Joshua · chapter 21 · verse 44
Joshua 21:44 in Kannada
ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ಪ್ರಕಾರವೆಲ್ಲಾ ಅವರ ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು; ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ; ಅವರ ಶತ್ರುಗಳನ್ನೆಲ್ಲಾ ಕರ್ತನು ಅವರ ಕೈಗಳಿಗೆ ಒಪ್ಪಿಸಿದನು.ಕರ್ತನು ಇಸ್ರಾಯೇಲ್ ಮನೆಗೆ ಹೇಳಿದ ಒಳ್ಳೇ ವಿಷಯಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ; ಎಲ್ಲಾ ನೆರವೇರಿದವು.
Kartanu avara tandegalige aane itta prakaaravellaa avara suttaloo avarige vishraanti kottanu; avara ellaa shatrugalalli obbanaadaroo avara munde nillalilla; avara shatrugalannellaa kartanu avara kaigalige oppisidanu.kartanu israayel manege helida olle vishayagalalli ondaadaroo biddu hogalilla; ellaa neraveridavu.
Joshua 21:44 in English
- King James Version (KJV)
- And the LORD gave them rest round about, according to all that he sware unto their fathers: and there stood not a man of all their enemies before them; the LORD delivered all their enemies into their hand.
- World English Bible (WEB)
- The LORD gave them rest all around, according to all that he swore to their fathers. Not a man of all their enemies stood before them. The LORD delivered all their enemies into their hand.
- American Standard Version (ASV)
- And Jehovah gave them rest round about, according to all that he sware unto their fathers: and there stood not a man of all their enemies before them; Jehovah delivered all their enemies into their hand.
- Bible in Basic English (BBE)
- And the Lord gave them peace on every side, as he had said to their fathers: all those who were against them gave way before them, for the Lord gave them all up into their hands.
- Darby Translation (DBY)
- And Jehovah gave them rest round about, according to all that he had sworn unto their fathers; and there stood not a man of all their enemies before them: Jehovah gave all their enemies into their hand.
- Webster's Bible (WBS)
- And the LORD gave them rest on all sides, according to all that he swore to their fathers: and there stood not a man of all their enemies before them; the LORD delivered all their enemies into their hand.
- Young's Literal Translation (YLT)
- and Jehovah giveth rest to them round about, according to all that which He hath sworn to their fathers, and there hath not stood a man in their presence of all their enemies, the whole of their enemies hath Jehovah given into their hand;
Read in context
- 42ಈ ಪಟ್ಟಣಗಳಲ್ಲಿ ಪ್ರತಿಯೊಂದಕ್ಕೂ ಅದರದರ ಸುತ್ತಲೂ ಉಪನಗರಗಳು ಇದ್ದವು; ಪಟ್ಟಣಗಳಿಗೆಲ್ಲಾ ಹೀಗೆಯೇ ಇದ್ದವು.
- 43ಕರ್ತನು ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನೆಲ್ಲಾ ಇಸ್ರಾಯೇಲಿಗೆ ಕೊಟ್ಟನು; ಅವರು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸವಾಗಿದ್ದರು.
- 44ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ಪ್ರಕಾರವೆಲ್ಲಾ ಅವರ ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು; ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ; ಅವರ ಶತ್ರುಗಳನ್ನೆಲ್ಲಾ ಕರ್ತನು ಅವರ ಕೈಗಳಿಗೆ ಒಪ್ಪಿಸಿದನು.ಕರ್ತನು ಇಸ್ರಾಯೇಲ್ ಮನೆಗೆ ಹೇಳಿದ ಒಳ್ಳೇ ವಿಷಯಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ; ಎಲ್ಲಾ ನೆರವೇರಿದವು.
- 45ಕರ್ತನು ಇಸ್ರಾಯೇಲ್ ಮನೆಗೆ ಹೇಳಿದ ಒಳ್ಳೇ ವಿಷಯಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ; ಎಲ್ಲಾ ನೆರವೇರಿದವು.
Cross references
- Joshua 11:23 ಯೆಹೋಶುವ 11:23ಹೀಗೆಯೇ ಯೆಹೋಶುವನು ದೇಶವನ್ನೆಲ್ಲಾ ಕರ್ತನು ಮೋಶೆಗೆ ಹೇಳಿದ ಪ್ರಕಾರವೇ ಹಿಡಿದು ಅದನ್ನು ಇಸ್ರಾಯೇಲಿಗೆ ಅವರ ಗೋತ್ರಗಳ ಭಾಗಗಳಿಗನುಸಾರ ಬಾಧ್ಯತೆಯಾಗಿ ಕೊಟ್ಟನು. ಆಗ ದೇಶವು ಯುದ್ಧವಿಲ್ಲದೆ ವಿಶ್ರಮಿಸಿ ಕೊಂಡಿತು.
- Hebrews 4:9 ಇಬ್ರಿಯರಿಗೆ 4:9ಆದದರಿಂದ ದೇವಜನರಿಗೆ ವಿಶ್ರಾಂತಿಯು ಇನ್ನೂ ಉಂಟು.
- Deuteronomy 31:3–5 ಧರ್ಮೋಪದೇಶಕಾಂಡ 31:3–5ನಿನ್ನ ದೇವರಾದ ಕರ್ತನು ತಾನೇ ನಿನ್ನ ಮುಂದೆ ಹೋಗುವನು. ಆತನು ಆ ಜನಾಂಗಗಳನ್ನು ನಿನ್ನ ಮುಂದೆ ನಾಶಮಾಡುವನು; ನೀನು ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವಿ; ಕರ್ತನು ಹೇಳಿದ ಪ್ರಕಾರ ಯೆಹೋಶುವನು ನಿನ್ನ ಮುಂದೆ ಹೋಗುವನು. ಕರ್ತನು ಅಮೋರಿಯರ ಅರಸನಾದ ಸೀಹೋನನಿಗೂ ಓಗನಿಗೂ ಆತನು ನಾಶಮಾಡಿದ ಅವರ ದೇಶಕ್ಕೂ ಮಾಡಿದಂತೆ ಆ ಜನಾಂಗಗಳಿಗೆ ಮಾಡುವನು. ನಾನು ನಿಮಗೆ ಆಜ್ಞಾಪಿಸಿದ ಸಮಸ್ತ ಆಜ್ಞೆಯ ಪ್ರಕಾರ ನೀವು ಅವರಿಗೆ ಮಾಡುವಹಾಗೆ ಕರ್ತನು ಅವರನ್ನು ನಿಮ್ಮ ಮುಂದೆ ಒಪ್ಪಿಸಿಬಿಡುವನು.
- Deuteronomy 7:22–24 ಧರ್ಮೋಪದೇಶಕಾಂಡ 7:22–24ನಿನ್ನ ದೇವರಾದ ಕರ್ತನು ಆ ಜನಾಂಗಗಳನ್ನು ನಿನ್ನ ಮುಂದೆ ಸ್ವಲ್ಪ ಸ್ವಲ್ಪವಾಗಿ ಹೊರಗೆ ಹಾಕುವನು. ಅಡವಿಯ ಮೃಗಗಳು ನಿನ್ನ ಮೇಲೆ ಹೆಚ್ಚದ ಹಾಗೆ ಅವರನ್ನು ತ್ವರೆಯಾಗಿ ಸಂಹರಿಸಬಾರದು. ಆದರೂ ನಿನ್ನ ದೇವರಾದ ಕರ್ತನು ಅವುಗಳನ್ನು ನಿನಗೆ ಒಪ್ಪಿಸಿಬಿಡುವನು; ಅವರು ನಾಶವಾಗುವ ತನಕ ಅತ್ಯಧಿಕವಾಗಿ ಅವರನ್ನು ಸಂಹರಿಸುವನು. ಅವರ ಅರಸುಗಳನ್ನು ನಿನಗೆ ಒಪ್ಪಿಸುವನು. ನೀನು ಅವರ ಹೆಸರನ್ನು ಆಕಾಶದ ಕೆಳಗೆ ಇಲ್ಲದ ಹಾಗೆ ನಾಶಮಾಡುವಿ; ನೀನು ಅವರನ್ನು ನಿರ್ಮೂಲ ಮಾಡುವ ತನಕ ಒಬ್ಬನಾದರೂ ನಿನ್ನ ಮುಂದೆ ನಿಲ್ಲಲಾರನು.
- Exodus 23:31 ವಿಮೋಚನಕಾಂಡ 23:31ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ವರೆಗೂ ಅರಣ್ಯದಿಂದ ನದಿಯ ವರೆಗೂ ನಿಮ್ಮ ಮೇರೆ ಗಳನ್ನು ನೇಮಿಸುವೆನು; ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿ ನಿಂದ ಓಡಿಸಿಬಿಡುವಿರಿ.
- Joshua 22:4 ಯೆಹೋಶುವ 22:4ಈಗ ನಿಮ್ಮ ದೇವರಾದ ಕರ್ತನು ಅವರಿಗೆ ವಾಗ್ದಾನಮಾಡಿದ ಪ್ರಕಾರ ನಿಮ್ಮ ಸಹೋದರರಿಗೆ ವಿಶ್ರಾಂತಿ ಕೊಟ್ಟನು. ಮತ್ತು ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ನಿಮಗೆ ಕೊಟ್ಟ ಸ್ವಾಸ್ತ್ಯವಾದ ನಿಮ್ಮ ದೇಶದಲ್ಲಿರುವ ನಿಮ್ಮ ಡೇರೆಗಳಿಗೆ ತಿರಿಗಿ ಹೋಗಿರಿ.
- Joshua 1:13 ಯೆಹೋಶುವ 1:13ಕರ್ತನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ವಾಕ್ಯವನ್ನು ಜ್ಞಾಪಕ ಮಾಡಿಕೊಳ್ಳಿರಿ. ನಿಮ್ಮ ದೇವರಾದ ಕರ್ತನು ನಿಮ್ಮನ್ನು ವಿಶ್ರಾಂತಿಪಡಿಸಿ ನಿಮಗೆ ಈ ದೇಶವನ್ನು ಕೊಟ್ಟನು.
- Joshua 22:9 ಯೆಹೋಶುವ 22:9ಕರ್ತನು ಮೋಶೆಗೆ ಕೊಟ್ಟ ಮಾತಿನ ಪ್ರಕಾರ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರದವರೂ ತಾವು ವಶಮಾಡಿಕೊಂಡ ತಮ್ಮ ಸ್ವಾಸ್ತ್ಯದ ದೇಶವಾಗಿರುವ ಗಿಲ್ಯಾದ್ ದೇಶಕ್ಕೆ ಹೋಗುವದಕ್ಕೆ ಕಾನಾನ್ ದೇಶದಲ್ಲಿರುವ ಶೀಲೋ ವನ್ನೂ ಇಸ್ರಾಯೇಲ್ ಮಕ್ಕಳನ್ನೂ ಬಿಟ್ಟು ತಿರಿಗಿ ಹೋದರು.
- Joshua 1:15 ಯೆಹೋಶುವ 1:15ಕರ್ತನು ನಿಮ್ಮ ಹಾಗೆಯೇ ನಿಮ್ಮ ಸಹೋದರರನ್ನು ವಿಶ್ರಾಂತಿ ಪಡಿಸಿ ಅವರು ನಿಮ್ಮ ದೇವರಾದ ಕರ್ತನು ತಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳುವ ವರೆಗೆ ಅವರಿಗೆ ಸಹಾಯ ಮಾಡಿರಿ; ತರುವಾಯ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಈಚೆಯಲ್ಲಿ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ನಿಮಗೆ ಕೊಟ್ಟ ನಿಮ್ಮ ಸ್ವಾಸ್ತ್ಯವಾದ ದೇಶಕ್ಕೆ ತಿರಿಗಿ ಬಂದು ಅದನ್ನು ಅನುಭವಿಸಿರಿ ಅಂದನು.