Lamentations · chapter 3 · verse 15
Lamentations 3:15 in Kannada
ಆತನು ನನ್ನನ್ನು ಕಹಿಯಿಂದ ತುಂಬಿಸಿ ಮಾಚಿ ಪತ್ರೆಯಿಂದ ನನ್ನನ್ನು ಅಮಲೇರಿಸಿದ್ದಾನೆ.
Aatanu nannannu kahiyinda tumbisi maachi patreyinda nannannu amalerisiddaane.
Lamentations 3:15 in English
- King James Version (KJV)
- He hath filled me with bitterness, he hath made me drunken with wormwood.
- World English Bible (WEB)
- He has filled me with bitterness. He has stuffed me with wormwood.
- American Standard Version (ASV)
- He hath filled me with bitterness, he hath sated me with wormwood.
- Bible in Basic English (BBE)
- He has made my life nothing but pain, he has given me the bitter root in full measure.
- Darby Translation (DBY)
- He hath sated me with bitterness, he hath made me drunk with wormwood.
- Webster's Bible (WBS)
- He hath filled me with bitterness, he hath made me drunken with wormwood.
- Young's Literal Translation (YLT)
- He hath filled me with bitter things, He hath filled me [with] wormwood.
Read in context
- 13ಆತನು ತನ್ನ ಬತ್ತಳಿಕೆಯಲ್ಲಿನ ಬಾಣಗಳು ನನ್ನ ಅಂತರಂಗಗಳಲ್ಲಿ ತೂರಿಹೋಗುವ ಹಾಗೆ ಮಾಡಿ ದ್ದಾನೆ.
- 14ನಾನು ನನ್ನ ಎಲ್ಲಾ ಜನರಿಗೆ ಹಾಸ್ಯವೂ ದಿನವೆಲ್ಲವೂ ಅವರ ಹಾಡಾಗಿಯೂ ಇದ್ದೇನೆ.
- 15ಆತನು ನನ್ನನ್ನು ಕಹಿಯಿಂದ ತುಂಬಿಸಿ ಮಾಚಿ ಪತ್ರೆಯಿಂದ ನನ್ನನ್ನು ಅಮಲೇರಿಸಿದ್ದಾನೆ.
- 16ಆತನು ನುರುಜು ಕಲ್ಲುಗಳಿಂದ ನನ್ನ ಹಲ್ಲುಗಳನ್ನು ಮುರಿದು ನನ್ನನ್ನು ಬೂದಿಯಿಂದ ಮುಚ್ಚಿದ್ದಾನೆ.
- 17ನನ್ನ ಪ್ರಾಣವನ್ನು ಸಮಾಧಾನದಿಂದ ದೂರಮಾಡಿದ್ದಾನೆ; ನಾನು ಏಳಿಗೆಯನ್ನು ಮರೆತುಬಿಟ್ಟೆನು.
Cross references
- Jeremiah 9:15 ಯೆರೆಮೀಯ 9:15ಈ ಕಾರಣದಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ; ಇಗೋ, ನಾನು ಅವರಿಗೆ, ಹೌದು, ಈ ಜನರಿಗೆ, ಮಾಚಿಪತ್ರೆಯನ್ನು ತಿನ್ನುವದಕ್ಕೆ ಕೊಡು ತ್ತೇನೆ. ವಿಷದ ನೀರನ್ನು ಅವರಿಗೆ ಕುಡಿಯಲು ಕೊಡು ತ್ತೇನೆ.
- Job 9:18 ಯೋಬನು 9:18ನನ್ನ ಉಸಿರು ತಕ್ಕೊಳ್ಳದಂತೆ ಮಾಡಿ ಕಹಿ ಯಾದವುಗಳಿಂದ ನನ್ನನ್ನು ತುಂಬಿಸುತ್ತಾನೆ.
- Psalm 60:3 ಕೀರ್ತನೆಗಳು 60:3ನಿನ್ನ ಜನರಿಗೆ ಕಠಿಣವಾದವುಗಳನ್ನು ನೀನು ತೋರಿಸಿದ್ದೀ; ವಿಸ್ಮಯದ ದ್ರಾಕ್ಷಾರಸವನ್ನು ನಮಗೆ ಕುಡಿಸಿದ್ದೀ.
- Lamentations 3:19 ಪ್ರಲಾಪಗಳು 3:19ನನ್ನ ಸಂಕಟವನ್ನು ಹಿಂಸೆಯನ್ನು ಮಾಚಿಪತ್ರೆಯನ್ನು ವಿಷವನ್ನು ಇವುಗಳನ್ನು ಜ್ಞಾಪಕಮಾಡಿಕೊಂಡೆನು.
- Jeremiah 25:27 ಯೆರೆಮೀಯ 25:27ಆದದರಿಂದ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನಾನು ನಿಮ್ಮ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತವೇ ಕುಡಿಯಿರಿ, ಮತ್ತರಾಗಿರಿ, ಕಾರಿರಿ, ಬೀಳಿರಿ, ಇನ್ನು ಮೇಲೆ ತಿರುಗಿ ಏಳದಿರ್ರಿ.
- Isaiah 51:17–22 ಯೆಶಾಯ 51:17–22ಕರ್ತನ ಕೈಯಿಂದ ಆತನ ಉಗ್ರದ ಪಾತ್ರೆಯನ್ನು ಕುಡಿದ ಓ ಯೆರೂಸಲೇಮೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಎದ್ದೇಳು; ನೀನು ತತ್ತರಗೊಳಿಸುವಂಥ ಪಾತ್ರೆಯಲ್ಲಿದ್ದ ಮಡ್ಡಿಯನ್ನು ಕುಡಿದು ಹೀರಿಬಿಟ್ಟಿದ್ದೀ. ಅವಳು ಹೆತ್ತ ಎಲ್ಲಾ ಕುಮಾರರಲ್ಲಿ ಅವಳನ್ನು ನಡಿಸುವದಕ್ಕೆ ಒಬ್ಬನೂ ಇಲ್ಲ; ಇಲ್ಲವೆ ಅವಳು ಬೆಳೆ ಸಿದ ಎಲ್ಲಾ ಕುಮಾರರಲ್ಲಿ ಅವಳ ಕೈಯನ್ನು ಹಿಡಿ ಯುವವನು ಒಬ್ಬನೂ ಇಲ್ಲ. ಈ ಎರಡು ಸಂಗತಿ ಗಳು ನಿನಗೆ ಸಂಭವಿಸಿವೆ; ನಿನಗೋಸ್ಕರ ಚಿಂತಿಸು ವವರು ಯಾರಿದ್ದಾರೆ? ನಾಶನವೋ ಸಂಹಾರವೋ ಕ್ಷಾಮವೋ ಕತ್ತಿಯೋ ನಾನು ಯಾರಿಂದ ನಿನ್ನನ್ನು ಆಧರಿಸಲಿ? ನಿನ್ನ ಕುಮಾರರು ಮೂರ್ಛೆ ಹೋಗಿ, ಬಲೆಗೆ ಸಿಕ್ಕಿದ ಕಾಡು ಗೂಳಿಗಳಂತೆ ಎಲ್ಲಾ ಬೀದಿಗಳು ಕೂಡುವ ಚೌಕದಲ್ಲಿ ಅವರು ಬಿದ್ದಿದ್ದಾರೆ; ಅವರು ಕರ್ತನ ಉಗ್ರದಿಂದಲೂ ನಿನ್ನ ದೇವರ ಗದರಿಕೆ ಯಿಂದಲೂ ತುಂಬಿದ್ದಾರೆ. ನೀನು ಹಿಂಸೆಗೊಳ ಗಾಗಿದ್ದೀ ಮತ್ತು ಕುಡಿದು ಅಮಲೇರಿದ್ದೀ. ಆದರೆ ದ್ರಾಕ್ಷಾರಸದಿಂದಲ್ಲ, ಆದದರಿಂದ ಈಗ ಇದನ್ನು ಕೇಳು, ತನ್ನ ಜನರಿಗೋಸ್ಕರ ವಾದಿಸುವ ನಿನ್ನ ದೇವರೂ ನಿನ್ನ ಕರ್ತನಾಗಿರುವ ಕರ್ತನೂ ಹೀಗನ್ನು ತ್ತಾನೆ--ಇಗೋ, ನಾನು ನಿನ್ನ ಕೈಯೊಳಗಿಂದ ತತ್ತರಿಸು ವಂಥ ಪಾತ್ರೆಯನ್ನೂ ನನ್ನ ಉಗ್ರವಾದ ಪಾತ್ರೆಯ ಮಡ್ಡಿಯನ್ನೂ ತೆಗೆದುಹಾಕಿದ್ದೇನೆ; ಇನ್ನು ಮೇಲೆ ನೀನು ಅದನ್ನು ತಿರಿಗಿ ಕುಡಿಯುವದೇ ಇಲ್ಲ.ಆದರೆ ನಾವು ಹಾದುಹೋಗುವಂತೆ ಬಗ್ಗಿಕೋ ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ; ನೀನು ಹಾದುಹೋಗುವ ವರಿಗೆ ನಿನ್ನ ಶರೀರವನ್ನು ನೆಲದಂತೆಯೂ ಬೀದಿ ಯಂತೆಯೂ ಇಟ್ಟಿಯಲ್ಲಾ.
- Ruth 1:20 ರೂತಳು 1:20ಆಗ ಆಕೆಯು ಅವರಿಗೆ ನನ್ನನ್ನು ನೊವೊಮಿ ಎಂದು ಕರೆಯಬೇಡಿರಿ; ಮಾರಾ ಎಂದು ಕರೆಯಿರಿ; ಯಾಕಂದರೆ ಸರ್ವಶಕ್ತನು ನನ್ನನ್ನು ಬಹು ದುಃಖದಲ್ಲಿ ನಡಿಸಿದನು.
- Jeremiah 23:15 ಯೆರೆಮೀಯ 23:15ಆದದರಿಂದ ಸೈನ್ಯಗಳ ಕರ್ತನು ಪ್ರವಾದಿಗಳ ವಿಷಯದಲ್ಲಿ ಹೇಳುವದೇನಂದರೆ--ಇಗೋ, ನಾನು ಅವರಿಗೆ ಮಾಚಿಪತ್ರೆಯನ್ನು ತಿನ್ನುವದಕ್ಕೆ ಕೊಡುತ್ತೇನೆ ವಿಷದ ನೀರನ್ನು ಕುಡಿಯಕೊಡುತ್ತೇನೆ; ಯೆರೂಸಲೇ ಮಿನ ಪ್ರವಾದಿಗಳ ಕಡೆಯಿಂದ ಭ್ರಷ್ಟತ್ವವು ದೇಶಕ್ಕೆಲ್ಲಾ ಹರಡಿದೆ.
- Jeremiah 25:15–18 ಯೆರೆಮೀಯ 25:15–18ಇಸ್ರಾಯೇಲಿನ ದೇವರಾದ ಕರ್ತನು ನನಗೆ ಹೀಗೆ ಹೇಳುತ್ತಾನೆ--ಈ ರೌದ್ರದ ದ್ರಾಕ್ಷಾರಸ ಪಾತ್ರೆ ಯನ್ನು, ನಾನು ನಿನ್ನನ್ನು ಕಳುಹಿಸುವ ಎಲ್ಲಾ ಜನಾಂಗಗಳು ಅದನ್ನು ಕುಡಿಯುವಂತೆ ನನ್ನ ಕೈಯಿಂದ ತಕ್ಕೋ. ಆಗ ಅವರು ಕುಡಿದು ನಾನು ಅವರ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತ ಕದಲಿ ಹುಚ್ಚರಾಗುವರು ಅಂದನು. ಆಗ ನಾನು ಪಾತ್ರೆಯನ್ನು ಕರ್ತನ ಕೈಯಿಂದ ತಕ್ಕೊಂಡು ಕರ್ತನು ನನ್ನನ್ನು ಕಳುಹಿಸಿದ ಎಲ್ಲಾ ಜನಾಂಗಗಳಿಗೆ ಕುಡಿಸಿದೆನು. ಯೆರೂಸ ಲೇಮಿಗೂ ಯೆಹೂದದ ಪಟ್ಟಣಗಳಿಗೂ ಅದರ ಅರಸುಗಳಿಗೂ ಪ್ರಭುಗಳಿಗೂ ಅವರನ್ನು ಇಂದಿನ ಪ್ರಕಾರ ಹಾಳುಮಾಡಿ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ಶಾಪಕ್ಕೂ ಗುರಿಮಾಡುವ ಹಾಗೆ ಕುಡಿಸಿದೆನು.