Judges · chapter 9 · verse 7
Judges 9:7 in Kannada
ಯೋತಾಮನಿಗೆ ಇದನ್ನು ತಿಳಿಸಿದಾಗ ಅವನು ಹೋಗಿ ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ಏರಿ ನಿಂತು ಗಟ್ಟಿಯಾಗಿ ಕೂಗಿ ಅವರಿಗೆ--ಶೆಕೆಮಿನ ಜನರೇ, ದೇವರು ನಿಮ್ಮ ಮೊರೆ ಕೇಳುವ ಹಾಗೆ ನನ್ನ ಮಾತನ್ನು ಕೇಳಿರಿ.
Yotaamanige idannu tilisidaaga avanu hogi gerijjeem bettada tudiyalli eri nintu gattiyaagi koogi avarige--shekemina janare, devaru nimma more keluva haage nanna maatannu keliri.
Judges 9:7 in English
- King James Version (KJV)
- And when they told [it] to Jotham, he went and stood in the top of mount Gerizim, and lifted up his voice, and cried, and said unto them, Hearken unto me, ye men of Shechem, that God may hearken unto you.
- World English Bible (WEB)
- When they told it to Jotham, he went and stood on the top of Mount Gerizim and lifted up his voice, cried out, and said to them, “Listen to me, you men of Shechem, that God may listen to you.
- American Standard Version (ASV)
- And when they told it to Jotham, he went and stood on the top of mount Gerizim, and lifted up his voice, and cried, and said unto them, Hearken unto me, ye men of Shechem, that God may hearken unto you.
- Bible in Basic English (BBE)
- Now Jotham, on hearing of it, went to the top of Mount Gerizim, and crying out with a loud voice said to them, Give ear to me, you townsmen of Shechem, so that God may give ear to you.
- Darby Translation (DBY)
- And they told it to Jotham, and he went and stood on the top of mount Gerizim, and lifted up his voice, and cried, and said to them, Hearken to me, ye citizens of Shechem, that God may hearken to you.
- Webster's Bible (WBS)
- And when they told [it] to Jotham, he went and stood in the top of mount Gerizim, and lifted up his voice and cried, and said to them, Hearken to me, ye men of Shechem, that God may hearken to you.
- Young's Literal Translation (YLT)
- and they declare [it] to Jotham, and he goeth and standeth on the top of mount Gerizim, and lifteth up his voice, and calleth, and saith to them, 'Hearken unto me, O masters of Shechem, and God doth hearken unto you:
Read in context
- 5ಅವನು ಒಫ್ರದಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ ತನ್ನ ಸಹೋದರರಾದ ಯೆರುಬ್ಬಾಳನ ಎಪ್ಪತ್ತು ಮಂದಿ ಕುಮಾರರನ್ನು ಒಂದು ಕಲ್ಲಿನ ಮೇಲೆ ಕೊಂದು ಹಾಕಿದನು. ಆದರೆ ಯೆರುಬ್ಬಾಳನ ಚಿಕ್ಕ ಮಗನಾದ ಯೋತಾಮನು ಒಬ್ಬನೇ ಉಳಿದನು; ಯಾಕಂದರೆ ಅವನು ಅಡಗಿಕೊಂಡನು.
- 6ಶೆಕೆಮಿನ ಜನರೆಲ್ಲರೂ ಮಿಲ್ಲೋನಿನ ಮನೆಯವರೆಲ್ಲರೂ ಕೂಡಿಕೊಂಡು ಹೋಗಿ ಶೆಕೆಮಿನ ಬೈಲಲ್ಲಿ ಇರುವ ಸ್ತಂಭದ ಬಳಿಯಲ್ಲಿ ಅಬೀಮೆಲೆಕನನ್ನು ಅರಸನನ್ನಾಗಿ ನೇಮಿಸಿದರು.
- 7ಯೋತಾಮನಿಗೆ ಇದನ್ನು ತಿಳಿಸಿದಾಗ ಅವನು ಹೋಗಿ ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ಏರಿ ನಿಂತು ಗಟ್ಟಿಯಾಗಿ ಕೂಗಿ ಅವರಿಗೆ--ಶೆಕೆಮಿನ ಜನರೇ, ದೇವರು ನಿಮ್ಮ ಮೊರೆ ಕೇಳುವ ಹಾಗೆ ನನ್ನ ಮಾತನ್ನು ಕೇಳಿರಿ.
- 8ಮರಗಳು ತಮ್ಮ ಮೇಲೆ ಒಬ್ಬ ಅರಸನನ್ನು ಅಭಿಷೇ ಕಿಸಿಕೊಳ್ಳುವದಕ್ಕಾಗಿ ಹೊರಟು ಹೋಗಿ ಇಪ್ಪೆಯ ಮರಕ್ಕೆ--ನೀನು ನಮ್ಮನ್ನು ಆಳು ಅಂದವು.
- 9ಇಪ್ಪೆಯ ಮರ ಅವುಗಳಿಗೆ--ಯಾವದರಿಂದ ದೇವರನ್ನೂ ಮನು ಷ್ಯರನ್ನೂ ಘನಪಡಿಸುತ್ತಾರೋ ಆ ನನ್ನ ಪುಷ್ಟಿಯನ್ನು ಬಿಟ್ಟು ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ ಅಂದಿತು.
Cross references
- Deuteronomy 11:29 ಧರ್ಮೋಪದೇಶಕಾಂಡ 11:29ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ಪ್ರವೇಶಿ ಸುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಸೇರಿಸಿದಾಗ ನೀನು ಗೆರಿಜ್ಜೀಮ್ ಬೆಟ್ಟದ ಮೇಲೆ ಆಶೀರ್ವಾದವನ್ನೂ ಏಬಾಲ್ ಬೆಟ್ಟದ ಮೇಲೆ ಶಾಪ ವನ್ನೂ ಕೊಡಬೇಕು.
- John 4:20 ಯೋಹಾನನು 4:20ನಮ್ಮ ಪಿತೃಗಳು ಈ ಬೆಟ್ಟದಲ್ಲಿ ಆರಾಧಿಸಿದರು; ಆದರೆ ಜನರು ಆರಾಧಿಸತಕ್ಕ ಸ್ಥಳವು ಯೆರೂಸಲೇಮಿ ನಲ್ಲಿಯೇ ಎಂದು ನೀವು ಅನ್ನುತ್ತೀರಿ ಅಂದಳು.
- Proverbs 28:9 ಜ್ಞಾನೋಕ್ತಿಗಳು 28:9ನ್ಯಾಯಪ್ರಮಾಣವನ್ನು ಕೇಳದೆ ತನ್ನ ಕಿವಿಯನ್ನು ತಿರುಗಿಸಿಕೊಳ್ಳುವವನ ಪ್ರಾರ್ಥನೆಯು ಅಸಹ್ಯ.
- Deuteronomy 27:12 ಧರ್ಮೋಪದೇಶಕಾಂಡ 27:12ನೀವು ಯೊರ್ದನನ್ನು ದಾಟಿದ ಮೇಲೆ ಜನ ರನ್ನು ಆಶೀರ್ವದಿಸುವದಕ್ಕೆ ಗೆರಿಜ್ಜೀಮ್ ಬೆಟ್ಟದಲ್ಲಿ ನಿಲ್ಲತಕ್ಕವರಾರಂದರೆ -- ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ್, ಬೆನ್ಯಾವಿಾನ್.
- Isaiah 1:15 ಯೆಶಾಯ 1:15ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ.
- Psalm 50:15–21 ಕೀರ್ತನೆಗಳು 50:15–21ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ. ಆದರೆ ದುಷ್ಟನಿಗೆ ದೇವರು ಹೇಳುವದೇನಂದರೆ --ನನ್ನ ನಿಯಮಗಳನ್ನು ಪ್ರಕಟಿಸುವದು ನಿನಗೇನು? ಇಲ್ಲವೆ ನನ್ನ ಒಡಂಬಡಿಕೆಯನ್ನು ನಿನ್ನ ಬಾಯಲ್ಲಿ ಉಚ್ಚರಿಸುವದೇಕೆ? ನೀನು ಶಿಕ್ಷಣವನ್ನು ಹಗೆಮಾಡಿ ನನ್ನ ವಾಕ್ಯಗಳನ್ನು ನಿನ್ನ ಹಿಂದೆ ಹಾಕುತ್ತೀಯಲ್ಲಾ. ಕಳ್ಳನನ್ನು ನೋಡಿದರೆ ಅವನೊಂದಿಗೆ ಒಪ್ಪುತ್ತೀ; ಜಾರರ ಸಂಗಡ ನಿನ್ನ ಪಾಲು ಇದೆ. ನೀನು ನಿನ್ನ ಬಾಯನ್ನು ಕೇಡಿಗೆ ಒಪ್ಪಿಸುತ್ತೀ; ನಿನ್ನ ನಾಲಿಗೆಯು ಮೋಸವನ್ನು ಜೋಡಿಸುತ್ತದೆ. ನೀನು ಕೂತು ಕೊಂಡು ನಿನ್ನ ಸಹೋದರನಿಗೆ ವಿರೋಧವಾಗಿ ನುಡಿ ಯುತ್ತೀ; ನಿನ್ನ ಸ್ವಂತ ಒಡಹುಟ್ಟಿದವನ ಮೇಲೆ ಚಾಡಿ ಹೇಳುತ್ತೀ. ಇವುಗಳನ್ನು ನೀನು ಮಾಡಿದಾಗ್ಯೂ ನಾನು ಮೌನವಾಗಿದ್ದೆನು; ಆದದರಿಂದ ನಾನೂ ಸಹ ನಿನ್ನ ಹಾಗೆ ಒಬ್ಬನೆಂದು ನೀನು ನೆನಸಿದಿ; ಆದರೆ ನಾನು ನಿನ್ನನ್ನು ಗದರಿಸಿ ನಿನ್ನ ಕಣ್ಣುಗಳ ಮುಂದೆ ಈ ಕೃತ್ಯಗಳನ್ನು ಕ್ರಮವಾಗಿಡುವೆನು.
- Joshua 8:33 ಯೆಹೋಶುವ 8:33ಇಸ್ರಾಯೇಲ್ಯರೆಲ್ಲರೂ ಅವರ ಹಿರಿ ಯರೂ ಅಧಿಕಾರಿಗಳೂ ನ್ಯಾಯಾಧಿಪತಿಗಳೂ ಪರ ದೇಶಸ್ಥರೂ ದೇಶಸ್ಥರೂ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಲೇವಿಯರಾದ ಯಾಜಕರ ಮುಂದೆ ಒಡಂಬಡಿಕೆಯ ಮಂಜೂಷಕ್ಕೆ ಈ ಕಡೆಯೂ ಆ ಕಡೆಯೂ ಅರ್ಧ ಗೆರಿಜ್ಜೀಮ್ ಪರ್ವತದ ಕಡೆಗೂ ಅರ್ಧ ಏಬಾಲ್ ಪರ್ವತದ ಕಡೆಗೂ ಜನರನ್ನು ಆಶೀರ್ವದಿಸುವದಕ್ಕೆ ಕರ್ತನ ಸೇವಕನಾದ ಮೋಶೆ ಮೊದಲು ಆಜ್ಞಾಪಿಸಿದ ಹಾಗೆ ನಿಂತರು.
- Proverbs 1:28–29 ಜ್ಞಾನೋಕ್ತಿಗಳು 1:28–29ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರಕೊಡೆನು. ಅವರು ಆತುರದಿಂದ ನನ್ನನ್ನು ಹುಡು ಕಿದರೂ ಕಂಡುಕೊಳ್ಳುವದಿಲ್ಲ. ಅವರು ತಿಳುವಳಿಕೆ ಯನ್ನು ಹಗೆಮಾಡಿ ಕರ್ತನ ಭಯವನ್ನು ಆರಿಸಿಕೊ ಳ್ಳದೆ ಇದ್ದದರಿಂದಲೂ
- Proverbs 21:13 ಜ್ಞಾನೋಕ್ತಿಗಳು 21:13ಬಡವರ ಕೂಗಿಗೆ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವವನು ತಾನು ಕೂಗಿದಾಗ ಯಾರೂ ಅವನಿಗೆ ಉತ್ತರಕೊಡುವದಿಲ್ಲ.
- Psalm 18:40–41 ಕೀರ್ತನೆಗಳು 18:40–41ನನ್ನ ಹಗೆಯವರನ್ನು ನಾಶಮಾಡುವಂತೆ ಶತ್ರುಗಳ ಕುತ್ತಿಗೆಗಳನ್ನು ನೀನು ನನಗೆ ಕೊಟ್ಟಿದ್ದೀ. ಅವರು ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇದ್ದಿಲ್ಲ. ಕರ್ತನಿಗೂ ಮೊರೆ ಇಟ್ಟರು, ಆದರೆ ಅವರಿಗೆ ಆತನು ಉತ್ತರ ಕೊಡ ಲಿಲ್ಲ.
- Matthew 18:26–34 ಮತ್ತಾಯನು 18:26–34ಆಗ ಆ ಸೇವಕನು ನೆಲಕ್ಕೆ ಬಿದ್ದು ಅವನನ್ನು ವಂದಿಸಿ--ಧಣಿಯೇ, ನನ್ನನ್ನು ತಾಳಿಕೋ; ನಾನು ಎಲ್ಲವನ್ನು ನಿನಗೆ ಸಲ್ಲಿಸುವೆನು ಎಂದು ಹೇಳಿದನು. ಆ ಸೇವಕನ ಧಣಿಯು ಅವನ ಮೇಲೆ ಕನಿಕರಪಟ್ಟು ಅವನನ್ನು ಬಿಡಿಸಿ ಅವನ ಸಾಲವನ್ನೆಲ್ಲಾ ಬಿಟ್ಟು ಬಿಟ್ಟನು. ಆದರೆ ಅದೇ ಸೇವಕನು ಹೊರಗೆ ಹೋಗಿ ತನಗೆ ನೂರು ದೇನಾರುಗಳನ್ನು ಸಾಲ ಕೊಡಬೇಕಾಗಿದ್ದ ತನ್ನ ಜೊತೆ ಸೇವಕರಲ್ಲಿ ಒಬ್ಬನನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕಿ--ನನ್ನ ಸಾಲವನ್ನು ತೀರಿಸು ಅಂದನು. ಆಗ ಅವನ ಜೊತೇ ಸೇವಕನು ಅವನ ಪಾದಕ್ಕೆ ಬಿದ್ದು ಅವನಿಗೆ--ನನ್ನನ್ನು ತಾಳಿಕೋ; ನಾನು ನಿನ್ನದನ್ನೆಲ್ಲಾ ತೀರಿಸುತ್ತೇನೆ ಎಂದು ಅವನನ್ನು ಬೇಡಿಕೊಂಡನು. ಅವನು ಅದಕ್ಕೆ ಒಪ್ಪದೆ ಹೊರಟುಹೋಗಿ ತನ್ನ ಸಾಲವನ್ನು ತೀರಿಸುವ ವರೆಗೆ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಹೀಗೆ ಅವನ ಜೊತೆ ಸೇವಕರು ನಡೆದದ್ದನ್ನು ನೋಡಿ ಬಹಳ ವ್ಯಥೆಪಟ್ಟು ಹೋಗಿ ತಮ್ಮ ಧಣಿಗೆ ನಡೆದದ್ದೆಲ್ಲವನ್ನು ತಿಳಿಯಪಡಿಸಿದರು. ಆಗ ಅವನ ಧಣಿಯು ಅವನನ್ನು ತನ್ನ ಬಳಿಗೆ ಕರೆದು ಅವನಿಗೆ--ಓ ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ನಾನು ನಿನ್ನ ಸಾಲವನ್ನೆಲಾ ಮನ್ನಿಸಿದೆನು. ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೇ ಸೇವಕನ ಮೇಲೆ ಕರುಣೆಯನ್ನು ತೋರಿಸಬೇಕಾಗಿ ತ್ತಲ್ಲವೇ ಎಂದು ಹೇಳಿದನು. ಅವನ ಧಣಿಯು ಕೋಪಗೊಂಡು ತನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುವ ತನಕ ಅವನನ್ನು ಸಂಕಟಪಡಿಸುವವರಿಗೆ ಒಪ್ಪಿಸಿದನು.ಅದರಂತೆಯೇ ನಿಮ್ಮಲ್ಲಿ ಪ್ರತಿಯೊ ಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು.
- James 2:13 ಯಾಕೋಬನು 2:13ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ. ಕರುಣೆಯು ನ್ಯಾಯತೀರ್ಪಿಗಿಂತ ಮೇಲಾಗಿ ಹಿಗ್ಗುತ್ತದೆ.
Original words (Hebrew)
- told · H5046נָגַד nâgad
- Jotham · H3147יוֹתָם Yôwthâm
- went · H3212יָלַךְ yâlak
- stood · H5975עָמַד ʻâmad
- top · H7218רֹאשׁ rôʼsh
- mount · H2022הַר har
- Gerizim · H1630גְּרִזִים Gᵉrizîym
- up · H5375נָשָׂא nâsâʼ
- voice · H6963קוֹל qôwl
- cried · H7121קָרָא qârâʼ
- said · H559אָמַר ʼâmar
- Hearken · H8085שָׁמַע shâmaʻ
- men · H1167בַּעַל baʻal
- Shechem · H7927שְׁכֶם Shᵉkem
- God · H430אֱלֹהִים ʼĕlôhîym
- hearken · H8085שָׁמַע shâmaʻ