Judges · chapter 11 · verse 10
Judges 11:10 in Kannada
ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ--ನಾವು ಈ ನಿನ್ನ ಮಾತಿನ ಹಾಗೆಯೇ ಮಾಡದೆ ಹೋದರೆ ಕರ್ತನು ನಮ್ಮ ಮತ್ತು ನಿನ್ನ ಮಧ್ಯದಲ್ಲಿ ಸಾಕ್ಷಿಯಾಗಿರಲಿ ಅಂದರು.
Gilyaadina hiriyaru yephtaahanige--naavu ee ninna maatina haageye maadade hodare kartanu namma mattu ninna madhyadalli saakshiyaagirali andaru.
Judges 11:10 in English
- King James Version (KJV)
- And the elders of Gilead said unto Jephthah, The LORD be witness between us, if we do not so according to thy words.
- World English Bible (WEB)
- The elders of Gilead said to Jephthah, “The LORD will be witness between us. Surely we will do what you say.”
- American Standard Version (ASV)
- And the elders of Gilead said unto Jephthah, Jehovah shall be witness between us; surely according to thy word so will we do.
- Bible in Basic English (BBE)
- And the responsible men of Gilead said to Jephthah, May the Lord be our witness: we will certainly do as you say.
- Darby Translation (DBY)
- And the elders of Gilead said unto Jephthah, Jehovah be witness between us, if we do not so according to thy words!
- Webster's Bible (WBS)
- And the elders of Gilead said to Jephthah, The LORD be a witness between us, if we do not so according to thy words.
- Young's Literal Translation (YLT)
- And the elders of Gilead say unto Jephthah, 'Jehovah is hearkening between us — if according to thy word we do not so.'
Read in context
- 8ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ--ನೀನು ನಮ್ಮೊಂದಿಗೆ ಬಂದು ಅಮ್ಮೋನನ ಮಕ್ಕಳಿಗೆ ವಿರೋಧವಾಗಿ ಯುದ್ಧಮಾಡಿ ಗಿಲ್ಯಾದಿನ ನಿವಾಸಿಗಳಾದ ನಮ್ಮೆಲ್ಲರಿಗೆ ನೀನು ತಲೆಯಾಗಿರುವ ಹಾಗೆ ಈಗ ನಿನ್ನ ಬಳಿಗೆ ತಿರಿಗಿ ಬಂದೆವು ಅಂದರು.
- 9ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ ಅಮ್ಮೋನನ ಮಕ್ಕಳಿಗೆ ವಿರೋ ಧವಾಗಿ ಯುದ್ಧಮಾಡುವದಕ್ಕೆ ನೀವು ತಿರಿಗಿ ನನ್ನನ್ನು ಮನೆಗೆ ಕರತಂದರೆ ಮತ್ತು ಕರ್ತನು ಅವರನ್ನು ನನ್ನ ಮುಂದೆ ಒಪ್ಪಿಸಿಕೊಟ್ಟರೆ ನಾನು ನಿಮಗೆ ನಾಯಕ ನಾಗಿರುವೆನೋ ಅನ್ನಲು
- 10ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ--ನಾವು ಈ ನಿನ್ನ ಮಾತಿನ ಹಾಗೆಯೇ ಮಾಡದೆ ಹೋದರೆ ಕರ್ತನು ನಮ್ಮ ಮತ್ತು ನಿನ್ನ ಮಧ್ಯದಲ್ಲಿ ಸಾಕ್ಷಿಯಾಗಿರಲಿ ಅಂದರು.
- 11ಆಗ ಯೆಫ್ತಾ ಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಆಗ ಜನರು ಅವನನ್ನು ತಮ್ಮ ಮೇಲೆ ನಾಯಕನ ನ್ನಾಗಿಯೂ ಅಧಿಪತಿಯನ್ನಾಗಿಯೂ ಇಟ್ಟುಕೊಂಡರು. ಯೆಫ್ತಾಹನು ತನ್ನ ಮಾತುಗಳನ್ನೆಲ್ಲಾ ಮಿಚ್ಪೆಯಲ್ಲಿ ಕರ್ತನ ಮುಂದೆ ಹೇಳಿದನು.
- 12ಅವನು ಅಮ್ಮೋನನ ಮಕ್ಕಳ ಅರಸನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ--ನೀನು ನನಗೆ ವಿರೋಧವಾಗಿ ನನ್ನ ಸಂಗಡ ಯುದ್ಧಮಾಡುವದಕ್ಕೆ ನನ್ನ ದೇಶದಲ್ಲಿ ಬರುವ ಕಾರಣವೇನು.
Cross references
- Jeremiah 42:5 ಯೆರೆಮೀಯ 42:5ಆಗ ಅವರು ಯೆರೆ ವಿಾಯನಿಗೆ ಹೇಳಿದ್ದೇನಂದರೆ--ನಿನ್ನ ದೇವರಾದ ಕರ್ತನು ನಿನ್ನನ್ನು ಯಾವ ವಿಷಯದಲ್ಲಿ ನಮ್ಮ ಬಳಿಗೆ ಕಳುಹಿಸುತ್ತಾನೋ ಆ ಎಲ್ಲಾ ಮಾತುಗಳ ಪ್ರಕಾರ ನಾವು ಮಾಡದೆ ಹೋದರೆ ಕರ್ತನು ನಮಗೆ ಸತ್ಯವಾದ ನಂಬಿಕೆಯುಳ್ಳ ಸಾಕ್ಷಿಯಾಗಿರಲಿ. ನಾವು ನಮ್ಮ ದೇವರಾದ ಕರ್ತನ ಸ್ವರವನ್ನು ಕೇಳುವಾಗ ನಮಗೆ ಒಳ್ಳೇದಾ ಗುವ ಹಾಗೆ
- Genesis 31:50 ಆದಿಕಾಂಡ 31:50ನೀನು ನನ್ನ ಕುಮಾರ್ತೆಯರನ್ನು ಉಪದ್ರಪಡಿಸಿದರೆ ಇಲ್ಲವೆ ನನ್ನ ಮಕ್ಕಳ ಹೊರತಾಗಿ ಬೇರೆ ಹೆಂಡತಿಯರನ್ನು ನೀನು ತಕ್ಕೊಂಡರೆ ಯಾವ ಮನುಷ್ಯನೂ ನಮ್ಮ ಸಂಗಡ ಇರುವದಿಲ್ಲ. ನೋಡು, ನನಗೂ ನಿನಗೂ ನಡುವೆ ದೇವರೇ ಸಾಕ್ಷಿ ಅಂದನು.
- Jeremiah 29:23 ಯೆರೆಮೀಯ 29:23ಅವರು ತಮ್ಮ ನೆರೆಯವರ ಹೆಂಡತಿಯರ ಸಂಗಡ ವ್ಯಭಿಚಾರ ಮಾಡಿ ನನ್ನ ಹೆಸರಿನಲ್ಲಿ ಸುಳ್ಳಾಗಿ ನಾನು ಅವರಿಗೆ ಆಜ್ಞಾಪಿಸದೆ ಇದ್ದ ಮಾತುಗಳನ್ನಾಡಿ ಇಸ್ರಾಯೇಲಿನಲ್ಲಿ ನೀಚತನವನ್ನು ನಡಿಸಿದರು; ನಾನೇ ಅದನ್ನು ತಿಳಿದು ಸಾಕ್ಷಿಯಾಗಿದ್ದೇನೆಂದು ಕರ್ತನು ಅನ್ನುತ್ತಾನೆ.
- Genesis 16:5 ಆದಿಕಾಂಡ 16:5ಆಗ ಸಾರಯಳು ಅಬ್ರಾಮನಿಗೆ--ನನಗೆ ಆದ ಅನ್ಯಾಯವು ನಿನ್ನ ಮೇಲೆ ಇರಲಿ. ನಾನು ನನ್ನ ದಾಸಿಯನ್ನು ನಿನ್ನ ಮಗ್ಗುಲಿಗೆ ಕೊಟ್ಟೆನು. ಈಗ ಅವಳು ಗರ್ಭಿಣಿಯಾದ್ದರಿಂದ ನಾನು ಅವಳ ಕಣ್ಣಿಗೆ ತಿರಸ್ಕಾರವಾದೆನು. ದೇವರು ನಿನಗೂ ನನಗೂ ನ್ಯಾಯತೀರಿಸಲಿ ಅಂದಳು.
- 1 Samuel 24:12 1 ಸಮುವೇಲನು 24:12ಕರ್ತನು ನನ್ನ ನಿನ್ನ ಮಧ್ಯದಲ್ಲಿ ನ್ಯಾಯತೀರಿಸಲಿ, ಕರ್ತನು ತಾನೇ ನನಗೋಸ್ಕರ ನಿನ್ನ ವಿಷಯ ಮುಯ್ಯಿಗೆ ಮುಯ್ಯಿ ಮಾಡಲಿ; ಆದರೆ ನನ್ನ ಕೈ ನಿನ್ನ ಮೇಲೆ ಇರುವದಿಲ್ಲ.
- Deuteronomy 1:16 ಧರ್ಮೋಪದೇಶಕಾಂಡ 1:16ನಿಮ್ಮ ಗೋತ್ರಗಳಿಗೆ ಅಧಿಕಾರಿಗಳಾಗಿಯೂ ಮಾಡಿದೆನು. ಆ ಕಾಲದಲ್ಲಿ ನಿಮ್ಮ ನ್ಯಾಯಾಧಿಪತಿಗಳಿಗೆ ಕೊಟ್ಟ ಅಪ್ಪಣೆ ಏನಂದರೆ--ನಿಮ್ಮ ಸಹೋದರರು ತಮ್ಮಲ್ಲಿ ಮಾಡುವ ವ್ಯಾಜ್ಯಗಳನ್ನು ಕೇಳಿ ಒಬ್ಬೊಬ್ಬ ನಿಗೂ ಅವನ ಸಹೋದರನಿಗೂ ಅವನ ಪರವಾ ಸಿಗೂ ನೀತಿಯಾಗಿ ನ್ಯಾಯತೀರಿಸಿರಿ.
- Malachi 3:5 ಮಲಾಕಿಯ 3:5ನ್ಯಾಯಕ್ಕೋಸ್ಕರ ನಿಮ್ಮನ್ನು ನಾನು ಸವಿಾಪಿ ಸುತ್ತೇನೆ; ಆಗ ಕಣಿಹೇಳುವವರಿಗೂ ವ್ಯಭಿಚಾರಿ ಗಳಿಗೂ ಸುಳ್ಳು ಪ್ರಮಾಣಮಾಡುವವರಿಗೂ ಸಂಬಳ ದಲ್ಲಿ ಕೂಲಿಯವನಿಗೂ ವಿಧವೆಗೂ ದಿಕ್ಕಿಲ್ಲದವನಿಗೂ ಬಲಾತ್ಕಾರ ಮಾಡುವವರಿಗೂ ಅನ್ಯನ ನ್ಯಾಯವನ್ನು ತಿರಿಗಿಸಿ ಬಿಡುವವರಿಗೂ ನನಗೆ ಭಯಪಡದವರಿಗೂ ವಿರೋಧವಾಗಿ ಶೀಘ್ರವಾದ ಸಾಕ್ಷಿಗಾರನಾಗಿರು ವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 2 Corinthians 11:31 2 ಕೊರಿಂಥದವರಿಗೆ 11:31ನಾನು ಸುಳ್ಳಾಡು ವದಿಲ್ಲವೆಂದು ನಮ್ಮ ಕರ್ತನಾದ ಯೇಸುಕ್ರಿಸ್ತನ ತಂದೆಯೂ ನಿರಂತರ ಸ್ತುತಿ ಹೊಂದತಕ್ಕವನೂ ಆಗಿರುವ ದೇವರೇ ಬಲ್ಲನು.
- Genesis 31:53 ಆದಿಕಾಂಡ 31:53ಅಬ್ರಹಾ ಮನ ದೇವರು, ನಾಹೋರನ ದೇವರು, ಅವರ ತಂದೆಯ ದೇವರು ನಮ್ಮ ಮಧ್ಯದಲ್ಲಿ ನ್ಯಾಯ ತೀರಿಸಲಿ ಅಂದನು. ಆಗ ಯಾಕೋಬನು ತನ್ನ ತಂದೆಯಾದ ಇಸಾಕನು ಭಯದಿಂದ ಸೇವಿಸುವ ದೇವರ ಮೇಲೆ ಪ್ರಮಾಣಮಾಡಿದನು.
- 1 Samuel 12:5 1 ಸಮುವೇಲನು 12:5ಅವನು ಅವರಿಗೆ--ನೀವು ನನ್ನಲ್ಲಿ ಏನಾದರೂ ಕಂಡು ಹಿಡಿಯಲಿಲ್ಲವೆಂಬದಕ್ಕೆ ಕರ್ತನೇ ನಿಮಗೆ ಸಾಕ್ಷಿಯಾಗಿ ದ್ದಾನೆ; ಆತನ ಅಭಿಷಿಕ್ತನು ಈಹೊತ್ತು ಸಾಕ್ಷಿಯಾಗಿದ್ದಾನೆ ಅಂದನು. ಅದಕ್ಕವರು--ಆತನು ಸಾಕ್ಷಿಯಾಗಿದ್ದಾನೆ ಅಂದರು.
- Genesis 21:23 ಆದಿಕಾಂಡ 21:23ಆದದರಿಂದ ನನಗೂ ನನ್ನ ಮಗನಿಗೂ ನನ್ನ ಮೊಮ್ಮಗನಿಗೂ ವಂಚನೆಮಾಡುವ ದಿಲ್ಲವೆಂದು ದೇವರ ಮೇಲೆ ಆಣೆ ಇಟ್ಟು ಪ್ರಮಾಣ ಮಾಡು. ನಾನು ನಿನಗೆ ಮಾಡಿದ ಪ್ರಕಾರ ನೀನು ನನಗೂ ನೀನು ಪ್ರವಾಸವಾಗಿರುವ ದೇಶಕ್ಕೂ ಮಾಡ ಬೇಕು ಅಂದನು.
- Exodus 20:7 ವಿಮೋಚನಕಾಂಡ 20:7ನಿನ್ನ ದೇವರಾದ ಕರ್ತನ ಹೆಸರನ್ನು ವ್ಯರ್ಥವಾಗಿ ಎತ್ತಬಾರದು. ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿ ಯೆಂದು ಎಣಿಸುವದಿಲ್ಲ.