Judges · chapter 19 · verse 20
Judges 19:20 in Kannada
ಆಗ ಆ ಮುದುಕನು ನಿನಗೆ ಸಮಾಧಾನವಾಗಲಿ, ನಿನ್ನ ಕೊರತೆಯೆಲ್ಲಾ ನನ್ನ ಮೇಲೆ ಇರಲಿ; ಹೇಗಾ ದರೂ ಬೀದಿಯೊಳಗೆ ಇಳುಕೊಳ್ಳಬೇಡವೆಂದು ಹೇಳಿ
Aaga aa mudukanu ninage samaadhaanavaagali, ninna korateyellaa nanna mele irali; hegaa daroo beediyolage ilukollabedavendu heli
Judges 19:20 in English
- King James Version (KJV)
- And the old man said, Peace [be] with thee; howsoever [let] all thy wants [lie] upon me; only lodge not in the street.
- World English Bible (WEB)
- The old man said, “Peace be to you! Just let me supply all your needs, but don’t sleep in the street.”
- American Standard Version (ASV)
- And the old man said, Peace be unto thee; howsoever let all thy wants lie upon me; only lodge not in the street.
- Bible in Basic English (BBE)
- And the old man said, Peace be with you; let all your needs be my care; only do not take your rest in the street.
- Darby Translation (DBY)
- Then the old man said, Peace be with thee; only let all thy wants lie on me; but lodge not in the street.
- Webster's Bible (WBS)
- And the old man said, Peace [be] with thee; however, [let] all thy wants [lie] upon me; only lodge not in the street.
- Young's Literal Translation (YLT)
- And the old man saith, 'Peace to thee; only, all thy lack [is] on me, only in the broad place lodge not.'
Read in context
- 18ಅವನು ಇವನಿಗೆ--ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯಾಮ್ ಬೆಟ್ಟದ ಪಾರ್ಶ್ವಕ್ಕೆ ಹಾದು ಹೋಗು ತ್ತೇವೆ. ನಾನು ಅಲ್ಲಿಯವನು; ಈಗ ಕರ್ತನ ಮನೆಗೆ ಹೋಗುತ್ತೇನೆ; ಆದರೆ ನನ್ನನ್ನು ಯಾರೂ ಮನೆಗೆ ಸೇರಿಸಿಕೊಳ್ಳಲಿಲ್ಲ.
- 19ಆದರೂ ನಮ್ಮ ಕತ್ತೆಗಳಿಗೆ ಮೇವೂ ನನಗೂ ನಿನ್ನ ದಾಸಿಗೂ ನಿನ್ನ ಸೇವಕರ ಸಂಗಡ ಇರುವ ಯೌವನಸ್ಥನಿಗೂ ರೊಟ್ಟಿ ಮತ್ತು ದ್ರಾಕ್ಷಾರಸವು ಉಂಟು; ಏನೂ ಕೊರತೆ ಇಲ್ಲ ಅಂದನು.
- 20ಆಗ ಆ ಮುದುಕನು ನಿನಗೆ ಸಮಾಧಾನವಾಗಲಿ, ನಿನ್ನ ಕೊರತೆಯೆಲ್ಲಾ ನನ್ನ ಮೇಲೆ ಇರಲಿ; ಹೇಗಾ ದರೂ ಬೀದಿಯೊಳಗೆ ಇಳುಕೊಳ್ಳಬೇಡವೆಂದು ಹೇಳಿ
- 21ಅವನನ್ನು ತನ್ನ ಮನೆಗೆ ಕರಕೊಂಡು ಹೋಗಿ ಕತ್ತೆಗಳಿಗೆ ಮೇವು ಹಾಕಿದನು. ಅವರು ತಮ್ಮ ಕಾಲು ಗಳನ್ನು ತೊಳೆದು ತಿಂದು ಕುಡಿದರು.
- 22ಅವರು ತಮ್ಮ ಹೃದಯವನ್ನು ಸಂತೋಷ ಪಡಿಸಿ ಕೊಳ್ಳುತ್ತಿರುವ ವೇಳೆಯಲ್ಲಿ ಇಗೋ, ಆ ಪಟ್ಟಣದ ಮನುಷ್ಯರಲ್ಲಿ ಬೆಲಿಯಾಳನ ಕೆಲವು ಕುಮಾರರು ಆ ಮನೆಯನ್ನು ಸುತ್ತಿಕೊಂಡು ಕದವನ್ನು ಬಡಿದು ಆ ಮನೆಯ ಯಜಮಾನನಾದ ಮುದುಕನಿಗೆ--ನಿನ್ನ ಮನೆಯಲ್ಲಿ ಬಂದ ಆ ಮನುಷ್ಯನನ್ನು ನಾವು ತಿಳು ಕೊಳ್ಳುವ ಹಾಗೆ, ಅವನನ್ನು ಹೊರಗೆ ತಾ ಎಂದು ಹೇಳಿದರು.
Cross references
- Judges 6:23 ನ್ಯಾಯಸ್ಥಾಪಕರು 6:23ಆದರೆ ಕರ್ತನು ಅವನಿಗೆ--ನಿನಗೆ ಸಮಾಧಾನವಾಗಲಿ; ಭಯಪಡಬೇಡ, ನೀನು ಸಾಯುವದಿಲ್ಲ ಅಂದನು.
- James 2:15–16 ಯಾಕೋಬನು 2:15–16ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದಿರುವಾಗ ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದವುಗಳನ್ನು ಕೊಡದೆ--ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿರಿ, ಹೊಟ್ಟೆತುಂಬಿಸಿ ಕೊಳ್ಳಿರಿ ಎಂದು ಹೇಳಿದರೆ ಪ್ರಯೋಜನವೇನು?
- Genesis 24:31–33 ಆದಿಕಾಂಡ 24:31–33ಲಾಬಾನನು ಅವನಿಗೆ--ಕರ್ತನಿಂದ ಆಶೀರ್ವದಿಸಲ್ಪಟ್ಟವನೇ, ಒಳಗೆ ಬಾ, ಯಾಕೆ ಹೊರಗೆ ನಿಂತಿರುತ್ತೀ? ನಾನು ಮನೆ ಯನ್ನೂ ಒಂಟೆಗಳಿಗೆ ಸ್ಥಳವನ್ನೂ ಸಿದ್ಧಮಾಡಿದ್ದೇನೆ ಅಂದನು. ಆಗ ಆ ಮನುಷ್ಯನು ಮನೆಯೊಳಗೆ ಬಂದನು. ಅವನು ಒಂಟೆಗಳನ್ನು ಬಿಚ್ಚಿ ಅವುಗಳಿಗೆ ಹುಲ್ಲನ್ನೂ ಮೇವನ್ನೂ ಕೊಟ್ಟನು. ಅವನಿಗೆ ಅವನ ಸಂಗಡವಿದ್ದವರಿಗೆ ಕಾಲುಗಳನ್ನು ತೊಳೆಯುವದಕ್ಕೆ ನೀರು ಕೊಟ್ಟನು. ಅವನಿಗೆ ಊಟ ಬಡಿಸಿದಾಗ ಅವನು--ನಾನು ಬಂದ ಕೆಲಸದ ವಿಷಯ ಹೇಳದೆ ಊಟಮಾಡುವದಿಲ್ಲ ಅಂದನು. ಅದಕ್ಕೆ ಲಾಬಾ ನನು--ಹೇಳು ಅಂದನು.
- 1 Peter 4:9 1 ಪೇತ್ರನು 4:9ಗುಣುಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ.
- Luke 10:5–6 ಲೂಕನು 10:5–6ನೀವು ಯಾವ ಮನೆಯಲ್ಲಿಯಾದರೂ ಪ್ರವೇಶಿಸುವಾಗ ಮೊದಲು--ಈ ಮನೆಗೆ ಸಮಾಧಾನವಾಗಲಿ ಎಂದು ಹೇಳಿರಿ. ಅಲ್ಲಿ ಸಮಾಧಾನದ ಮಗನು ಇದ್ದರೆ ನಿಮ್ಮ ಸಮಾಧಾನವು ಅವರ ಮೇಲೆ ಇರುವದು; ಇಲ್ಲದಿದ್ದರೆ ಅದು ನಿಮಗೆ ಹಿಂದಿರು ಗುವದು.
- 1 John 3:18 1 ಯೋಹಾನನು 3:18ನನ್ನ ಚಿಕ್ಕ ಮಕ್ಕಳೇ, ನೀವು ಮಾತಿನಿಂದಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದ ಲ್ಲಿಯೂ ಪ್ರೀತಿಸುವವರಾಗಿರಬೇಕು.
- Genesis 43:23–24 ಆದಿಕಾಂಡ 43:23–24ಅದಕ್ಕವನು--ನಿಮಗೆ ಸಮಾಧಾನವಿರಲಿ, ಭಯ ಪಡಬೇಡಿರಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ನಿಮ್ಮ ಚೀಲಗಳಲ್ಲಿ ನಿಮಗೆ ದ್ರವ್ಯವನ್ನು ಕೊಟ್ಟಿದ್ದಾನೆ. ನಿಮ್ಮ ಹಣವು ನನಗೆ ಮುಟ್ಟಿತು ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ತಂದನು. ಆ ಮನುಷ್ಯನು ಅವರನ್ನು ಯೋಸೇಫನ ಮನೆಯೊಳಗೆ ಕರಕೊಂಡು ಬಂದು ಅವರಿಗೆ ನೀರನ್ನು ಕೊಟ್ಟಾಗ ಅವರು ತಮ್ಮ ಕಾಲುಗಳನ್ನು ತೊಳ ಕೊಂಡರು. ಇದಲ್ಲದೆ ಅವರ ಕತ್ತೆಗಳಿಗೆ ಮೇವನ್ನು ಹಾಕಿದನು.
- Romans 12:13 ರೋಮಾಪುರದವರಿಗೆ 12:13ಪರಿಶುದ್ಧರ ಕೊರತೆಯ ಪ್ರಕಾರ ಹಂಚಿರಿ; ಅತಿಥಿಸತ್ಕಾರವನ್ನು ಮಾಡಿರಿ.
- 1 Chronicles 12:18 1 ಪೂರ್ವಕಾಲವೃತ್ತಾಂತ 12:18ಆಗ ಆತ್ಮನು ಅದಿಪತಿಗಳ ಮುಖ್ಯಸ್ಥನಾದ ಅಮಸಾಯಿಯ ಮೇಲೆ ಬಂದನು; ಆಗ ಅವನು--ದಾವೀದನೇ, ನಾವು ನಿನ್ನವರು; ಇಷಯನ ಮಗನೇ, ನಾವು ನಿನ್ನ ಕಡೆಯವ ರಾಗಿದ್ದೇವೆ; ಸಮಾಧಾನ, ನಿನಗೆ ಸಮಾಧಾನ; ನಿನ್ನ ಸಹಾಯಕರಿಗೆ ಸಮಾಧಾನ; ನಿನ್ನ ದೇವರು ನಿನಗೆ ಸಹಾಯ ಮಾಡುತ್ತಾನೆ ಅಂದನು. ಆಗ ದಾವೀದನು ಅವರನ್ನು ಅಂಗೀಕರಿಸಿ ಅವರನ್ನು ದಂಡಿನ ಅಧಿಪತಿ ಗಳಾಗಿ ಮಾಡಿದನು.
- Galatians 6:6 ಗಲಾತ್ಯದವರಿಗೆ 6:6ವಾಕ್ಯದಲ್ಲಿ ಉಪದೇಶಹೊಂದುವವನು ಉಪದೇಶ ಮಾಡುವವನಿಗೆ ತನಿಗರುವ ಎಲ್ಲಾ ಒಳ್ಳೆಯವುಗಳಲ್ಲಿ ಪಾಲುಕೊಡಲಿ.
- 1 Corinthians 1:3 1 ಕೊರಿಂಥದವರಿಗೆ 1:3ನಮ್ಮ ತಂದೆಯಾಗಿರುವ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಆಗಲಿ.
- 1 Samuel 25:6 1 ಸಮುವೇಲನು 25:6ಅಭಿವೃದ್ಧಿಯಲ್ಲಿ ಬಾಳುವವನಾದ ಅವನಿಗೆ ಹೇಳ ಬೇಕಾದದ್ದೇನಂದರೆ--ನಿನಗೆ ಸಮಾಧಾನವೂ ನಿನ್ನ ಮನೆಗೆ ಸಮಾಧಾನವೂ ನಿನಗೆ ಉಂಟಾದ ಎಲ್ಲಕ್ಕೂ ಸಮಾಧಾನವೂ ಆಗಲಿ.