Judges · chapter 6 · verse 36
Judges 6:36 in Kannada
ಗಿದ್ಯೋನನು ದೇವರಿಗೆ--ನೀನು ಹೇಳಿದ ಹಾಗೆಯೇ ನನ್ನ ಕೈಯಿಂದ ಇಸ್ರಾಯೇಲನನ್ನು ರಕ್ಷಿಸು ವಿಯಾದರೆ
Gidyonanu devarige--neenu helida haageye nanna kaiyinda israayelanannu rakshisu viyaadare
Judges 6:36 in English
- King James Version (KJV)
- And Gideon said unto God, If thou wilt save Israel by mine hand, as thou hast said,
- World English Bible (WEB)
- Gideon said to God, “If you will save Israel by my hand, as you have spoken,
- American Standard Version (ASV)
- And Gideon said unto God, If thou wilt save Israel by my hand, as thou hast spoken,
- Bible in Basic English (BBE)
- Then Gideon said to God, If you are going to give Israel salvation by my hand, as you have said,
- Darby Translation (DBY)
- And Gideon said to God, If thou wilt save Israel by my hand, as thou hast said,
- Webster's Bible (WBS)
- And Gideon said to God, If thou wilt save Israel by my hand, as thou hast said,
- Young's Literal Translation (YLT)
- And Gideon saith unto God, 'If Thou art Saviour of Israel by my hand, as Thou hast spoken,
Read in context
- 34ಆದರೆ ಕರ್ತನ ಆತ್ಮವು ಗಿದ್ಯೋನನ ಮೇಲೆ ಬಂತು. ಅವನು ತುತೂರಿಯನ್ನು ಊದಿದಾಗ ಅಬೀಯೆಜೆರಿನವರು ಅವನ ಹಿಂದೆ ಕೂಡಿ ಬಂದರು.
- 35ಮನಸ್ಸೆಯವರೆಲ್ಲರಿಗೂ ದೂತರನ್ನು ಕಳುಹಿಸಿದಾಗ ಅವರು ಅವರ ಹಿಂದೆ ಕೂಡಿಬಂದರು. ಆಶೇರಲ್ಲಿಯೂ ಜೆಬುಲೂನಿನಲ್ಲಿಯೂ ನಫ್ತಾಲಿಯಲ್ಲಿಯೂ ದೂತರನ್ನು ಕಳುಹಿಸಿದಾಗ ಅವರು ಇವರಿಗೆ ಎದುರಾಗಿ ಬಂದರು.
- 36ಗಿದ್ಯೋನನು ದೇವರಿಗೆ--ನೀನು ಹೇಳಿದ ಹಾಗೆಯೇ ನನ್ನ ಕೈಯಿಂದ ಇಸ್ರಾಯೇಲನನ್ನು ರಕ್ಷಿಸು ವಿಯಾದರೆ
- 37ಇಗೋ, ಉಣ್ಣೆಯ ಗುಜ್ಜನ್ನು ಕಣದಲ್ಲಿ ಹಾಕುವೆನು. ಮಂಜು ಉಣ್ಣೆಯ ಮೇಲೆ ಮಾತ್ರವೇ ಇದ್ದು ಭೂಮಿಯೆಲ್ಲಾ ಒಣಗಿದ್ದರೆ ನೀನು ಹೇಳಿದ ಹಾಗೆ ಇಸ್ರಾಯೇಲನ್ನು ನನ್ನ ಕೈಯಿಂದ ರಕ್ಷಿಸುವಿ ಎಂಬದನ್ನು ನಾನು ತಿಳಿಯುವೆನು ಅಂದನು.
- 38ಅದು ಹಾಗೆಯೇ ಆಯಿತು. ಅವನು ಮರುದಿನ ಉದಯ ದಲ್ಲಿ ಎದ್ದು ಉಣ್ಣೆಯನ್ನು ತೆಗೆದುಕೊಂಡು ಅದರೊಳ ಗಿದ್ದ ಮಂಜಿನ ನೀರನ್ನು ಒಂದು ಬೋಗುಣಿ ತುಂಬಾ ಹಿಂಡಿದನು.
Cross references
- Judges 6:14 ನ್ಯಾಯಸ್ಥಾಪಕರು 6:14ಕರ್ತನು ಅವನನ್ನು ದೃಷ್ಟಿಸಿ ನೋಡಿ--ಈ ನಿನ್ನ ಶಕ್ತಿಯಿಂದ ಹೋಗು; ನೀನು ಇಸ್ರಾಯೇಲನ್ನು ಮಿದ್ಯಾನ್ಯರ ಕೈಯಿಂದ ತಪ್ಪಿಸಿ ರಕ್ಷಿ ಸುವಿ; ನಾನು ನಿನ್ನನ್ನು ಕಳುಹಿಸಲಿಲ್ಲವೋ ಅಂದನು.
- Matthew 16:1 ಮತ್ತಾಯನು 16:1ಸದ್ದುಕಾಯರೊಂದಿಗೆ ಫರಿಸಾಯರು ಸಹ ಬಂದು ಆತನನ್ನು ಶೋಧಿಸುವದಕ್ಕಾಗಿ ಆಕಾಶದಲ್ಲಿ ತಮಗೆ ಒಂದು ಸೂಚಕಕಾರ್ಯವನ್ನು ತೋರಿಸಬೇಕೆಂದು ಅಪೇಕ್ಷಿಸಿದರು.
- Psalm 103:13–14 ಕೀರ್ತನೆಗಳು 103:13–14ತಂದೆಯು ಮಕ್ಕಳ ಮೇಲೆ ಅಂತಃಕರಣ ಪಡುವ ಪ್ರಕಾರ ಕರ್ತನು ತನಗೆ ಭಯಪಡುವವರ ಮೇಲೆ ಅಂತಃಕರಣಪಡುವವನಾಗಿದ್ದಾನೆ. ಆತನು ನಮ್ಮ ಪ್ರಕೃತಿಯನ್ನು ತಿಳುಕೊಂಡು ನಾವು ಧೂಳಿ ಯಾಗಿದ್ದೇವೆಂದು ಜ್ಞಾಪಕಮಾಡಿಕೊಳ್ಳುತ್ತಾನೆ;
- 2 Kings 20:9 2 ಅರಸುಗಳು 20:9ಆಗ ಯೆಶಾಯನು --ಕರ್ತನು, ತಾನು ಹೇಳಿದ ಕಾರ್ಯವನ್ನು ಮಾಡುವ ನೆಂಬದಕ್ಕೆ ಕರ್ತನ ಕಡೆಯಿಂದ ನಿನಗೆ ಉಂಟಾಗುವ ಗುರುತು ಇದೇ--ನೆರಳು ಹತ್ತು ಮೆಟ್ಟಲು ಮುಂದಕ್ಕೆ ಹೋಗಬೇಕೋ? ಇಲ್ಲವೆ ಹತ್ತು ಮೆಟ್ಟಲು ಹಿಂದಕ್ಕೆ ಹೋಗಬೇಕೋ ಎಂದು ಕೇಳಿದನು.
- Exodus 4:1–9 ವಿಮೋಚನಕಾಂಡ 4:1–9ಮೋಶೆಯು ಪ್ರತ್ಯುತ್ತರವಾಗಿ--ಆದರೆ ಇಗೋ, ಅವರು ನನ್ನನ್ನು ನಂಬುವದಿಲ್ಲ, ನನ್ನ ಮಾತನ್ನು ಕೇಳುವದೂ ಇಲ್ಲ. ಅವರು--ಕರ್ತನು ನಿನಗೆ ಕಾಣಿಸಿಕೊಳ್ಳಲಿಲ್ಲ ಎಂದು ಹೇಳುವರು ಅಂದನು. ಕರ್ತನು ಅವನಿಗೆ--ನಿನ್ನ ಕೈಯಲ್ಲಿರುವದೇನು ಅಂದದ್ದಕ್ಕೆ ಅವನು--ಕೋಲು ಅಂದನು. ಕರ್ತನು ಅವನಿಗೆ--ಅದನ್ನು ನೆಲದ ಮೇಲೆ ಬಿಸಾಡು ಅಂದಾಗ ಅವನು ಅದನ್ನು ಬಿಸಾಡಿದನು; ಆಗ ಅದು ಸರ್ಪ ವಾಯಿತು. ಮೋಶೆಯು ಅಲ್ಲಿಂದ ಓಡಿಹೋದನು. ಕರ್ತನು ಮೋಶೆಗೆ--ನಿನ್ನ ಕೈಚಾಚಿ ಅದರ ಬಾಲ ವನ್ನು ಹಿಡಿ ಅಂದಾಗ ಅವನು ಕೈಚಾಚಿ ಅದನ್ನು ಹಿಡಿದ ಕೂಡಲೆ ಅದು ಅವನ ಕೈಯಲ್ಲಿ ಕೋಲಾಯಿತು. ಇದರಿಂದ ಅವರು ತಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬ್ ಇವರ ಕರ್ತನಾದ ದೇವರು ನಿನಗೆ ಕಾಣಿಸಿದ್ದನ್ನು ಅವರು ನಂಬುವರು ಅಂದನು. ಇದಲ್ಲದೆ ಕರ್ತನು ಅವನ ಸಂಗಡ ಇನ್ನೂ ಮಾತನಾಡಿ--ನಿನ್ನ ಕೈಯನ್ನು ಉಡಿಯಲ್ಲಿ ಹಾಕು ಅಂದಾಗ ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರಗೆ ತೆಗೆಯಲು ಇಗೋ, ಅವನ ಕೈ ಕುಷ್ಠದಿಂದ ಹಿಮದಂತೆ ಆಗಿತ್ತು. ಆತನು ಅವನಿಗೆ--ನಿನ್ನ ಕೈಯನ್ನು ಉಡಿಯಲ್ಲಿ ಹಾಕು ಅಂದಾಗ ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಉಡಿಯಿಂದ ಹೊರಗೆ ತೆಗೆಯಲು ಇಗೋ, ಅದು ಅವನ ಬೇರೆ ದೇಹದಂತಾಗಿತ್ತು. ಅವರು ನಿನ್ನನ್ನು ನಂಬದೆ ಮೊದಲನೆಯ ಮಹ ತ್ಕಾರ್ಯವನ್ನು ತಿರಸ್ಕರಿಸಿದರೂ ಎರಡನೆಯದನ್ನು ಲಕ್ಷ್ಯವಿಟ್ಟು ನಂಬುವರು. ಆ ಎರಡೂ ಮಹತ್ಕಾರ್ಯ ಗಳನ್ನು ಅವರು ನಂಬದೆಯೂ ನಿನ್ನ ಮಾತನ್ನು ಕೇಳ ದೆಯೂ ಹೋದರೆ ನದಿಯ ನೀರನ್ನು ತೆಗೆದು ಒಣಗಿದ ನೆಲದಮೇಲೆ ಸುರಿಯಬೇಕು. ಆಗ ನೀನು ನದಿಯಿಂದ ತೆಗೆದ ನೀರು ಒಣಗಿದ ನೆಲದ ಮೇಲೆ ರಕ್ತವಾಗುವದು ಅಂದನು.
- Judges 6:17–20 ನ್ಯಾಯಸ್ಥಾಪಕರು 6:17–20ಅದಕ್ಕವನುಈಗ ನಿನ್ನ ಸಮ್ಮುಖದಲ್ಲಿ ನನಗೆ ದಯೆ ದೊರಕಿದ್ದರೆ ನನ್ನ ಸಂಗಡ ಮಾತಾಡುವಾತನು ನೀನೇ ಎಂಬದಕ್ಕೆ ನನಗೆ ಒಂದು ಗುರುತನ್ನು ತೋರಿಸಬೇಕು. ನಾನು ನಿನ್ನ ಬಳಿಗೆ ನನ್ನ ಕಾಣಿಕೆಯನ್ನು ತಂದು ನಿನ್ನ ಮುಂದೆ ಇಡುವ ವರೆಗೆ ನೀನು ಈ ಸ್ಥಳವನ್ನು ಬಿಟ್ಟುಹೋಗ ಬಾರದು ಎಂದು ಬೇಡಿಕೊಂಡನು. ಅದಕ್ಕೆ ಆತನುನೀನು ತಿರುಗಿ ಬರುವತನಕ ನಾನು ಕಾದಿರುವೆನು ಅಂದನು. ಆಗ ಗಿದ್ಯೋನನು ಒಳಗೆ ಹೋಗಿ ಒಂದು ಮೇಕೆಯ ಮರಿಯನ್ನೂ ಒಂದು ಏಫಾದ ಹಿಟ್ಟಿನಲ್ಲಿ ಹುಳಿ ಇಲ್ಲದ ರೊಟ್ಟಿಯನ್ನೂ ಸಿದ್ಧಮಾಡಿ ಮಾಂಸವನ್ನು ಪುಟ್ಟಿಯಲ್ಲಿ ಇಟ್ಟು ರಸವನ್ನು ಪಾತ್ರೆಯಲ್ಲಿ ಹೊಯಿದು ಅದನ್ನು ಹೊರಗೆ ಮರದ ಕೆಳಗೆ ಇದ್ದ ಆತನ ಬಳಿ ಯಲ್ಲಿ ತಂದಿಟ್ಟನು. ದೇವದೂತನು ಅವನಿಗೆನೀನು ಮಾಂಸವನ್ನೂ ಹುಳಿ ಇಲ್ಲದ ರೊಟ್ಟಿಗಳನ್ನೂ ತೆಗೆದುಕೊಂಡು ಈ ಬಂಡೆಯ ಮೇಲಿಟ್ಟು ರಸವನ್ನು ಹೊಯ್ಯಿ ಅಂದನು. ಅವನು ಹಾಗೆಯೇ ಮಾಡಿದನು.