗಬೇಕಾದ ತನ್ನ ಗಳಿಗೆಯು ಬಂತೆಂದು ತಿಳಿದು ಈ ಲೋಕದಲ್ಲಿದ್ದ ತನ್ನ ಸ್ವಂತದವರನ್ನು ಪ್ರೀತಿಸಿ ಅವರನ್ನು ಅಂತ್ಯದವರೆಗೆ ಪ್ರೀತಿಸಿದನು.
- John 11:55 ಯೋಹಾನನು 11:55ಆಗ ಯೆಹೂದ್ಯರ ಪಸ್ಕವು ಹತ್ತಿರವಾಗಿತ್ತು; ಅನೇಕರು ತಮ್ಮನ್ನು ಶುದ್ಧಿ ಮಾಡಿಕೊಳ್ಳುವದಕ್ಕೋಸ್ಕರ ಪಸ್ಕಕ್ಕೆ ಮುಂಚೆ ಹಳ್ಳಿಗಳಿಂದ ಯೆರೂಸಲೇಮಿಗೆ ಹೋದರು.
- Deuteronomy 12:11 ಧರ್ಮೋಪದೇಶಕಾಂಡ 12:11ನೀವು ಸುರಕ್ಷಿತವಾಗಿ ವಾಸಿಸುವಾಗ ನಿಮ್ಮ ದೇವರಾದ ಕರ್ತನು ತನ್ನ ಹೆಸರಿನ ನಿವಾಸಕ್ಕೆ ಆದುಕೊಳ್ಳುವ ಸ್ಥಳವಿರುವದು; ಅಲ್ಲಿಗೆ ನಾನು ನಿಮಗೆ ಆಜ್ಞಾಪಿಸುವದನ್ನೆಲ್ಲಾ ಅಂದರೆ ನಿಮ್ಮ ದಹನ ಬಲಿಗಳನ್ನೂ ಬಲಿಗಳನ್ನೂ ನಿಮ್ಮ ದಶಮಾಂಶಗಳನ್ನೂ ನಿಮ್ಮ ಕೈ ಎತ್ತುವ ಅರ್ಪಣೆಗಳನ್ನೂ ನೀವು ಕರ್ತನಿಗೆ ಮಾಡುವ ಎಲ್ಲಾ ಶ್ರೇಷ್ಠ ಪ್ರಮಾಣಗಳನ್ನೂ ತರಬೇಕು.
- 1 Samuel 1:21 1 ಸಮುವೇಲನು 1:21ಆದರೆ ಎಲ್ಕಾನನು ಕರ್ತನಿಗೆ ಪ್ರತಿ ವರುಷದ ಬಲಿಯನ್ನೂ ತನ್ನ ಪ್ರಮಾಣವನ್ನೂ ಸಲ್ಲಿಸುವದಕ್ಕೆ ತನ್ನ ಮನೆಯವರೆಲ್ಲರ ಸಂಗಡ ಹೋಗುವಾಗ ಹನ್ನಳು ಹೋಗದೆ ತನ್ನ ಗಂಡನಿಗೆ--ಮಗುವು ಮೊಲೆ ಬಿಡುವ ವರೆಗೂ ನಾನು ಬರುವದಿಲ್ಲ;