Lamentations · chapter 3 · verse 59
Lamentations 3:59 in Kannada
ಓ ಕರ್ತನೇ, ನೀನು ನನ್ನ ಅನ್ಯಾಯವನ್ನು ನೋಡಿದ್ದೀ, ನನಗೆ ನ್ಯಾಯವನ್ನು ತೀರಿಸು.
O kartane, neenu nanna anyaayavannu nodiddee, nanage nyaayavannu teerisu.
Lamentations 3:59 in English
- King James Version (KJV)
- O LORD, thou hast seen my wrong: judge thou my cause.
- World English Bible (WEB)
- LORD, you have seen my wrong. Judge my cause.
- American Standard Version (ASV)
- O Jehovah, thou hast seen my wrong; judge thou my cause.
- Bible in Basic English (BBE)
- O Lord, you have seen my wrong; be judge in my cause.
- Darby Translation (DBY)
- Jehovah, thou hast seen my wrong: judge thou my cause.
- Webster's Bible (WBS)
- O LORD, thou hast seen my wrong: judge thou my cause.
- Young's Literal Translation (YLT)
- Thou hast seen, O Jehovah, my overthrow, Judge Thou my cause.
Read in context
- 57ನಾನು ನಿನ್ನನ್ನು ಕರೆದ ದಿನದಲ್ಲಿ ನೀನು ಸವಿಾಪಕ್ಕೆ ಬಂದು--ಭಯಪಡ ಬೇಡ ಎಂದು ಹೇಳಿದಿ.
- 58ಓ ಕರ್ತನೇ, ನೀನು ನನ್ನ ಪ್ರಾಣದ ವ್ಯಾಜ್ಯಗಳನ್ನು ನಡಿಸಿ ನನ್ನ ಜೀವವನ್ನು ವಿಮೋಚಿಸಿದ್ದೀ.
- 59ಓ ಕರ್ತನೇ, ನೀನು ನನ್ನ ಅನ್ಯಾಯವನ್ನು ನೋಡಿದ್ದೀ, ನನಗೆ ನ್ಯಾಯವನ್ನು ತೀರಿಸು.
- 60ಅವರ ಎಲ್ಲಾ ಪ್ರತೀಕಾರವನ್ನೂ ನನಗೆ ವಿರುದ್ಧವಾದ ಅವರ ಎಲ್ಲಾ ಕಲ್ಪನೆಗಳನ್ನೂ ನೀನು ನೋಡಿರುವಿ.
- 61ಓ ಕರ್ತನೇ, ಅವರ ನಿಂದೆಯನ್ನೂ ನನಗೆ ವಿರುದ್ಧವಾದ ಅವರ ಎಲ್ಲಾ ಕಲ್ಪನೆಗಳನ್ನೂ ನನಗೆ ವಿರುದ್ಧವಾಗಿ ಹೇಳುವವರ ತುಟಿಗಳನ್ನೂ
Cross references
- Psalm 43:1 ಕೀರ್ತನೆಗಳು 43:1ಓ ದೇವರೇ, ನನಗೆ ನ್ಯಾಯತೀರಿಸು. ಭಕ್ತಿ ಇಲ್ಲದ ಜನಾಂಗದ ಸಂಗಡ ನನ್ನ ನ್ಯಾಯವನ್ನು ವಾದಿಸು; ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ ನನ್ನನ್ನು ತಪ್ಪಿಸು.
- Psalm 9:4 ಕೀರ್ತನೆಗಳು 9:4ನೀನು ನನ್ನ ನ್ಯಾಯ ವನ್ನೂ ವ್ಯಾಜ್ಯವನ್ನೂ ಸ್ಥಾಪಿಸಿದ್ದೀ. ನೀತಿಯುಳ್ಳ ನ್ಯಾಯಾ ಧಿಪತಿಯಾಗಿ ಸಿಂಹಾಸನದಲ್ಲಿ ಕೂತುಕೊಂಡಿದ್ದೀ.
- Psalm 35:1 ಕೀರ್ತನೆಗಳು 35:1ಓ ಕರ್ತನೇ, ನನ್ನ ಸಂಗಡ ವ್ಯಾಜ್ಯವಾಡುವವರೊಡನೆ ಸಂಗಡ ವ್ಯಾಜ್ಯವಾಡು; ನನಗೆ ವಿರೋಧವಾಗಿ ಯುದ್ಧಮಾಡುವವರ ಸಂಗಡ ಯುದ್ಧ ಮಾಡು.
- 1 Peter 2:23 1 ಪೇತ್ರನು 2:23ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನು ಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿದನು.
- Psalm 26:1 ಕೀರ್ತನೆಗಳು 26:1ಓ ಕರ್ತನೇ, ನನಗೆ ನ್ಯಾಯತೀರಿಸು; ಯಾಕಂದರೆ ನಾನು ನನ್ನ ಯಥಾರ್ಥತ್ವ ದಲ್ಲಿ ನಡೆದುಕೊಂಡಿದ್ದೇನೆ. ನಾನು ಕರ್ತನಲ್ಲಿ ಭರ ವಸವಿಟ್ಟಿದ್ದೇನೆ; ನಾನು ಕದಲುವದಿಲ್ಲ.
- Genesis 31:42 ಆದಿಕಾಂಡ 31:42ಅಬ್ರಹಾಮನ ದೇವರೂ ನನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಸೇವಿಸುವ ದೇವರೂ ನನ್ನೊಂದಿಗೆ ಇಲ್ಲದೆ ಹೋಗಿದ್ದರೆ ನಿಜವಾಗಿಯೂ ನನ್ನನ್ನು ಬರಿಗೈಯಿಂದ ಕಳುಹಿಸುತ್ತಿದ್ದಿ; ನನ್ನ ಬಾಧೆ ಯನ್ನೂ ನನ್ನ ಕೈ ಕಷ್ಟವನ್ನೂ ದೇವರು ನೋಡಿ ನಿನ್ನೆ ರಾತ್ರಿ ನಿನ್ನನ್ನು ಗದರಿಸಿದನು ಅಂದನು.
- Jeremiah 37:1–21 ಯೆರೆಮೀಯ 37:1–21ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದ ದೇಶದಲ್ಲಿ ಅರಸನಾಗಿ ಇಟ್ಟ ಯೆಹೋಯಾಕೀಮನ ಮಗನಾದ ಕೊನ್ಯನಿಗೆ ಬದ ಲಾಗಿ ಯೋಷೀಯನ ಮಗನಾದ ಚಿದ್ಕೀಯನು ಅರಸ ನಾಗಿ ಆಳಿದನು. ಆದರೆ ಕರ್ತನು ಪ್ರವಾದಿಯಾದ ಯೆರೆವಿಾಯನಿಂದ ಹೇಳಿಸಿದ ವಾಕ್ಯಗಳಿಗೆ ಅವನೂ ಅವನ ಸೇವಕರೂ ದೇಶದ ಜನರೂ ಕಿವಿಗೊಡಲಿಲ್ಲ. ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನೂ ಯಾಜಕನಾದ ಮಾಸೇಯನ ಮಗನಾದ ಚೆಫನ್ಯನನ್ನೂ ಪ್ರವಾದಿಯಾದ ಯೆರೆವಿಾಯನ ಬಳಿಗೆ ಕಳುಹಿಸಿ--ನಮ್ಮ ದೇವರಾದ ಕರ್ತನಿಗೆ ನಮಗೋಸ್ಕರ ಪ್ರಾರ್ಥನೆ ಮಾಡೆಂದು ಹೇಳಿಸಿದನು. ಆಗ ಯೆರೆವಿಾಯನು ಜನರೊಳಗೆ ಬರುತ್ತಾ ಹೋಗುತ್ತಾ ಇದ್ದನು; ಯಾಕಂದರೆ ಅವರು ಅವನನ್ನು ಸೆರೆಮನೆಯಲ್ಲಿ ಇಡಲಿಲ್ಲ. ಫರೋಹನ ಸೈನ್ಯವು ಐಗುಪ್ತದಿಂದ ಹೊರಟಿತು; ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಿದ್ದ ಕಸ್ದೀಯರು ಅದರ ಸುದ್ದಿಯನ್ನು ಕೇಳಿ ಯೆರೂಸಲೇಮನ್ನು ಬಿಟ್ಟುಹೋದರು. ಆಗ ಕರ್ತನ ವಾಕ್ಯವು ಪ್ರವಾದಿಯಾದ ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ--ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ನನ್ನ ಬಳಿಯಲ್ಲಿ ವಿಚಾರಿಸುವದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದೇನಂದರೆ--ಇಗೋ, ನಿಮ್ಮ ಸಹಾಯಕ್ಕೆ ಹೊರಟ ಫರೋಹನ ಸೈನ್ಯವು ಅದರ ಸ್ವದೇಶವಾದ ಐಗುಪ್ತಕ್ಕೆ ಹಿಂತಿರುಗುವದು. ಕಸ್ದೀಯರು ತಿರುಗಿಕೊಂಡು ಈ ಪಟ್ಟಣಕ್ಕೆ ವಿರೋಧ ವಾಗಿ ಯುದ್ಧಮಾಡಿ ಅದನ್ನು ಹಿಡಿದು ಬೆಂಕಿಯಿಂದ ಸುಡುವರು. ಕರ್ತನು ಹೀಗೆ ಹೇಳುತ್ತಾನೆ--ಕಸ್ದೀ ಯರು ನಿಜವಾಗಿ ನಮ್ಮನ್ನು ಬಿಟ್ಟುಹೋಗುವರೆಂದು ನಿಮಗೆ ನೀವೇ ಮೋಸಪಡಿಸಿಕೊಳ್ಳಬೇಡಿರಿ; ಅವರು ತೊಲಗುವದೇ ಇಲ್ಲ. ನಿಮ್ಮ ಸಂಗಡ ಯುದ್ಧ ಮಾಡುವ ಕಸ್ದೀಯರ ಸೈನ್ಯವನ್ನೆಲ್ಲಾ ನೀವು ಹೊಡೆದಿ ದ್ದಾಗ್ಯೂ ಗಾಯಪಟ್ಟ ಮನುಷ್ಯರು ಮಾತ್ರ ಅವರೊಳಗೆ ಉಳಿದಿದ್ದಾಗ್ಯೂ ಅವರೇ ತಮ್ಮ ತಮ್ಮ ಡೇರೆಗಳಲ್ಲಿ ಎದ್ದು ಈ ಪಟ್ಟಣವನ್ನು ಬೆಂಕಿಯಿಂದ ಸುಡುವರು. ಕಸ್ದೀಯರ ದಂಡು ಫರೋಹನ ದಂಡಿನ ಭಯದ ನಿಮಿತ್ತ ಯೆರೂಸಲೇಮನ್ನು ಬಿಟ್ಟು ಹೋದಮೇಲೆ ಯೆರೆವಿಾಯನು ಬೆನ್ಯಾವಿಾನನ ದೇಶಕ್ಕೆ ಹೋಗು ವದಕ್ಕೂ ಜನರ ಮಧ್ಯದಿಂದ ತನ್ನ ಪಾಲನ್ನು ತಕ್ಕೊಳ್ಳು ವದಕ್ಕೂ ಯೆರೂಸಲೇಮಿನಿಂದ ಹೊರಟನು. ಆಗ ಅವನು ಬೆನ್ಯಾವಿಾನನ ಬಾಗಲಲ್ಲಿ ಇರುವಾಗ ಅಲ್ಲಿ ಹೆನನ್ಯನ ಮಗನಾದ ಶೆಲೆಮ್ಯನ ಮಗನಾದ ಇರೀಯ ನೆಂಬ ಪಹರೆಯ ನಾಯಕನು ಇದ್ದನು; ಇವನು ಪ್ರವಾದಿಯಾದ ಯೆರೆವಿಾಯನನ್ನು--ನೀನು ಕಸ್ದೀ ಯರ ಕಡೆಗೆ ಬೀಳುತ್ತಿ ಎಂದು ಹೇಳಿ ಹಿಡಿದನು. ಆದರೆ ಯೆರೆವಿಾಯನು ಹೇಳಿದ್ದೇನಂದರೆ--ಸುಳ್ಳು; ನಾನು ಕಸ್ದೀಯರ ಕಡೆಗೆ ಬೀಳುವವನಲ್ಲ ಅಂದನು. ಆದರೆ ಇರೀಯನು ಅವನಿಗೆ ಕಿವಿಗೊಡದೆ ಯೆರೆವಿಾ ಯನನ್ನು ಹಿಡಿದು ಪ್ರಧಾನರ ಬಳಿಗೆ ತಂದನು. ಆಗ ಪ್ರಧಾನರು ಯೆರೆವಿಾಯನ ಮೇಲೆ ಕೋಪಗೊಂಡು ಅವನನ್ನು ಹೊಡೆದು ಲೇಖಕನಾದ ಯೋನಾತಾನನ ಮನೆಯ ಬಂಧನದಲ್ಲಿ ಇಟ್ಟರು; ಯಾಕಂದರೆ ಅದನ್ನು ಸೆರೆಮನೆಯಾಗಿ ಮಾಡಿದ್ದರು. ಯೆರೆವಿಾಯನು ನೆಲಮಾಳಿಗೆಯಲ್ಲಿಯೂ ಸಣ್ಣಕೋಣೆಯಲ್ಲಿಯೂ ಪ್ರವೇಶಿಸಿ ಬಹಳ ದಿವಸ ಅಲ್ಲಿ ಇದ್ದ ಮೇಲೆ ಅರಸನಾದ ಚಿದ್ಕೀಯನು ಅವನನ್ನು ಹೊರಗೆ ತನ್ನ ಮನೆಯಲ್ಲಿ ಕರತರಿಸಿ--ರಹಸ್ಯವಾಗಿ ಕರ್ತನಿಂದ ವಾಕ್ಯ ಉಂಟೋ ಎಂದು ಅವನನ್ನು ಕೇಳಿದನು; ಉಂಟು ಎಂದು ಯೆರೆವಿಾಯನು ಹೇಳಿ ರಹಸ್ಯವಾಗಿ ನೀನು ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವಿ ಅಂದನು. ಇದಲ್ಲದೆ ಯೆರೆವಿಾಯನು ಅರಸನಾದ ಚಿದ್ಕೀಯನಿಗೆ ಹೇಳಿದ್ದೇ ನಂದರೆ--ನೀವು ನನ್ನನ್ನು ಸೆರೆಮನೆಯಲ್ಲಿ ಹಾಕುವ ಹಾಗೆ ನಾನು ನಿನಗೂ ನಿನ್ನ ಸೇವಕರಿಗೂ ಈ ಜನರಿಗೂ ವಿರೋಧವಾಗಿ ಏನು ಅಡ್ಡಿ ಮಾಡಿದ್ದೇನೆ? ಇದಲ್ಲದೆ ಬಾಬೆಲಿನ ಅರಸನು ನಿಮ್ಮ ಮೇಲೆಯೂ ಈ ದೇಶದ ಮೇಲೆಯೂ ಬರುವದಿಲ್ಲವೆಂದು ನಿಮಗೆ ಪ್ರವಾದಿಸಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ? ಆದದರಿಂದ ಈಗ ಕಿವಿಗೊಡು, ಅರಸನಾದ ನನ್ನೊ ಡೆಯನೇ, ನನ್ನ ವಿಜ್ಞಾಪನೆ ನಿನ್ನ ಮುಂದೆ ಅಂಗೀ ಕಾರವಾಗಲಿ, ಲೇಖಕನಾದ ಯೋನಾತಾನನ ಮನೆ ಯಲ್ಲಿ ನಾನು ಸಾಯದ ಹಾಗೆ ನನ್ನನ್ನು ತಿರುಗಿ ಕಳುಹಿಸಬೇಡ ಅಂದನುಆಗ ಅರಸನಾದ ಚಿದ್ಕೀ ಯನು ಯೆರೆವಿಾಯನನ್ನು ಸೆರೆಮನೆಯ ಅಂಗಳದಲ್ಲಿ ಇರಿಸಬೇಕೆಂದೂ ಪಟ್ಟಣದಲ್ಲಿರುವ ರೊಟ್ಟಿಯೆಲ್ಲಾ ಮುಗಿದು ಹೋಗುವ ವರೆಗೆ ಅವನಿಗೆ ರೊಟ್ಟಿಗಾರರ ಅಂಗಡಿಯಿಂದ ದಿನಕ್ಕೆ ಒಂದು ತುಂಡು ರೊಟ್ಟಿಕೊಡ ಬೇಕೆಂದೂ ಆಜ್ಞಾಪಿಸಿದನು; ಹಾಗೆಯೇ ಯೆರೆವಿಾ ಯನು ಸೆರೆಮನೆಯ ಅಂಗಳದಲ್ಲಿ ವಾಸಿಸಿದನು. ಆಗ ಅರಸನಾದ ಚಿದ್ಕೀ ಯನು ಯೆರೆವಿಾಯನನ್ನು ಸೆರೆಮನೆಯ ಅಂಗಳದಲ್ಲಿ ಇರಿಸಬೇಕೆಂದೂ ಪಟ್ಟಣದಲ್ಲಿರುವ ರೊಟ್ಟಿಯೆಲ್ಲಾ ಮುಗಿದು ಹೋಗುವ ವರೆಗೆ ಅವನಿಗೆ ರೊಟ್ಟಿಗಾರರ ಅಂಗಡಿಯಿಂದ ದಿನಕ್ಕೆ ಒಂದು ತುಂಡು ರೊಟ್ಟಿಕೊಡ ಬೇಕೆಂದೂ ಆಜ್ಞಾಪಿಸಿದನು; ಹಾಗೆಯೇ ಯೆರೆವಿಾ ಯನು ಸೆರೆಮನೆಯ ಅಂಗಳದಲ್ಲಿ ವಾಸಿಸಿದನು.
- Jeremiah 20:7–10 ಯೆರೆಮೀಯ 20:7–10ಓ ಕರ್ತನೇ, ನೀನು ನನ್ನನ್ನು ವಂಚಿಸಿದಿ; ನಾನು ವಂಚಿಸಲ್ಪಟ್ಟೆನು. ನೀನು ನನಗಿಂತ ಬಲಿಷ್ಠನಾಗಿದ್ದು ಜಯಿಸಿದಿ; ನಾನು ಪ್ರತಿದಿನ ಪರಿಹಾಸ್ಯಕ್ಕೆ ಗುರಿ ಯಾಗಿದ್ದೇನೆ; ಪ್ರತಿಯೊಬ್ಬನು ನನ್ನನ್ನು ಹಾಸ್ಯಮಾಡು ತ್ತಾನೆ. ನಾನು ಮಾತನಾಡುವನಾದದ್ದರಿಂದ ಗಟ್ಟಿಯಾಗಿ ಕೂಗುತ್ತೇನೆ; ಬಲಾತ್ಕಾರವೂ ಕೊಳ್ಳೆಯೂ ಎಂದು ಕೂಗುತ್ತೇನೆ ಕರ್ತನ ವಾಕ್ಯವು ನನಗೆ ಪ್ರತಿದಿನ ಪರಿಹಾಸ್ಯಕ್ಕೂ ಗೇಲಿಗೂ ಆಯಿತು. ಆಗ ನಾನು ಆತನನ್ನು ಕುರಿತು ಏನೂ ಹೇಳುವದಿಲ್ಲ, ಇಲ್ಲವೆ ಆತನ ಹೆಸರಿನಲ್ಲಿ ಇನ್ನು ಮಾತನಾಡುವದೇ ಇಲ್ಲ ಎಂದು ಅಂದುಕೊಂಡೆನು; ಆದರೆ ಆತನ ವಾಕ್ಯವು ನನ್ನ ಎಲುಬುಗಳಲ್ಲಿ ಮುಚ್ಚಲ್ಪಟ್ಟಿರುವ ಸುಡುವ ಬೆಂಕಿಯ ಹಾಗೆ ನನ್ನ ಹೃದಯದಲ್ಲಿ ಇತ್ತು; ಬಿಗಿಹಿಡಿದು ದಣಿ ದೆನು. ನನ್ನಿಂದ ಆಗದೆ ಹೋಯಿತು. ಅನೇಕರ ಚಾಡಿಯನ್ನು ಕೇಳಿದೆನು; ಸುತ್ತಲೂ ಭಯವದೆ--ತಿಳಿಸಿರಿ, ಆಗ ಅದನ್ನು ನಾವು ತಿಳಿಸುತ್ತೇವೆ ಎಂದು ಅನ್ನುತ್ತಾರೆ; ನನ್ನ ಆಪ್ತರೆಲ್ಲರೂ ನಾನು ಕುಂಟುವದನ್ನು ನೋಡಿಕೊಳ್ಳುತ್ತಾ--ಒಂದು ವೇಳೆ ಅವನು ಮೋಸ ಗೊಂಡಾನು; ಆಗ ನಾವು ಅವನನ್ನು ಗೆದ್ದು ಅವನಲ್ಲಿ ಮುಯ್ಯಿ ತೀರಿಸಿಕೊಳ್ಳುವೆವು ಅನ್ನುತ್ತಾರೆ.
- Jeremiah 18:18–23 ಯೆರೆಮೀಯ 18:18–23ಆಗ ಅವರು--ಬನ್ನಿರಿ, ಯೆರೆವಿಾಯನಿಗೆ ವಿರೋಧವಾಗಿ ಯುಕ್ತಿಯನ್ನು ಕಲ್ಪಿಸೋಣ; ಯಾಜಕ ನಿಂದ ನ್ಯಾಯಪ್ರಮಾಣವೂ ಜ್ಞಾನಿಯಿಂದ ಆಲೋಚ ನೆಯೂ ಪ್ರವಾದಿಯಿಂದ ವಾಕ್ಯವೂ ತಪ್ಪುವುದಿಲ್ಲ ಬನ್ನಿರಿ, ನಾಲಿಗೆಯಿಂದ ಅವನನ್ನು ಹೊಡೆಯೋಣ, ಅವನ ಮಾತುಗಳಲ್ಲಿ ಒಂದನ್ನಾದರೂ ಲಕ್ಷಿಸದೆ ಇರೋಣ ಎಂದು ಅವರು ಹೇಳಿದರು. ಓ ಕರ್ತನೇ, ನನ್ನನ್ನು ಆಲೈಸು; ನನ್ನ ಸಂಗಡ ವ್ಯಾಜ್ಯವಾಡುವವರ ಸ್ವರವನ್ನು ಕೇಳು. ಒಳ್ಳೇದಕ್ಕೆ ಬದಲಾಗಿ ಕೆಟ್ಟದ್ದನ್ನು ಸಲ್ಲಿಸಬಹುದೇ? ಅವರು ನನ್ನ ಪ್ರಾಣಕ್ಕೆ ಕುಣಿಯನ್ನು ಅಗೆದಿದ್ದಾರೆ; ಅವರಿಗೋಸ್ಕರ ಒಳ್ಳೆಯದನ್ನು ಮಾತಾಡುವದಕ್ಕೂ ನಿನ್ನ ಉಗ್ರವನ್ನು ಅವರಿಂದ ತಿರುಗಿಸುವದಕ್ಕೂ ನಾನು ನಿನ್ನ ಮುಂದೆ ನಿಂತದ್ದನ್ನು ಜ್ಞಾಪಕಮಾಡಿಕೋ. ಆದದರಿಂದ ಅವರ ಮಕ್ಕಳನ್ನು ಕ್ಷಾಮಕ್ಕೆ ಕೊಡು; ಕತ್ತಿಯ ಬಲದಿಂದ ಅವರ ರಕ್ತವನ್ನು ಸುರಿದುಬಿಡು; ಅವರ ಹೆಂಡತಿಯರು ಮಕ್ಕಳಿಲ್ಲದೆ ವಿಧವೆಯರಾಗಲಿ; ಅವರ ಗಂಡಸರು ಕೊಲ್ಲಲ್ಪಟ್ಟು ಸಾಯಲಿ; ಅವರ ಯೌವನಸ್ಥರು ಯುದ್ಧ ದಲ್ಲಿ ಕತ್ತಿಯಿಂದ ವಧಿಸಲ್ಪಡಲಿ. ನೀನು ಅಕಸ್ಮಾತ್ತಾಗಿ ಅವರ ಮೇಲೆ ಸೈನ್ಯವನ್ನು ತರಿಸುವಾಗ ಕೂಗು ಅವರ ಮನೆಗಳೊಳಗಿಂದ ಕೇಳಬರಲಿ; ನನ್ನನ್ನು ಹಿಡಿಯು ವದಕ್ಕೆ ಕುಣಿ ಅಗೆದಿದ್ದಾರೆ; ನನ್ನ ಕಾಲುಗಳಿಗೆ ಉರ್ಲು ಗಳನ್ನು ಒಡ್ಡಿದ್ದಾರೆ.ಆದಾಗ್ಯೂ ಕರ್ತನೇ, ಅವರು ನನ್ನನ್ನು ಸಾಯಿಸುವದಕ್ಕೆ ನನಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೆಲ್ಲಾ ನೀನು ಬಲ್ಲೆ; ಅವರ ಅಕ್ರಮವನ್ನು ಮನ್ನಿಸಬೇಡ; ಪಾಪವನ್ನು ನಿನ್ನ ಸನ್ನಿಧಿ ಯೊಳಗಿಂದ ಅಳಿಸಿಬಿಡಬೇಡ; ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪದ ಕಾಲದಲ್ಲಿ ಅವರಿಗೆ ಹಾಗೆ ಮಾಡು. ಆದಾಗ್ಯೂ ಕರ್ತನೇ, ಅವರು ನನ್ನನ್ನು ಸಾಯಿಸುವದಕ್ಕೆ ನನಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೆಲ್ಲಾ ನೀನು ಬಲ್ಲೆ; ಅವರ ಅಕ್ರಮವನ್ನು ಮನ್ನಿಸಬೇಡ; ಪಾಪವನ್ನು ನಿನ್ನ ಸನ್ನಿಧಿ ಯೊಳಗಿಂದ ಅಳಿಸಿಬಿಡಬೇಡ; ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪದ ಕಾಲದಲ್ಲಿ ಅವರಿಗೆ ಹಾಗೆ ಮಾಡು.
- Psalm 35:23 ಕೀರ್ತನೆಗಳು 35:23ನನ್ನ ದೇವರೇ, ಕರ್ತನೇ, ನನ್ನ ನ್ಯಾಯಕ್ಕೂ ನನ್ನ ವ್ಯಾಜ್ಯಕ್ಕೂ ಎಚ್ಚರವಾಗಿ ಉದ್ರೇಕಗೊಳ್ಳು.
- Jeremiah 15:10 ಯೆರೆಮೀಯ 15:10ನನ್ನ ತಾಯಿಯೇ, ನನಗೆ ಅಯ್ಯೋ, ನೀನು ನನ್ನನ್ನು ಭೂಮಿಯ ಮೇಲೆಲ್ಲಾ ವ್ಯಾಜ್ಯಗಾರನಾಗಿಯೂ ತರ್ಕದವನಾಗಿಯೂ ಹೆತ್ತಿದ್ದೀಯಲ್ಲಾ? ನಾನು ಬಡ್ಡಿಗೆ ಸಾಲ ಕೊಡಲಿಲ್ಲ ಇಲ್ಲವೆ ಮನುಷ್ಯರು ಬಡ್ಡಿಗಾಗಿ ನನಗೆ ಸಾಲ ಕೊಡಲಿಲ್ಲ. ಆದಾಗ್ಯೂ ಅವರೆಲ್ಲರು ನನ್ನನ್ನು ಶಪಿಸುತ್ತಾರೆ.
- Jeremiah 11:19–21 ಯೆರೆಮೀಯ 11:19–21ಆದರೆ ನಾನು ವಧೆಗೆ ತಕ್ಕೊಂಡು ಹೋಗುವ ಕುರಿಯಹಾಗೆ ಇಲ್ಲವೆ ಎತ್ತಿನ ಹಾಗೆ ಇದ್ದೆನು; ನನಗೆ ವಿರೋಧವಾಗಿ ಕಲ್ಪನೆಗಳನ್ನು ಕಲ್ಪಿಸು ತ್ತಾರೆಂದೂ ಮರವನ್ನೂ ಅದರ ಫಲವನ್ನೂ ಕೆಡಿಸಿ ಅವನ ಹೆಸರು ಇನ್ನು ಜ್ಞಾಪಕಮಾಡಲ್ಪಡದ ಹಾಗೆ ಜೀವಿತರ ದೇಶದೊಳಗಿಂದ ಅವನನ್ನು ಕಡಿದು ಬಿಡೋಣ ಎಂದು ಅಂದುಕೊಳ್ಳುತ್ತಾರೆಂದೂ ನನಗೆ ತಿಳಿಯಲಿಲ್ಲ. ಆದರೆ ನೀತಿಯಿಂದ ನ್ಯಾಯತೀರಿಸು ವಂಥ ಅಂತರಿಂದ್ರಿಯಗಳನ್ನೂ ಹೃದಯವನ್ನೂ ಶೋಧಿಸುವಂಥ ಸೈನ್ಯಗಳ ಕರ್ತನೇ, ನೀನು ಅವರಿಗೆ ಕೊಡುವ ಪ್ರತಿದಂಡನೆಯನ್ನು ನಾನು ಕಾಣುವೆನು. ನಿನಗೆ ನನ್ನ ವ್ಯಾಜ್ಯವನ್ನು ಪ್ರಕಟಮಾಡಿದ್ದೇನೆ. ಆದ ದರಿಂದ ನಿನ್ನ ಪ್ರಾಣವನ್ನು ಹುಡುಕುವ ಅನಾತೋತಿನ ಮನುಷ್ಯರಿಗೆ--ನೀನು ನಮ್ಮ ಕೈಯಿಂದ ಸಾಯದ ಹಾಗೆ ಕರ್ತನ ಹೆಸರಿನಲ್ಲಿ ಪ್ರವಾದನೆ ಹೇಳಬೇಡ ಎಂದು ಅನ್ನುವವರಿಗೆ ಕರ್ತನು ಹೇಳುವದೇನಂದರೆ--