Lamentations · chapter 3 · verse 17
Lamentations 3:17 in Kannada
ನನ್ನ ಪ್ರಾಣವನ್ನು ಸಮಾಧಾನದಿಂದ ದೂರಮಾಡಿದ್ದಾನೆ; ನಾನು ಏಳಿಗೆಯನ್ನು ಮರೆತುಬಿಟ್ಟೆನು.
Nanna praanavannu samaadhaanadinda dooramaadiddaane; naanu eligeyannu maretubittenu.
Lamentations 3:17 in English
- King James Version (KJV)
- And thou hast removed my soul far off from peace: I forgat prosperity.
- World English Bible (WEB)
- You have removed my soul far away from peace. I forgot prosperity.
- American Standard Version (ASV)
- And thou hast removed my soul far off from peace; I forgat prosperity.
- Bible in Basic English (BBE)
- My soul is sent far away from peace, I have no more memory of good.
- Darby Translation (DBY)
- And thou hast removed my soul far off from peace: I have forgotten prosperity.
- Webster's Bible (WBS)
- And thou hast removed my soul far off from peace: I forgat prosperity.
- Young's Literal Translation (YLT)
- And Thou castest off from peace my soul, I have forgotten prosperity.
Read in context
- 15ಆತನು ನನ್ನನ್ನು ಕಹಿಯಿಂದ ತುಂಬಿಸಿ ಮಾಚಿ ಪತ್ರೆಯಿಂದ ನನ್ನನ್ನು ಅಮಲೇರಿಸಿದ್ದಾನೆ.
- 16ಆತನು ನುರುಜು ಕಲ್ಲುಗಳಿಂದ ನನ್ನ ಹಲ್ಲುಗಳನ್ನು ಮುರಿದು ನನ್ನನ್ನು ಬೂದಿಯಿಂದ ಮುಚ್ಚಿದ್ದಾನೆ.
- 17ನನ್ನ ಪ್ರಾಣವನ್ನು ಸಮಾಧಾನದಿಂದ ದೂರಮಾಡಿದ್ದಾನೆ; ನಾನು ಏಳಿಗೆಯನ್ನು ಮರೆತುಬಿಟ್ಟೆನು.
- 18ನನ್ನ ಬಲವೂ ನಿರೀಕ್ಷೆಯೂ ಕರ್ತನಿಂದ ನಾಶವಾದವೆಂದು ಹೇಳಿ
- 19ನನ್ನ ಸಂಕಟವನ್ನು ಹಿಂಸೆಯನ್ನು ಮಾಚಿಪತ್ರೆಯನ್ನು ವಿಷವನ್ನು ಇವುಗಳನ್ನು ಜ್ಞಾಪಕಮಾಡಿಕೊಂಡೆನು.
Cross references
- Isaiah 59:11 ಯೆಶಾಯ 59:11ನಾವೆಲ್ಲರೂ ಕರಡಿಗಳ ಹಾಗೆ ಗುರುಗುಟ್ಟುತ್ತೇವೆ; ಪಾರಿವಾಳಗಳ ಹಾಗೆ ಬಹಳವಾಗಿ ಮೂಲ್ಗುತ್ತೇವೆ; ನ್ಯಾಯಕ್ಕಾಗಿ ಕಾದುಕೊಳ್ಳುತ್ತೇವೆ, ಆದರೆ ಅದು ಇಲ್ಲವೇ ಇಲ್ಲ; ರಕ್ಷಣೆಯಾದರೋ ಅದು ನಮಗೆ ದೂರವಾಗಿದೆ.
- Isaiah 54:10 ಯೆಶಾಯ 54:10ಪರ್ವತಗಳು ಹೊರಟುಹೋಗುವವು, ಮತ್ತು ಗುಡ್ಡಗಳು ತೆಗೆದುಹಾಕಲ್ಪಡುವವು; ಆದರೆ ನನ್ನ ದಯೆಯು ನಿನ್ನನ್ನು ಬಿಟ್ಟುಹೋಗದು ಇಲ್ಲವೆ ನನ್ನ ಸಮಾಧಾನದ ಒಡಂಬಡಿಕೆಯು ತೆಗೆಯಲ್ಪಡುವದಿಲ್ಲ ಎಂದು ನಿನ್ನ ಮೇಲೆ ಕರುಣೆಯನ್ನು ಇಟ್ಟಿರುವ ಕರ್ತನು ಹೇಳುತ್ತಾನೆ.
- Genesis 41:30 ಆದಿಕಾಂಡ 41:30ಅವುಗಳ ಹಿಂದೆ ಏಳು ವರುಷಗಳ ಬರಗಾಲ ಬರುತ್ತವೆ. ಆಗ ಐಗುಪ್ತದಲ್ಲಿದ್ದ ಸುಭಿಕ್ಷೆಯು ಮರೆಯುವದು. ಇದಲ್ಲದೆ ಬರಗಾಲವು ದೇಶವನ್ನು ನಾಶಮಾಡುವದು.
- Psalm 119:155 ಕೀರ್ತನೆಗಳು 119:155ದುಷ್ಟರಿಗೆ ರಕ್ಷಣೆಯು ದೂರವಾಗಿದೆ; ನಿನ್ನ ನಿಯ ಮಗಳನ್ನು ಅವರು ಹುಡುಕರು.
- Lamentations 1:16 ಪ್ರಲಾಪಗಳು 1:16ಇವುಗಳ ನಿಮಿತ್ತ ನಾನು ಅಳುತ್ತೇನೆ; ಕಣ್ಣೀರು ಧಾರೆಧಾರೆಯಾಗಿ ಸುರಿಯುವದು, ನನ್ನನ್ನು ಆದರಿಸುವಾತನೂ ನನ್ನ ಪ್ರಾಣವನ್ನು ಬದುಕಿಸುವ ಆದರಿಕನೂ ನನ್ನಿಂದ ದೂರವಾಗಿದ್ದಾನೆ; ನನ್ನ ಮಕ್ಕಳು ಹಾಳಾಗಿದ್ದಾರೆ, ನನ್ನ ಶತ್ರುವು ಗೆದ್ದಿದ್ದಾನೆ.
- Jeremiah 14:19 ಯೆರೆಮೀಯ 14:19ನೀನು ಯೆಹೂದವನ್ನು ಪೂರ್ಣವಾಗಿ ತಳ್ಳಿ ದ್ದೀಯೋ? ನಿನ್ನ ಪ್ರಾಣವು ಚೀಯೋನನ್ನು ಅಸಹ್ಯಿ ಸುತ್ತದೋ? ನಮ್ಮನ್ನು ಯಾಕೆ ಹೊಡೆದಿದ್ದೀ? ನಮಗೆ ಗುಣವಾಗಲಿಲ್ಲ; ಸಮಾಧಾನವನ್ನು ನಿರೀಕ್ಷಿಸಿದೆವು, ಆದರೆ ಒಳ್ಳೇದೆನೂ ಇಲ್ಲ; ಗುಣವಾಗುವ ಕಾಲವನ್ನು ಸಹ ನಿರೀಕ್ಷಿಸಿದೆವು, ಆದರೆ ಇಗೋ, ಸಂಕಟ!
- Jeremiah 8:15 ಯೆರೆಮೀಯ 8:15ಸಮಾ ಧಾನಕ್ಕೆ ಕಾದುಕೊಂಡೆವು, ಒಳ್ಳೇದೇನೂ ಬರಲಿಲ್ಲ; ಆರೋಗ್ಯದ ಸಮಯಕ್ಕೆ ಕಾದಿದ್ದೆವು; ಇಗೋ, ಕಳ ವಳವನ್ನು ನೋಡುತ್ತೇವೆ.
- Jeremiah 16:5 ಯೆರೆಮೀಯ 16:5ಕರ್ತನು ಹೀಗೆ ಹೇಳುತ್ತಾನೆ--ದುಃಖದ ಮನೆ ಯಲ್ಲಿ ಪ್ರವೇಶಿಸಬೇಡ, ಅವರ ಸಂಗಡ ಗೋಳಾಡು ವದಕ್ಕೂ ದುಃಖಪಡುವದಕ್ಕೂ ಹೋಗಬೇಡ; ನಾನು ನನ್ನ ಸಮಾಧಾನವನ್ನೂ ಕೃಪೆಯನ್ನೂ ಕರುಣೆಯನ್ನೂ ಈ ಜನರಿಂದ ತೆಗೆದುಹಾಕಿದ್ದೇನೆಂದು ಕರ್ತನು ಅನ್ನುತ್ತಾನೆ.
- Job 7:7 ಯೋಬನು 7:7ನನ್ನ ಜೀವವು ಗಾಳಿ ಯಂತಿದೆ ಎಂದು ಜ್ಞಾಪಕಮಾಡಿಕೋ, ನನ್ನ ಕಣ್ಣು ತಿರುಗಿ ಒಳ್ಳೆಯದನ್ನು ನೋಡದು.
- Zechariah 8:10 ಜೆಕರ್ಯ 8:10ಈ ದಿವಸಗಳಿಗಿಂತ ಮುಂಚೆ ಮನುಷ್ಯನಿಗೆ ಕೂಲಿ ಇರಲಿಲ್ಲ, ಪಶುಗಳಿಗೆ ಕೂಲಿ ಇರಲಿಲ್ಲ; ಇಲ್ಲವೆ ಹೋಗುವವ ನಿಗೂ ಬರುವವನಿಗೂ ಇಕ್ಕಟ್ಟಿನ ದೆಸೆಯಿಂದ ಸಮಾ ಧಾನವಿರಲಿಲ್ಲ. ನಾನು ಜನರೆಲ್ಲರಲ್ಲಿ ಪ್ರತಿಯೊಬ್ಬನನ್ನು ತನ್ನ ನೆರೆಯವನಿಗೆ ವಿರೋಧವಾಗಿ ಇಟ್ಟಿದ್ದೆನು.
- Jeremiah 20:14–18 ಯೆರೆಮೀಯ 20:14–18ನಾನು ಹುಟ್ಟಿದ ದಿನವು ಶಪಿಸಲ್ಪಡಲಿ, ನನ್ನ ತಾಯಿ ನನ್ನನ್ನು ಹೆತ್ತ ದಿನವು ಆಶೀರ್ವದಿಸಲ್ಪಡದಿರಲಿ. ನನ್ನ ತಂದೆಗೆ--ನಿನಗೆ ಗಂಡು ಕೂಸು ಹುಟ್ಟಿದೆ ಎಂಬ ಸಮಾಚಾರವನ್ನು ಹೇಳಿ ಬಹಳ ಸಂತೋಷ ಉಂಟು ಮಾಡಿದವನು ಶಪಿಸಲ್ಪಡಲಿ! ಕರ್ತನು ಪಶ್ಚಾತ್ತಾಪಪಡದೆ ಕೆಡವಿಬಿಟ್ಟ ಪಟ್ಟಣಗಳ ಗತಿಯು ಅವನಿಗೆ ಬರಲಿ; ಅವನು ಬೆಳಿಗ್ಗೆ ಕೂಗನ್ನೂ ಮಧ್ಯಾಹ್ನ ದಲ್ಲಿ ಆರ್ಭಟವನ್ನೂ ಕೇಳಲಿ ನಾನು ಗರ್ಭಬಿಟ್ಟಾ ಗಲೇ ಆತನು ನನ್ನನ್ನು ಕೊಲ್ಲದೆ ಹೋದದ್ದರಿಂದ ಇಲ್ಲವೆ ನನ್ನ ತಾಯಿ ನನಗೆ ಸಮಾಧಿಯಾಗಿದ್ದು ಅವಳ ಗರ್ಭವು ನಿತ್ಯವಾಗಿ ಬಸುರಾಗಿಯೇ ಇದ್ದರೆ ಒಳ್ಳೇದಾ ಗಿತ್ತು.ನಾನು ಕಷ್ಟವನ್ನೂ ಚಿಂತೆಯನ್ನೂ ನೋಡುವ ದಕ್ಕೂ ನನ್ನ ದಿನಗಳು ನಾಚಿಕೆಯಲ್ಲಿ ಕಳೆದುಹೋಗು ವದಕ್ಕೂ ಗರ್ಭದಿಂದ ಹೊರಗೆ ಬಂದದ್ದು ಯಾಕೆ? ನಾನು ಕಷ್ಟವನ್ನೂ ಚಿಂತೆಯನ್ನೂ ನೋಡುವ ದಕ್ಕೂ ನನ್ನ ದಿನಗಳು ನಾಚಿಕೆಯಲ್ಲಿ ಕಳೆದುಹೋಗು ವದಕ್ಕೂ ಗರ್ಭದಿಂದ ಹೊರಗೆ ಬಂದದ್ದು ಯಾಕೆ?
- Isaiah 38:17 ಯೆಶಾಯ 38:17ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ.