Lamentations · chapter 3 · verse 1
Lamentations 3:1 in Kannada
ಆತನ ಕೋಪದ ಕೋಲಿನಿಂದ ಕಷ್ಟವನ್ನು ನೋಡಿದ ಮನುಷ್ಯನು ನಾನೇ.
Aatana kopada kolininda kashtavannu nodida manushyanu naane.
Lamentations 3:1 in English
- King James Version (KJV)
- I [am] the man [that] hath seen affliction by the rod of his wrath.
- World English Bible (WEB)
- I am the man who has seen affliction by the rod of his wrath.
- American Standard Version (ASV)
- I am the man that hath seen affliction by the rod of his wrath.
- Bible in Basic English (BBE)
- I am the man who has seen trouble by the rod of his wrath.
- Darby Translation (DBY)
- I am the man that hath seen affliction by the rod of his wrath.
- Webster's Bible (WBS)
- I [am] the man [that] hath seen affliction by the rod of his wrath.
- Young's Literal Translation (YLT)
- I [am] the man [who] hath seen affliction By the rod of His wrath.
Read in context
- 1ಆತನ ಕೋಪದ ಕೋಲಿನಿಂದ ಕಷ್ಟವನ್ನು ನೋಡಿದ ಮನುಷ್ಯನು ನಾನೇ.
- 2ಆತನು ನನ್ನನ್ನು ಕರೆತಂದು ನಡಿಸಿದ್ದು ಕತ್ತಲೆಗೇ ಹೊರತು ಬೆಳಕಿಗಲ್ಲ.
- 3ನಿಶ್ಚಯವಾಗಿ ಆತನು ನನಗೆ ವಿರೋಧ ವಾಗಿ ತಿರುಗಿದ್ದಾನೆ ದಿನವೆಲ್ಲಾ ತನ್ನ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದ್ದಾನೆ.
Cross references
- Psalm 88:7 ಕೀರ್ತನೆಗಳು 88:7ನಿನ್ನ ಕೋಪವು ನನ್ನ ಮೇಲೆ ನೆಲೆಯಾಗಿದೆ; ನಿನ್ನ ಅಲೆಗಳಿಂದೆಲ್ಲಾ ನನ್ನನ್ನು ಕುಂದಿ ಸಿದ್ದೀ ಸೆಲಾ.
- Job 19:21 ಯೋಬನು 19:21ನನ್ನ ಸ್ನೇಹಿತರಾದ ನೀವೇ ನನ್ನನ್ನು ಕನಿಕರಿಸಿರಿ, ನನ್ನನ್ನು ಕನಿಕರಿಸಿರಿ; ಯಾಕಂದರೆ ದೇವರ ಕೈ ನನ್ನನ್ನು ಮುಟ್ಟಿದೆ.
- Psalm 88:15–16 ಕೀರ್ತನೆಗಳು 88:15–16ನಾನು ಕುಂದಿದವನೂ ಯೌವನದಾರಭ್ಯ ಸಾಯು ವದಕ್ಕೆ ಸಿದ್ಧನೂ ಆಗಿದ್ದೇನೆ. ನಿನ್ನ ಬೆದರಿಕೆಗಳನ್ನು ನಾನು ತಾಳುತ್ತಾ ಭ್ರಮೆಗೊಳ್ಳುತ್ತೇನೆ. ನನ್ನ ಮೇಲೆ ನಿನ್ನ ಕೋಪಾಗ್ನಿಯು ದಾಟುವದು. ನಿನ್ನ ಹೆದರಿಕೆಗಳು ನನ್ನನ್ನು ಸಂಹರಿಸುತ್ತವೆ.
- Jeremiah 15:17–18 ಯೆರೆಮೀಯ 15:17–18ನಾನು ಹಾಸ್ಯಗಾರರ ಕೂಟದಲ್ಲಿ ಕೂತುಕೊಂಡು ಉತ್ಸಾಹಪಡಲಿಲ್ಲ, ನಿನ್ನ ಕೈ ನಿಮಿತ್ತ ಒಂಟಿಯಾಗಿ ಕೂತುಕೊಂಡಿದ್ದೇನೆ; ನನ್ನನ್ನು ಉಗ್ರತೆಯಿಂದ ತುಂಬಿಸಿದ್ದೀ. ಏಕೆ ನನ್ನ ನೋವು ನಿತ್ಯವಾಗಿಯೂ ನನ್ನ ಗಾಯವು ವಾಸಿಯಾಗಲೊ ಲ್ಲದೆಯೂ ಸ್ವಸ್ಥವಾಗದೆಯೂ ಇದೆ? ನೀನು ನನಗೆ ಒಟ್ಟಾರೆ ನೀರು ಬತ್ತುವ ಕಳ್ಳ ತೊರೆಯಂತೆಯೂ ಸ್ಥಿರ ವಿಲ್ಲದ ನೀರಿನಂತೆಯೂ ಇರಬೇಕೋ.
- Isaiah 53:3 ಯೆಶಾಯ 53:3ಆತನು ಮನುಷ್ಯರಿಂದ ತಳ್ಳಲ್ಪಟ್ಟವನೂ ತಿರಸ್ಕರಿಸ ಲ್ಪಟ್ಟವನೂ ದುಃಖಿತ ಮನುಷ್ಯನೂ ಕಷ್ಟವನ್ನು ಅರಿತ ವನೂ; ನಾವು ನಮ್ಮ ಮುಖಗಳನ್ನು ಆತನಿಂದ ಮರೆ ಮಾಡಿಕೊಳ್ಳುವ ಹಾಗೆ ಧಿಕ್ಕರಿಸಲ್ಪಟ್ಟವನೂ ಆಗಿದ್ದನು. ನಾವು ಆತನನ್ನು ಲಕ್ಷಕ್ಕೆ ತರಲಿಲ್ಲ.
- Jeremiah 38:6 ಯೆರೆಮೀಯ 38:6ಆಗ ಅವರು ಯೆರೆವಿಾಯನನ್ನು ತಕ್ಕೊಂಡು ಸೆರೆಮನೆಯ ಅಂಗಳದಲ್ಲಿದ್ದ ಹಮ್ಮೇಲೆಕನ ಮಗನಾದ ಮಲ್ಕೀಯನ ಕುಣಿಯಲ್ಲಿ ಹಾಕಿದರು; ಅವರು ಯೆರೆವಿಾಯನನ್ನು ಹಗ್ಗಗಳಿಂದ ಇಳಿಸಿದರು; ಆ ಕುಣಿಯಲ್ಲಿ ನೀರು ಇರಲಿಲ್ಲ; ಕೆಸರು ಮಾತ್ರ ಇತ್ತು; ಯೆರೆವಿಾಯನು ಕೆಸರಿನಲ್ಲಿ ಮುಣುಗಿದನು.
- Lamentations 1:12–14 ಪ್ರಲಾಪಗಳು 1:12–14ಹಾದು ಹೋಗುವ ವರೆಲ್ಲರೇ, ಇದು ನಿಮಗೆ ಏನೂ ಅಲ್ಲವೋ? ಇಗೋ, ಕರ್ತನ ಕೋಪ ಉರಿಯುವ ದಿನದಲ್ಲಿ ನನ್ನನ್ನು ಸಂಕಟಪಡಿಸಿದ ನನ್ನ ದುಃಖದ ಹಾಗೆ ಬೇರೆ ಯಾವ ದುಃಖವಾದರೂ ಇದ್ದರೆ ನೋಡಿರಿ. ಆತನು ಮೇಲಿನಿಂದ ನನ್ನ ಎಲುಬುಗಳಿಗೆ ಬೆಂಕಿಯನ್ನು ಕಳುಹಿಸಿ ದ್ದಾನೆ, ಅದು ಅವುಗಳನ್ನು ವಶಪಡಿಸಿಕೊಂಡಿದೆ; ನನ್ನ ಪಾದದ ಮೇಲೆ ಒಂದು ಬಲೆಯನ್ನು ಬೀಸಿ ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ; ನನ್ನನ್ನು ದಿನವೆಲ್ಲಾ ಹಾಳಾಗಿಯೂ ಮೂರ್ಛೆ ಹೋಗುವಂತೆಯೂ ಮಾಡಿದ್ದಾನೆ. ನನ್ನ ಅಕ್ರಮಗಳ ನೊಗವು ಆತನ ಕೈಯಿಂದ ಕಟ್ಟಲ್ಪಟ್ಟಿದೆ; ಅವು ಹೆಣೆಯಲ್ಪಟ್ಟಿವೆ; ನನ್ನ ಕುತ್ತಿಗೆಯನ್ನು ಸುತ್ತಿಕೊಂಡಿವೆ; ಮೇಲೆ ಬರುತ್ತವೆ. ಆತನು ನನ್ನ ಶಕ್ತಿಯು ಕುಗ್ಗುವ ಹಾಗೆ ಮಾಡಿದನು, ಕರ್ತನು ನನ್ನನ್ನು ಅವರ ಕೈಗಳಿಗೆ ಒಪ್ಪಿಸಿ ಅವರಿಂದ ನಾನು ಎದ್ದೇಳಲು ಶಕ್ತನಾಗದಂತೆ ಮಾಡಿದ್ದಾನೆ.
- Psalm 71:20 ಕೀರ್ತನೆಗಳು 71:20ಕಠಿಣವಾದ ಇಕ್ಕಟ್ಟುಗಳನ್ನು ನೋಡಮಾಡಿದ ನನ್ನನ್ನು ನೀನು ತಿರಿಗಿ ಬದುಕಿಸಿದಿ; ಭೂಮಿಯ ಆಗಾಧ ಗಳೊಳಗಿಂದ ನನ್ನನ್ನು ಮೇಲಕ್ಕೆ ತರುತ್ತೀ.
- Jeremiah 20:14–18 ಯೆರೆಮೀಯ 20:14–18ನಾನು ಹುಟ್ಟಿದ ದಿನವು ಶಪಿಸಲ್ಪಡಲಿ, ನನ್ನ ತಾಯಿ ನನ್ನನ್ನು ಹೆತ್ತ ದಿನವು ಆಶೀರ್ವದಿಸಲ್ಪಡದಿರಲಿ. ನನ್ನ ತಂದೆಗೆ--ನಿನಗೆ ಗಂಡು ಕೂಸು ಹುಟ್ಟಿದೆ ಎಂಬ ಸಮಾಚಾರವನ್ನು ಹೇಳಿ ಬಹಳ ಸಂತೋಷ ಉಂಟು ಮಾಡಿದವನು ಶಪಿಸಲ್ಪಡಲಿ! ಕರ್ತನು ಪಶ್ಚಾತ್ತಾಪಪಡದೆ ಕೆಡವಿಬಿಟ್ಟ ಪಟ್ಟಣಗಳ ಗತಿಯು ಅವನಿಗೆ ಬರಲಿ; ಅವನು ಬೆಳಿಗ್ಗೆ ಕೂಗನ್ನೂ ಮಧ್ಯಾಹ್ನ ದಲ್ಲಿ ಆರ್ಭಟವನ್ನೂ ಕೇಳಲಿ ನಾನು ಗರ್ಭಬಿಟ್ಟಾ ಗಲೇ ಆತನು ನನ್ನನ್ನು ಕೊಲ್ಲದೆ ಹೋದದ್ದರಿಂದ ಇಲ್ಲವೆ ನನ್ನ ತಾಯಿ ನನಗೆ ಸಮಾಧಿಯಾಗಿದ್ದು ಅವಳ ಗರ್ಭವು ನಿತ್ಯವಾಗಿ ಬಸುರಾಗಿಯೇ ಇದ್ದರೆ ಒಳ್ಳೇದಾ ಗಿತ್ತು.ನಾನು ಕಷ್ಟವನ್ನೂ ಚಿಂತೆಯನ್ನೂ ನೋಡುವ ದಕ್ಕೂ ನನ್ನ ದಿನಗಳು ನಾಚಿಕೆಯಲ್ಲಿ ಕಳೆದುಹೋಗು ವದಕ್ಕೂ ಗರ್ಭದಿಂದ ಹೊರಗೆ ಬಂದದ್ದು ಯಾಕೆ? ನಾನು ಕಷ್ಟವನ್ನೂ ಚಿಂತೆಯನ್ನೂ ನೋಡುವ ದಕ್ಕೂ ನನ್ನ ದಿನಗಳು ನಾಚಿಕೆಯಲ್ಲಿ ಕಳೆದುಹೋಗು ವದಕ್ಕೂ ಗರ್ಭದಿಂದ ಹೊರಗೆ ಬಂದದ್ದು ಯಾಕೆ?