John · chapter 6 · verse 1
John 6:1 in Kannada
ಇವುಗಳಾದ ಮೇಲೆ ಯೇಸು ತಿಬೇರಿ ಯವೆಂಬ ಗಲಿಲಾಯ ಸಮುದ್ರದ ಆಚೆಗೆ ಹೋದನು.
Ivugalaada mele yesu tiberi yavemba galilaaya samudrada aachege hodanu.
John 6:1 in English
- King James Version (KJV)
- After these things Jesus went over the sea of Galilee, which is [the sea] of Tiberias.
- World English Bible (WEB)
- After these things, Jesus went away to the other side of the sea of Galilee, which is also called the Sea of Tiberias.
- American Standard Version (ASV)
- After these things Jesus went away to the other side of the sea of Galilee, which is [the sea] of Tiberias.
- Bible in Basic English (BBE)
- After these things Jesus went away to the other side of the sea of Galilee — that is, the sea of Tiberias.
- Darby Translation (DBY)
- After these things Jesus went away beyond the sea of Galilee, [or] of Tiberias,
- Webster's Bible (WBS)
- After these things Jesus went over the sea of Galilee, which is [the sea] of Tiberias.
- Young's Literal Translation (YLT)
- After these things Jesus went away beyond the sea of Galilee (of Tiberias),
Read in context
- 1ಇವುಗಳಾದ ಮೇಲೆ ಯೇಸು ತಿಬೇರಿ ಯವೆಂಬ ಗಲಿಲಾಯ ಸಮುದ್ರದ ಆಚೆಗೆ ಹೋದನು.
- 2ಆಗ ಆತನು ರೋಗಿಗಳಲ್ಲಿ ನಡಿಸಿದ ಆತನ ಅದ್ಭುತ ಕಾರ್ಯಗಳನ್ನು ನೋಡಿದ ಜನರ ದೊಡ್ಡ ಸಮೂಹವು ಆತನನ್ನು ಹಿಂಬಾಲಿಸುತ್ತಿತ್ತು.
- 3ಯೇಸು ಬೆಟ್ಟವನ್ನೇರಿ ಅಲ್ಲಿ ತನ್ನ ಶಿಷ್ಯರೊಂದಿಗೆ ಕೂತು ಕೊಂಡನು.
Cross references
- Mark 6:31–44 ಮಾರ್ಕನು 6:31–44ಆಗ ಆತನು ಅವರಿಗೆ--ನೀವು ಮಾತ್ರ ವಿಂಗಡವಾಗಿ ಅರಣ್ಯ ಸ್ಥಳಕ್ಕೆ ಬಂದು ಸ್ವಲ್ಪ ಸಮಯ ವಿಶ್ರಮಿಸಿಕೊಳ್ಳಿರಿ ಅಂದನು. ಯಾಕಂದರೆ ಅಲ್ಲಿ ಅನೇಕರು ಬರುತ್ತಾ ಹೋಗುತ್ತಾ ಇದ್ದದರಿಂದ ಊಟಮಾಡುವದಕ್ಕೂ ಅವರಿಗೆ ಸಮಯವಿರಲಿಲ್ಲ. ಆಗ ಅವರು ದೋಣಿ ಯಲ್ಲಿ ಏಕಾಂತವಾಗಿ ಅರಣ್ಯಸ್ಥಳಕ್ಕೆ ಹೊರಟು ಹೋದರು. ಅವರು ಹೊರಡುವದನ್ನು ಜನರು ನೋಡಿ ಅನೇಕರು ಆತನ ಗುರುತು ಹಿಡಿದು ಎಲ್ಲಾ ಪಟ್ಟಣಗಳಿಂದ ಕಾಲುನಡಿಗೆಯಾಗಿ ಅಲ್ಲಿಗೆ ಓಡುತ್ತಾ ಅವರಿಗಿಂತಲೂ ಮುಂದಾಗಿ ಆತನ ಬಳಿಗೆ ಸೇರಿಬಂದರು. ಯೇಸು ಹೊರಗೆ ಬಂದು ಬಹು ಜನರನ್ನು ನೋಡಿ ಅವರ ಮೇಲೆ ಕನಿಕರ ಪಟ್ಟನು; ಅವರು ಕುರುಬನಿಲ್ಲದ ಕುರಿಗಳಂತೆ ಇದ್ದರು; ಆತನು ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದನು. ಆಗಲೇ ಹಗಲು ಬಹಳ ಮಟ್ಟಿಗೆ ಕಳೆದದ್ದರಿಂದ ಆತನ ಶಿಷ್ಯರು ಆತನ ಬಳಿಗೆ ಬಂದು--ಇದು ಅರಣ್ಯ ಸ್ಥಳ ಮತ್ತು ಈಗ ಸಮಯವು ಬಹಳವಾಗಿ ದಾಟಿದೆ; ಇವರು ಸುತ್ತ ಲಿನ ಸೀಮೆಗೂ ಹಳ್ಳಿಗಳಿಗೂ ಹೋಗಿ ತಮಗೋಸ್ಕರ ರೊಟ್ಟಿಯನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿ ಬಿಡು; ಯಾಕಂದರೆ ಅವರಿಗೆ ತಿನ್ನುವದಕ್ಕೆ ಏನೂ ಇಲ್ಲ ಅಂದರು. ಆತನು ಪ್ರತ್ಯುತ್ತರವಾಗಿ ಅವ ರಿಗೆ--ನೀವೇ ಅವರಿಗೆ ತಿನ್ನುವದಕ್ಕೆ ಕೊಡಿರಿ ಅಂದನು. ಅದಕ್ಕೆ ಅವರು ಆತನಿಗೆ--ನಾವು ಹೋಗಿ ಎರಡು ನೂರು ಹಣದ (ಪೆನ್ನಿ: ಇಂಗ್ಲೀಷ್ಹಣ) ರೊಟಿಯನ್ನು ಕೊಂಡುಕೊಂಡು ಅವರಿಗೆ ತಿನ್ನುವದಕ್ಕೆ ಕೊಡೋಣವೋ ಅಂದರು. ಆತನು ಅವರಿಗೆ--ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿರಿ ಅನ್ನಲು ಅವರು ತಿಳಿದುಕೊಂಡು--ಐದು ರೊಟ್ಟಿ ಮತ್ತು ಎರಡು ವಿಾನುಗಳು ಇವೆ ಎಂದು ಹೇಳಿದರು. ಆಗ ಎಲ್ಲರೂ ಹಸುರು ಹುಲ್ಲಿನ ಮೇಲೆ ಪಂಕ್ತಿ ಪಂಕ್ತಿಗಳಾಗಿ ಕೂತುಕೊಳ್ಳುವಂತೆ ಆತನು ಅವರಿಗೆ ಅಪ್ಪಣೆಕೊಟ್ಟನು. ಅವರು ನೂರರಂತೆ ಐವತ್ತರಂತೆ ಸಾಲುಸಾಲಾಗಿ ಕೂತುಕೊಂಡರು. ಆಗ ಆತನು ಐದು ರೊಟ್ಟಿ ಎರಡು ವಿಾನುಗಳನ್ನು ತಕ್ಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ಆ ರೊಟ್ಟಿಗಳನ್ನು ಮುರಿದು, ಅವರಿಗೆ ಹಂಚುವದಕ್ಕಾಗಿ ತನ್ನ ಶಿಷ್ಯರಿಗೆ ಕೊಟ್ಟನು; ಮತ್ತು ಎರಡು ವಿಾನುಗಳನ್ನು ಆತನು ಅವರೆಲ್ಲರಿಗೂ ಹಂಚಿದನು. ಅವರೆಲ್ಲರೂ ತಿಂದು ತೃಪ್ತರಾದರು. ಆಗ ಅವರು ಹನ್ನೆರಡು ಪುಟ್ಟಿಗಳಲ್ಲಿ ರೊಟ್ಟಿ ಮತ್ತು ವಿಾನಿನ ತುಂಡುಗಳನ್ನು ತುಂಬಿದರು. ಆ ರೊಟ್ಟಿಗಳನ್ನು ತಿಂದವರು ಸುಮಾರು ಐದು ಸಾವಿರ ಗಂಡಸರು.
- John 6:23 ಯೋಹಾನನು 6:23(ಆದಾಗ್ಯೂ ಕರ್ತನು ಸ್ತೋತ್ರ ಮಾಡಿದ ನಂತರ ಅವರು ರೊಟ್ಟಿಯನ್ನು ತಿಂದ ಸ್ಥಳದ ಸವಿಾಪಕ್ಕೆ ತಿಬೇರಿಯದಿಂದ ಬೇರೆ ದೋಣಿಗಳು ಬಂದವು).
- Luke 5:1 ಲೂಕನು 5:1ಇದಾದ ಮೇಲೆ ಆತನು ಗೆನೇಜರೆತ್ ಕೆರೆಯ ಬಳಿಯಲ್ಲಿ ನಿಂತುಕೊಂಡಿದ್ದಾಗ ಜನರು ದೇವರ ವಾಕ್ಯವನ್ನು ಕೇಳುವದಕ್ಕಾಗಿ ಆತನ ಮೇಲೆ ನೂಕಾಡುತ್ತಿದ್ದರು.
- Matthew 4:18 ಮತ್ತಾಯನು 4:18ಮತ್ತು ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದುಹೋಗುತ್ತಿದ್ದಾಗ ಪೇತ್ರನೆಂದು ಕರೆಯಲ್ಪಟ್ಟ ಸೀಮೋನ, ಅವನ ಸಹೋದರನಾದ ಅಂದ್ರೆಯ ಎಂಬ ಇಬ್ಬರು ಸಹೋದರರು ಸಮುದ್ರ ದಲ್ಲಿ ಬಲೆ ಬೀಸುವದನ್ನು ಕಂಡನು; ಯಾಕಂದರೆ ಅವರು ಬೆಸ್ತರಾಗಿದ್ದರು.
- John 21:1 ಯೋಹಾನನು 21:1ಇವುಗಳಾದ ಮೇಲೆ ಯೇಸು ತಿಬೇರಿಯ ಸಮುದ್ರದ ಬಳಿಯಲ್ಲಿ ಶಿಷ್ಯರಿಗೆ ತನ್ನನ್ನು ತಿರಿಗಿ ತೋರಿಸಿಕೊಂಡನು. ಆತನು ತನ್ನನ್ನು ತೋರಿಸಿ ಕೊಂಡ ರೀತಿ ಹೇಗಂದರೆ--
- Numbers 34:11 ಅರಣ್ಯಕಾಂಡ 34:11ಶೆಫಾಮಿನಿಂದ ಮೇರೆ ಆಯಿನಿನ ಪೂರ್ವದಲ್ಲಿರುವ ರಿಬ್ಲಕ್ಕೆ ಇಳಿದು ಕಿನ್ನೆರೆತ್ ಸಮುದ್ರದ ಪೂರ್ವ ತೀರವನ್ನು ಮುಟ್ಟಲಿ.
- Matthew 14:13–21 ಮತ್ತಾಯನು 14:13–21ಯೇಸು ಆ ವಿಷಯವನ್ನು ಕೇಳಿದಾಗ ದೋಣಿ ಯನ್ನು ಹತ್ತಿ ಅಲ್ಲಿಂದ ವಿಂಗಡವಾಗಿ ಅರಣ್ಯ ಸ್ಥಳಕ್ಕೆ ಹೊರಟುಹೋದನು. ಇದನ್ನು ಕೇಳಿ ಜನರು ಪಟ್ಟಣ ಗಳಿಂದ ಕಾಲು ನಡಿಗೆಯಾಗಿ ಆತನನ್ನು ಹಿಂಬಾಲಿ ಸಿದರು. ಆಗ ಯೇಸು ಹೊರಟುಹೋಗಿ ಜನರ ಮಹಾಸಮೂಹವನ್ನು ಕಂಡು ಅವರ ಮೇಲೆ ಕನಿಕರ ಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು. ಸಾಯಂಕಾಲವಾದಾಗ ಆತನ ಶಿಷ್ಯರು ಆತನ ಬಳಿಗೆ ಬಂದು--ಇದು ಅಡವಿಯ ಸ್ಥಳ, ಸಮಯವು ದಾಟಿತು; ಜನರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರವನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡು ಅಂದರು. ಆದರೆ ಯೇಸು ಅವ ರಿಗೆ--ಅವರು ಹೋಗುವದು ಅವಶ್ಯವಿಲ್ಲ; ಅವರು ಊಟಮಾಡುವದಕ್ಕೆ ನೀವೇ ಕೊಡಿರಿ ಎಂದು ಹೇಳಿದನು. ಅವರು ಆತನಿಗೆ--ನಮ್ಮ ಹತ್ತಿರ ಐದು ರೊಟ್ಟಿ ಎರಡು ಮಾನುಗಳು ಮಾತ್ರ ಇವೆ ಎಂದು ಹೇಳಿದರು. ಆತನು--ಅವುಗಳನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಅಂದನು. ಜನ ಸಮೂಹವು ಹುಲ್ಲಿನಮೇಲೆ ಕೂತುಕೊಳ್ಳಬೇಕೆಂದು ಆತನು ಅಪ್ಪಣೆಕೊಟ್ಟು ಆ ಐದು ರೊಟ್ಟಿ ಎರಡು ಮಾನುಗಳನ್ನು ತಕ್ಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ಮುರಿದು ಆ ರೊಟ್ಟಿಗಳನ್ನು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಶಿಷ್ಯರು ಜನಸಮೂಹಕ್ಕೆ ಕೊಟ್ಟರು. ಅವರೆಲ್ಲರೂ ತಿಂದು ತೃಪ್ತರಾದರು; ಮತ್ತು ಅವರು ಉಳಿದ ತುಂಡುಗಳನ್ನು ಕೂಡಿಸಿ ಹನ್ನೆ ರಡು ಪುಟ್ಟಿಗಳಲ್ಲಿ ತುಂಬಿಸಿದರು. ಊಟ ಮಾಡಿ ದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಇದ್ದರು.
- Joshua 12:3 ಯೆಹೋಶುವ 12:3ಬೈಲಿನಿಂದ ಮೂಡಣದಲ್ಲಿರುವ ಕಿನ್ನೆರೋತ್ ಸಮುದ್ರದ ಪರಿಯಂತರ ವರೆಗೂ ಬೇತ್ಯೊಷಿ ಮೋತಿನ ಮಾರ್ಗವಾಗಿ ಮೂಡಣದಲ್ಲಿರುವ ಬೈಲಿನ ಉಪ್ಪು ಸಮುದ್ರದ ವರೆಗೂ ಅಷ್ಡೋದ್ ಪಿಸ್ಗಾಕ್ಕೆ ಕೆಳಗಾದ ದಕ್ಷಿಣದಿಂದ ಇರುವ ದೇಶವನ್ನು ಆಳಿ ಕೊಂಡಿದ್ದ ಹೆಷ್ಬೋನಿನಲ್ಲಿ ವಾಸಿಸಿದ್ದ ಅಮೋರಿಯರ ಅರಸನಾದ ಸೀಹೋನನೂ
- Matthew 15:29 ಮತ್ತಾಯನು 15:29ಇದಾದ ಮೇಲೆ ಯೇಸು ಅಲ್ಲಿಂದ ಹೊರಟು ಗಲಿಲಾಯ ಸಮುದ್ರದ ಸಮಾಪಕ್ಕೆ ಬಂದನು; ಮತು ಆತನು ಬೆಟ್ಟವನ್ನು ಹತ್ತಿ ಅಲ್ಲಿ ಕೂತುಕೊಂಡನು.
- Luke 9:10–17 ಲೂಕನು 9:10–17ತರುವಾಯ ಅಪೊಸ್ತಲರು ಹಿಂತಿರುಗಿ ಬಂದು ತಾವು ಮಾಡಿದವುಗಳನ್ನೆಲ್ಲಾ ಆತನಿಗೆ ತಿಳಿಸಿದರು. ಆಗ ಆತನು ಬೇತ್ಸಾಯಿದ ಎಂದು ಕರೆಯಲ್ಪಟ್ಟ ಪಟ್ಟಣಕ್ಕೆ ಸಂಬಂಧಿಸಿದ ಅರಣ್ಯಸ್ಥಳಕ್ಕೆ ಪ್ರತ್ಯೇಕವಾಗಿ ಅವರನ್ನು ಕರೆದುಕೊಂಡು ಹೋದನು. ಆಗ ಜನರು ಅದನ್ನು ತಿಳಿದು ಆತನನ್ನು ಹಿಂಬಾಲಿಸಲು ಆತನು ಅವರನ್ನು ಅಂಗೀಕರಿಸಿ ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ ಸ್ವಸ್ಥತೆ ಬೇಕಾಗಿದ್ದವರನ್ನು ಸ್ವಸ್ಥ ಮಾಡಿದನು. ಸಂಜೆಯಾಗು ತ್ತಿದ್ದಾಗ ಹನ್ನೆರಡು ಮಂದಿ ಬಂದು ಆತನಿಗೆ--ಈ ಜನಸಮೂಹವು ಸುತ್ತಲಿರುವ ಊರುಗಳಿಗೂ ಸೀಮೆಗಳಿಗೂ ಹೋಗಿ ಇಳುಕೊಂಡು ಆಹಾರವನ್ನು ದೊರಕಿಸಿಕೊಳ್ಳುವಂತೆ ಅವರನ್ನು ಕಳುಹಿಸಿಬಿಡು; ಯಾಕಂದರೆ ನಾವು ಇಲ್ಲಿ ಅರಣ್ಯ ಸ್ಥಳದಲ್ಲಿ ಇದ್ದೇವಲ್ಲಾ ಅಂದರು. ಆದರೆ ಆತನು ಅವರಿಗೆ--ನೀವೇ ಅವ ರಿಗೆ ಊಟಕ್ಕೆ ಕೊಡಿರಿ ಅಂದನು. ಅದಕ್ಕೆ ಅವರು--ನಾವು ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡುಕೊಳ್ಳದ ಹೊರತು ನಮ್ಮಲ್ಲಿ ಐದು ರೊಟ್ಟಿ ಎರಡು ವಿಾನುಗಳಿಗಿಂತ ಹೆಚ್ಚೇನೂ ಇಲ್ಲ ಅಂದರು. ಯಾಕಂದರೆ ಅವರು ಹೆಚ್ಚು ಕಡಿಮೆ ಗಂಡಸರೇ ಐದು ಸಾವಿರ ಇದ್ದರು. ಆಗ ಆತನು ತನ್ನ ಶಿಷ್ಯ ರಿಗೆ--ಪಂಕ್ತಿಗಳಲ್ಲಿ ಐವತ್ತರಂತೆ ಅವರನ್ನು ಕೂಡ್ರಿಸಿರಿ ಅಂದನು. ಅವರು ಅದರಂತೆಯೇ ಮಾಡಿ ಅವರೆ ಲ್ಲರನ್ನೂ ಕೂಡ್ರಿಸಿದರು. ತರುವಾಯ ಆತನು ಐದು ರೊಟ್ಟಿಗಳನ್ನೂ ಎರಡು ವಿಾನುಗಳನ್ನೂ ತಕ್ಕೊಂಡು ಪರಲೋಕದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ ಮುರಿದು ಜನಸಮೂಹಕ್ಕೆ ಹಂಚುವಂತೆ ಶಿಷ್ಯರಿಗೆ ಕೊಟ್ಟನು. ಆಗ ಅವರೆಲ್ಲರೂ ತಿಂದು ತೃಪ್ತರಾದರು; ಉಳಿದ ತುಂಡುಗಳನ್ನು ಕೂಡಿಸಲು ಅವರಿಗೆ ಹನ್ನೆರಡು ಪುಟ್ಟಿಗಳು ಉಳಿದವು.