Deuteronomy · chapter 32 · verse 27
Deuteronomy 32:27 in Kannada
ಅವರ ಶತ್ರುಗಳು--ನಮ್ಮ ಕೈಗಳು ಉನ್ನತವಾಗಿವೆ ಎಂದೂ ಕರ್ತನು ಇವುಗಳನ್ನೆಲ್ಲಾ ಮಾಡಲಿಲ್ಲವೆಂದೂ ಅಂದುಕೊಂಡು ಗರ್ವದಿಂದ ನಡೆಯುವ ಶತ್ರುವಿನ ಕೋಪಕ್ಕೆ ಹೆದರದೆ ಹೋದೆನು.
Avara shatrugalu--namma kaigalu unnatavaagive endoo kartanu ivugalannellaa maadalillavendoo andukondu garvadinda nadeyuva shatruvina kopakke hedarade hodenu.
Deuteronomy 32:27 in English
- King James Version (KJV)
- Were it not that I feared the wrath of the enemy, lest their adversaries should behave themselves strangely, [and] lest they should say, Our hand [is] high, and the LORD hath not done all this.
- World English Bible (WEB)
- were it not that I feared the provocation of the enemy, lest their adversaries should judge wrongly, lest they should say, ‘Our hand is exalted; the LORD has not done all this.’”
- American Standard Version (ASV)
- Were it not that I feared the provocation of the enemy, Lest their adversaries should judge amiss, Lest they should say, Our hand is exalted, And Jehovah hath not done all this.
- Bible in Basic English (BBE)
- But for the fear that their haters, uplifted in their pride, might say, Our hand is strong, the Lord has not done all this.
- Darby Translation (DBY)
- If I did not fear provocation from the enemy, Lest their adversaries should misunderstand it, Lest they should say, Our hand is high, and Jehovah has not done all this.
- Webster's Bible (WBS)
- Were it not that I feared the wrath of the enemy, lest their adversaries should behave themselves strangely, [and] lest they should say, Our hand [is] high, and the LORD hath not done all this.
- Young's Literal Translation (YLT)
- If not — the anger of an enemy I fear, Lest their adversaries know — Lest they say, Our hand is high, And Jehovah hath not wrought all this.
Read in context
- 25ಹೊರಗೆ ಕತ್ತಿಯೂ ಒಳಗೆ ಭಯವೂ ಪ್ರಾಯ ಸ್ಥನನ್ನೂ ಕನ್ನಿಕೆಯನ್ನೂ ನರೇಕೂದಲಿನವನ ಸಂಗಡ ಮೊಲೆ ಕೂಸನ್ನೂ ಸಂಹರಿಸುವವು.
- 26ನಾನು--ಅವರನ್ನು ಚದುರಿಸಿಬಿಡುವೆನೆಂದು ಹೇಳಿಕೊಂಡೆನು; ಅವರ ಜ್ಞಾಪಕವನ್ನು ಮನುಷ್ಯರಲ್ಲಿ ಇರದ ಹಾಗೆ ಮಾಡುವೆನು.
- 27ಅವರ ಶತ್ರುಗಳು--ನಮ್ಮ ಕೈಗಳು ಉನ್ನತವಾಗಿವೆ ಎಂದೂ ಕರ್ತನು ಇವುಗಳನ್ನೆಲ್ಲಾ ಮಾಡಲಿಲ್ಲವೆಂದೂ ಅಂದುಕೊಂಡು ಗರ್ವದಿಂದ ನಡೆಯುವ ಶತ್ರುವಿನ ಕೋಪಕ್ಕೆ ಹೆದರದೆ ಹೋದೆನು.
- 28ಅವರು ಆಲೋಚನೆಯಿಲ್ಲದ ಜನಾಂಗವೇ; ಅವರಲ್ಲಿ ಗ್ರಹಿಕೆ ಇಲ್ಲ.
- 29ಅವರು ಜ್ಞಾನವಂತರಾಗಿ ಇದರ ವಿಷಯ ಬುದ್ಧಿ ತಂದುಕೊಂಡು ತಮ್ಮ ಕಡೇಕಾಲಕ್ಕಾಗಿ ಗ್ರಹಿಕೆಯುಳ್ಳ ವರಾದರೆ ಎಷ್ಟೋ ಒಳ್ಳೇದು!
Cross references
- Numbers 14:15–16 ಅರಣ್ಯಕಾಂಡ 14:15–16ಈಗ ನೀನು ಈ ಜನರನ್ನು ಒಬ್ಬ ಮನುಷ್ಯನೋ ಎಂಬಂತೆ ಕೊಂದುಹಾಕಿದರೆ ನಿನ್ನ ಸುದ್ದಿಯನ್ನು ಕೇಳಿದ ಜನಾಂಗಗಳು-- ಕರ್ತನು ಈ ಜನರನ್ನು ಅವರಿಗೆ ಪ್ರಮಾಣಮಾಡಿದ ದೇಶಕ್ಕೆ ತರಲು ಶಕ್ತಿಸಾಲದ ಕಾರಣ ಅವರನ್ನು ಅರಣ್ಯದಲ್ಲಿ ಕೊಂದು ಹಾಕಿದನು ಎಂದು ಹೇಳುವರು.
- Psalm 140:8 ಕೀರ್ತನೆಗಳು 140:8ಓ ಕರ್ತನೇ, ದುಷ್ಟರ ಆಶೆಯನ್ನು ನೆರವೇರಿಸಬೇಡ; ಅವರು ಉನ್ನತಕ್ಕೇರುವ ಹಾಗೆ ಅವರ ಯುಕ್ತಿಯನ್ನು ಪೂರೈಸಬೇಡ ಎಂದು ಹೇಳಿದೆನು ಸೆಲಾ.
- Exodus 32:12 ವಿಮೋಚನಕಾಂಡ 32:12ಕೇಡಿನ ನಿಮಿತ್ತವೂ ಬೆಟ್ಟಗಳಲ್ಲಿ ಅವರನ್ನು ಕೊಲ್ಲುವದಕ್ಕೂ ಭೂಮಿಯ ಮೇಲಿನಿಂದ ಅವರನ್ನು ದಹಿಸಿಬಿಡುವದಕ್ಕೂ ಆತನು ಅವರನ್ನು ಹೊರಗೆ ಬರಮಾಡಿದ್ದಾನೆ ಎಂದು ಐಗುಪ್ತ್ಯರು ಯಾಕೆ ಹೇಳಬೇಕು? ನಿನ್ನ ಕೋಪದುರಿ ಯನ್ನು ಬಿಟ್ಟು ತಿರುಗಿಕೋ, ನಿನ್ನ ಜನರಿಗೆ ವಿರೋಧ ವಾದ ಈ ಕೇಡಿನ ವಿಷಯದಲ್ಲಿ ನಿನ್ನ ಮನಸ್ಸನ್ನು ಬದಲಾಯಿಸು.
- Zechariah 1:14–15 ಜೆಕರ್ಯ 1:14–15ನನ್ನ ಸಂಗಡ ಮಾತ ನಾಡಿದ ದೂತನು ನನಗೆ ಹೇಳಿದ್ದೇನಂದರೆ--ಕೂಗಿ ಹೇಳು; ಏನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನಾನು ಯೆರೂಸಲೇಮಿಗಾಗಿಯೂ ಚೀಯೋನಿ ಗಾಗಿಯೂ ಬಹುರೋಷವುಳ್ಳವನಾಗಿದ್ದೇನೆ. ನಿಶ್ಚಿಂತೆ ಯುಳ್ಳವರಾಗಿರುವ ಅನ್ಯಜನಾಂಗದ ಮೇಲೆ ನಾನು ಬಹಳ ಕೋಪಿಸಿಕೊಂಡಿದ್ದೇನೆ. ನಾನು ಸ್ವಲ್ಪ ಕೋಪ ಮಾಡಿಕೊಂಡಾಗ ಅವರು ಸಂಕಟಕ್ಕೆ ಸಹಾಯಮಾಡಿ ದರು.
- Joshua 7:9 ಯೆಹೋಶುವ 7:9ಯಾಕಂದರೆ ಕಾನಾನ್ಯರೂ ದೇಶ ವಾಸಿಗಳೆಲ್ಲರೂ ಇದನ್ನು ಕೇಳಿ ನಮ್ಮ ಸುತ್ತಲೂ ಸುತ್ತಿ ಕೊಂಡು ನಮ್ಮ ಹೆಸರನ್ನು ಭೂಮಿಯಿಂದ ತೆಗೆದು ಬಿಡುವರು; ಆಗ ನಿನ್ನ ಮಹತ್ತಾದ ಹೆಸರಿಗೆ ಏನು ಮಾಡುವಿ ಅಂದನು.
- 1 Samuel 12:22 1 ಸಮುವೇಲನು 12:22ನಿಮ್ಮನ್ನು ತನ್ನ ಜನರಾಗಿ ಮಾಡಿಕೊಳ್ಳಲು ಇಚ್ಛೈಸಿದ್ದಾನಲ್ಲಾ! ಇದಲ್ಲದೆ ನಾನು ನಿಮಗೋಸ್ಕರ ಪ್ರಾರ್ಥನೆ ಮಾಡದೆ ಕರ್ತನಿಗೆ ವಿರೋಧವಾಗಿ ಮಾಡುವ ಪಾಪವು ನನಗೆ ದೂರವಾಗಿರಲಿ.
- Isaiah 47:7 ಯೆಶಾಯ 47:7ನಾನು ಶಾಶ್ವತವಾಗಿ ರಾಣಿಯೆಂದು ನೀನು ಅಂದುಕೊಂಡಿದ್ದರಿಂದ ಈ ಸಂಗತಿಗಳನ್ನು ನಿನ್ನ ಹೃದಯ ದಲ್ಲಿಟ್ಟುಕೊಳ್ಳಲಿಲ್ಲ; ಇಲ್ಲವೆ ಅವರ ಅಂತ್ಯವನ್ನು ನೆನಸ ಲಿಲ್ಲ.
- Lamentations 1:9 ಪ್ರಲಾಪಗಳು 1:9ಅವಳ ನೆರಿಗೆಯು ಅಶುದ್ಧವಾಗಿದೆ; ಅವಳು ತನ್ನ ಅಂತ್ಯವನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ; ಆದುದರಿಂದ ಅವಳು ಆಶ್ಚರ್ಯ ಕರವಾಗಿ ಇಳಿದು ಬಂದಳು; ಅವಳನ್ನು ಆದರಿಸುವವರು ಯಾರೂ ಇಲ್ಲ. ಓ ಕರ್ತನೇ, ನನ್ನ ಸಂಕಟವನ್ನು ನೋಡು, ಶತ್ರುವು ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ.
- Isaiah 37:28–29 ಯೆಶಾಯ 37:28–29ನೀನು ವಾಸಿಸುವದು ಹೊರಗೆ ಹೋಗುವದು, ಒಳಗೆ ಬರುವದು; ನೀನು ನನ್ನ ಮೇಲೆ ರೌದ್ರಾವೇಶನಾಗಿ ರುವದನ್ನೂ ನಾನು ಬಲ್ಲೆನು. ನೀನು ನನಗೆ ವಿರೋಧವಾಗಿ ರೌದ್ರನಾಗಿರುವದೂ ಗೊಂದಲ ದಿಂದಿರುವದೂ ನನ್ನ ಕಿವಿಗೆ ಕೇಳಿಬಂತು. ಆದದರಿಂದ ನಾನು ನಿನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ ನನ್ನ ಕಡಿವಾಣವನ್ನು ನಿನ್ನ ತುಟಿಗಳಲ್ಲಿಯೂ ಹಾಕಿ, ನೀನು ಬಂದು ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು ಎಂಬದಾಗಿ ಹೇಳಿ ದ್ದಾನೆ.
- Isaiah 37:10 ಯೆಶಾಯ 37:10ನೀನು ನಂಬುವ ದೇವರು, ಯೆರೂಸಲೇಮು ಅಶ್ಶೂರದ ಅರಸನಿಗೆ ವಶವಾಗುವದಿಲ್ಲವೆಂದು ಹೇಳಿ ನಿನ್ನನ್ನು ಮೋಸಗೊಳಿಸಾನು;
- Psalm 115:1–2 ಕೀರ್ತನೆಗಳು 115:1–2ನಮಗಲ್ಲ, ಓ ಕರ್ತನೇ, ನಮಗಲ್ಲ, ನಿನ್ನ ಹೆಸರಿಗೆ ಮಾತ್ರ, ನಿನ್ನ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ಘನವುಂಟಾಗಲಿ. ಅವರ ದೇವರು ಎಲ್ಲಿ ಎಂದು ಅನ್ಯ ಜನಾಂಗಗಳು ಯಾಕೆ ಹೇಳಬೇಕು?
- Isaiah 37:12–23 ಯೆಶಾಯ 37:12–23ನನ್ನ ಪಿತೃಗಳು ಗೋಜಾನ್, ಖಾರಾನ್, ರೆಚೆಫ್ ಎಂಬ ಪಟ್ಟಣ ಗಳನ್ನು ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಏದೆನಿನ ಜನ ರನ್ನು ನಾಶಮಾಡುವದಕ್ಕೆ ಹೋದಾಗ ಜನಾಂಗಗಳ ದೇವರುಗಳು ಅವರನ್ನು ಬಿಡುಗಡೆ ಮಾಡಿದವೋ? ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ ಎಂಬ ಪಟ್ಟಣಗಳ ಅರಸರು ಏನಾದರೂ ಎಂಬ ನನ್ನ ಮಾತನ್ನು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಿರಿ ಎಂಬದಾಗಿ ಸೇವಕರನ್ನು ಹಿಜ್ಕೀಯನ ಬಳಿಗೆ ಕಳುಹಿಸಿದನು. ಹಿಜ್ಕೀಯನು ಆ ಸೇವಕರ ಕೈಯಿಂದ ಪತ್ರವನ್ನು ತೆಗೆದುಕೊಂಡು ಅದನ್ನು ಓದಿದನು; ಹಿಜ್ಕೀಯನು ಕರ್ತನ ಆಲಯಕ್ಕೆ ಹೋಗಿ ಅದನ್ನು ಕರ್ತನ ಮುಂದೆ ತೆರೆದಿಟ್ಟು, ಸೈನ್ಯಗಳ ಕರ್ತನೇ, ಕೆರೂಬಿಗಳ ಮಧ್ಯದಲ್ಲಿ ವಾಸವಾಗಿರುವ ಇಸ್ರಾ ಯೇಲ್ ದೇವರೇ, ನೀನೇ, ನೀನೊಬ್ಬನೇ, ಎಲ್ಲಾ ಭೂರಾಜ್ಯಗಳ ದೇವರು. ನೀನೇ ಭೂಮ್ಯಾಕಾಶಗಳನ್ನು ಉಂಟು ಮಾಡಿದವನು. ಓ ಕರ್ತನೇ, ಕಿವಿಗೊಟ್ಟು ಕೇಳು; ಓ ಕರ್ತನೇ, ನಿನ್ನ ಕಣ್ಣುಗಳನ್ನು ತೆರೆದು ನೋಡು; ಸನ್ಹೇರೀಬನು ಜೀವವುಳ್ಳ ದೇವರನ್ನು ದೂಷಿಸಿ ಕಳುಹಿಸಿದ ಮಾತುಗಳನ್ನೆಲ್ಲಾ ಕೇಳು. ಕರ್ತನೇ, ಅಶ್ಶೂರದ ಅರಸರು ಸಕಲ ಜನಾಂಗ ಗಳನ್ನೂ ದೇಶಗಳನ್ನೂ ಹಾಳುಮಾಡಿ, ಅವರ ದೇವತೆ ಗಳನ್ನು ಸಹ ಬೆಂಕಿಯಲ್ಲಿ ಹಾಕಿದ್ದು ನಿಜ. ಅವು ದೇವರುಗಳಲ್ಲ, ಮರ, ಕಲ್ಲು, ಮನುಷ್ಯರ ಕೈ ಕೆಲಸ ಗಳೇ ಆದದರಿಂದಲೇ ಅವರು ಅವುಗಳನ್ನು ಹಾಳು ಮಾಡಿದರು. ಹೀಗಿರುವದರಿಂದ ಓ ಕರ್ತನಾದ ನಮ್ಮ ದೇವರೇ, ನೀನೇ, ನೀನೊಬ್ಬನೇ ಕರ್ತನೆಂದು ಭೂಮಿಯ ಎಲ್ಲಾ ರಾಜ್ಯಗಳು ತಿಳಿದುಕೊಳ್ಳುವಂತೆ ಅವನ ಕೈಯಿಂದ ನಮ್ಮನ್ನು ರಕ್ಷಿಸು ಎಂದು ಹಿಜ್ಕೀಯನು ಕರ್ತನಿಗೆ ಪ್ರಾರ್ಥಿಸಿದನು. ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿ ಕಳುಹಿಸಿದ್ದೇನಂದರೆ--ನೀನು ಅಶ್ಶೂರದ ಅರಸನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹವನ್ನು ಕೇಳಿ ಅವನನ್ನು ಕುರಿತು ಇಸ್ರಾಯೇಲ್ ದೇವರಾದ ಕರ್ತನು ಹೇಳುವದೇ ನಂದರೆ--ಕನ್ನಿಕೆಯಾದ ಚೀಯೋನ್ ಕುಮಾರ್ತೆಯು ನಿನ್ನನ್ನು ತಿರಸ್ಕರಿಸಿ, ಪರಿಹಾಸ್ಯ ಮಾಡುತ್ತಾಳೆ; ಯೆರೂಸ ಲೇಮಿನ ಕುಮಾರ್ತೆಯು ನಿನ್ನ ಹಿಂದೆ ತಲೆಯನ್ನು ಅಲ್ಲಾಡಿಸುತ್ತಾಳೆ. ನೀನು ಯಾರನ್ನು ನಿಂದಿಸಿ ದೂಷಿಸಿದ್ದೀ? ಯಾರಿಗೆ ವಿರೋಧವಾಗಿ ನಿನ್ನ ಸ್ವರವೆತ್ತಿ ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾ ಯೇಲಿನ ಪರಿಶುದ್ಧನಿಗಲ್ಲವೋ?